ಆ ಮಗುವಿನ ತಂದೆ ಅವನಾಗಿರಲಿಲ್ಲ…!

Team Udayavani, Mar 28, 2018, 3:43 PM IST

aa-magu.jpg

ನೋವುಗಳಿಗೆ ಕನ್ನಡಿಯಾಗುವುದೇ “ಚಿಕಿತ್ಸಾ ಮನೋವಿಜ್ಞಾನ’. ಪ್ರತಿಯೊಬ್ಬರ ಸಮಸ್ಯೆ ಕೂಡಾ ವಿಶ್ವವಿದ್ಯಾಲಯದ ಪರೀಕ್ಷೆ ಇದ್ದ ಹಾಗೆ. ಆ ಸಮಸ್ಯೆಯ ಕುರಿತು ಆಳವಾದ ಅಧ್ಯಯನ ಇಲ್ಲದೆ ಹೋದರೆ ಪರೀಕ್ಷೆ ಪಾಸು ಮಾಡಲಾಗದು. ಅಂದರೆ ಅವರ ಸಮಸ್ಯೆಗೆ ಪರಿಹಾರ ಕೊಡುವುದು ಕಷ್ಟವಾಗುತ್ತದೆ. ಪರಿಹಾರ ಕೊಡಬೇಕೆಂದರೆ ಅವರ ಸಮಸ್ಯೆಯ ಮೂಲವನ್ನು ಹುಡುಕಬೇಕಾಗುತ್ತದೆ. ಹೀಗಾಗಿ ಎಷ್ಟೋ ಬಾರಿ ಶೆರ್ಲಾಕ್‌ ಹೋಮ್ಸ… ಕೂಡ ಆಗಬೇಕಾಗಿ ಬರುತ್ತದೆ.  

ಒಬ್ಬರು ವಿಚ್ಛೇದಿತರು ನನ್ನ ಬಳಿ ಬಂದಿದ್ದರು. ಅವರಿಗೆ 33 ವರ್ಷ. ಆತ ಬಿಡುವಿಲ್ಲದ ದುಡಿಮೆಯಲ್ಲಿ ಮುಳುಗಿ¨ªಾಗ ಹೆಂಡತಿ ಪರಪುರುಷನ ತೆಕ್ಕೆಗೆ ಬಿದ್ದಿದ್ದಳು. ಇವರು ಹೆಚ್ಚಿಗೆ ಗಲಾಟೆ ಆಗದ ಹಾಗೆ ಹೆಂಡತಿಯನ್ನು ಆಕೆ ಇಷ್ಟಪಟ್ಟವನೊಂದಿಗೆ ಕಳುಹಿಸಿಕೊಟ್ಟರು. ಆಕೆಗೆ ತನ್ನ ಸ್ವಂತ ಮಗು ಬೇಕಿರಲಿಲ್ಲ. ಹೀಗಾಗಿ ಮಗು, ತಂದೆಯ ಬಳಿಯೇ ಉಳಿಯಿತು.

ತಂದೆಯಾಗಿ ತನ್ನ ಮಗುವನ್ನು ಚೆನ್ನಾಗಿ ಹೇಗೆ ನೋಡಿಕೊಳ್ಳಬೇಕೆಂಬುದರ ಕುರಿತು ಚರ್ಚಿಸಲು ನನ್ನ ಬಳಿ ಬಂದಿದ್ದರು. ಜೊತೆಯಲ್ಲಿ ತಮ್ಮ ಮಗುವನ್ನೂ ಕರೆತಂದಿದ್ದರು. ಆ ಹೆಣ್ಣುಮಗು ನನ್ನನ್ನು ನೋಡಿ ನಗು ಬೀರಿತು. ಹತ್ತಿರ ಕರೆದು, ಉತ್ತೇಜಕವಾದ ಎರಡು ಮಾತನಾಡಿದೆ. ಚಿಕಿತ್ಸಾ ಕ್ರಮದಂತೆ, ಮಗುವಿನ ಒಳ ಮನಸ್ಸನ್ನು ಅರಿಯಲು, ಮನೆ- ಮರ- ಮನುಷ್ಯನ ಚಿತ್ರ ಬರೆಸಿದೆ. ಚಿತ್ರದ ಕುರಿತು ಕೇಳಿದಾಗ ಮಗು ಮುದ್ದು ಮುದ್ದಾಗಿ ಮಾತಾಡಿತು. 

ನಂತರ ಆ ವ್ಯಕ್ತಿಯನ್ನು ಮಾತಾಡಿಸಿದೆ. ಹೆಣ್ಣೊಬ್ಬಳು ತನಗೆ ಮೋಸ ಮಾಡಿದಳು ಕೊರಗುತ್ತಿದ್ದ ಆತನಿಗೆ ಒಬ್ಬಳು ಹೆಣ್ಣೇ ಆಸರೆಯಾಗಿರುವುದನ್ನು ಅವರು ಹೇಳಿಕೊಂಡರು. ಗೆಳತಿಯೊಬ್ಬಳು ಆತನ ಒಂಟಿ ಜೀವನಕ್ಕೆ ಹಿತ ತಂದಿದ್ದಳು. ಅವಳಿಗೆ ಆತನ ಕತೆಯೆಲ್ಲವೂ ಗೊತ್ತಿತ್ತು. ಕ್ರಮೇಣ ಇಬ್ಬರೂ ತುಂಬಾ ಹತ್ತಿರವಾದರು. ಒಂದು ದಿನ ಗೆಳತಿ ತಾನು ಗರ್ಭಿಣಿಯಾಗಿರುವ ಸುದ್ದಿ ತಿಳಿಸಿದಳು.

ಅವನಿಗೆ ಮದುವೆಯಿಲ್ಲದ ಆ ಬಸಿರು ಬೇಕಿರಲಿಲ್ಲ. ಗೆಳತಿಗೆ ಮಗುವನ್ನು ತೆಗೆಸಲು ಇಷ್ಟವಿರಲಿಲ್ಲ. ಮದುವೆಯಾಗದೆಯೇ ಮಗು ಹುಟ್ಟಿತು. ಸ್ವಂತ ಮಗುವಿನ ಜೊತೆಗೇ ಆ ಮಗುವಿನ ಖರ್ಚು ವೆಚ್ಚಗಳೆಲ್ಲವನ್ನೂ ಆತನೇ ನೋಡಿಕೊಳ್ಳುತ್ತಿದ್ದನು. ನನ್ನ ಬಳಿಗೆ ಬಂದಾಗ ಆ ವ್ಯಕ್ತಿ ತುಂಬಾ ಗೊಂದಲದಲ್ಲಿದ್ದರು. ತನ್ನ ಬದುಕು ಅದು ಹೇಗೆ ಇಷ್ಟು ಗೋಜಲಾಯಿತು ಎಂಬ ಪ್ರಶ್ನೆ ಅವರನ್ನು ಬೆಂಬಿಡದೆ ಕಾಡುತ್ತಿತ್ತು. ಅವರ ನೆಮ್ಮದಿಯನ್ನೇ ಆ ಒಂದು ಪ್ರಶ್ನೆ ಕಸಿದಿತ್ತು.

 ಅವರ ಜೊತೆ ಸಮಾಲೋಚನೆ ನಡೆಸುವಾಗ ಅವರ ಮನಃಸ್ಥಿತಿ ನನಗೆ ಅರ್ಥವಾಯಿತು. ತಮ್ಮ ಗೆಳತಿಯ ಜೊತೆ ಹತ್ತಿರವಾದ ಸಂದರ್ಭವನ್ನು ಹೇಳುವಾಗ ಅವರು ಕಾಂಡೋಮ್‌ ಬಳಸಿದ್ದನ್ನು ಹೇಳಿಕೊಂಡಿದ್ದರು. ಹೀಗಾಗಿ ನಾನು, ಅವರ ಗೆಳತಿಯ ಮಗುವಿಗೆ ಡಿ.ಎನ್‌.ಎ. ಪರೀಕ್ಷೆ ಮಾಡಿಸಿ ಎಂದು ಸಲಹೆ ನೀಡಿದೆ. ನನ್ನ ಅನುಮಾನ ನಿಜವಾಗಿತ್ತು! ಮಗು ಅವರದ್ದಾಗಿರಲಿಲ್ಲ! ಆ ವ್ಯಕ್ತಿ ಕುಸಿದು ಹೋಗಿದ್ದರು.

ಅವರ ಅಮಾಯಕತೆಯನ್ನು ಅವರ ಗೆಳತಿ ದುರುಪಯೋಗ ಪಡಿಸಿಕೊಂಡಿದ್ದರು. ಆರ್ಥಿಕವಾಗಿ ಎಷ್ಟೇ ಅನುಕೂಲತೆಗಳಿದ್ದರೂ ಈ ರೀತಿಯ ಘಟನೆಗಳು ಎಂಥವರನ್ನೂ ಜರ್ಝರಿತರನ್ನಾಗಿಸುತ್ತದೆ. ತಾನು ಮಾನಸಿಕವಾಗಿ ದುರ್ಬಲನಿರಬಹುದು ಎನ್ನುವ ಹುಳು ಅವರ ತಲೆ ಹೊಕ್ಕಿತ್ತು. ಇಂಥವರಿಗೆ ಆ ಸಮಯದಲ್ಲಿ ನೈತಿಕ ಸ್ಥೈರ್ಯ, ಸಾಮಾಜಿಕ ಬೆಂಬಲ ನೀಡಬೇಕು. ಆ ಕೆಲಸವನ್ನು ನಾನು ಮಾಡಿದೆ.

ಇವೆಲ್ಲದರ ಮಧ್ಯೆ ತನ್ನ ಹೆಣ್ಣು ಮಗುವಿಗೆ ಎಲ್ಲಿ ತೊಂದರೆಯಾಗುತ್ತದೋ ಎಂಬ ಆತಂಕ ಆ ವ್ಯಕ್ತಿಯನ್ನು ಕಾಡತೊಡಗಿತು. ಸಮಾಲೋಚನೆಯ ಸಂದರ್ಭದಲ್ಲಿ ಅವರ ಆತಂಕವನ್ನು ಗುರುತಿಸಿ ಕೆಲ ಸಲಹೆಗಳನ್ನು ನೀಡಿದೆ. ಕೆಲ ವಾರಗಳ ನಂತರ ಮತ್ತೆ ಆ ವ್ಯಕ್ತಿ ಸಮಾಲೋಚನೆಗೆಂದು ಬಂದಾಗ ಅವರ ಮುಖದಲ್ಲಿ ನಗುವಿತ್ತು. ನನ್ನ ಸಲಹೆಗಳು ಕೆಲಸ ಮಾಡಿದ್ದವು. ನಮ್ಮ ಬದುಕು ಸಂತಸಮಯವಾಗೋಕೆ, ಇಲ್ಲಾ ಗೊಂದಲಗಳ ಗೂಡಾಗೋಕೆ ಕಾರಣ, ನಾವಲ್ಲದೆ ಮತ್ಯಾರೂ ಅಲ್ಲ! ಇದನ್ನು ಅರಿತು, ಮುನ್ನಡೆದರೆ, ಬದುಕು ಆನಂದ ಸಾಗರ.

* ಶುಭಾ ಮಧುಸೂದನ್‌

ಟಾಪ್ ನ್ಯೂಸ್

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

15-crime

Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ

CT Ravi ಭದ್ರತೆ ವ್ಯವಸ್ಥೆ,ನ್ಯಾಯಾಂಗ ತನಿಖೆಗೆ ರಾಜ್ಯಪಾಲರಿಗೆ ಬಿಜೆಪಿ ಮನವಿ: ಆರ್.ಅಶೋಕ್

CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.