ಜಗತ್ತಿನ ಪುರಾತನ ಶ್ಯಾಂಪೂ
Team Udayavani, Sep 5, 2018, 6:00 AM IST
ಅಜ್ಜನ ಮನೆಯಿಂದ ಯಾರೇ ಬರುವುದಿದ್ದರೂ ಅತ್ತಿಗೆಯ ಮಗಳ ಮೊದಲ ಬೇಡಿಕೆ, “ಗೊಂಪಿನ ಕೋಲು’. ಅವಳನ್ನು ನೋಡಿದರೆ “ಅಬ್ಟಾ ಈ ಹುಡುಗಿ, ಮಾಡರ್ನ್ ಯುಗದಲ್ಲಿ ನೈಸರ್ಗಿಕವಾಗಿ ದೊರೆಯುವ ಗೊಂಪಿಗೆ ಇಷ್ಟು ಮರುಳಾಗಿದ್ದಾಳಲ್ಲ’ ಎಂದು ಹೆಮ್ಮೆಯಾಗುತ್ತದೆ…
ಅಣ್ಣ ಅತ್ತಿಗೆ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಅವರ ಮಗಳಿಗೆ ತಲೆಗೂದಲ ಬಗ್ಗೆ ಎಲ್ಲಿಲ್ಲದ ಕಾಳಜಿ. ಪ್ರತೀ ಬಾರಿ ಅಜ್ಜನ ಮನೆಗೆ ಬಂದಾಗಲೂ ಅಲೋವೇರಾ, ಮೆಹಂದಿ ಸೊಪ್ಪಿನ ಪೇಸ್ಟ್ ತಲೆಗೆ ಹಚ್ಚಿ, ಕಡ³ದಂಜಿ ಕೋಲಿನಿಂದ ತಾನೇ ತಯಾರಿಸಿದ ಗೊಂಪಿನಲ್ಲಿ ಸ್ನಾನ ಮಾಡಿ ಆರೈಕೆ ಮಾಡುವುದೆಂದರೆ ಅವಳಿಗೆ ಅಚ್ಚುಮೆಚ್ಚು. ಅಜ್ಜನ ಮನೆಯಿಂದ ಯಾರೇ ಬರುವುದಿದ್ದರೂ ಅವಳ ಮೊದಲ ಬೇಡಿಕೆ “ಗೊಂಪಿನ ಕೋಲು’. ಅವಳನ್ನು ನೋಡಿದರೆ “ಅಬ್ಟಾ ಈ ಹುಡುಗಿ, ಮಾಡರ್ನ್ ಯುಗದಲ್ಲಿ ನೈಸರ್ಗಿಕವಾಗಿ ದೊರೆಯುವ ಗೊಂಪಿಗೆ ಇಷ್ಟು ಮರುಳಾಗಿದ್ದಾಳಲ್ಲ’ ಎಂದು ಹೆಮ್ಮೆಯಾಗುತ್ತದೆ.
ಅಜ್ಜಿ, ಮುತ್ತಜ್ಜಿಯ ಕಾಲದ ನೈಸರ್ಗಿಕ ಶ್ಯಾಂಪೂ
ಹೆಣ್ಣಿನ ಅಂದಚಂದ ಹೆಚ್ಚಿಸುವಲ್ಲಿ ತಲೆಗೂದಲ ಪಾತ್ರ ಬಹು ದೊಡ್ಡದು. ನೀಳವಾಗಿರಲಿ ಅಥವಾ ಚಿಕ್ಕದಿರಲಿ ಅಂದವಾಗಿ, ಸಿಲ್ಕಿà ಹೇರ್ ಬೇಕೆಂಬುದು ಎಲ್ಲಾ ಹೆಣ್ಣುಮಕ್ಕಳ ಬಯಕೆ. ಅದಕ್ಕಾಗಿಯೇ ಹೇರ್ ಸ್ಟ್ರೇಯrನಿಂಗ್, ಹೇರ್ ಕಂಡೀಷನರ್ ಮುಂತಾದ ಕಸರತ್ತು ನಡೆಸುತ್ತೇವೆ. ಅದಕ್ಕಾಗಿ ಸಾವಿರಾರು ರೂಪಾಯಿ ವ್ಯಯಿಸಲೂ ಹಿಂದೆಮುಂದೆ ನೋಡುವುದಿಲ್ಲ.
ಹಿಂದೆಲ್ಲಾ, ಈಗಿನಂತೆ ಶ್ಯಾಂಪೂ, ಹೇರ್‌ಕಂಡೀಷನರ್ ಇರಲಿಲ್ಲ. ಬ್ಯೂಟಿಪಾರ್ಲರ್‌ಗೆ ಹೋಗುತ್ತಿದ್ದವರ ಸಂಖ್ಯೆಯೂ ವಿರಳ. ಬದಲಾಗಿ ಮನೆಯಲ್ಲೇ ಗೊಂಪು ತಯಾರಿಸಿ ಅದರಿಂದ ತಲೆಗೂದಲನ್ನು ತೊಳೆದು ಆರೈಕೆ ಮಾಡುತ್ತಿದ್ದರು. ಇದು ಕೂದಲನ್ನು ಆರೋಗ್ಯವಾಗಿ, ನೀಳವಾಗಿ ಕಾಂತಿಯುಕ್ತವಾಗಿರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ಆದರೆ ಕಾಲ ಸರಿದಂತೆ ನಮ್ಮ ಅಜ್ಜಿ, ಮುತ್ತಜ್ಜಿಯ ಕಾಲದಲ್ಲಿ ಬಳಸುತ್ತಿದ್ದ ಗೊಂಪು ತೆರೆಮರೆಗೆ ಸರಿದಿದೆ.
ಏನಿದು ಗೊಂಪು?
ಕಡ³ದಂಜಿ, ಬಣು³, ಇರುಪ್ಪೆ (ಎರಪ್ಪೆ) ಮುಂತಾದ ಸಸ್ಯಗಳಿಂದ ಇದನ್ನು ತಯಾರಿಸಲಾಗುತ್ತದೆ. ಹೆಚ್ಚಾಗಿ ಎಲ್ಲಾ ಮನೆಗಳಲ್ಲೂ ಇರುವ ದಾಸವಾಳ ಗಿಡದ ಎಲೆಗಳಿಂದಲೂ ಗೊಂಪು ತಯಾರಿಸಬಹುದು. ಕಡ³ದಂಜಿಯಿಂದ ಗೊಂಪು ತಯಾರಿಸಲು ಮೊದಲು ಈ ಸಸ್ಯದ ಕೋಲಿನ ತೊಗಟೆಯನ್ನು ತೆಗೆಯಬೇಕು. ಸಲೀಸಾಗಿ ತೆಗೆಯಬಹುದಾದ ಈ ತೊಗಟೆಯನ್ನು ಚೆನ್ನಾಗಿ ಜಜ್ಜಿ ನೀರಲ್ಲಿ ಎರಡರಿಂದ ಮೂರು ಗಂಟೆ ನೆನೆಸಿಟ್ಟರೆ ಗೊಂಪು ತಯಾರಾಗುತ್ತದೆ. ಲೋಳೆಯಂತೆ ಇರುವ ಈ ದ್ರಾವಣವನ್ನು ಬಿಸಿ ನೀರಿನೊಂದಿಗೆ ಸೇರಿಸಿ ತಲೆಗೆ ಸ್ನಾನ ಮಾಡಬೇಕು. ಬಣು³, ಇರುಪ್ಪೆ ಸಸ್ಯಗಳ ಎಲೆಗಳಿಂದಲೂ ಇದೇ ಮಾದರಿಯಲ್ಲಿ ಗೊಂಪು ತಯಾರಿಸಬಹುದು.
ಗೊಂಪು ತಂಪು ತಂಪು
– ನೈಸರ್ಗಿಕವಾದ ಈ ಗೊಂಪು ಆರೋಗ್ಯದೃಷ್ಟಿಯಿಂದ ಬಲು ಉಪಕಾರಿ. ನಿಯಮಿತವಾಗಿ ಗೊಂಪನ್ನು ಬಳಸಿ ಸ್ನಾನ ಮಾಡುವುದರಿಂದ ಡ್ಯಾಂಡ್ರಫ್, ಸೀಳುಗೂದಲು ಮುಂತಾದ ತೊಂದರೆಗಳನ್ನು ತಡೆಯಬಹುದು.
– ಶರೀರದಲ್ಲಿನ ಉಷ್ಣತೆಯನ್ನು ನಿವಾರಿಸುತ್ತದೆ. ಕಣ್ಣಿನಆರೋಗ್ಯಕ್ಕೂ ಬಲು ಸಹಕಾರಿ ಈ ಗೊಂಪು.
– ಬಾಣಂತಿಯರು ಗೊಂಪು ಬಳಸಿ ತಲೆಗೆ ಸ್ನಾನ ಮಾಡುವುದರಿಂದ ಉಷ್ಣದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
– ಚಿಕ್ಕ ಮಕ್ಕಳು ದೊಡ್ಡವರು ಉಪಯೋಗಿಸುವ ಗೊಂಪು ಬಳಸಿದರೆ ಶೀತವಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಅವರಿಗೆ ಬೆಳ್ಳಂಟೆ ಸೊಪ್ಪಿನಗೊಂಪನ್ನು ಬಳಸಬಹುದು. ಇದು ಹೆಚ್ಚು ಲೋಳೆಯಾಗುವುದಿಲ್ಲ.
– ಕಫ, ಶೀತ ದೇಹ ಪ್ರವೃತ್ತಿಯವರು ಗೊಂಪನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಗೊಂಪು ಉಷ್ಣತೆಯನ್ನು ನಿವಾರಿಸಿ ಶರೀರವನ್ನು ತಂಪು ಮಾಡುತ್ತದೆ. ಹಾಗಾಗಿ ಇಂಥವರಿಗೆ ಬಹುಬೇಗ ಶೀತವಾದೀತು.
ವಂದನಾ ಕೇವಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.