ಆ ಫೋಟೊ ನನ್ನ ದೊಡ್ಡ ಆಸ್ತಿ
ಆ ಫೋಟೋದಲ್ಲಿದೆ ನೂರು ಮಾತು, ಸಾವಿರ ನೆನಪು!
Team Udayavani, Jul 17, 2019, 5:27 AM IST
ಸೆಲೆಬ್ರಿಟಿ ನಟಿಯೊಬ್ಬಳು ಆಗಾಗ ನೆನಪಿಸಿಕೊಳ್ಳುವ ಸಂಗತಿ, ಪದೇ ಪದೆ ನೋಡುವ ಫೋಟೊ ಯಾವುದಿರಬಹುದು? ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ಮೊದಲ ರ್‍ಯಾಂಪ್ ವಾಕ್, ಅದ್ಧೂರಿ ಫೋಟೊಶೂಟ್ ಅಥವಾ ಯಾವುದಾದರೂ ಪ್ರಶಸ್ತಿ ಸ್ವೀಕರಿಸುವ ಸಂದರ್ಭದ ಫೋಟೊ ಅಂದುಕೊಂಡಿರಾ? ಉಹೂಂ, ಬಾಲ್ಯದಲ್ಲಿ ಅಪ್ಪ-ಅಮ್ಮನ ಜೊತೆಗೆ ತೆಗೆಸಿಕೊಂಡ ಆ “ಒಂದು ಫೋಟೊ’ವೇ ನನ್ನ ಪಾಲಿನ ಬಹು ದೊಡ್ಡ ಆಸ್ತಿ ಅಂತಿದ್ದಾರೆ ಬಾಲಿವುಡ್ ನಟಿ ದಿಯಾ ಮಿರ್ಜಾ.
ಸಣ್ಣ ಮಗುವಾಗಿದ್ದಾಗ ಅಪ್ಪ-ಅಮ್ಮನ ಜೊತೆ ತೆಗೆಸಿಕೊಂಡ ಒಂದು ಫೋಟೊ, ದಿಯಾ ಜೀವನದ ಅತ್ಯಂತ ಬೆಲೆಬಾಳುವ ವಸ್ತುವಂತೆ. ಯಾಕಂದ್ರೆ, ಬೇಬಿ ದಿಯಾ ಹಾಗೂ ಅಪ್ಪ-ಅಮ್ಮ ಜೊತೆಯಾಗಿ ಇರುವ ಫೋಟೊ ಅದೊಂದೇ ಅಂತೆ. “ಮುಂಬೈ ಮಿರರ್’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ, ದಿಯಾ ಈ ವಿಷಯವನ್ನು ಹೇಳಿಕೊಂಡಿದ್ದಾರೆ. “ಅಪ್ಪ-ಅಮ್ಮನ ಜೊತೆಗಿರೋ ಬಾಲ್ಯದ ಒಂದೇ ಒಂದು ಫೋಟೊ ನನ್ನಲ್ಲಿದೆ. ಆ ಫೋಟೊವೇ ನನ್ನ ಬಳಿ ಇರುವ ಬೆಲೆ ಕಟ್ಟಲಾಗದ, ಅಮೂಲ್ಯ ವಸ್ತು. ಅದನ್ನು ತುಂಬಾ ತುಂಬಾ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ನನ್ನ ರೀತಿ, ಅಪ್ಪ-ಅಮ್ಮನ ಜೊತೆಗೆ ಒಂದೇ ಒಂದು ಫೋಟೊ ಇದೆ ಅಂತ ಹೇಳುವವರ ಸಂಖ್ಯೆ ಬಹಳ ಇರಲಾರದು ಅಂತ ನನ್ನ ಅನಿಸಿಕೆ. ಆ ಒಂದು ಫೋಟೊದಲ್ಲಿ ಸಾವಿರ ಮಾತುಗಳು, ನೆನಪುಗಳು ಅಡಗಿವೆ’ ಅಂತ ಅವರು ಹಂಚಿಕೊಂಡಿದ್ದಾರೆ.
ದಿಯಾ ತಂದೆ ಫ್ರಾಂಕ್ ಹ್ಯಾಂಡ್ರಿಚ್ ಜರ್ಮನಿಯವರು, ತಾಯಿ ದೀಪಾ ಮಿರ್ಜಾ, ಬಂಗಾಳಿಯವರು. ನನ್ನ ಅಪ್ಪ ಉತ್ತಮ ಫೋಟೋಗ್ರಾಫರ್ ಆಗಿದ್ದರು. ಅವರು, ನನ್ನ ಮತ್ತು ಅಮ್ಮನ ಫೋಟೊಗಳನ್ನು ತೆಗೆಯುತ್ತಿದ್ದುದು ನೆನಪಿದೆ. ಆದರೆ, ನನಗೆ ಐದು ವರ್ಷವಾಗಿದ್ದಾಗ ಅಪ್ಪ-ಅಮ್ಮ ವಿಚ್ಛೇದನ ಪಡೆದರು. ಒಂಬತ್ತು ವರ್ಷವಾಗಿದ್ದಾಗ ಅಪ್ಪ ತೀರಿಕೊಂಡರು. ಹಾಗಾಗಿ, ಅವರೊಂದಿಗೆ ಇರುವ ಫೋಟೊ ಅದೊಂದೇ ಅಂತಲೂ ದಿಯಾ ನೆನಪಿಸಿಕೊಂಡಿದ್ದಾರೆ.
ದಿಯಾ, ಕಳೆದ ವರ್ಷ ತೆರೆ ಕಂಡ “ಸಂಜು’ ಚಿತ್ರದಲ್ಲಿ ನಟಿಸಿದ್ದು, ಸದ್ಯ ವೆಬ್‌ಸೀರೀಸ್ ಮತ್ತು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಚಿತ್ರಕೃಪೆ: ಮುಂಬೈ ಮಿರರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.