ಅದೇ ಕಣ್ಣು…ಕದ್ದು ಕದ್ದು ನೋಡೋ ಕಳ್ಳ ಯಾರು?


Team Udayavani, Jul 12, 2017, 11:32 AM IST

SUP-9.jpg

ಮಹಿಳೆಯರು ತಮಗಿಷ್ಟವಾದ, ಕಂಫ‌ರ್ಟೆಬಲ್‌ ಎನ್ನಿಸುವ ಉಡುಗೆ ತೊಟ್ಟರೆ, ಅವರೇನೋ ಘನಘೋರ ಅಪರಾಧ ಎಸಗಿದ್ದಾರೆ ಅನ್ನುವಂತೆ ಜನರು ಕೆಕ್ಕರಿಸಿಕೊಂಡು ನೋಡುತ್ತಾರೆ, ಕೆಟ್ಟದಾಗಿ ಮಾತಾಡುತ್ತಾರೆ. ಜನರ ಆ ಭಾವನೆಗಳ, ನೋಟದ ಪ್ರತಿಕ್ರಿಯೆ ಹೇಗಿರುತ್ತವೆ? ಇಲ್ಲೊಂದು ಚಿತ್ರ-ಕತೆ ಎಲ್ಲವೂ ಹೇಳಿದೆ…

ಅವಳು ಅಲ್ಲಿ ಆಕರ್ಷಣೆಯ ವಸ್ತು. ತುಂಡು ಬಟ್ಟೆ ಉಟ್ಟು ಸಂತೆಯಲ್ಲಿ ನಿಂತಿದ್ದಾಳೆ. ಸೊಪ್ಪು, ತರಕಾರಿ, ಹಣ್ಣನ್ನು ಕೊಳ್ಳಲು ಬರೋ ಜನರೆಲ್ಲ ಟೊಮೇಟೋ, ಈರುಳ್ಳಿ, ಕಿತ್ತಳೆಹಣ್ಣನ್ನು ನೋಡುತ್ತಿಲ್ಲ. ಅವರ ನೋಟವೆಲ್ಲ ಇವಳತ್ತ ನೆಟ್ಟಿವೆ.

ಅದೇ ಹುಡುಗಿ, ಅಂಥದ್ದೇ ಉಡುಗೆಯಲ್ಲಿ ಒಂದು ಪಾರ್ಕಿನಲ್ಲಿ ಹೋಗಿ ಕೂರುತ್ತಾಳೆ. ವಾಕಿಂಗ್‌ಗೆ ಬಂದವರೆಲ್ಲ, ಅವಳ ನೀಳ ಕಾಲುಗಳನ್ನು ನೋಡಿ, ಏನೇನೋ ಗುಸು ಗುಸು ಪಿಸಪಿಸ ಎನ್ನುತ್ತಾ ಮುಂದೆ ಹೆಜ್ಜೆ ಇಡುತ್ತಾರೆ…

ಅದೇ ಹುಡುಗಿ, ಹೂವಿನ ಮಾರುಕಟ್ಟೆಗೆ ಬರುತ್ತಾಳೆ. ಅವಳ ಸೌಂದರ್ಯಕ್ಕೆ ಮಾರುಹೋದ ಒಂದಿಷ್ಟು ಹುಡುಗರು ಹಿಂಬದಿಯಿಂದ, ಆಕೆಯ ಬೆನ್ನು ಕಾಣುವಂತೆ ತೆಗೆದಿದ್ದು ಆ ಹುಡುಗಿಗೇ ಗೊತ್ತಿಲ್ಲ…

ಈಗಿನ ಕಾಲದಲ್ಲಿ ಹೆಣ್ಣಾಗಿ ಹುಟ್ಟಿದವಳಿಗೆ, ಅದರಲ್ಲೂ ಫ್ಯಾಶನಪ್ರಿಯ ಹುಡುಗಿಗೆ ಈ ನೋಟಗಳೇನು ಹೊಸತಲ್ಲ. ಯಾವತ್ತಾದರೂ ಪತಿ ಜೊತೆ, ಬಾಯ್‌ಫ್ರೆಂಡ್‌ ಜೊತೆ, ಸ್ನೇಹಿತರ ಜೊತೆ, ಕಸಿನ್‌ ಸಹೋದರರ ಜೊತೆ ಪೇಟೆ, ಪಾರ್ಕು, ದೇವಸ್ಥಾನ, ಸಿನಿಮಾಕ್ಕೆ ನೀವು ಹೋಗಿದ್ದಿದ್ದರೆ, ಇಂಥ ಅನುಭವ ನಿಮಗೂ ಆಗುತ್ತದೆ. ಸುತ್ತಲಿನ ಜನರು (ಸೋ ಕಾಲ್ಡ್‌ ಪಬ್ಲಿಕ್‌) ಕೆಕ್ಕರಿಸಿಕೊಂಡು ನಿಮ್ಮತ್ತ ಬೀರುವ ಕಾಕ ದೃಷ್ಟಿಯಿಂದ ತಪ್ಪಿಸಿಕೊಂಡ ಹೆಣ್ಣನ್ನು ಈ ಜಗತ್ತು ಬಹುಶಃ ನೋಡಿಯೇ ಇಲ್ಲ.

ಇಂದು ಮನೆಯಿಂದ ಹೊರಬೀಳುವ ಪ್ರತಿಯೊಬ್ಬ ಹೆಣ್ಮಕ್ಕಳಿಗೆ ಬೀದಿಗಳಲ್ಲಿ, ಕಚೇರಿಗಳಲ್ಲಿ, ಬಸ್‌ಸ್ಟಾಪ್‌ಗ್ಳಲ್ಲಿ ಅಗ್ನಿ ಪರೀಕ್ಷೆಗಳೇ ಕಾದಿರುತ್ತವೆ. ನಾನಾ ರೀತಿಗಳಲ್ಲಿ, ನಾನಾ ಮಾನದಂಡಗಳಿಗೆ ಅನುಸಾರವಾಗಿ ಹೆಣ್ಣನ್ನು ಅಳೆಯಲಾಗುತ್ತದೆ. ಒಂದರ್ಥದಲ್ಲಿ “ಅವಳ’ ಪಾಲಿಗೆ ಈ ಜಗತ್ತೇ ಒಂದು ರಿಯಾಲಿಟಿ ಶೋ. ಇಷ್ಟವಿಲ್ಲದಿದ್ದರೂ ಅವಳು ಅಲ್ಲಿ ಪ್ರತಿಸ್ಪರ್ಧಿ! ಇಲ್ಲಿ ಪಾಯಿಂಟುಗಳು ಸಿಗುವುದಿಲ್ಲ, ಕಾಮೆಂಟುಗಳೆಲ್ಲ ಓಡಿಬಂದು ಕಾಲಬುಡವನ್ನು ಕೆದಕುತ್ತವೆ. ಅಡಿಯಿಂದ ಮುಡಿಯವರೆಗೆ ಅವಳನ್ನು ನೋಡಿ, ಅಂದರೆ ಲುಕ್‌ ಕೊಟ್ಟು, ಅವಳು ತೊಡುವ ಉಡುಗೆ ತೊಡುಗೆ, ಆಭರಣ, ಅಲಂಕಾರ, ನಡಿಗೆ ಇವೆಲ್ಲದರ ಆಧಾರದ ಮೇಲೆ ಕಾಮೆಂಟುಗಳು ಪಾಸಾಗುತ್ತವೆ. ಅದರ ಮೇಲೆಯೆ ಅವಳ ಕ್ಯಾರೆಕ್ಟರ್‌ ಅನ್ನು ಅಳೆಯುವ ಮಹಾಪ್ರಜೆಗಳೂ ಇದ್ದಾರೆ.

ಪಬ್ಲಿಕ್‌ ಕೊಡುವ ಈ ಲುಕ್ಕುಗಳಿಗೆ ಪ್ರತಿಯಾಗಿ ನೋಟ ಬೀರಿ, “ಏನ್‌ ಲುಕ್‌ ಕೊಡ್ತೀಯಾ’ ಅಂತ ಆವಾಜ್‌ ಹಾಕೋದಕ್ಕೆ ಹೆಣ್ಮಕ್ಕಳೇನು ರೌಡಿಗಳಲ್ಲವಲ್ಲಾ! ಮುಂದೊಂದು ದಿನ ಹಾಗೆ ಗಡುಸಾಗಿ ಕೇಳುವ ಕಾಲವೂ ಬಂದೀತೆನ್ನಿ… ಸದ್ಯದ ಮಟ್ಟಿಗೆ ಹೆಣ್ಮಕ್ಕಳು ಈ ನೋಟಗಳಿಗೆ ಅಂಜಿ “ಅನುಸರಿಸಿಕೊಂಡು’ ಹೋಗುವ ಪರಿಸ್ಥಿತಿಯಿದೆ. ಎಲ್ಲೋ ಕೆಲವು ಗಟ್ಟಿಗಿತ್ತಿಯರೂ ಇದ್ದಾರೆ. ಪಬ್ಲಿಕ್‌ ಕೊಡುವ ಲುಕ್ಕುಗಳಿಗೆ ಕ್ಯಾರೇ ಎನ್ನದವರು. ಹೇಳುತ್ತಾ ಹೋದರೆ, ಲುಕ್ಕಿನದೇ ಒಂದು ಪುರಾಣ ಆಗುತ್ತದೆ. ಈ ವಿಷಯ ಯಾಕೆ ಬಂತು ಅಂದರೆ ಬೆಂಗಳೂರಿನ 18ರ ಪೋರಿ ಪ್ರಿಯಾಂಕಾ ಷಾ ಮಾಡಿರುವ ಒಂದು ತರಗತಿಯ ಪ್ರಾಜೆಕುr ಈಗ ಜಾಗತಿಕವಾಗಿ ಸುದ್ದಿಯಲ್ಲಿದೆ. ಪಬ್ಲಿಕ್‌ ಮಂದಿ, ಹೆಣ್ಮಕ್ಕಳಿಗೆ ಕೊಡುವ ಲುಕ್‌ಗಳ ಕುರಿತೇ ಪ್ರಿಯಾಂಕಾ ಪ್ರಾಜೆಕ್ಟ್ ಮಾಡಿದ್ದಾರೆ.

ಪಾರ್ಕು, ಸಂತೆ ಮುಂತಾದ ಜನಸಾಮಾನ್ಯರು ಓಡಾಡುವ ಜಾಗಗಳಿಗೆ ತೆರಳಿ ಅವರ ಮಧ್ಯೆ ಒಬ್ಬಳು ಹುಡುಗಿಯನ್ನು ಓಡಾಡಿಸಿ ಪಬ್ಲಿಕ್‌ನ ಪ್ರತಿಕ್ರಿಯೆಗಳನ್ನು (ಲುಕ್‌ಗಳನ್ನು) ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ, ಪ್ರಿಯಾಂಕಾ. ಒಂದೇ ಕಂಡೀಷನ್‌ ಎಂದರೆ, ರೂಪದರ್ಶಿ ಹುಡುಗಿ ಪಾಶ್ಚಾತ್ಯ ದಿರಿಸನ್ನು ಧರಿಸಿರುತ್ತಾಳೆ. ಈ ಪ್ರಾಜೆಕ್ಟ್‌ನಲ್ಲಿ ರೂಪದರ್ಶಿಯಾಗಿರುವವಳು ಪ್ರಿಯಾಂಕಾಳ ಗೆಳತಿ ಐಶ್ವರ್ಯಾ. ಇಬ್ಬರೂ ಸೇರಿ ಬೆಂಗಳೂರಿನ ಬೇರೆ ಬೇರೆ ಜಾಗಗಳಲ್ಲಿ ತಮ್ಮ ಪ್ರಾಜೆಕ್ಟ್ಗಾಗಿ ಓಡಾಡಿದ್ದಾರೆ. ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಫೋಟೋಗಳನ್ನು ನೋಡಿದಾಗ ಪಟ್ಟ ಕಷ್ಟಗಳೆಲ್ಲವೂ ಮರೆತುಹೋಗುವಂತೆ ಪ್ರತಿಫ‌ಲ ಕಡೆಗೂ ಸಿಕ್ಕಿತ್ತು. ಪ್ರಿಯಾಂಕಾಳ ಫೋಟೋಗಳಲ್ಲಿ ಸುತ್ತಲಿನ ಜನರ ಜನರ ಭಾವನೆಗಳು ಸೆರೆಯಾಗಿವೆ. ಮುಂದೇನೂ ಹೇಳುವುದಿಲ್ಲ. ನೀವೇ ನೋಡಿಬಿಡಿ…

ನಾನೇಕೆ ಇದನ್ನೆಲ್ಲ ಸೆರೆಹಿಡಿದೆ?
ಆರ್ಟ್‌ ಸ್ಕೂಲ್‌ನಲ್ಲಿ ಓದುತ್ತಿದ್ದಾಗ ನಮಗೆ “ಫೋಟೋಗ್ರಫಿ’ ಕ್ಲಾಸ್‌ ಇತ್ತು. ಛಾಯಾಗ್ರಹಣವನ್ನು ಬಳಸಿಕೊಂಡು ಸಮಾಜಕ್ಕೆ ಸಂದೇಶವೊಂದನ್ನು ಪರಿಣಾಮಕಾರಿಯಾಗಿ ಹೇಗೆ ಮುಟ್ಟಿಸಬಹುದು ಎನ್ನುವುದನ್ನು ಆ ತರಗತಿಯಲ್ಲಿ ಕಲಿಸಲಾಗುತ್ತದೆ. ನನ್ನ ಅಭಿಪ್ರಾಯವನ್ನು ಚಿತ್ರಮಾಧ್ಯಮದ ಮೂಲಕ ಪ್ರಕಟಪಡಿಸಲು ಇದೊಳ್ಳೆ ಅವಕಾಶ ಎಂದುಕೊಂಡೆ. ನಮ್ಮ ದೇಶದಲ್ಲಿ ಹೆಣ್ಮಕ್ಕಳು ಉಡುಗೆ ತೊಡುಗೆ ವಿಚಾರದಲ್ಲಿ ಅನೇಕ ನಿಬಂಧನೆಗಳನ್ನು ಎದುರಿಸುತ್ತಾರೆ. ನಮ್ಮಲ್ಲಿ ಮಾತ್ರವಲ್ಲ, ಕೆಲ ಹೊರದೇಶಗಳಲ್ಲೂ ಈ ಪರಿಸ್ಥಿತಿ ಇದೆ. ಮಹಿಳೆಯರು ತಮಗಿಷ್ಟವಾದ, ಕಂಫ‌ರ್ಟೆಬಲ್‌ ಎನ್ನಿಸುವ ಉಡುಗೆ ತೊಟ್ಟರೆ ನಾವೇನೋ ಘನಘೋರ ಅಪರಾಧ ಎಸಗಿದವರಂತೆ ಜನರು ಕೆಕ್ಕರಿಸಿಕೊಂಡು ನೋಡುತ್ತಾರೆ, ಕೆಟ್ಟದಾಗಿ ಮಾತಾಡುತ್ತಾರೆ. ಅದಕ್ಕೇ ನಾನು ಈ ವಿಷಯವನ್ನು ಕ್ಲಾಸ್‌ ಪ್ರಾಜೆಕ್ಟ್ಗೆ ಆರಿಸಿಕೊಂಡೆ.

ಸಮಾಜವನ್ನು ಬದಲಾಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಈ ಕುರಿತು ಜಾಗೃತಿ ಮೂಡಿಸುವುದಷ್ಟೇ ನನ್ನ ಆಶಯವಾಗಿತ್ತು. ಈಗ ನನ್ನ ಪ್ರಾಜೆಕ್ಟ್ ಪಾಪ್ಯುಲರ್‌ ಆಗಿರುವುರಿಂದ ಖುಷಿಯಾಗಿದೆ. ಈ ಪ್ರಾಜೆಕ್ಟ್ಗೆ ಕೆಲಸ ಮಾಡುವ ಸಂದರ್ಭದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದ್ದೇವೆ. ಜನರಿಂದ ನಿಂದನೆ, ಬೈಗುಳಗಳನ್ನು ತಿಂದಿದ್ದೇವೆ. ಶೂಟಿಂಗ್‌ ಮಾಡೋವಾಗ ಏನಾದರೂ ಯಡವಟ್ಟಾದೀತೆಂಬ ಭಯದಲ್ಲಿ ಸಹಾಯಕ್ಕೆಂದು ಒಬ್ಬ ಗೆಳೆಯನನ್ನೂ ಕರೆದೊಯ್ದಿದ್ದೆವು.

ಒಂದಂತೂ ಸತ್ಯ, ಹೆಣ್ಮಕ್ಕಳು ಪೂರ್ತಿ ಮೈಮುಚ್ಚುವ ದಿರಿಸನ್ನೇ ಉಟ್ಟಿರಲಿ, ಇಲ್ಲಾ ಮೈ ಕಾಣುವಂಥ ದಿರಿಸನ್ನೇ ತೊಟ್ಟಿರಲಿ, ಸಮಾಜದ ಅಭಿಪ್ರಾಯ ಮಾತ್ರ ನೆಗೆಟಿವ್‌ ಆಗಿಯೇ ಇರುತ್ತದೆ. ಬೆಂಗಳೂರು ಒಂದು ದೊಡ್ಡ ಮೆಟ್ರೊಪಾಲಿಟನ್‌ ಸಿಟಿ. ನನ್ನ ಮೆಚ್ಚಿನ ನಗರ. ದಿನದಿಂದ ದಿನಕ್ಕೆ ಈ ನಗರ ಬೆಳೆಯುತ್ತಲೇ ಇದೆ. ಅದರ ಜೊತೆಗೆ ನಮ್ಮ ಮನಸ್ಸುಗಳೂ ವಿಶಾಲವಾದರೆ ಇನ್ನೂ ಚೆನ್ನಾಗಿರುತ್ತೆ ಅಲ್ವಾ? ಅಪ್ಪ ಅಮ್ಮನಿಗೆ ನಾನು ಈ ಪ್ರಾಜೆಕ್ಟ್ ಮಾಡುತ್ತಿದ್ದೀನಿ ಅಂತ ಹೇಳಿದಾಗ ತುಂಬಾನೇ ಖುಷಿ ಪಟ್ಟು ಪ್ರೋತ್ಸಾಹ ನೀಡಿದರು. ಹಿಂದೆಯೇ “ಜೋಪಾನ’ ಎಂದೂ ಹೇಳಿದರು.

ಆ ಮಾಡೆಲ್‌ 10 ತಾಸು ನಡೆದಿದ್ದಳು!
ನೀವು ಯೂಟ್ಯೂಬ್‌ಗ ಹೋದರೆ, “ಇಂಡೀ ಟ್ಯೂಬ್‌’ನ ಕೆಲವು ವಿಡಿಯೋಗಳು ಸಿಗುತ್ತವೆ. ಬೇಕಂತಲೇ ಒಂದು ಹುಡುಗಿಗೆ ಗ್ಲ್ಯಾಮರ್‌ ಡ್ರೆಸ್‌ ತೊಡಿಸಿ, ಮುಂಬೈ ಪೂರಾ ಸುತ್ತಿಬರಲು ಹೇಳುತ್ತಾರೆ. ಆಗ ಜನರಿಂದ ವ್ಯಕ್ತವಾಗುವ ನೋಟ ವೈವಿಧ್ಯಗಳನ್ನು ತಮಾಷೆಯಲ್ಲಿ ತೋರಿಸಿದ್ದಾರೆ. ಅದರಲ್ಲೂ ರೂಪದರ್ಶಿ ಒಬ್ಬಳು 10 ಗಂಟೆ ಮುಂಬೈ ಬೀದಿಯಲ್ಲಿ ನಡೆದಿದ್ದಾಳೆ. ಇದು ನೋಡಲು ತಮಾಷೆಯಂತೆ ಕಂಡರೂ, ಇದರ ಆಳದಲ್ಲೊಂದು “ಸಾಂಸ್ಕೃತಿಕ ಸಂಘರ್ಷ’ ಅಡಗಿದೆ. ಬದಲಾಗುತ್ತಿರುವ ನವಪೀಳಿಗೆ, ಹೊಸತರ ಬಗೆಗೆ ಹಳಬರ ಆಕ್ಷೇಪ ನೋಟಗಳ ಘರ್ಷಣೆಯನ್ನು ನಾವು ಕಾಣಬಹುದು.

ಬೆಂಬಲವೂ ಸಿಕ್ಕಿತ್ತು…
ಅಮೆರಿಕದ ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಜೋನ್ಸ್‌ ಎಂಬಾಕೆ ತನ್ನ ನೇರನುಡಿಗೆ ಹೆಸರಾದವರು. ಪುರುಷರು ತನಗೆ ನೀಡಿದ ಕಾಂಪ್ಲಿಮೆಂಟುಗಳಿಗೆ ಸಹಮತ ವ್ಯಕ್ತಪಡಿಸಿದಾಗ ಅವರು ಅಪ್‌ಸೆಟ್‌ ಆಗುವುದನ್ನು ಜೋನ್ಸ್‌ ಗಮನಿಸಿದ್ದರು. ಅದಕ್ಕೇ ಪುರುಷರ ಆ ರಿಯಾಕ್ಷನ್‌ಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಪ್ರಾಜೆಕ್ಟ್ ಒಂದನ್ನು ಮಾಡಿ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದರು. ಇಂಟರ್‌ನೆಟ್ಟಿನಲ್ಲಿ ಅದಕ್ಕೆ ಭಾರಿ ಬೆಂಬಲ ವ್ಯಕ್ತವಾಗಿತ್ತು.
 goo.gl/RPioze

 ಹರ್ಷವರ್ಧನ ಸುಳ್ಯ

ಟಾಪ್ ನ್ಯೂಸ್

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

sunil kumar

Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ

1-vitla

ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ

1-raichur

Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

1-nxxxxx

Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

3

Atul Subhash Case: ಮೊಮ್ಮಗನನ್ನು ಟೆಕಿ ಅತುಲ್‌ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

sunil kumar

Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.