ರಿಸ್ಕ್ ತೆಗೆದುಕೊಂಡರಷ್ಟೇ ಪ್ರಯೋಗ ಸಾಧ್ಯ
Team Udayavani, Apr 4, 2018, 4:02 PM IST
ಸೋಶಿಯಲ್ ಮೀಡಿಯಾದ ಬಗ್ಗೆ ತಕರಾರುಗಳು ಆತಂಕಗಳು ವಾದವಿವಾದಗಳು ಅಭಿಪ್ರಾಯಗಳು ಏನೇ ಇರಲಿ. ಆದರೆ ಅದೇ ಅಂಗೈಕಿಂಡಿಯಿಂದಲೇ ಪ್ರತಿಭೆಯುಳ್ಳ “ಅವಳು’ ತನ್ನದೇ ಪ್ರಪಂಚವನ್ನು ಕಟ್ಟಿಕೊಂಡು ಎಲ್ಲವನ್ನೂ ಗಮನಿಸುತ್ತಿ¨ªಾಳೆ, ಸೆಳೆಯುತ್ತಿ¨ªಾಳೆ ಮತ್ತು ಒಳಗೊಳಗೆ ಬೆಳೆಯುತ್ತಿ¨ªಾಳೆ. ಈ ಮೂಲಕ ತನ್ನೊಳಗಿನ ತುಡಿತಕ್ಕೆ, ಆಸ್ಥೆಗೆ, ಪ್ರೀತಿಗೆ, ಕಲ್ಪನೆಗೆ, ಶಕ್ತಿಗೆ ರೂಪು ಕಟ್ಟಿಕೊಳ್ಳುತ್ತ, ತನ್ನ ಅಸ್ತಿತ್ವವನ್ನು ಅನೇಕ ರೀತಿಯಲ್ಲಿ ಪೋಷಿಸಿಕೊಳ್ಳುತ್ತಿ¨ªಾಳೆ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಿ¨ªಾಳೆ ಮತ್ತು ಕಾಲಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಿ¨ªಾಳೆ. ಸದಾ ಮೆಹನತ್ ಇದೆ ಎಂಬಂತಾದಲ್ಲಿ, ಇದ್ದೇ ಇರಬೇಕಲ್ಲ ಹಿಮ್ಮತ್! ಹೀಗೊಬ್ಬ ಹಿಮ್ಮತ್‌ವಾಲಿಯನ್ನು ಮುಂಬೈನಿಂದ ಕರೆದುಕೊಂಡು ಬಂದಿದ್ದೇವೆ “ಅವಳು’ ಓದುಗರಿಗಾಗಿ.
ಅವರು ಗಾಯಕಿ ವಿದುಷಿ ಚಂದನಬಾಲಾ ಕಲ್ಯಾಣ್. ಪದದಿಂದ ಪದಕ್ಕೆ ನವಿರು ಪಲಕುಗಳ ಹೆಣೆಯುತ್ತ, ಹಾಗೆ ಹೆಣೆಯುವಾಗ ಆ ಪಲಕುಗಳ ಭಾವ ಕಿಂಚಿತ್ತೂ ಕದಡದಂತೆ ವಾತ್ಸಲ್ಯದಿಂದ ಸ್ವರಗಳನ್ನು ಜೋಪಾನಿಸಿ, ಹೊಮ್ಮಿದ ರಾಗರಸವ ಸೋಸಿ ಅದಕ್ಕೆ ಸಮರಸದ ಸ್ಪರ್ಶ ತಲುಪಿಸುವ ಶ್ರದ್ಧೆ, ತನ್ಮಯತೆ, ಜಾಣ್ಮೆ, ಸೃಜನಶೀಲತೆ ಎಲ್ಲವೂ ಇವರಲ್ಲಿ ಏಕಕಾಲಕ್ಕೇ ಮೇಳೈಸಿದ್ದು, ಕೇಳುಗರಾದ ನಮ್ಮ ಪುಣ್ಯವೂ. ಇವರು ಇಂದು ಹಿಂದೂಸ್ತಾನಿ, ಪಾಶ್ಚಾತ್ಯ ಮತ್ತು ಜಾನಪದ ಸಂಗೀತದ ಇತರೇ ಶೈಲಿಗಳನ್ನು ಹಾಡಿ ವಿಡಿಯೋಗಳನ್ನು ಫೇಸ್‌ಬುಕ್ಕಿನ ಗೋಡೆಗೆ ಅಂಟಿಸದಿದ್ದಲ್ಲಿ ಜನಸಾಮಾನ್ಯರಿಗೆ ಇವರು ಬೆಂಗಳೂರಿನವರು ಎನ್ನುವುದೂ ಗೊತ್ತೇ ಆಗುತ್ತಿರಲಿಲ್ಲವೇನೋ.
ಹನ್ನೆರಡು ವರ್ಷಗಳಿಂದ ಮುಂಬೈನಲ್ಲಿ ವಾಸವಾಗಿರುವ ಇವರು ಮೂಲತಃ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆ. ಶಾಸ್ತ್ರೀಯ ಸಂಗೀತ ಮತ್ತು ಭಕ್ತಿಸಂಗೀತದಲ್ಲಿ ಆಕಾಶವಾಣಿಯ “ಎ’ ಶ್ರೇಣಿ ಕಲಾವಿದರಾಗಿರುವ ಚಂದನಬಾಲಾ ಪಟ್ಟಾಗಿ ಕುಳಿತು ಕಛೇರಿ ಹೇಗೆ ಪ್ರಸ್ತುತಪಡಿಸಬಲ್ಲರೋ ಹಾಗೆಯೇ ಭಾವಗೀತೆ, ಗಝಲ್ ಹಾಡಿ ಎದೆಯ ತೋಯಿಸಬಲ್ಲರು. ಮೀರಾಳನ್ನೋ, ಕಬೀರರನ್ನೋ ಆವಾಹಿಸಿಕೊಂಡು ಸಮಾಧಿಸ್ಥಿತಿಯನ್ನೂ ಸಷ್ಟಿಸಬಲ್ಲರು. ಠುಮ್ರಿ, ಟಪ್ಪಾ, ಹೋರಿಯಲ್ಲಿ ಪ್ರೇಮ-ಶಂಗಾರ-ವಿರಹದ ಅಸಲಿ ಪರಿಮಳವನ್ನು ದಾಟಿಸಬಲ್ಲರು.
ಅಷ್ಟೇ ಅಲ್ಲ, ಸಮಕಾಲೀನ ಸಂಗೀತ ಸ್ಪರ್ಶದಿಂದ ಕುಳಿತÇÉೇ ನಿಮ್ಮನ್ನು ಕುಣಿಸಲೂಬಲ್ಲರು. ಸೂಫಿಗೀತೆಗಳ ಹದಸಾರದಲ್ಲಿ ಅದ್ದಿ, ಕವ್ವಾಲಿಯೊಳಗೆ ರಸೋತ್ಕರ್ಷ ಚಿಮ್ಮುವವರೆಗೂ ನಿಮ್ಮನ್ನು ಹಿಡಿದಿಡಬಲ್ಲರು. ಎಲ್ಲಕ್ಕಿಂತ ಮುಖ್ಯವಾಗಿ ಹಾಡುತಾØಡುತ್ತ ಅದರ ಭಾವವನ್ನೂ, ಆನಂದವನ್ನೂ, ಅನುಭೂತಿಯನ್ನೂ ಹೇಗೆ ನಿಮಗೂ ದಾಟಿಸುತ್ತಾರೆ ಎಂಬುದೇ ಅವರ ಗಾಯನದ ವೈಶಿಷ್ಟ್ಯ.
2002ರಲ್ಲಿ ತಮಿಳಿನ ಫೈವ್ ಸ್ಟಾರ್ ಸಿನಿಮಾದ “ಎಂಗಿರಿಂದು ವಂದಾಯಡ’ ಹಾಡಿನ ಮೂಲಕ ತಮಿಳಿಗರಿಂದ ಸೈ ಎನ್ನಿಸಿಕೊಂಡರೂ ಅದ್ಯಾಕೋ ಈ ಸುದ್ದಿ ಆಗ ಬೆಂಗಳೂರಿಗೆ ತಲುಪಲಿಲ್ಲ. ನಂತರ ವಿದ್ಯಾಸಾಗರ, ಹಂಸಲೇಖಾ, ಅನುರಾಧಾ ಮತ್ತು ಶ್ರೀರಾಮ್ ಪರಶುರಾಮ್ ಅವರ ಸಂಗೀತ ನಿರ್ದೇಶನದಲ್ಲಿ ತಮಿಳು, ತೆಲುಗು, ಕನ್ನಡ ಚಿತ್ರಗಳಿಗೆ ಹಾಡಿದರು. ಅಲ್ಲದೆ,ಬಾಲಿವುಡ್ ನಿರ್ದೇಶಕ ಅಜಯ್ ಅತುಲ್ ಅವರೊಂದಿಗೆ “ಮೇಕ್ ಇನ್ ಇಂಡಿಯಾ’ ಪ್ರಾಜೆಕ್ಟ್ಗೆ ಗಾಯಕಿ ಮತ್ತು ಸಹಾಯಕಿಯಾಗಿಯೂ ದುಡಿದರು. ಕಂಠದಾನ ಕಲಾವಿದರೂ ಆಗಿರುವ ಇವರು, ಮುಂಬೈನ ಕೆಲ ಮ್ಯೂಸಿಕ್ ಬ್ಯಾಂಡ್‌ಗಳ ಸಕ್ರಿಯ ಸದಸ್ಯೆ.
ಹೈದರಾಬಾದ್ ಮತ್ತು ಬೆಂಗಳೂರಿನ ಪ್ರತಿಷ್ಠಿತ ಸಂಗೀತ ಸಭೆಗಳ ಮೂಲಕ ಕರ್ನಾಟಕ ಶಾಸ್ತ್ರೀಯ ಸಂಗೀತ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು, ಬೆಂಗಳೂರಿನ “ಅನನ್ಯ ಪುರಸ್ಕಾರ’, “ಸ್ಟಾರ್ ಆಫ್ ವಾಣಿ’, “ಘಂಟಸಾಲಾ ಅಕಾಡೆಮಿ ಫಾರ್ ಯಂಗ್ ಆರ್ಟಿಸ್ಟ್’, “ಆರ್ಯಭಟ’ ಪ್ರಶಸ್ತಿ ಮುಂತಾದ ಪುರಸ್ಕಾರಗಳಿಗೆ ಪಾತ್ರರಾಗಿ¨ªಾರೆ. ಸದ್ಯ ಪತಿ ಮತ್ತು ಪುತ್ರನೊಂದಿಗೆ ಮುಂಬೈಯಲ್ಲಿ ವಾಸವಾಗಿ¨ªಾರೆ.
– ಕರ್ನಾಟಕ ಶಾಸ್ತ್ರೀಯ ಸಂಗೀತದೊಂದಿಗೆ, ಇತರೇ ಸಂಗೀತ ಪ್ರಕಾರಗಳನ್ನು ಕಲಿಯಲೇಬೇಕು ಎಂಬ ನಿರ್ಧಾರ ಮತ್ತು ತುಡಿತದ ಹಿಂದೆ ಏನೆಲ್ಲ ಇತ್ತು?
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆಸಕ್ತಿ ಮತ್ತು ಅವಶ್ಯಕತೆ. 12 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮತ್ತು ಆಂಧ್ರಪ್ರದೇಶದಲ್ಲಿ ಮಾತ್ರ ಚಂದನಬಾಲಾ ಎಂದರೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆ ಎಂದು ಗೊತ್ತಿತ್ತು. ಆದರೆ ಮುಂಬೈಗೆ ಬಂದಮೇಲೆ? ರಸಿಕರ ಅಭಿಲಾಷೆಯ ಮೇರೆಗೆ ಎÇÉಾ ಪ್ರಕಾರಗಳನ್ನು ಹಾಡುವ ಅನಿವಾರ್ಯ ಉಂಟಾಯಿತು. ಹಿಂದೂಸ್ತಾನಿ ಪ್ರಕಾರಗಳನ್ನು ಕಲಿತು ಹಾಡಬೇಕೆಂಬ ಬಾಲ್ಯದ ಮೊಳಕೆ ಇಲ್ಲಿ ಚಿಗಿಯುತ್ತ ಹೋಯಿತು. ಅದುವರೆಗೂ ಕಛೇರಿ, ಧ್ವನಿಮುದ್ರಿಕೆಗಳನ್ನು ಕೇಳಿ ನನ್ನ ಪಾಡಿಗೆ ಗಝಲ್, ಕವ್ವಾಲಿ, ಠುಮ್ರಿ ಹಾಡಲು ಪ್ರಯತ್ನಿಸುತ್ತಿದ್ದ ನಾನು ನನ್ನಿಷ್ಟದ ಸೂಫಿಗೀತೆಗಳನ್ನು ಕಲಿಯುವಲ್ಲಿ ನಿಜವಾದ ಸುಖ ಅನುಭವಿಸತೊಡಗಿದೆ.
ಸಂಜಯ್ ದಿವೇಚಾ ಅವರ ಬ್ಯಾಂಡ್ ಸೇರಿಕೊಂಡಾಗ, ಸಾಮಾನ್ಯ ತಾಳಚಕ್ರಕ್ಕಿಂತ ಭಿನ್ನಗತಿಯಲ್ಲಿ ಹಾಡುವುದು ಹೇಗೆಂದು ಕಲಿತೆ ಮತ್ತು ಒಂದು ಹಾಡನ್ನು ಕಲಿಯುವಾಗ ಅದರ ನಿಶ್ಚಿತ ರೂಪ ನಮಗೆ ಪರಿಚಿತವಾಗಿಬಿಟ್ಟಿರುತ್ತದೆ. ಆದರೆ, ಅದರ ಹೊರತಾಗಿಯೂ ಕಲಿಯುವಂಥದ್ದೇನಿದೆ ಎಂಬುದನ್ನೂ ಅವರಿಂದ ಗ್ರಹಿಸಿದೆ. ಎಷ್ಟೋ ಸಂಯೋಜನೆಗಳಿಗೆ ಧ್ವನಿಯನ್ನು ವಾದ್ಯಗಳಂತೆ ಬಳಸಿಕೊಳ್ಳಬೇಕಿತ್ತು, ಸಾಹಿತ್ಯವಿಲ್ಲದೆ ಕೇವಲ ಸರಗಮ್ ಮತ್ತು ಆಕಾರ ಮಾಡಬೇಕಿತ್ತು. ಆಗ ಒಂದು ವಾದ್ಯದೊಂದಿಗೆ ಧ್ವನಿಯನ್ನು ಸಮನ್ವಯಗೊಳಿಸಿಕೊಂಡು ಸಾಮರಸ್ಯ ಹುಟ್ಟುಹಾಕುವುದು ಹೇಗೆ, ಅದನ್ನು ಪೋಷಿಸುವುದು ಹೇಗೆ? ಎಂಬುದನ್ನೆಲ್ಲ ಕಲಿಯಲು ಸಾಧ್ಯವಾಯಿತು.
ಅದರಲ್ಲೂ ನುಸ್ರತ್ ಫತೇ ಅಲಿ ಖಾನ್ ಅವರ “ಕಂಡೆ ಉಟ್ಟೆ ಮೆಹರವಾವೆ’ ಕವ್ವಾಲಿ ನನ್ನ ಮನಸ್ಸಿಗೆ ಬಹಳೇ ಹತ್ತಿರ. ಕ್ಯಾಸೆಟ್ ಕೇಳಿಕೇಳಿ ಕಲಿತೆ. ಹೀಗೆ ಕೆಲವನ್ನು ಅನಿವಾರ್ಯತೆಗಾಗಿ ಕಲಿತೆ, ಇನ್ನೂ ಕೆಲವನ್ನು ನನಗಿಷ್ಟ ಎಂದು ಕಲಿಯುತ್ತಾ ಹೋದೆ. ಒಟ್ಟಿನಲ್ಲಿ ಸಂಜಯ್ ದಿವೇಚಾ ಅವರ ಬ್ಯಾಂಡ್ ಸೇರಿದ್ದೇ ನನ್ನ ಸಂಗೀತಪಯಣಕ್ಕೊಂದು ಟರ್ನಿಂಗ್ ಪಾಯಿಂಟ್.
– ಕಲಾವಿದರೂ ಸಾಹಸಿಗರೇ?
ಹೌದು. ಈಗಾಗಲೇ ನಮಗೆ ಯಾವುದರಲ್ಲಿ ಪರಿಣತಿ ಇದೆಯೋ ಅದೊಂದರÇÉೇ ದೀರ್ಘಕಾಲದವರೆಗೆ ಕೃಷಿ ಮಾಡಿಕೊಂಡಿರುವುದರಲ್ಲಿ ಅಂಥಾ ಸ್ವಾರಸ್ಯವೇನೂ ಇಲ್ಲ. ನಾವು ಆಯ್ಕೆ ಮಾಡಿಕೊಂಡ ಕ್ಷೇತ್ರದ ಯಾವುದೋ ಒಂದು ಪ್ರಕಾರದಲ್ಲಷ್ಟೇ ನಿಲ್ಲದೆ ನಮ್ಮ ಪರಿಧಿಯನ್ನು ಹಿಗ್ಗಿಸಿಕೊಳ್ಳುತ್ತ ಅದನ್ನು ಮೀರುವ ತುಡಿತ ಸದಾ ನಮ್ಮಲ್ಲಿರಬೇಕು. ತುಡಿತವಿದ್ದಲ್ಲಿ ಸಾಹಸವಿದ್ದೇ ಇರುತ್ತದೆ. ಅದು ಪ್ರಯೋಗಕ್ಕೆ ನಮ್ಮನ್ನು ಅಣಿಗೊಳಿಸುತ್ತದೆ. ಮುಂದೆ ನಾವು ಆ ಪ್ರಯೋಗದಲ್ಲಿ ಪಾಸಾಗುತ್ತೇವೋ ಇಲ್ಲವೊ, ಆದರೆ ರಿಸ್ಕ್ ತೆಗೆದುಕೊಳ್ಳಬೇಕು ಮತ್ತು ನಿರಂತರ ಪ್ರಯತ್ನವಿರಬೇಕು. ಒಂದರ್ಥದಲ್ಲಿ ಹೊಸತನಕ್ಕೆ ತೆರೆದುಕೊಳ್ಳುವ ಎಲ್ಲರೂ ಸಾಹಸಿಗರೇ, ಹಾಗೇ ಕಲಾವಿದರೂ ಸಾಹಸಿಗರೇ.
– ಅಪ್ಪನ ಕೈ ಹಿಡಿದು ಸಂಗೀತ ಸಭೆಗಳಿಗೆ ತಿರುಗಿದ ಬಾಲ್ಯವನ್ನೊಮ್ಮೆ ನೆನಪಿಸಿಕೊಳ್ಳಬಹುದೆ? ಹಾಗೆಯೇ ಗುರುಗಳನ್ನೂ…
ನಮ್ಮ ತಂದೆ ಡಾ. ಎಸ್. ನಟರಾಜ್ ಮೂರ್ತಿ ವಯೋಲಿನ್ ಕಲಾವಿದರು. ವಾದ್ಯಗಳ ದಷ್ಟಿಕೋನದಿಂದ ಏನೆಲ್ಲ ತಿಳಿದುಕೊಳ್ಳಬಹುದು ಎಂದು ಚಿಕ್ಕವಯಸ್ಸಿನÇÉೇ ಹೇಳಿಕೊಟ್ಟಿದ್ದರು. ಬೆಳಗಿನ 4.30ಕ್ಕೆ ಪ್ರಾ$Âಕ್ಟೀಸ್‌ಗೆಂದು ಎಬ್ಬಿಸುತ್ತಿದ್ದರು. ಎಲ್ಲ ಕಛೇರಿಗಳಿಗೂ ನನ್ನನ್ನೂ ಅಕ್ಕನನ್ನೂ ಕರೆದುಕೊಯ್ಯುತ್ತಿದ್ದರು. ಮೊದಲ ಸಾಲಿನಲ್ಲಿ ಕುಳಿತು ಕೇಳುತ್ತಿ¨ªೆ. ಅಲ್ಲಿಂದಲೇ ಸಂಗೀತದ ಮೇಲೆ ಒಲವು ಮೂಡಿದ್ದು. ಸುಮಾರು ಎಂಟØತ್ತು ವರ್ಷ ಹೀಗೆ ಯಾವ ಕಛೇರಿಯನ್ನೂ ಬಿಡದೆ ಕೇಳುತ್ತ ಬಂದೆ. ಕೇಳುವುದು ಕೂಡ ಒಂದು ಬಗೆಯಲ್ಲಿ ಶ್ರೇಷ್ಠ ಅಭ್ಯಾಸವಲ್ಲವೆ? ಇದರ ಜತೆಗೆ ಮನೆಯÇÉೇ ಕರ್ನಾಟಕ ಶಾಸ್ತ್ರೀಯ ಅಭ್ಯಾಸ ನಡೆಯುತ್ತಿತ್ತು. ಅಪ್ಪನೊಂದಿಗೆ, ಅಕ್ಕನೊಂದಿಗೆ ಅಭ್ಯಾಸ ಮಾಡುತ್ತಿ¨ªೆ. ಆ ಸಮಯದÇÉೇ ಕೆಲವರು ನನ್ನ ಹಾಡು ಕೇಳಲೆಂದೇ ಮನೆಗೆ ಬರುತ್ತಿದ್ದರು.
ನಾನು ಕಲಿತ ರಾಜಾಜಿನಗರದ ವಾಣಿ ಶಾಲೆಯಲ್ಲಿ ಸಂಗೀತಕ್ಕೆ ಮೊದಲಿನಿಂದಲೂ ಪ್ರಾಧಾನ್ಯ. ಪ್ರಾಂಶುಪಾಲರು ಎಲ್ಲ ಸ್ಪರ್ಧೆಗಳಿಗೂ ಕರೆದುಕೊಂಡು ಹೋಗುತ್ತಿದ್ದರು. ಪ್ರಾರ್ಥನೆಗೋ, ರಾಷ್ಟ್ರಗೀತೆಗೋ ಎಂದು ಹೋಗುವುದು ಮಾಮೂಲಾಗಿ, ಶಿಕ್ಷಕರು ನನ್ನ ಗೈರುಹಾಜರಿಯನ್ನು ಮನ್ನಿಸಿ ಸಂಗೀತಕ್ಕೆ ಪ್ರೋತ್ಸಾಹಿಸುತ್ತಿದ್ದರು. 12ರ ಹುಡುಗಿಯಾಗುತ್ತಿದ್ದಂತೆ ನನ್ನಷ್ಟಕ್ಕೆ ನಾನೇ ಪ್ರಾ$Âಕ್ಟೀಸ್ ಮಾಡತೊಡಗಿದೆ. ನಂತರ ವಿದುಷಿ ರಾಜಮ್ಮ ಕೇಶವಮೂರ್ತಿಯವರ ಬಳಿ ಪಾಠಕ್ಕೆ ಹೋಗತೊಡಗಿದೆ. “ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ವಿಶೇಷ ಪ್ರವೇಶ ನಿನ್ನದು’ ಎಂದಿದ್ದ ವಿದ್ವಾನ್ ಆರ್. ಕೆ. ಶ್ರೀಕಂಠನ್, ಬೇರೆಬೇರೆ ಪ್ರಕಾರಗಳನ್ನು ಹಾಡಬಾರದು ಎಂದು ಕಟ್ಟಳೆಯನ್ನೇನು ವಿಧಿಸಲಿಲ್ಲ. ಮೊಟ್ಟಮೊದಲ ಬಾರಿಗೆ ತಮಿಳು ಚಿತ್ರಕ್ಕೆ ಹಾಡಿದಾಗ ಅವರಿಗೆ ಕೇಳಿಸಿ¨ªೆ. ಬಹಳ ಖುಷಿಪಟ್ಟು ಶಾಸ್ತ್ರೀಯ ಸಂಗೀತದ ಬುನಾದಿ ಬಿಡಬೇಡ ಎಂದಿದ್ದರು. ವಿದ್ವಾನ್ ಎಚ್ ಎಸ್ ಸುಧೀಂದ್ರ ಅವರು, “ನಮ್ಮ ಸಾಮರ್ಥ್ಯ ಏನಿದೆಯೋ ಅದನ್ನು ತಿಳಿದುಕೊಳ್ಳದೆ ಜೀವನ ನಡೆಸಬಾರದು’ ಎಂಬ ವಿಷಯವನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹೇಳಿಕೊಟ್ಟರು.
-ಸೋಶಿಯಲ್ ಮೀಡಿಯಾ ಎಂಬ ವೇದಿಕೆ ತಂದ ಸಂಚಲನ.
ನನ್ನಲ್ಲಿರೋ ಸಾಮರ್ಥ್ಯ ಏನಿದೆಯೋ ಅದನ್ನು ಪೂರ್ತಿ ಹೊರಗೆ ಹಾಕಬೇಕು. ಮುಂದೆಂದೋ ಒಂದು ದಿನ, ಇದು ನನ್ನೊಳಗಿತ್ತು ನಾ ಪ್ರಯತ್ನ ಮಾಡಲಿಲ್ಲ ಎಂದು ಪಶ್ಚಾತ್ತಾಪ ಪಡಬಾರದು. ಸಾಧ್ಯವಾದಷ್ಟು ನಾನು ಹೆಚ್ಚೆಚ್ಚು ಜನರಿಗೆ ತಲುಪವಂಥ ಸಂಗೀತ ಹಾಡಬೇಕು, ಅದಕ್ಕೆ ಕೇಳುಗರಿರಬೇಕು ಎಂಬ ನನ್ನ ಕನಸು ಆಸೆಯನ್ನು ಸೋಶಿಯಲ್ ಮೀಡಿಯಾ ತಕ್ಕಮಟ್ಟಿಗೆ ನನಸು ಮಾಡಿದೆ. ಫೇಸ್‌ಬುಕ್ ನನ್ನ ಸಂಗೀತ ಪಯಣದ ಹರಿವನ್ನು ಹೆಚ್ಚಿಸಿದೆ ಎಂದು ಹೇಳುವಲ್ಲಿ ಖುಷಿ, ಹೆಮ್ಮೆ ಇದೆ. ನಾನು ನನ್ನಮ್ಮ ಸೇರಿ ಹಾಡಿದ ಹಾಡಿಗೆ ಅಪ್ಪ ವಯೋಲಿನ್ ಸಾಥ್ ನೀಡಿದ್ದರು. ಆ ಭಾವಪೂರ್ಣ ಹಾಡನ್ನು ಸಹಸ್ರಾರು ಜನರು ಹಂಚಿಕೊಂಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳುತ್ತೇನೆ.
ನಿರಂತರವಾಗಿ ಕಛೇರಿಗಳ ಮೇಲೆ ಅವಲಂಬಿಸದೇ ಇರುವವರಿಗೆ ಇದೊಂದು ಶಕ್ತಿಯುತ ಮಾಧ್ಯಮ. ಇಲ್ಲಿ ಜಾಹೀರಾತಿಗಾಗಿ ಭಾರೀ ಮೊತ್ತವನ್ನು ಖರ್ಚು ಮಾಡಬೇಕಿಲ್ಲ. ಅವರಿವರ ಮರ್ಜಿ ಕಾಯಬೇಕಿಲ್ಲ. ಸಾರ್ವಜನಿಕರೇ ಇಲ್ಲಿ ಪ್ರತಿಭಾ ನಿರ್ಣಾಯಕರು. ಗಂಭೀರವಾಗಿ ಶ್ರದ್ಧೆಯಿಂದ ಹಾಡಿದಾಗ ಜನ ಇಷ್ಟಪಟ್ಟು ಕೇಳುತ್ತಾರೆ ಮತ್ತದನ್ನು ಮತ್ತಷ್ಟು ಜನಕ್ಕೆ ತಲುಪಿಸುತ್ತಾರೆ. ಅಂತೂ ಕಲಾವಿದರು ಕುಳಿತÇÉೇ ಜಗದ್ವ್ಯಾಪಿಯಾಗುತ್ತಿ¨ªಾರೆ.
– ಶ್ರೀದೇವಿ ಕಳಸದ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.