ದಾಂಪತ್ಯ ಪಾಠ!

ಸಂಸಾರದ ಸರಿಗಮವನ್ನು ಕ್ಲಾಸ್‌ರೂಮಲ್ಲಿ ಕಲಿಸೋಕಾಗುತ್ತಾ?

Team Udayavani, Sep 18, 2019, 5:04 AM IST

e-25

“ಹುಚ್ಚಿ, ಅವರ ಮನೀ ಅನಬಾರದವಾ. ನಿನ್ನ ಮನೀ ಅದು. ತವರಮನಿ ಎಷ್ಟು ದಿನದ್ದು, ಕಡೀ ಪೂರೈಸೋದು ಅತ್ತೀಮನೀನೇ. ಆ ಮನೀ ಮಂದಿ ಎಲ್ಲಾ ನಿನ್ನವರೇ. ಗಂಡಗ “ಅವರು’ ಅನಬಾರದು, “ಇವರು’ ಅನಬೇಕು. ನಿಮ್ಮತ್ತಿ ಏನು ಹೇಳಿದರೂ, “ಹೂಂ’ ಅಂದು ಬಿಡು ಮೊದಲ, ಹೂಂ ಅಂದ್ರ ಹರದಾರಿ…’

ಹೈದ್ರಾಬಾದ್‌ನ ಇನ್ಸ್‌ಟಿಟ್ಯೂಟ್‌ ಒಂದರಲ್ಲಿ “ದುಲ್ಹನ್‌ ಕೋರ್ಸ್‌’ ಆರಂಭಿಸಿದ್ದಾರೆ. ಮದುವೆಯ ನಂತರದ ಬದುಕಿಗೆ ಯುವಕ- ಯುವತಿಯರನ್ನು ತಯಾರು ಮಾಡುವ ಕೋರ್ಸ್‌ ಅದು ಎಂಬ ಸುದ್ದಿಯನ್ನು ಪತ್ರಿಕೆಯಲ್ಲಿ ಓದುತ್ತಿದ್ದಂತೆ ನಗು ಉಕ್ಕಿ ಬಂತು. ಇಪ್ಪತ್ತೇಳು ವರ್ಷಗಳ ಹಿಂದೆ ಓಡಿತು ಮನಸ್ಸು. ನನ್ನ ವಧುಪರೀಕ್ಷೆ ನೆನಪಾಯಿತು.

“ಏನೇನ ಅಡಿಗಿ ಬರತದವಾ ನಿನಗ? ಭಕ್ಕರೀ?ಹೋಳಿಗಿ?…’ ನನ್ನ ಭಾವೀ ಅತ್ತೆ ಕೇಳುತ್ತಿದ್ದರು. ಹಿಂದೆ ಕುಳಿತ ನನ್ನ ಸೋದರತ್ತೆ “ಹೂಂ, ಬರತದ ಅನ್ನೇ.. ‘ ಎಂದು ತಿವಿಯುತ್ತಿದ್ದಳು. “ಏನೇನೂ ಅಡಿಗಿ ಬರಂಗಿಲ್ಲರೀ ನನಗ. ಚಾ ಅವಲಕ್ಕಿ ಅಷ್ಟೇ ಬರತದ…’ ಸತ್ಯವಾದಿ ನಾನು. “ಆತು. ಒಂದು ಹಾಡರ ಹಾಡವಾ…’ “ಬರಂಗಿಲ್ಲರೀ ನನಗ…’ ಎಲ್ಲರೂ ಗೊಳ್‌ ಎಂದು ನಕ್ಕರು. ಸೋದರತ್ತೆ ಹಣೆಹಣೆ ಬಡಿದುಕೊಂಡಳು. ಹೀಗೆ ಯಾವುದೇ ಪೂರ್ವಸಿದ್ಧತೆಯಿಲ್ಲದ ಒಂದು ವಧುಪರೀಕ್ಷೆ ಮುಗಿದಿತ್ತು. ಮುಂದೆ ವಾರದಲ್ಲಿ “ಹುಡುಗಿ ನಮಗೆ ಒಪ್ಪಿಗೆ. ಆದಷ್ಟು ಬೇಗ ನಿಶ್ಚಿತಾರ್ಥ ಇಟ್ಟುಕೊಳ್ಳೋಣ’ ಎಂದು ಪತ್ರ ಬಂದೇಬಿಟ್ಟಿತ್ತು. ಸಂತೋಷಕ್ಕಿಂತ ಹೆಚ್ಚು ದಿಗಿಲು ಎಲ್ಲರಿಗೂ. ಹತ್ತೂಂಬತ್ತರ ನಾನೋ ಒಡ್ಡೊಡ್ಡು. ಜಗಳಗಂಟಿ. ಮನೆಗೆಲಸ, ಅಡುಗೆ ಒಂದೂ ಬರುತ್ತಿರಲಿಲ್ಲ. “ಅತ್ತೆಯ ಮನೆಯಲ್ಲಿ ಹೇಗೆ ಜೀವನ ಮಾಡೀತು ಈ ಹುಡುಗಿ’ಎಲ್ಲರಿಗೂ ಚಿಂತೆ. ಸರಿ, ನೂತನ ವಧುವಿಗೆ ಟ್ರೈನಿಂಗ್‌ ಕೊಡಲು ಊರಿನಿಂದ ಅಜ್ಜಿಯ ಆಗಮನವಾಯಿತು.

“ನೋಡು, ಅತ್ತೀ ಮನಿ ಬಾಳೇವು… ಇಲ್ಲಿ ಇದ್ದಂಗ ಅಲ್ಲೂ ಚಂಗ್ಯಾ ಮಂಗ್ಯಾನಂಗ ಇದ್ದರ ನಡೆಯಂಗಿಲ್ಲಾ. ಮುಂಜಾನೆ ಎಲ್ಲರಿಗಿಂತ ಮೊದಲು ಏಳಬೇಕು. ಅಂಗಳ ಕಸ, ಥಳಿ, ರಂಗೋಲಿ ಹೇಳಿಸಿಕೊಳ್ಳಲಾರದಂಗ ಮಾಡಬೇಕು. ಚಾ ಮಾಡಿ ಎಲ್ಲಾರನೂ ಎಬ್ಬಿಸಬೇಕು…’ ಡಿಗ್ರಿ ಓದುತ್ತಿದ್ದ ನಾನು, ಕೈಯಲ್ಲಿ ಪುಸ್ತಕ ಹಿಡಿದೇ ಹೂಂಗುಟ್ಟುತ್ತಿದ್ದೆ. ನಾನು ಒಂದಕ್ಷರವನ್ನೂ ಕೇಳಿಸಿಕೊಂಡೇ ಇಲ್ಲವೆಂಬುದು ಗೊತ್ತಾಗುತ್ತಿದ್ದಂತೆ ಅಜ್ಜಿಗೆ ಸಿಟ್ಟು ಬರುತ್ತಿತ್ತು. “ಸುಡಗಾಡು ಪರೀಕ್ಷಾದಾಗೂ ಈ ವಿಷಯ ಇಡಬೇಕಾಗಿತ್ತು, ನೋಡು. ಅಂದ್ರ ಜಕ್ಖಸ್ತ ಲಕ್ಷಗೊಟ್ಟು ಕಲಕೋತಿದ್ದಿ. ಏನು ಜೀವನಾ ಮಾಡತಾವೋ ಏನೋ ಈಗಿನ ಹುಡುಗರು…’ ಗೊಣಗುತ್ತಿದ್ದಳು. ಅವಳಿಗೆ ಸಿಟ್ಟು ಬಂದಿರುವುದು ಗೊತ್ತಾಗುತ್ತಿದ್ದಂತೆ ಅವಳ ತೊಡೆಯ ಮೇಲೆ ತಲೆ ಇಟ್ಟು, “ಹೇಳಜ್ಜಿ, ಹೆಂಗಿರಬೇಕು ಅವರ ಮನೀವಳಗ?’ ಎನ್ನುತ್ತಿದ್ದೆ. “ಹುಚ್ಚಿ, ಅವರ ಮನೀ ಅನಬಾರದವಾ. ನಿನ್ನ ಮನೀ ಅದು. ತವರಮನಿ ಎಷ್ಟು ದಿನದ್ದು, ಕಡೀ ಪೂರೈಸೋದು ಅತ್ತೀಮನೀನೇ. ಆ ಮನೀ ಮಂದಿ ಎಲ್ಲಾ ನಿನ್ನವರೇ. ಗಂಡಗ “ಅವರು’ ಅನಬಾರದು, “ಇವರು’ ಅನಬೇಕು. ನಿಮ್ಮತ್ತಿ ಏನು ಹೇಳಿದರೂ, “ಹೂಂ’ ಅಂದು ಬಿಡು ಮೊದಲ, ಹೂಂ ಅಂದ್ರ ಹರದಾರಿ. ಸಿಟ್ಟು ಬಂದರೂ ಮಾರಿ ಗಂಟು ಹಾಕ್ಕೋಬಾರದು, ತಿಳ್ಕೊ. ಕೆಲಸದಾಗ ವಾರಣ, ಒಪ್ಪ ಇರಬೇಕು. ನಿನಗ ಮನೀವಳಗ ಒಂದು ಭಾಂಡೇದ ಜಾಗಾ ಬದಲು ಮಾಡಬೇಕು ಅನಿಸಿದರೂ ಅವರನ ಕೇಳಿ ಮಾಡಬೇಕು…’ಅವಳ ಮಾತನ್ನು ಅರ್ಧಕ್ಕೇ ತುಂಡರಿಸಿದ್ದೆ. “ಅಲ್ಲಾ ನನ್ನ ಮನೆ ಅಂತ ತಿಳಕೋ ಅಂತೀಯಾ, ಅವರನ

ಕೇಳಿನೇ ಎಲ್ಲಾ ಮಾಡು ಅಂತೀಯಾ. ಇದ್ಹೆಂಗ?’ ನನ್ನ ಮಾತಿಗೆ ನಸುನಕ್ಕಿದ್ದಳು ಅಜ್ಜಿ. “ನೀ ಏನೋ ನನ್ನ ಮನಿ ಅಂತ ತಿಳಕೋತಿಯವಾ, ಆದ್ರ ಅವರಿಗೂ ನೀ ತಮ್ಮಾಕಿ ಅಂತ ತಿಳಕೋಳಿಕ್ಕೆ ವ್ಯಾಳಾಕೊಡಬೇಕು ನೀನು…’

ಅಜ್ಜಿ ಸರಳವಾದ ಮಾತುಗಳಲ್ಲಿ ಎಂಥಾ ಜೀವನರಹಸ್ಯವನ್ನು ಹೇಳಿಕೊಟ್ಟಿದ್ದಳು ಎಂದು ಈಗ ತಿಳಿಯುತ್ತಿದೆ. ಮದುವೆ ಎಂಬುದು ಬರೀ ಗಂಡು, ಹೆಣ್ಣಿನ ಸಂಬಂಧವಲ್ಲ. ಎರಡು ವಿಭಿನ್ನ ಪರಿಸರದ ಮನೆತನಗಳ ಸಂಬಂಧ. ತಾಯಿಯ ಮನೆಯಲ್ಲಿ ಮುಚ್ಚಟೆಯಿಂದ ಬೆಳೆದು, ಸ್ವತ್ಛಂದವಾಗಿ ಓಡಾಡಿಕೊಂಡಿರುವ ಬಾನಾಡಿಗೆ ಒಂದು ಹೊಸ ಪರಿಸರದಲ್ಲಿ, ಪಂಜರದಲ್ಲಿ ಇರುವ ಅನುಭವವಾಗುವುದು ಸಹಜವೇ. ಆದರೆ ಸಮಯ ಎಲ್ಲದಕ್ಕೂ ಮದ್ದು. ನಿಧಾನವಾಗಿ ಆ ಮನೆಯ ರೀತಿ, ನೀತಿಗಳು, ಅಲ್ಲಿಯ ಜನರ ಸ್ವಭಾವ, ಎಲ್ಲವನ್ನೂ ಅರಿಯಲು ಪ್ರಯತ್ನಿಸಬೇಕು. ಈ ವಿಷಯದಲ್ಲಿ ಪತಿಯ ಸಹಾಯ ಪಡೆಯಬೇಕು. ಸಾಧ್ಯವಾದಷ್ಟೂ ಹೊಂದಿಕೊಳ್ಳಲು ಪ್ರಯತ್ನಿಸಬೇಕು. ಹಿರಿಯರೊಂದಿಗೆ ಗೌರವದಿಂದ, ಸಮವಯಸ್ಕರೊಂದಿಗೆ ಸ್ನೇಹದಿಂದ, ಮಕ್ಕಳೊಂದಿಗೆ ಮುದ್ದಿನಿಂದ ವ್ಯವಹರಿಸಬೇಕು. ಇತ್ತೀಚೆಗೆ ವಿಭಕ್ತ ಕುಟುಂಬಗಳೇ ಇರುವುದರಿಂದ ಇಷ್ಟು ಮಟ್ಟಿನ ಹೊಂದಾಣಿಕೆಯು ಇನ್ನೂ ಸರಳ. ಅಜ್ಜಿಯ ಆ ಮಾತುಗಳೆಷ್ಟು ಸತ್ಯ…

ಈಗ ನನ್ನ ಮಗಳಿಗೆ ಪಾಠ ಹೇಳಿಕೊಡುವ ಸಮಯ. “ಹೊಂದಿಕೊಳ್ಳುವುದೇನೋ ಸರಿ. ಸಂಪೂರ್ಣ ವ್ಯಕ್ತಿತ್ವದ ಪರಿವರ್ತನೆ ಒಪ್ಪದ ಮಾತು’ ಇಪ್ಪತ್ತರ ಮಗಳು ನುಡಿದಾಗ, ನಿಜವೆನಿಸಿ “ಕಾಲಾಯ ತಸ್ಮೈ ನಮಃ’ ಎಂದು ಒಪ್ಪಿಕೊಂಡಿದ್ದೆ.

ಮದುವೆಯಾಗಿ ತಿಂಗಳ ನಂತರ ತವರಿಗೆ ಬಂದಾಗ, ಮರಳಿ ಹೋಗಲು ತಕರಾರೆತ್ತಿದ್ದೆ. “ಅಲ್ಲೇನಾದರೂ ನಿನ್ನ ಉಪವಾಸ ಹಾಕುತ್ತಾರಾ? ಸಿಕ್ಕಾಪಟ್ಟೆ ಕೆಲಸವಾ?’ ಅಮ್ಮನ ಆತಂಕದ ಮಾತಿಗೆ ನಕ್ಕು ಬಿಟ್ಟಿದ್ದೆ. “ಅಯ್ಯೋ, ಅಡಿಗಿಯವರಿದ್ದಾರ ಅಲ್ಲಿ. ಕೆಲಸ ಏನೇನೂ ಇಲ್ಲ. ಆದರೆ ಅಲ್ಲಿ ದಿನಾ ಸೀರೀ ಉಡಬೇಕು, ಕೈತುಂಬಾ ಬಳೀ ಇರದಿದ್ದರ ಬೈಯ್ತಾರ. ಜೋರಾಗಿ ರೇಡಿಯೋ ಕೇಳಂಗಿಲ್ಲಾ. ಮತ್ತೆ… ಅಲ್ಲಿ ಪಾಯಖಾನಿ ದೂರ ಹಿತ್ತಲದಾಗ ಅದ….’ “ಮಂಗ್ಯಾ, ಕಾಲು ಮುರದಬಿಟ್ಟೇನು. ನಾಳೆ ನಿನ್ನ ಗಂಡ ಬರ್ತಾರ. ಸೀದಾ ವಾಪಸ್‌ ನಡೀ ಅವರ ಜೋಡಿ…’

ಈ ಪರಿಯ ಬಾಳುಕಟ್ಟುವ ಅನಿವಾರ್ಯದ ದಾರ್ಷ್ಟ್ಯ ಯಾವ ಸ್ಕೂಲೂ ಕಲಿಸದು. ಅಮ್ಮನಿಗೆ ಮಾತ್ರ ಸಾಧ್ಯವದು. ವಧುವಾಗುತ್ತಿರುವ ಹುಡುಗಿಯನ್ನು ಭಾವನಾತ್ಮಕವಾಗಿ, ಗಟ್ಟಿಗಿತ್ತಿಯಾಗಿ ಸಜ್ಜುಗೊಳಿಸಬೇಕೇ ಹೊರತು ರೋಬೋಟ್‌ ಆಗಿಸುವ ಪ್ರಯತ್ನ ಖಂಡಿತಾ ಸಲ್ಲ.

– ದೀಪಾ ಜೋಶಿ, ಧಾರವಾಡ

ಟಾಪ್ ನ್ಯೂಸ್

Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ

Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ

Max Movie: ಮ್ಯಾಕ್ಸ್‌ ಆಡಿಯೋ ಸದ್ದು ಜೋರು

Max Movie: ಮ್ಯಾಕ್ಸ್‌ ಆಡಿಯೋ ಸದ್ದು ಜೋರು

Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ

Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ

CM-teach

Suvarna Soudha: ಅನುಭವ ಮಂಟಪದ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

ಮಾಲಿನ್ಯ ನಿಯಂತ್ರಣ ಮಂಡಳಿ ನೇಮಕಕ್ಕೆ ವಿದ್ಯಾರ್ಹತೆ ಸಡಿಲ: ಹೈಕೋರ್ಟ್‌ಗೆ ಅರ್ಜಿ

ಮಾಲಿನ್ಯ ನಿಯಂತ್ರಣ ಮಂಡಳಿ ನೇಮಕಕ್ಕೆ ವಿದ್ಯಾರ್ಹತೆ ಸಡಿಲ: ಹೈಕೋರ್ಟ್‌ಗೆ ಅರ್ಜಿ

Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ

Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ

Max Movie: ಮ್ಯಾಕ್ಸ್‌ ಆಡಿಯೋ ಸದ್ದು ಜೋರು

Max Movie: ಮ್ಯಾಕ್ಸ್‌ ಆಡಿಯೋ ಸದ್ದು ಜೋರು

Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.