ಆ ಮೂರು ದಿನಗಳ ಡೈರಿ


Team Udayavani, Feb 6, 2019, 12:30 AM IST

s-1.jpg

ಬಟ್ಟೆ, ಕಾಟನ್‌, ಎಕ್ಸ್‌ಟ್ರಾ ಲಾರ್ಜ್‌, ರಾತ್ರಿಗೊಂದು ಹಗಲಿಗೊಂದು ವಿನ್ಯಾಸದ ನ್ಯಾಪ್‌ಕಿನ್‌, ಸುವಾಸನೆಯ ನ್ಯಾಪ್‌ಕಿನ್‌… ಹೀಗೆ ಕಾಲಕ್ಕೆ ತಕ್ಕಂತೆ ಏನೇ  ಬಂದರೂ ಹಳೇ ಶತಮಾನದ ಅಜ್ಜಿಯಿಂದ, ಆಧುನಿಕ ಬೆಡಗಿಯವರೆಗೆ ಎಲ್ಲರೂ ಆ ದಿನಗಳಲ್ಲಿ ಅನುಭವಿಸಿದ, ಅನುಭವಿಸುವ ಸಂಕಟಕ್ಕೆ ಕೊನೆ ಇಲ್ಲ…

ಕೂರಲು ಆಗದೆ, ನಿಲ್ಲಲೂ ಆಗದಂಥ ನಿತ್ರಾಣ. ರೆಸ್ಟ್‌ ಬೇಕು ಎನ್ನುತ್ತಿದೆ ಮನಸ್ಸು. ಮಾತು-ಕಥೆ ಬೇಡ, ನಗು ಇಲ್ಲವೇ ಇಲ್ಲ. ಮಗ್ಗಲು ಬದಲಿಸಿ ಕಣ್ಮುಚ್ಚಿಕೊಳ್ಳೋಣವೆಂದರೆ, ಕಲೆಯ ಭಯ. ಹಸಿವಿಲ್ಲ, ಏನು ಮಾಡಲೂ ಆಯಾಸ. ಬೇಕಿರುವುದು ಅದೇ ಆರಾಮದ ನಿದ್ದೆ. ಆದರೆ ಆ ನಿದ್ರೆಗೂ ಭಂಗ ತರುವಂತೆ ಸ್ರಾವ… 

ಬಟ್ಟೆ- ನ್ಯಾಪ್‌ಕಿನ್‌ ಯಾವುದೇ ಬಳಸಿದರೂ ಆ ನೋವು, ಯಮಯಾತನೆ ನಿಂತೀತೆ? 3- 5 ದಿನಗಳ ಆ ಯಾತನೆ ನಮಗೇ ಯಾಕಪ್ಪಾ ಎಂದು ಅಂತರಂಗ ಕೇಳುತ್ತಿರುತ್ತದೆ. ಮತ್ತೂಂದೆಡೆ ಅದು ಸಂಭ್ರಮದ ದಿನ. ಮನೆ ಕೆಲಸ ಇಲ್ಲ, 3 ದಿನ ಹೊರಗಿದ್ದರೆ ಆರಾಮು.

ಆ ದಿನಗಳಲ್ಲಿ ಅದು ಮುಟ್ಟಬೇಡ, ಇದು ಮುಟ್ಟಬೇಡವೆಂದು ನಿರ್ಬಂಧ ಹೇರುವ ಅಮ್ಮನನ್ನು ಕಂಡರೆ ಕಾಲೇಜು ಹೋಗುವ ಯುವತಿಗೆ ಸಿಟ್ಟು. 12ರ ಬಾಲೆಗೆ ಅಂಗಡಿಯಲ್ಲಿ ನ್ಯಾಪ್‌ಕಿನ್‌ ಖರೀದಿಸಲು ನಾಚಿಕೆ, ಅಂಜಿಕೆ. ಆ ವಯಸ್ಸಿಗೆ ಅದು ದೊಡ್ಡ ಸಾಹಸವೇ ಆಗಿರುತ್ತದೆ. ಮನೆಯಲ್ಲಿರುವ ಗೃಹಿಣಿ ಈ ದಿನಗಳಲ್ಲಿ ಆರಾಮಗಿರಬಹುದು ಎಂದುಕೊಳ್ಳುವ ಹೊತ್ತಿಗೆ ಆಕೆಗೆ ಕೆಲಸಗಳ ಸುರಿಮಳೆ. ಬೆಳಗ್ಗೆ 6 ರಿಂದ ಸಂಜೆ 6ವರೆಗೂ ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ ಕುಣಿಯುವ ಅವಳಿಗೆ ಎಲ್ಲಿಯ ವಿಶ್ರಾಂತಿ? ಬೆಳಗ್ಗೆ 6 ರಿಂದ 9ರವರೆಗೆ ಅಡುಗೆ, ಮಕ್ಕಳ ಶಾಲಾ ತಯಾರಿ ಎಂದೆಲ್ಲ ಮುಗಿಸಿ ಒಳ ಬರುವಾಗ ಪತಿರಾಯ ತಿಂಡಿ ತಟ್ಟೆಯ ಮುಂದೆ ಹಾಜರು. ಅವರು ಕಚೇರಿಗೆ ಹೋದ ಮೇಲಾದರೂ ವಿಶ್ರಾಂತಿ ಸಿಕ್ಕಿತಾ? ಅದೂ ಸುಳ್ಳು. ಮನೆ ಸ್ವತ್ಛಗೊಳಿಸಿ, ಒಪ್ಪ ಓರಣ ಮಾಡಿ ಅವಳು ವಿಶ್ರಾಂತಿ ಪಡೆಯುವಾಗ ಮಧ್ಯಾಹ್ನ 3. ಬಾಕಿ ಉಳಿದ ಕೆಲಸಗಳು ಕರೆಯುತ್ತಿರುತ್ತವೆ. 

ಒಂದೆಡೆ ತಲೆನೋವು, ಮತ್ತೂಂದೆಡೆ ಹೊಟ್ಟೆಯಲ್ಲಿ ಸಂಕಟ. ಇವುಗಳೊಂದಿಗೆ ಬಾಸ್‌ನ ಕರೆಗೆ ಓಗೊಡಬೇಕು. ಇಂಥ ವೇಳೆ ಮೀಟಿಂಗ್‌ ಇದ್ದರಂತೂ ಕತೆ ಮುಗಿದಂತೆ. ಮ್ಯಾನೇಜರ್‌ ಕೇಳುವ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡುವುದರೊಂದಿಗೆ ಎದುರಿಗಿನ ಕ್ಲೈಂಟ್‌ ಜೊತೆ ಸಂಬಂಧ ಕೆಡದಂಥ ಮುಗುಳು ನಗೆ ಮೊಗದಲ್ಲಿರಬೇಕು.

ಇನ್ನು ವಿದ್ಯಾರ್ಥಿನಿಗಳ ಪಾಡಂತೂ ಕೇಳ್ಳೋದೇ ಬೇಡ. ಪರೀಕ್ಷೆ ಇದ್ದರಂತೂ, ಅದು ಅಗ್ನಿಪರೀಕ್ಷೆಯೇ. 3 ಗಂಟೆ ಕುಳಿತೇ ಇರಬೇಕು. ಪ್ರಶ್ನೆಗಳು ಸುಲಭ. ಆದರೆ, ಉತ್ತರ ಬರೆಯುವ ದೇಹಕ್ಕೆ ಸುಸ್ತು. ಕೊಠಡಿ ಮೇಲ್ವಿಚಾರಕನಾಗಿ ಪುರುಷ ಉಪನ್ಯಾಸಕ ಬಂದರೆ, ಮುಜುಗರದಲ್ಲೇ ಮುಳುಗುವಳು ಆ ಬಾಲೆ. ಪಕ್ಕದಲ್ಲಿ ಹುಡುಗಿಯೇ ಕುಳಿತಿದ್ದರೂ ತನ್ನ ಈ ದಿನಗಳ ಬಗ್ಗೆ ಹೇಳಲು ಏನೋ ಒಂಥರಾ. ಹಿಂದಿನ ಬೆಂಚಿನಲ್ಲಿ ಹುಡುಗ ಕುಳಿತರೆ ಅವನು ಎದ್ದು ಹೊರ ನಡೆಯುವ ತನಕ ಮೇಲೇಳಲು ಭಯ. ಏನಾದರೂ ಹೆಚ್ಚು ಕಡಿಮೆಯಾಗಿ, ಎಲ್ಲರೆದುರು ಅವಮಾನವಾದರೆಂಬ ಅಂಜಿಕೆ. ಇದು ಹೈಸ್ಕೂಲ್‌ ಹುಡುಗಿಯ ಆ ದಿನಗಳ ಪಾಡು. ಆ ದಿನಗಳು ಹತ್ತಿರ ಬಂದಂತೆ ಇನ್ನಿಲ್ಲದಂತೆ ತೊಂದರೆ ಕೊಡುವ ಮೊಡವೆ, ಆ ದಿನಗಳ ಸುಳಿವನ್ನು ಎಲ್ಲರಿಗೂ ನೀಡಿಬಿಡುತ್ತದೆ. ಸ್ರಾವದ ಹಿಂದಿನ ಮೂರು ದಿನ ಸಿಟ್ಟು, ತಲೆನೋವು; ಎಷ್ಟೇ ಚೆಂದದ ಉಡುಗೆ ತೊಡುಗೆ ತೊಟ್ಟರೂ ಮುಖ ಮಾತ್ರ ಕಳಾಹೀನ. 

ಬಟ್ಟೆ, ಕಾಟನ್‌, ಎಕ್ಸ್‌ಟ್ರಾ ಲಾರ್ಜ್‌, ರಾತ್ರಿಗೊಂದು ಹಗಲಿಗೊಂದು ವಿನ್ಯಾಸದ ನ್ಯಾಪ್‌ಕಿನ್‌, ಸುವಾಸನೆಯ ನ್ಯಾಪ್‌ಕಿನ್‌, ಆ್ಯಂಟಿ ಬ್ಯಾಕ್ಟೀರಿಯಾ ನ್ಯಾಪ್‌ಕಿನ್‌… ಹೀಗೆ ಕಾಲಕ್ಕೆ ತಕ್ಕಂತೆ ಏನೇ ಸಾಧನಗಳು ಬಂದರೂ ಹಳೆ ಶತಮಾನದ ಅಜ್ಜಿಯಿಂದ, ಆಧುನಿಕ ಬೆಡಗಿಯವರೆಗೆ ಎಲ್ಲರೂ ಆ ದಿನಗಳಲ್ಲಿ ಅನುಭವಿಸಿದ, ಅನುಭವಿಸುವ ಸಂಕಟಕ್ಕೆ ಕೊನೆ ಇಲ್ಲ. ಮಹಿಳೆ ಎಷ್ಟೇ ಮುಂದುವರಿದರೂ, ಸಾಧನೆಗಳ ಮೆಟ್ಟಿಲೇರಿ ಶಿಖರವನ್ನು ತಲುಪಿದರೂ ಆ ಮೂರು ದಿನಗಳಲ್ಲಿ ಕಾಡುವ ನೂರು ಸಮಸ್ಯೆಗಳು ಅವಳ ಅಂತರಂಗಕ್ಕೆ ಮಾತ್ರ ಗೊತ್ತು.

ಶ್ರುತಿ ಮಲೆನಾಡತಿ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.