ಫ‌ಸ್ಟ್‌ ಪೀರಿಯೆಡ್‌ನ‌ ಪ್ರಸಂಗಗಳು


Team Udayavani, Oct 25, 2017, 12:00 PM IST

first-pirieds.jpg

ಋತುಚಕ್ರದ ಆ ಮೂರು ದಿನಗಳಲ್ಲಿ ಮಹಿಳೆ ಅನುಭವಿಸುವ ಕಿರಿಕಿರಿ, ಮೊದಲ ಬಾರಿಗೆ ಹರೆಯಕ್ಕೆ ಕಾಲಿಟ್ಟಾಗ ಆದ ಅನುಭವ, ಪ್ರತಿಬಾರಿ ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸುವ ತಳಮಳಗಳ ಬಗ್ಗೆ ಇಲ್ಲಿ ಹಂಚಿಕೊಳ್ಳಲಾಗಿದೆ…

ಹೆಣ್ಣು ನಿಸರ್ಗದ ಸುಂದರ ಸೃಷ್ಟಿ. ಆಕೆ ಸಂಯಮಮೂರ್ತಿ, ಸಹನಾಶೀಲಳು- ಇತ್ಯಾದಿ ಆಕೆಯ ಬಗ್ಗೆ ಉಪಮೆ- ರೂಪಕಗಳು ಹೇರಳ. ಹೋದಲ್ಲಿ ಬಂದಲ್ಲಿ ಇದನ್ನು ಕೇಳಿದಾಗಲೆಲ್ಲ ಹೆಣ್ಣು ಹಿಗ್ಗುತ್ತಾಳೆ. ಈ ಸಂಯಮ- ಸಹನೆಗಳನ್ನೆಲ್ಲ ಆಕೆಗೆ ಕಲಿಸಿದ್ದು, ಋತುಚಕ್ರವೇ ಇರಬೇಕು ಎನ್ನುವುದು ನನ್ನ ಸಂದೇಹ. ಋತುಚಕ್ರದ ಆರಂಭದಲ್ಲಿ ಆ ಮೂರು ದಿನಗಳನ್ನು ಎದುರಿಸುವುದೇ ಒಂದು ದೊಡ್ಡ ಸವಾಲು.

ನಾನೂ ಅಂಥದ್ದೇ ಸವಾಲುಗಳನ್ನು ದಾಟಿಬಂದೆ. ಅಮ್ಮಂದಿರೆಲ್ಲಾ ಪ್ರತಿ ತಿಂಗಳು ಕಾಗೆ ಮುಟ್ಟಿತೆಂದು ಹೊರಗೆ ಕುಳಿತುಕೊಳ್ಳುತ್ತಿದ್ದದ್ದು ಸಹಜವಾಗೇ ನನಗೆ ತಿಳಿದಿತ್ತು. ನನ್ನ ಅಜ್ಜಿಯ ಮನೆಯಲ್ಲಿ ಆಗಾಗ್ಗೆ ಮಾವನ ಹೆಂಡಂದಿರು ಹಾಗೆ ಕುಳಿತುಕೊಂಡು ಆರಾಮ್‌ ಅನುಭವಿಸುತ್ತಿದ್ದರು. ಪಾಪ, ಆ ಮೂರು ದಿನಗಳು ಅವರಿಗೆ ಕೆಲಸದ ಒತ್ತಡ ಬಿಟ್ಟರೆ ದೇಹದ ಕಿರಿಕಿರಿ ಇದ್ದೇ ಇರುತ್ತಿತ್ತೆಂದು ನನಗೆ ಆಮೇಲೆ ತಿಳಿಯಿತು.  

ಆದರೆ, ನಮ್ಮ ಮನೆಯಲ್ಲಿ ಆ ಕಾಲಕ್ಕೆ ಆ ಆಚಾರವೇನೂ ಇರಲಿಲ್ಲ. ನಮ್ಮಮ್ಮ ದೇವರ ಕೋಣೆ ಒಂದನ್ನು ಬಿಟ್ಟು ಉಳಿದೆಲ್ಲಾ ಕೋಣೆಗಳಿಗೂ ಪ್ರವೇಶಿಸುತ್ತಿದ್ದರು. ಅಡುಗೆ, ಮನೆಗೆಲಸ ಎಲ್ಲವನ್ನೂ ತೂಗಿಸುತ್ತಿದ್ದರು. ಅದೇ ನನ್ನ ಅಕ್ಕಂದಿರಿಬ್ಬರೂ ದೊಡ್ಡವರಾದಾಗಲೂ ನಮ್ಮ ಮನೆಯಲ್ಲಿ ಅದೇನೂ ವಿಚಿತ್ರ ಸಂಗತಿಯಾಗಲೇ ಇಲ್ಲ. ಅವರವರ ಮಟ್ಟಿಗೆ ಅವರು ಆ ಹಿಂಸೆಯನ್ನು ಮೌನವಾಗಿ ಅನುಭವಿಸುತ್ತಿದ್ದರೆಂದು ತೋರುತ್ತದೆ.

ಅಮ್ಮ ಅವರಿಗೆ ಆಗಾಗ್ಗೆ ಅದೇನೋ ಹೇಳಿಕೊಡುತ್ತಿದ್ದರು. ಅದಾಗ ನಾನು ಏಳನೇ ತರಗತಿಗೆ ಬಂದಿದ್ದೆ. ಮುಟ್ಟಿನ ಜಾಗೃತಿಯ ಬಗ್ಗೆ ಈಗಿನ ಶಾಲಾ ಹುಡುಗಿಯರಿಗೆ ಕೊಟ್ಟಂತೆ, ನಮಗೆ ಆಗ ಯಾವ ಮಾಹಿತಿಯನ್ನೂ ಕೊಡುತ್ತಿರಲಿಲ್ಲ. ಅದಲ್ಲದೇ, ನಾನಿನ್ನೂ ಚಿಕ್ಕವಳೆಂದು ನಮ್ಮಮ್ಮ ಕೂಡಾ ನನಗೇನೂ ಹೇಳಿರಲಿಲ್ಲ. ಇದ್ಯಾವುದರ ಮುನ್ಸೂಚನೆ ಅದರ ಲಕ್ಷಣಗಳ ಜ್ಞಾನವಿಲ್ಲದ ಕಾಲದಲ್ಲಿ ಮೊದಲ ಋತುಮತಿಯಾಗಿದ್ದೆ.

ಈಗ ಅದನ್ನೆಲ್ಲ ಬರೆದು ಪ್ರಕಟಿಸುವ ಧೈರ್ಯ ಇದ್ದಂತೆ ಆ ದಿನಗಳಲ್ಲಿ ಇರಲಿಲ್ಲ.  ಮೊದಲಬಾರಿ ಋತುಮತಿಯಾದ ಸಂದರ್ಭವಂತೂ ಭಯಂಕರ ಗೊಂದಲ, ತಳಮಳ, ಜೊತೆಗೆ ಬದುಕಿನ ಬಗ್ಗೆಯೂ ಹತಾಶೆಯ ಭಾವವನ್ನು ಮೂಡಿಸಿತ್ತು. ಹಳ್ಳಿಗಳಲ್ಲಿ ಆಗ ಈಗಿನಂತೆ ಶೌಚಾಲಯಗಳು ಇರಲಿಲ್ಲ. ಹಳ್ಳ ಇಲ್ಲವೇ ಬೇಣವೇ ಗತಿಯಾಗಿತ್ತು. ಪ್ಯಾಡುಗಳ ಬಳಕೆ ಈಗಿನಷ್ಟು ಪ್ರಸಿದ್ಧಿ ಪಡೆದಿರಲಿಲ್ಲ. ಬಟ್ಟೆ ಪ್ಯಾಡುಗಳೇ ನಮ್ಮ ಸಂಗಾತಿಗಳಾಗಿದ್ದವು.

ಯಾರೊಂದಿಗೂ ಹೇಳಿಕೊಳ್ಳಲಾಗದೇ ಮುಜುಗರದಿಂದ ಒದ್ದಾಡಿದ್ದೆ. ಅದ್ಹೇಗೋ ಅಕ್ಕನಿಗೆ ತಿಳಿದು ಆಕೆ ಅಮ್ಮನಿಗೆ ಹೇಳಿದಾಗ, ಮೊದಲೇ ಪೀಚಲು ದೇಹದ ನನಗೆ ಬಹುಬೇಗ ಋತುಮತಿಯಾದ ಕಾರಣ ಮತ್ತು ಅದು ಏಳೆಂಟು ದಿನಗಳವರೆಗೂ ಮುಂದುವರಿದು, ರಕ್ತಹೀನತೆ ಉಂಟಾದೀತೆಂದು ಅಮ್ಮ ಆಸ್ಪತ್ರೆಗೆ ಕರೆದೊಯ್ದಿದ್ದರು. ವೈದ್ಯರು ಅದೇನೋ ಟಾನಿಕ್ಕು ಬರೆದುಕೊಟ್ಟಿದ್ದಷ್ಟೇ ಈಗ ನೆನಪು. 

ಶಾಲೆಗೆ ಹೋಗುವಾಗ, ಬಟ್ಟೆ ಒದ್ದೆಯಾಗಿ ಅನುಭವಿಸಿದ ಕಿರಿಕಿರಿಗಳು ಸಾಕಷ್ಟು. ಆಗೊಮ್ಮ ಈಗೊಮ್ಮೆ ಹೊರಬಟ್ಟೆಗೂ ಕಲೆಯ ಗುರುತು ಮೂಡಿ ಗೆಳತಿಯರು “ಅದಾ…?’ ಎನ್ನುತ್ತಾ ಲೇವಡಿ ಮಾಡಿದ ಉದಾಹರಣೆಗಳು, ಅದನ್ನು ಉಳಿದವರು ನೋಡಿಯಾರೆಂಬ ನಾಚಿಕೆಯಲ್ಲಿ ಕುಳಿತಲ್ಲಿಂದ ಏಳದೇ ಬಸ್‌ಸ್ಟಾಂಡುಗಳಲ್ಲಿ ಕಲ್ಲಾಗಿ ಕೂತ ದಿನಗಳು ಎಲ್ಲವೂ ಹೆಣ್ಣಿನ ಬದುಕಿನ ಏಳುಬೀಳುಗಳನ್ನು, ಶಿಥಿಲತೆಯನ್ನು ಆಕೆ ಮಾತ್ರ ಸಹಿಸಬೇಕಾದ ಪ್ರಕೃತಿಯೇ ನೀಡಿದ ಶಿಕ್ಷೆ ಎಂಬಂತೆ ಒಂದು ಕ್ಷಣಕ್ಕೆ ಅನ್ನಿಸುವುದಿದೆ.

ಒಬ್ಬಳು ಗೆಳತಿಯ ಅನುಭವವಂತೂ ತೀರಾ ವಿಭಿನ್ನ. ಶೌಚಾಲಯಕ್ಕೆ ಹೋದಾಕೆಗೆ ತಾನು ಋತುಮತಿಯಾದ ಸಂಗತಿ ಗೊತ್ತಾಯಿತು. ಆದರೆ, ಅದು ತಿಂಗಳ ಮುಟ್ಟೆಂದು ಆಕೆಗೆ ತಿಳಿದಿರಲಿಲ್ಲ. ರಕ್ತಸ್ರಾವವಾಗುತ್ತಿರುವುದು ಯಾಕೆಂದು ಅರಿವಾಗಲಿಲ್ಲ. ಏನೂ ತೋಚದೇ ಹಳ್ಳದ ನೀರಿನಲ್ಲಿ ಎಲ್ಲ ತೊಳೆದು ಹೋಗಲೆಂದು ತಾಸುಗಟ್ಟಲೆ ಹಳ್ಳದ ನೀರಿನಲ್ಲಿ ಕುಳಿತೇ ಇದ್ದಳು.

ಹೊರಗೆ ಹೋಗಿ ಬರುವೆನೆಂದು ಹೇಳಿಹೋದ ಮಗಳು ಬರಲಿಲ್ಲವೆಂದು ಗಾಬರಿಯಾಗಿ ತಾಯಿ ಅಲ್ಲಿಗೆ ಬಂದರೆ, ನೀರಿನಲ್ಲಿ ಕುಳಿತ ಇವಳ ನೋಡಿ ಅಚ್ಚರಿಯಿಂದ ವಿಚಾರಿಸಿದರು. ಈಕೆ ಅಳುಮುಂಜಿ ಮುಖಮಾಡಿ ಸಂಗತಿ ತಿಳಿಸಿದಾಗ, ತಾಯಿ ನಕ್ಕು, ತಲೆ ನೇವರಿಸಿ ಆಕೆಗೆ ತಿಳಿಹೇಳಿದ್ದರು. ಶಾಲೆಯ ಬಾಲೆಯರಿಗೆ ತಿಂಗಳ ಮುಟ್ಟು ನಿಜಕ್ಕೂ ಕಿರಿಕಿರಿಯ ಸಂಗತಿ.

ಹೈಸ್ಕೂಲಿನ ದಿನಗಳಲ್ಲಂತೂ ವಿಪರೀತ ಅಸಹ್ಯ, ಕಿರಿಕಿರಿಯ ಕಾಲ. ಋತುಸ್ರಾವದ ಬಗ್ಗೆ ಅನುಭವವಿಲ್ಲದ ಮೊದಲ ಹಂತ ಅದು. ಬಿಂದಾಸ್‌ ಆಗಿ ಬದುಕುತ್ತಿದ್ದ ಹೆಣ್ಮಗು ಕ್ರಮೇಣ ಹೆಣ್ಣಾಗುವ ,ಹೆಣ್ಣಿನ ನಯವಿನಯ ಆವಾಹಿಸಿಕೊಳ್ಳುವ ಸಮಯ. ಪ್ರಾಯದಲ್ಲಿ ಅದು ಮೂರು ದಿನಗಳಿಗೆ ಸೀಮಿತವಾಗಿರಲಿಲ್ಲ. ಏಳೆಂಟು ದಿನಗಳಾದರೂ ನೋವು, ಹಿಂಸೆ, ಅಸಹಾಯಕತೆ ಕಾಡುತ್ತಿದ್ದವು. ಆ ದಿನಗಳನ್ನೆಲ್ಲ ನೆನೆಸಿಕೊಂಡರೆ, ಈಗಲೂ ಮನಸ್ಸು ತೇವಗೊಳ್ಳುತ್ತದೆ.  

ಪಿರಿಯಡ್‌ ಟ್ರ್ಯಾಕಿಂಗ್‌ ಆ್ಯಪ್‌ಗ್ಳು: ನಿಮ್ಮ ಮುಟ್ಟಿನ ದಿನ ಯಾವತ್ತು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವ, ಅದರ ಬಗ್ಗೆ ಮಾಹಿತಿ ಕೊಡುವ ಕೆಲವು ಆ್ಯಪ್‌ಗ್ಳು ಇಲ್ಲಿವೆ…

1. ಕ್ಲೂ: ಇದು ತುಂಬಾ ಸಿಂಪಲ್‌ ಆದ ಆ್ಯಪ್‌. ಈ ಆ್ಯಪ್‌ ಕೆಂಪು, ನೀಲಿ, ಹಸಿರು ಮತ್ತು ಬಿಳಿ ಬಣ್ಣದಲ್ಲಿ ನಿಮ್ಮ ಋತುಚಕ್ರದ ಮಾಹಿತಿಯನ್ನು ನೀಡುತ್ತದೆ. ನೀವು ಫೀಡ್‌ ಮಾಡುವ ಡೇಟಾದ ಆಧಾರದ ಮೇಲೆ ನಿಮಗೆ ಸಮಯಕ್ಕೆ ಸರಿಯಾಗಿ ಮಾಹಿತಿ ಸಿಗುತ್ತದೆ. 

2. ಈವ್‌: ನಿಮ್ಮ ಋತುಚಕ್ರ ಯಾವತ್ತು ಎಂಬುದನ್ನು ಇಮೋಜಿಗಳ ಮೂಲಕ ನಿಮಗೆ ನೆನಪಿಸಲಾಗುತ್ತದೆ. ಅಕ್ಷರಗಳ ಬದಲು ಸ್ಟಿಕರ್‌ಗಳಿರುತ್ತವೆ. ಈ ಆ್ಯಪ್‌ನಲ್ಲಿ ಬರ್ತ್‌ ಕಂಟ್ರೋಲ್‌ ಬಗ್ಗೆಯೂ ಮಾಹಿತಿ ಸಿಗುತ್ತದೆ. 

3. ಫ್ಲೋ: ಈ ಆ್ಯಪ್‌ನ ವಿಶೇಷತೆಯೆಂದರೆ, ಇದನ್ನು ಪಾಸ್‌ವರ್ಡ್‌ ಬಳಸಿ ಸೆಕ್ಯೂರ್‌ ಮಾಡಬಹುದು. ಉಳಿದಂತೆ ಇದು ಕೂಡ ಕ್ಲೂನಂತೆ ಬೇರೆ ಬೇರೆ ಕಲರ್‌ಗಳಲ್ಲಿರುತ್ತದೆ. 

4. ಪಿರಿಯಡ್‌ ಟ್ರ್ಯಾಕರ್‌: ಇದು ಕ್ಯಾಲೆಂಡರ್‌ನಂತೆ ಇರುವ ಆ್ಯಪ್‌. ದಿನನಿತ್ಯದ ಮಾಹಿತಿಯನ್ನು ನೀವಲ್ಲಿ ದಾಖಲಿಸಬಹುದು. 

5. ಪಿಂಕ್‌ ಪ್ಯಾಡ್‌: ಇದು ಉಳಿದೆಲ್ಲ ಆ್ಯಪ್‌ಗ್ಳಿಗಿಂತ ಭಿನ್ನವಾಗಿದ್ದು, ಸೋಶಿಯಲ್‌ ನೆಟ್‌ವರ್ಕಿಂಗ್‌ ಸೈಟ್‌ನಂತ ಫೀಚರ್‌ಗಳನ್ನು ಹೊಂದಿದೆ. ಋತುಚಕ್ರ, ಗರ್ಭಧಾರಣೆ ಬಗೆಗಿನ ಮಾಹಿತಿಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು.  

* ನಾಗರೇಖಾ ಗಾಂವಕರ, ದಾಂಡೇಲಿ

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.