ಅನುದಿನ ಅನಾನಸ್
Team Udayavani, May 1, 2019, 6:30 AM IST
ಬೇಸಿಗೆಯಲ್ಲಿ ತಿನ್ನಲು ಹಣ್ಣಿಗಿಂತ ಅಪ್ಯಾಯಮಾನ ಪದಾರ್ಥ ಬೇರೊಂದಿಲ್ಲ. ಅದರಲ್ಲೂ, ಯಥೇಚ್ಛವಾಗಿ ನೀರಿನ ಅಂಶವಿರುವ, ಹುಳಿ-ಸಿಹಿ ರುಚಿಯ ಅನಾನಸ್ ಹಣ್ಣು ಯಾರಿಗೆ ಇಷ್ಟವಾಗದು ಹೇಳಿ? ಆರೋಗ್ಯದ ದೃಷ್ಟಿಯಿಂದಲೂ ಅನಾನಸ್ ಸೇವನೆಯಿಂದ ಅನೇಕ ಲಾಭಗಳಿವೆ.
– ಅನಾನಸ್‌ನಲ್ಲಿರುವ ಬ್ರೊಮಿಲಿಯಾನ್ ಅಂಶವು ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ.
– ವಿಟಮಿನ್ ಸಿ ಹೇರಳವಾಗಿರುವ ಈ ಹಣ್ಣಿನ ಸೇವನೆ, ಚರ್ಮ, ಕೂದಲು ಮತ್ತು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
– ಅನಾನಸ್‌ನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಅಂಶ ಹೆಚ್ಚಿದ್ದು, ಹೃದಯ ಸಂಬಂಧಿ ರೋಗ ಮತ್ತು ಕ್ಯಾನ್ಸರ್ ಅನ್ನು ತಡೆಯುವ ಶಕ್ತಿ ಹೊಂದಿದೆ.
– ಅನಾನಸ್‌ಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವಿದೆ.
– ಈ ಹಣ್ಣಿನ ಸೇವನೆಯಿಂದ ಅರ್ಥೈಟ್ರಿಸ್‌ನ ಸಮಸ್ಯೆಗೂ ಪರಿಹಾರ ಸಿಗುತ್ತದೆ.
– ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಉರಿಯೂತದ ಸಮಸ್ಯೆ ಪರಿಹಾರವಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.