ಕಂದ ಕೊಟ್ಟ ಸಿಗ್ನಲ್ಲು


Team Udayavani, Jul 11, 2018, 6:00 AM IST

c-4.jpg

ಮಕ್ಕಳಿಗೆ ಮಾತು ಸ್ಪಷ್ಟವಾಗುವವರೆಗೆ, ಅವು ಯಾವಾಗ “ಠು’ ಮಾಡಿಕೊಳ್ಳುತ್ತವೆ ಎನ್ನುವುದನ್ನು ಅಂದಾಜಿಸುವುದು ಕಷ್ಟ. ಡೈಪರ್‌ ಇಲ್ಲದೆ ಎಲ್ಲಿಗಾದರೂ ಹೊರಗೆ ಕರೆದೊಯ್ದರಂತೂ, “ಠು’ ತಂದೊಡ್ಡುವ ತಾಪತ್ರಯ ಅಷ್ಟಿಷ್ಟಲ್ಲ. ಆದರೆ, ಮಕ್ಕಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡರೆ, ಈ ಕಿರಿಕಿರಿಯಿಂದ ಪಾರಾಗಬಹುದು…

ಅಲ್ಲಿಯ ತನಕ ಮಗು ತನ್ನಪಾಡಿಗೆ ತಾನು ಆಡುತ್ತಲೇ ಇತ್ತು. ಅದೇನಾಯಿತೋ! ಈಗ ನಿಂತಲ್ಲೇ ಸುಮ್ಮನೆ ನಿಂತುಬಿಟ್ಟಿದೆ, ಗೊಮ್ಮಟನ ಹಾಗೆ. ಹೆಬ್ಬೆರಳನ್ನು ಚೀಪುತ್ತಾ, ತಾನೇನೋ ತಪ್ಪು ಮಾಡಿದ್ದೇನೋ ಎನ್ನುವ ಚಿಂತೆಯಲ್ಲಿದೆ ಆ ಪುಟಾಣಿ. “ಬಾರೋ ಕಂದಾ…’ ಅಂದರೂ ಅದಕ್ಕೆ ತೊದಲು ಮಾತಿರಲಿ, ಮಗುಳು ನಗುವಿನ ಉತ್ತರವನ್ನೂ ನೀಡುತ್ತಿಲ್ಲ. ಅಂಥದ್ದೇನಾಯ್ತು?

  ಹತ್ತಿರ ಹೋಗಿ ನೋಡಿದಾಗಲೇ ಗೊತ್ತಾಗಿದ್ದು, ಮಗು “ಶ್ಶೀ’ (ಠು) ಮಾಡಿಕೊಂಡಿದೆ ಅಂತ. ಇದನ್ನು ನೋಡಿ ತಾಯಿಗೆ ರೇಗಿ ಹೋಯ್ತು, “ಎಷ್ಟು ಸಲ ಹೇಳಿಲ್ಲ ನಿಂಗೆ. ಠು ಬರೋವಾಗ ಹೇಳ್ಳೋದಲ್ವಾ?’ ಅಂತ ಜೋರು ದನಿಯಲ್ಲಿ ಕೂಗಿದಾಗ, ಪುಟಾಣಿ ಮತ್ತೆ ಬೆಚ್ಚುತ್ತೆ. ಕಣ್ಣಂಚಿಂದ ನಾಲ್ಕು ಹನಿ ಉದುರುತ್ತೆ. 

  ಮಕ್ಕಳಿಗೆ ಮಾತು ಸ್ಪಷ್ಟವಾಗುವವರೆಗೆ, ಅವು ಯಾವಾಗ “ಠು’ ಮಾಡಿಕೊಳ್ಳುತ್ತವೆ ಎನ್ನುವುದನ್ನು ಅಂದಾಜಿಸುವುದು ಕಷ್ಟ. ಡೈಪರ್‌ ಇಲ್ಲದೆ ಎಲ್ಲಿಗಾದರೂ ಹೊರಗೆ ಕರೆದೊಯ್ದರಂತೂ, “ಠು’ ತಂದೊಡ್ಡುವ ತಾಪತ್ರಯ ಅಷ್ಟಿಷ್ಟಲ್ಲ. ಆದರೆ, ಮಕ್ಕಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡರೆ, ಈ ಕಿರಿಕಿರಿಯಿಂದ ಪಾರಾಗಬಹುದು. 2- 3 ವರ್ಷದೊಳಗಿನ ಪುಟಾಣಿಗೆ ಅದನ್ನು ಹೇಳಲು ಗೊತ್ತಾಗದೇ ಇದ್ದರೂ, ಅದಕ್ಕೆ ಕೆಲವು ಶಿಸ್ತು ರೂಢಿಸಿಬಿಟ್ಟರೆ, ಟಾಯ್ಲೆಟ್‌ನಂಥ ನಿರ್ದಿಷ್ಟ ಸ್ಥಳದಲ್ಲೇ ಆ ಕರ್ಮವನ್ನು ಅದು ಮುಗಿಸುತ್ತದೆ.

ಆ ಸಿಗ್ನಲ್‌ ಯಾವುದು?
ಪುಟಾಣಿಗೆ “ಠು’ ಒತ್ತಡ ಬರುವಾಗ, ಅದು ಕೆಲವು ಸಂಜ್ಞೆಯನ್ನು ಹೊರಹಾಕುತ್ತದೆ. ಮುಖವನ್ನು ಹಿಂಡುತ್ತದೆ, ಏನಾದರೂ ಆಡುತ್ತಿದ್ದರೆ ಅದನ್ನು ತತ್‌ಕ್ಷಣ ನಿಲ್ಲಿಸುತ್ತದೆ, ಮುಖ ಬಾಡಿಸಿಕೊಳ್ಳುತ್ತದೆ, ಒಂದೂ ಹೆಜ್ಜೆ ಕದಲದೇ ಅಲ್ಲೇ ಇರುತ್ತದೆ… ಇವುಗಳಲ್ಲಿ ಯಾವಾದರೂ ಒಂದು ಸಂಜ್ಞೆಯನ್ನು ಅದು ಪ್ರತಿ ಬಾರಿ ಇಂಥ ವೇಳೆ ಪ್ರತಿಪಾದಿಸುತ್ತಲೇ ಇರುತ್ತದೆ. ಆ ಸಿಗ್ನಲ್‌ ಯಾವುದು ಎಂದು ನಿಮಗೆ ತಿಳಿದುಬಿಟ್ಟರೆ, ಅದು ಎಲ್ಲೆಂದರಲ್ಲಿ “ಠು’ ಮಾಡುವುದನ್ನು ತಪ್ಪಿಸಬಹುದು.

ಬಿಗು ಉಡುಪು ಬೇಡ
ಪುಟಾಣಿಗಳಿಗೆ “ಠು’ ಒತ್ತಡ ಬಂದಾಗ, ಅವು ಉಡುಪು ತೆಗೆಯಲು ಯತ್ನಿಸುತ್ತವೆ. ಆದರೆ, ಉಡುಪು ಬಿಗಿಯಾಗಿ, ಭದ್ರವಾಗಿ ಇದ್ದಾಗ ಅದನ್ನು ತೆಗೆಯುವುದು ಅವಕ್ಕೆ ಕಷ್ಟವಾಗಬಹುದು. ಅಥವಾ ಹಾಗೆ ತೆಗೆಯುವ ಪ್ರಯತ್ನಕ್ಕೆ ಅವು ಮುಂದಾಗದೆಯೂ ಇದ್ದುಬಿಡಬಹುದು. ಈ ಕಾರಣದಿಂದ, ಇಂಥ ಮಕ್ಕಳಿಗೆ ಡಂಗ್ರೀಸ್‌ ಮುಂತಾದ ಬಿಗು ಉಡುಪನ್ನು ಹಾಕದಿರುವುದೇ ಒಳ್ಳೆಯದು.

ಬೆಚ್ಚಿ ಬೀಳದೇ ಇರಲಿ…
ಪುಟಾಣಿಗಳಿಗೆ ಟಾಯ್ಲೆಟ್‌ನಲ್ಲಿ ನಿತ್ಯಕರ್ಮ ಮಾಡಿಸುವಾಗ, ಅಲ್ಲಿನ ವಾತಾವರಣ ಅದಕ್ಕೆ ಹೆದರಿಕೆ ಹುಟ್ಟಿಸದೇ ಇರಲಿ. ಗಾಢ ಕತ್ತಲೆ, ಶುಚಿಯಿಲ್ಲದೇ ಅತಿಯಾದ ಜಾರುವಿಕೆ, ಜೋರು ಸದ್ದು… ಇಂಥ ವಾತಾವರಣ ಇಲ್ಲದಿರುವಂತೆ ನೋಡಿಕೊಳ್ಳಿ. ಹೀಗೆ ಮಾಡಿದ್ದ ಆದಲ್ಲಿ “ಠು’ ಬರೋವಾಗ, ಕಡೇಪಕ್ಷ ಅವು ಟಾಯ್ಲೆಟ್‌ ಬಾಗಿಲಿನತ್ತವಾದರೂ ಧಾವಿಸುತ್ತವೆ.

ಪ್ರೋತ್ಸಾಹಿಸಿ…
ಬಹುತೇಕ ಪುಟಾಣಿಗಳಿಗೆ ಇಂಥ ವೇಳೆ ಪಶ್ಚಾತ್ತಾಪ ಕಾಡುತ್ತದೆ. ತಾವೇನೋ ತಪ್ಪು ಮಾಡಿಬಿಟ್ಟಿದ್ದೇವೆ ಎಂದು ಮುಖವನ್ನು ಕೆಳಕ್ಕೆ ಮಾಡುತ್ತವೆ. ಅವುಗಳ ಈ ಆತಂಕಭರಿತ, ದುಃಖತಪ್ತ ಭಾವವನ್ನು ಆದಷ್ಟು ಶಮನಗೊಳಿಸಲು ಯತ್ನಿಸಿ. ಅವುಗಳು “ಠು’ ಬಂದಾಗ ಹೇಳಿದರೆ, ಅವತ್ತು ಪೂರಾ ಪುಟಾಣಿಯ ನಡತೆಯನ್ನು ಪ್ರೋತ್ಸಾಹಿಸುವ ಮಾತನಾಡಿ.

ಟಾಪ್ ನ್ಯೂಸ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.