ಮಾತು ಆಡಿದರೆ ಹೋಯಿತು…
ನೋಡ್ಕೊಂಡ್ ಮಾತಾಡಿ...
Team Udayavani, Feb 5, 2020, 5:43 AM IST
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗೆಳತಿಯನ್ನು ನೋಡಲು ಹೋಗಿದ್ದೆ. ಅವರಿಗೆ ಕೊನೆಯ ಹಂತದ ಕ್ಯಾನ್ಸರ್ ಇತ್ತು. ಹೆಚ್ಚು ದಿನ ಉಳಿಯಲಾರರೆಂದು ವೈದ್ಯರು ಹೇಳಿದ್ದರು. ಆಕೆಯ ಬಂಧುಗಳೊಬ್ಬರು ಅವರನ್ನು ನೋಡಲು ಬಂದವರು, “ಕ್ಯಾನ್ಸರ್‌ನಿಂದ ತೀರಿಕೊಂಡವರ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆ. ಹಾಗಾಗಿ ಇಲ್ಲಿಗೆ ಬರುವುದು ತಡವಾಯಿತು’ ಎಂದುಬಿಟ್ಟರು!
ಮಾತು ಬೆಳ್ಳಿ, ಮೌನ ಬಂಗಾರ, ಮಾತೇ ಮುತ್ತು..ಮಾತೇ ಮೃತ್ಯು, ನುಡಿದರೆ ಮುತ್ತಿನ ಹಾರದಂತಿರಬೇಕು.. ಹೀಗೆಯೇ ಮಾತಿನ ಬಗ್ಗೆಯೇ ಅದೆಷ್ಟೊಂದು ಮಾತುಗಳಿವೆ! ನಾವು ಹೆಣ್ಣುಮಕ್ಕಳು… ಮೊದಲೇ ಮಾತು ಜಾಸ್ತಿ. “ಮಾತು ಬೆಳ್ಳಿ…’, “ಮಾತೇ ಮೃತ್ಯು…’ ಎಂಬಂಥ ಹಿರಿಯರ ಕಿವಿಮಾತುಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಒಳ್ಳೆಯದು. ಎಷ್ಟೋ ಸಲ, ಗೊತ್ತಿದ್ದೂ ತಪ್ಪು ಮಾಡಿಬಿಡುತ್ತೇವೆ. ಕೊಂಚ ಯೋಚಿಸಿ…ಸಮಯ ಸಂದರ್ಭ ನೋಡಿಕೊಂಡು ಮಾತಾಡುವುದು ನಿಜಕ್ಕೂ ಒಳ್ಳೆಯದು. ಮಾತು ಆಡಿದರೆ ಹೋಯಿತು.. ಮುತ್ತು ಒಡೆದರೆ ಹೋಯಿತು..ಎಂಬಂತೆ ಕೊನೆಗೆ ಪಶ್ಚಾತ್ತಾಪಪಟ್ಟರೆ ಪ್ರಯೋಜನವಿಲ್ಲ.
ಒಮ್ಮೆ, ಪರಿಚಿತರ ಮನೆಯ ಶುಭಕಾರ್ಯಕ್ಕೆ ಹೋಗಿದ್ದೆ. ಮಧ್ಯಾಹ್ನ ಪುಟ್ಟ ಮಗುವೊಂದಕ್ಕೆ ಉಣಿಸುತ್ತ ನಿಂತಿದ್ದ ಹೆಣ್ಣು ಮಗಳೊಬ್ಬಳು ಸ್ನೇಹದ ನಗೆ ಬೀರಿದರು. ಔಪಚಾರಿಕವಾಗಿ ಮಾತಾಡಲು ಕೇಳಿದೆ..”ಎಲ್ಲಿಯವರು ನೀವು.. ತವರು ಮನೆ ಎಲ್ಲಿ.. ಮಗುವಿನ ಹೆಸರೇನು…’ ಅಂತೆಲ್ಲ..
ಆಕೆ ಒಂದು ಕ್ಷಣ ಕಸಿವಿಸಿಗೊಂಡರು. ಸಾವರಿಸಿಕೊಂಡು ಹೇಳಿದರು-” ನನಗೆ ಮದುವೆಯಾಗಿಲ್ಲ. ಬಂಧುಗಳ ಮಗುವನ್ನು ನೋಡಿಕೊಳ್ಳಲು ಅವರ ಮನೆಯಲ್ಲಿದ್ದೇನೆ’ ಅಂತ. ನನಗೂ ಯಾಕಾದರೂ ಹೀಗೆ ಕೇಳಿದೆನೋ ಎಂದು ಇರಿಸುಮುರಿಸಾಯ್ತು. ಆಕೆಗೆ ಮದುವೆಯ ವಯಸ್ಸು ಮೀರಿತ್ತು. ಹಾಗಾಗಿ, ಒಂದೇ ಕ್ಷಣವೂ ಅನುಮಾನ ಬರಲಿಲ್ಲ ಎಂದು ನನ್ನ ಒಳ ಮನಸ್ಸು ಸಮಜಾಯಿಷಿ ಹೇಳಿತಾದರೂ, ಅವರಿಗೆ ಹಾಗೆಲ್ಲ ಕೇಳಿ ನೋಯಿಸಿಬಿಟ್ಟೆನೇನೋ ಎಂಬ ಕಸಿವಿಸಿ.
ಇದೆಲ್ಲ ಸಹಜ ಬಿಡಿ. ಎಲ್ಲರೂ ಹೀಗೇ ಕೇಳುತ್ತಾರೆ.. ಅಂತ ಆಕೆ ಹೇಳಿದರಾದರೂ, ಆಕೆಯ ದನಿಯಲ್ಲಿದ್ದ ನೋವಿನ ಎಳೆಯನ್ನು ಗಮನಿಸಿದೆ. ಈಗ ಅವರಾಗಿಯೇ ಹೇಳುವತನಕ ಯಾರನ್ನೂ ಕೇಳಲು ಹೋಗುವುದಿಲ್ಲ. ಹಾಗೆಯೇ, ಒಂದೊಮ್ಮೆ ಕೇಳುವ ಸಂದರ್ಭ ಬಂದರೆ, “ಮನೆಯಲ್ಲಿ ಯಾರ್ಯಾರಿದ್ದೀರಿ?’ ಅಂತ ಕೇಳುವುದನ್ನು ರೂಢಿ ಮಾಡಿಕೊಂಡಿದ್ದೇನೆ. ಹೀಗೆ ಕೇಳಿದಾಗ, ಎಲ್ಲ ವಿವರಣೆಯನ್ನು ಅವರೇ ಹೇಳಿ ಬಿಡುವುದರಿಂದ ಎಲ್ಲವೂ ಸ್ಪಷ್ಟವಾಗುತ್ತದೆ. ಮಕ್ಕಳಿಲ್ಲದವರು, ಸಂಗಾತಿಯನ್ನು ಕಳೆದುಕೊಂಡವರು, ಕಾಯಿಲೆಯಿಂದ ಬಳಲುತ್ತಿರುವವರು..ಪಟಕ್ಕನೆ ಎದುರಾಗುವ ಇಂಥ ಸಂದರ್ಭಗಳಲ್ಲಿ ಮುಜುಗರಕ್ಕೆ ಒಳಗಾಗದಂತೆ ಮಾಡಬಹುದು.
ಇನ್ನೊಂದು ಸಂದರ್ಭದಲ್ಲಿ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗೆಳತಿಯನ್ನು ನೋಡಲು ಹೋಗಿದ್ದೆ. ಅವರಿಗೆ ಕೊನೆಯ ಹಂತದ ಕ್ಯಾನ್ಸರ್ ಇತ್ತು. ಹೆಚ್ಚು ದಿನ ಉಳಿಯಲಾರರೆಂದು ವೈದ್ಯರು ಹೇಳಿದ್ದರು. ಆಕೆಯ ಬಂಧುಗಳೊಬ್ಬರು ಅವರನ್ನು ನೋಡಲು ಬಂದವರು, “ಕ್ಯಾನ್ಸರ್‌ನಿಂದ ತೀರಿಕೊಂಡವರ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆ. ಹಾಗಾಗಿ ಇಲ್ಲಿಗೆ ಬರುವುದು ತಡವಾಯಿತು’ ಎಂದುಬಿಟ್ಟರು!
ಈ ಮಾತು ಕೇಳಿದ್ದೇ ತಡ, ಆ ಗೆಳತಿಯ ಮುಖ ಕಂದಿಹೋಯಿತು! ಹೇಳಿದಾಕೆಗೂ, ಆನಂತರ ತಮ್ಮ ತಪ್ಪಿನ ಅರಿವಾಯಿತು. ಆದರೇನು ಮಾಡುವುದು, ಕಾಲ ಮಿಂಚಿ ಹೋಗಿತ್ತು. ಸಾವಿನ ನಿರೀಕ್ಷೆಯಲ್ಲಿ ಇರುವವರನ್ನು ಇಂಥ ಮಾತುಗಳು ಮತ್ತಷ್ಟು ಜರ್ಜರಿತಗೊಳಿಸುತ್ತವೆ. ಆದ್ದರಿಂದ, ನಾವು ಮಾತಾಡುವ ಸಂದರ್ಭ, ವ್ಯಕ್ತಿ ಎಲ್ಲವನ್ನೂ ಗಮನಿಸಿ ಹತ್ತು ಬಾರಿ ಯೋಚಿಸಿದ ನಂತರವೇ ಮಾತಾಡಬೇಕು.
“ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ’ ಎಂದಿ¨ªಾರೆ ನಮ್ಮ ಹಿರಿಯರು. ಅದು ಒಂದೇ ದಿನಕ್ಕೆ ಸೀಮಿತವಾಗಬಾರದು. ಅನವರತವೂ ಜಾರಿಯಲ್ಲಿದ್ದರೆ, ಎಲ್ಲರ ಆರೋಗ್ಯಕ್ಕೂ ಒಳ್ಳೆಯದು!
-ಸುಮನಾ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.