ಮೊಡವೆ ಮೂಡಿತೇ?

Team Udayavani, Oct 10, 2018, 6:00 AM IST

1.jpg

ಒಂದೇ ಒಂದು ಮೊಡವೆಯೂ ಮೂಡದೆ ಹದಿಹರೆಯವನ್ನು ದಾಟಿದವರಿಲ್ಲ. ಚರ್ಮದ ಅಶುಚಿತ್ವ, ಹಾರ್ಮೋನು ಬದಲಾವಣೆ, ಮಾನಸಿಕ ಒತ್ತಡ, ತಲೆಹೊಟ್ಟು ಮುಂತಾದ ಕಾರಣಗಳೇ ನೆಪವಾಗಿ, ಮುಖದ ಅಂದಗೆಡುತ್ತದೆ. ಮೊಡವೆಗೆ ಹೆದರಿ, ಸೋಪು, ಕ್ರೀಮು, ಫೇಸ್‌ವಾಶ್‌ ಮೇಲೆ ದುಡ್ಡು ಸುರಿಯುವವರಿದ್ದಾರೆ. ಈ ರೀತಿಯ ಹರಸಾಹಸಗಳಿಂದ ಮುಖ ಇನ್ನಷ್ಟು ಅಂದಗೆಡುತ್ತದೇ ವಿನಾ, ಮೊಡವೆ ಸಂಪೂರ್ಣವಾಗಿ ಗುಣವಾಗುವುದಿಲ್ಲ. ರಿಲ್ಯಾಕ್ಸ್‌, ಮೊಡವೆಯ ಗೊಡವೆಯಿಂದ ದೂರಾಗಲು ಕೆಲವು ಟಿಪ್ಸ್‌ಗಳು ಇಲ್ಲಿವೆ.

1.    ಮುಖವನ್ನು ದಿನಕ್ಕೆ ನಾಲ್ಕೈದು ಬಾರಿ ತೊಳೆಯಿರಿ.
2.    ತಲೆಯಲ್ಲಿ ಹೊಟ್ಟು ಆಗದಂತೆ ನೋಡಿಕೊಳ್ಳಿ.
3.    ಕೂದಲಿಗೆ ರಾಸಾಯನಿಕ ಶ್ಯಾಂಪೂಗಳನ್ನು ಬಳಸದಿರುವುದು ಒಳಿತು.
4.    ಮೊಡವೆಗಳನ್ನು ಕೈಯಿಂದ ಹಿಸುಕುತ್ತಾ, ಉಗುರಿನಿಂದ ಮುಟ್ಟುತ್ತಾ ಇರಬಾರದು. ಹಾಗೆ ಮಾಡುವುದರಿಂದ ಮೊಡವೆ ಒಣಗಿದ ನಂತರ, ಕಲೆ ಉಳಿದುಕೊಳ್ಳುತ್ತದೆ. 
5.    ಕೊತ್ತಂಬರಿ ಸೊಪ್ಪಿನ ರಸಕ್ಕೆ, ಲಿಂಬೆರಸ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಮತ್ತು ಕಲೆಗಳು ಮಾಯವಾಗುತ್ತವೆ.
6.    ಲಿಂಬೆಹಣ್ಣಿನ ಸಿಪ್ಪೆ ಅಥವಾ ಲಿಂಬೆ ಎಲೆಯನ್ನು, ಅರಿಶಿಣದ ಜೊತೆಗೆ ಸೇರಿಸಿ ನುಣ್ಣಗೆ ಅರೆದು ಪೇಸ್ಟ್ ಮಾಡಿ, ಅದನ್ನು ಮುಖಕ್ಕೆ ಹಚ್ಚುವುದೂ ಮೊಡವೆಗಳಿಗೆ ರಾಮಬಾಣ. 
7.    ಪ್ರತಿದಿನ ಮುಖವನ್ನು ಎಳನೀರಿನಿಂದ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚಿ, ಮೊಡವೆಗಳು ಮಾಯವಾಗುತ್ತವೆ. 
8.    ಕಿತ್ತಳೆ ಹಣ್ಣಿನ ರಸ ಮತ್ತು ಸಿಪ್ಪೆಯನ್ನು ಮುಖಕ್ಕೆ ಹಚ್ಚಿ ಮೊಡವೆಗಳನ್ನು ತಡೆಯಬಹುದು. 
9.    ಸೌತೆಕಾಯಿಯ ರಸ ಅಥವಾ ಸೌತೆಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮುಖಕ್ಕೆ ಹಚ್ಚುವುದು, ತುಂಡುಗಳಿಂದ ಮುಖವನ್ನು ತಿಕ್ಕುವುದರಿಂದ ಮೊಡವೆಗಳು ದೂರವಾಗುತ್ತದೆ. ಮುಖದ ಮೇಲೆ ಇರುವ ಕಪ್ಪು ಕಲೆಗಳು ದೂರವಾಗುವುದು.
10.    ಹಾಲಿನ ಕೆನೆ, ಕಡಲೆಹಿಟ್ಟು, ಅರಿಶಿನ, ಲಿಂಬೆರಸ ಬೆರೆಸಿ ಪೇಸ್ಟ್ ತಯಾರಿಸಿ, ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುವುದಲ್ಲದೆ, ಮೊಡವೆಗಳು ದೂರವಾಗುತ್ತದೆ. 
11.    ಹಸಿ ತರಕಾರಿ, ತಾಜಾ ಹಣ್ಣು, ಹಸಿರು ಸೊಪ್ಪುಗಳ ಸೇವನೆಯಿಂದಲೂ ಮೊಡವೆಯನ್ನು ದೂರವಿಡಬಹುದು. 
12.    ಕರಿದ ತಿಂಡಿ, ಕೊಬ್ಬಿನಾಂಶವಿರುವ ಪದಾರ್ಥಗಳಿಂದ ಆದಷ್ಟು ದೂರವಿದ್ದರೆ ಮೊಡವೆಗಳು ಬರುವುದಿಲ್ಲ.

ಹರ್ಷಿತಾ ಕುಲಾಲ್‌ ಕಾವು

ಟಾಪ್ ನ್ಯೂಸ್

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

3(1

Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

2

Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್‌  ಸೇವೆ

1

Karinja: ಅಪಾಯಕಾರಿ ವಿದ್ಯುತ್‌ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.