ಜಾಕೆಟ್ ಬ್ಲೌಸ್ ಧರಿಸಿ ಸ್ಟೈಲ್ ಕ್ವೀನ್ ಆಗಿ !
Team Udayavani, Feb 22, 2017, 10:30 AM IST
ನಿಮ್ಮ ಸೀರೆಗೆ ತಕ್ಕಂತಹ ವಿನ್ಯಾಸದ ಜಾಕೆಟ್ ತೊಟ್ಟು ಸೀರೆಯ ಚಂದ ಹೆಚ್ಚಿಸಬಹುದು. ಸೀರೆಗೊಪ್ಪುವ ಜಾಕೆಟ್ ಅಷ್ಟೇ ಅಲ್ಲ ಜಾಕೆಟನ್ನೇ ಹೋಲುವ ಬ್ಲೌಸ್ ಕೂಡ ತೊಟ್ಟು ಖುಷಿಪಡಬಹುದು. ಸೀರೆಯಲ್ಲೂ ಟ್ರೆಂಡಿಯಾಗಿ ಕಾಣಬಹುದು. ಜಾಕೆಟ್‌ಗಳನ್ನು ಮ್ಯಾಚ್ ಮಾಡುವ ನಾಲ್ಕು ಬಗೆಗಳು ಇಲ್ಲಿವೆ.
ಜಾಕೆಟ್ ಬ್ಲೌಸ್, ಬ್ಲಾಸ್ ಜಾಕೆಟ್
ಜಾಕೆಟ್, ವೇಸ್ಟ್‌ಕೋಟ್, ಶ್ರಗ್ ಯಾವೆಲ್ಲಾ ಡ್ರೆಸ್‌ಗಳ ಮೇಲೆ ತೊಡುತ್ತೀರ? ಡೆನಿಮ್, ಟೀಶರ್ಟ್, ಶಾರ್ಟ್ ಡ್ರೆಸ್, ಕುರ್ತಾ? ಹೌದು, ಇದೆಲ್ಲಾ ಡ್ರೆಸ್‌ಗಳ ಮೇಲೂ ನಿಮ್ಮಿಷ್ಟದ ವೇಸ್ ಕೋಟ್ ಅಥವಾ ಜಾಕೆಟ್ ಧರಿಸಿರುತ್ತೀರ. ಹಾಗೆಂದ ಮೇಲೆ ಸೀರೆ ಮೇಲೆ ಯಾಕಿಲ್ಲ? ಸೀರೆಗೆ ಜಾಕೆಟ್ ತೊಡುವುದಾ?! ಎಂದು ಹುಬ್ಬೇರಿಸಬೇಡಿ. ಯಾವುದಾವುದೋ ಡ್ರೆಸ್ ಮೇಲೆ ಜಾಕೆಟ್ ಹೊಂದುತ್ತದೆ ಎಂದಾದರೆ ಹೆಣ್ಣನ್ನು ಇನ್ನಷ್ಟು ಸುಂದರವಾಗಿಸುವ ಸೀರೆ ಉಟ್ಟಾಗ ಏಕೆ ಜಾಕೆಟ್ ಧರಿಸಬಾರದು. ಸಾಂಪ್ರದಾಯಿಕ ಸೀರೆಗೂ ಮಾಡರ್ನ್ ಜಾಕೆಟ್‌ಗೂ ಎಲ್ಲಿಯ ಸಂಬಂಧ. ಜಾಕೆಟ್ ತೊಟ್ಟರೆ ಸೇರೆಯ ಅಂದ ಕೆಡುವುದಿಲ್ಲವೇ ಎಂದು ಕೇಳುತ್ತೀರಾ? ಇಲ್ಲ, ಸೀರೆ ಉಟ್ಟಾಗ ಧರಿಸಲೆಂದೇ ವಿಶೇಷ ವಿನ್ಯಾಸಗಳ ಜಾಕೆಟ್‌ಗಳು ಈಗ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ನಿಮ್ಮ ಸೀರೆಗೆ ತಕ್ಕಂತಹ ವಿನ್ಯಾಸದ ಜಾಕೆಟ್ ತೊಟ್ಟು ಸೀರೆ ಚಂದ ಹೆಚ್ಚಿಸಬಹುದು. ಸೀರೆಗೊಪ್ಪುವ ಜಾಕೆಟ್ ಅಷ್ಟೇ ಅಲ್ಲ ಜಾಕೆಟನ್ನೇ ಹೋಲುವ ಬ್ಲೌಸ್ ಕೂಡ ತೊಟ್ಟು ಖುಷಿಪಡಬಹುದು. ಸೀರೆಯಲ್ಲೂ ಟ್ರೆಂಡಿಯಾಗಿ ಕಾಣಬಹುದು. ಜಾಕೆಟ್‌ಗಳನ್ನು ಮ್ಯಾಚ್ ಮಾಡುವ ನಾಲ್ಕು ಬಗೆಗಳು ಇಲ್ಲಿವೆ.
ಜಾಕೆಟ್ ಸ್ಟೈಲ್ ಸ್ಯಾರಿ ಬ್ಲೌಸ್
ದಿನಕ್ಕೊಂದು ಫ್ಯಾಷನ್ ಪರಿಚಯಿಸುವ ಸೋನಂ ಕಪೂರ್, ಏನು ತೊಟ್ಟರೂ ಚಂದ ಕಾಣುವ ಜಾಕ್ವೆಲಿನ್ ಫರ್ನಾಂಡಿಸ್ ಸೇರಿ ಹಲವು ಬಾಲಿವುಡ್ ತಾರೆಯರು ಈ ಜಾಕೆಟ್ ಸ್ಟೈಲ್ ಬ್ಲೌಸ್ ತೊಟ್ಟು ಬ್ಲೌಸ್‌ಗೊಂದು ಐಡೆಂಟಿಟಿಯನ್ನು ಈಗಾಗಲೇ ನೀಡಿದ್ದಾರೆ. ಶಾರ್ಟ್ ಕುರ್ತಿಯಷ್ಟು ಉದ್ದ ಈ ರವಿಕೆ ಇರುತ್ತದೆ. ಎರಡೂ ಬದಿಗಳಲ್ಲಿ ಕುರ್ತಿಗೆ ಇರುವಂತೆಯೇ ಸೈಡ್ ಸ್ಲಿಟ್ ಇರುತ್ತದೆ. ಕಾಲರ್ ನೆಕ್, ಉದ್ದ ತೋಳು ಈ ವಿನ್ಯಾಸದ ರವಿಕೆಗೆ ಚಂದವಾಗಿ ಒಪ್ಪುತ್ತದೆ. ಈ ರವಿಕೆ ಮೇಲೆ ಸೀರೆಯನ್ನು ಯಾವತ್ತೂ ಉಡುವಂತೆಯೇ ಉಡಬೇಕು. ರವಿಕೆ ಇನ್ನೂ ಚಂದವಾಗಿ ತೋರಬೇಕೆಂದರೆ ಉತ್ತರ ಭಾರತೀಯರ ಹಾಗೆ ಸೆರಗು ಮುಂಭಾಗ ಬರುವಂತೆ ಸೀರೆ ಉಡಿ. ಸದ್ಯಕ್ಕಂತೂ ಇದು ಭಾರಿ ಟ್ರೆಂಡಿಂಗ್‌ನಲ್ಲಿದೆ. ವಿಶೇಷವಾಗಿ ಯುವತಿಯರಿಗೆ ಕಾಲೇಜು ಸಮಾರಂಭ, ಪಾರ್ಟಿಗಳಿಗೆ ಹೇಳಿ ಮಾಡಿಸಿದ ಮಾಡರ್ನ್- ಟ್ರೆಡಿಷನಲ್ ಕಾಂಬೊ ಇದು.
ಜಾಕೆಟ್ ಬ್ಲೌಸ್ ವಿತ್ ಧೋತಿ ಸ್ಯಾರಿ
ಧೋತಿ ಸ್ಯಾರಿ ಗೊತ್ತಿದೆಯಲ್ಲಾ, ನಮ್ಮ ಹಿರಿಯರು ಕಚ್ಚೆ ಸೀರೆ ಅಂತ ಧರಿಸುತ್ತಿದ್ದ ಸೀರೆಯ ಸ್ವಲ್ಪ ಮಟ್ಟಿನ ರೂಪಾಂತರ ಇದು. ಈ ಸೀರೆ ಜಾಕೆಟ್ ಬ್ಲೌಸ್ ಹೇಳಿ ಮಾಡಿಸಿದ ಜೋಡಿ. ಧೋತಿ ಸೀರೆಗಾದರೆ ಬ್ಲೌಸ್ ಸ್ವಲ್ಪ$ಗಿಡ್ಡ ಇರಲಿ. ಸೊಂಟದವರೆಗೂ ಬಂದರೆ ಸಾಕು. ಉದ್ದನೆಯ ಬ್ಲೌಸ್ ಈ ರೀತಿಯ ಸೀರೆಗೊಪ್ಪುವುದಿಲ್ಲ.
ಸ್ಯಾರಿ ವಿಥ್ ಶಾರ್ಟ್ ಜಾಕೆಟ್
ನಿಮ್ಮಿಷ್ಟದ ಸೀರೆ ಉಡಿ, ಅದಕ್ಕೊಪ್ಪುವ ರವಿಕೆಯನ್ನು ತೊಡಿ. ಅದರ ಮೇಲೆ ವೇಸ್ಟ್‌ಕೋಟ್ ರೀತಿಯ ಡಿಸೈನರ್ ಜಾಕೆಟ್ ತೊಡಿ. ಜಾಕೆಟ್ ಸೀರೆಗೆ ಒಪ್ಪುವಂತಿರಲಿ. ಕುಂದನ್, ಜರ್ದೋಸಿ ಬಳಸಿ ಕಸೂತಿ ಮಾಡಿರುವ ಜಾಕೆಟ್‌ಗಳು ಇನ್ನೂ ಚಂದ ಕಾಣಿಸುತ್ತವೆ. ಸೆರಗು ಮೇಲೆ ಬರುವಂತೆ ಅಥವಾ ಸೆರಗಿನ ಮೇಲೆ ಜಾಕೆಟ್ ಬರುವಂತೆ, ಹೇಗೆ ಸರಿ ತೊಟ್ಟರೂ ಸರಿಯೆ. ಮಧ್ಯವಯಸ್ಕ ಮಹಿಳೆಯರಿಗೆ ಇದು ಹೆಚ್ಚು ಒಪ್ಪುತ್ತದೆ.
ಡಿಸೈನರ್ ಜಾಕೆಟ್ ವಿತ್ ಪ್ಲೇನ್ ಸ್ಯಾರಿ
ತುಂಬಾ ಆಕರ್ಷಕವಾಗಿ ಕಾಣುವ ಕಾಂಬಿನೇಷನ್ ಇದು. ಸಾದಾ ಸೀರೆಗೆ ಕಾಂಟ್ರಾಸ್ಟ್ ಬಣ್ಣದ ಸ್ಲಿàವ್‌ಲೆಸ್ ಜಾಕೆಟ್ ಧರಿಸುವುದೇ ಈಗಿನ ಫ್ಯಾಷನ್. ಸೀರೆಗೆ ತೊಡುವ ರವಿಕೆ ಕೂಡ ಸ್ಲಿàವ್‌ಲೆಸ್ ಇರಬೇಕು. ಆಗ ಮಾತ್ರ ಈ ಕಾಂಬಿನೇಷನ್ ಎದ್ದು ಕಾಣುತ್ತದೆ. ಈ ಕಾಂಬಿನೇಷನ್ ನೀವು ಪ್ರಯತ್ನಿಸುವಾಗ ಒಂದಷ್ಟು ಆಂಶಗಳ ಬಗ್ಗೆ ಗಮನವಿರಲಿ. ಸೀರೆ ಆದಷ್ಟು ಸರಳವಾಗಿರಲಿ. ಹೆಚ್ಚೆಂದರೆ ಚಿಕ್ಕ ಜರಿ ಅಂಚು ಇರಲಿ. ಜಾಕೆಟ್ ಆದಷ್ಟೂ ಅದ್ಧೂsರಿಯಾಗಿರಲಿ. ಕಸೂತಿ, ಮಿರರ್ ವರ್ಕ್ ಇರುವ ಜಾಕೆಟ್‌ಗಳು ಚೆನ್ನಾಗಿ ಕಾಣುತ್ತವೆ. ಆದಷ್ಟು ಸೀರೆ ಮತ್ತು ಜಾಕೆಟ್ ವಿರುದ್ಧ ಬಣ್ಣದ್ದಾಗಿರಲಿ. ಇದು ಅತ್ಯುತ್ತಮ ಪಾರ್ಟಿ ವೇರ್ ಕೂಡ ಆಗುತ್ತದೆ.
– ಚೇತನ. ಜೆ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.