ಗೋಡೆ ಬರಹ ನೂರು ತರಹ…
Team Udayavani, Dec 25, 2019, 4:17 AM IST
ತಮ್ಮ ಮನೆ ಸುಂದರವಾಗಿ ಕಾಣಬೇಕು ಎಂಬುದು ಎಲ್ಲರ ಬಯಕೆ. ಅದಕ್ಕಾಗಿಯೇ ಬಹಳ ಮುತುವರ್ಜಿಯಿಂದ ಮನೆಯ ಒಳಾಂಗಣವನ್ನು ಅಲಂಕಾರಿಕ ವಸ್ತುಗಳಿಂದ ಸಿಂಗರಿಸುತ್ತಾರೆ. ಹೀಗೆಲ್ಲ ಸಿಂಗರಿಸಿ ಗೋಡೆಯನ್ನು ಮಾತ್ರ ಖಾಲಿ ಬಿಟ್ಟರೆ ಹೇಗೆ? ಈ ಎಲ್ಲ ಆಲಂಕಾರಿಕ ವಸ್ತುಗಳ ಜೊತೆಗೇ ಗೋಡೆಗಳು ಕೂಡಾ ಕಲಾತ್ಮಕವಾಗಿದ್ದರೆ ಚೆನ್ನ. ಹಿಂದಿನ ಕಾಲದಲ್ಲಿ ಗೋಡೆಗಳ ಅಗಲಕ್ಕೂ ದೇವರ ಫೋಟೊಗಳು ಮತ್ತು ಕ್ಯಾಲೆಂಡರ್‌ಗಳನ್ನು ತೂಗು ಹಾಕುತ್ತಿದ್ದರು.ಈಗಿನ ಮನೆಗಳಲ್ಲಿ ದೇವರಕೋಣೆ ಪ್ರತ್ಯೇಕವಾಗಿರುತ್ತದೆ. ಹೀಗಾಗಿ, ಮನೆಯ ಎಲ್ಲ ಗೋಡೆಗಳ ಮೇಲೆ ದೇವರ ಫೋಟೊಗಳನ್ನು ಹಾಕುವ ಅಗತ್ಯವಿಲ್ಲ. ಈಗಿನ ಕಾಲದ ಮನೆಯ ಗೋಡೆಗಳು ಬೇರೆಯದೇ ರೀತಿಯ ಕಲಾತ್ಮಕತೆಯನ್ನು ಬೇಡುತ್ತವೆ.
– ಸವಿ ನೆನಪುಗಳನ್ನು ದಾಖಲಿಸಿ
ನಿಮ್ಮ ಜೀವನದ ಸುಂದರ ನೆನಪುಗಳಿಗೆ ಸಾಕ್ಷಿ ಹೇಳುವ ಚಿತ್ರಪಟಗಳಿಂದ ಗೋಡೆಗಳನ್ನು ಅಲಂಕರಿಸಿ. ಒಂದರ ಪಕ್ಕ ಇನ್ನೊಂದರಂತೆ, ಸಾಲಾಗಿ ಫೋಟೊ ಪ್ರೇಮ್‌ಗಳನ್ನು ಜೋಡಿಸುವ ಕಾಲ ಸರಿದು ಹೋಗಿದೆ. ಈಗ ಪಕ್ಕದ ಚೌಕಟ್ಟು ಕೊಂಚವೇ ಕೆಳಗೆ ಬರುವಂತೆ, ಅದರ ನಂತರದ್ದು ಇನ್ನೂ ಕೊಂಚ ಕೆಳಗೆ ಬರುವಂತೆ ಜೋಡಿಸಿ. ಚಿಕ್ಕ ಚಿತ್ರದಿಂದ ದೊಡ್ಡ ಗಾತ್ರದವರೆಗೆ ಮೆಟ್ಟಿಲಿನ ಆಕಾರದಲ್ಲಿ ಜೋಡಿಸುವುದು ಕಲಾತ್ಮಕತೆಯ ಸಂಕೇತ.
-ಪೇಂಟಿಂಗ್ ಮಾಡಿ
ಬಿಳಿ ಬಣ್ಣದ ಮೇಲೆ ನಿಮಗೆ ಇಷ್ಟವಾದ ಬಣ್ಣವನ್ನು ಸುಂದರವಾಗಿ ಬಿಡಿಸಿ. ವಿವಿಧ ಬಣ್ಣಗಳನ್ನು ಬಳಸಿ ಕಲೆಗೊಂದು ರೂಪ ನೀಡಿ. ಒಂದು ವೇಳೆ ನಿಮ್ಮಲ್ಲಿ ಆ ಕಲಾವಿದನಿಲ್ಲದಿದ್ದಲ್ಲಿ ಒಂದೇ ಬಣ್ಣದ ವೃತ್ತಾಕಾರ, ಚೌಕಾಕಾರಗಳನ್ನು ಬಿಡಿಸಿ. ಪ್ರತಿ ಆಕೃತಿಗೂ ಪ್ರಖರವಾದ ಬೇರೆ ಬೇರೆ ಬಣ್ಣಗಳನ್ನು ಬಳಸುವ ಮೂಲಕ ವೈವಿಧ್ಯವನ್ನು ಪಡೆಯಬಹುದು. ಈಗ ಗೋಡೆಗೆ ಹಚ್ಚುವ ಸಿದ್ಧರೂಪದ ಅಲಂಕಾರದ ಚಿತ್ರಗಳು ಸಿಗುತ್ತವೆ. ಸೂಕ್ತವಾದವುಗಳನ್ನು ಖರೀದಿಸಿ ಮನೆಯ ಅಂದವನ್ನು ಹೆಚ್ಚಿಸಬಹುದು.
-ಗಾಢ ಬಣ್ಣದ ಪರದೆ ಮತ್ತು ರತ್ನಗಂಬಳಿ
ನೆಲಕ್ಕೆ ನೇರಳೆ, ಕಾಫಿ ಅಥವಾ ಕಂದು ಬಣ್ಣದ ರತ್ನಗಂಬಳಿ ಸೂಕ್ತವಾದರೆ, ಕಿಟಕಿಗಳಿಗೆ ಅದೇ ಬಣ್ಣದ ಪರದೆ ಉತ್ತಮವಾದ ಮೆರುಗು ನೀಡುತ್ತದೆ. ಆದರೆ, ಪೀಠೊಪಕರಣಗಳು ಮತ್ತು ಮೇಜಿನ ಮೇಲಿನ ಬಟ್ಟೆ ಬಿಳಿ ಬಣ್ಣದ್ದಿರಲಿ. ಆಗ ಹಿಂಭಾಗದ ಗಾಢವರ್ಣದ ಪರದೆ ಹಿಂಭಾಗದಲ್ಲಿ ಎದ್ದು ಕಾಣುತ್ತದೆ.
-ಪುಸ್ತಕದ ಕಪಾಟೊಂದು ಇರಲಿ
ಪುಸ್ತಕಗಳನ್ನು ಸುಂದರವಾಗಿ ಜೋಡಿಸಲು ಪುಸ್ತಕದ ಕಪಾಟೊಂದನ್ನು ಗೋಡೆಯ ಮಧ್ಯೆ ಇರಿಸಿ. ಒಂದೋ ದೊಡ್ಡ ಅಥವಾ ಗೋಡೆಗೇ ಅಳವಡಿಸಬಲ್ಲ ಚಿಕ್ಕಚಿಕ್ಕ ಮೂರು ಅಥವಾ ನಾಲ್ಕು ಕಪಾಟುಗಳನ್ನೂ ಮಾಡಿ. ಆದರೆ, ಇವು ಗಾಢವರ್ಣದಲ್ಲಿದ್ದು ಬಿಳಿ ಬಣ್ಣದ ಹಿನ್ನೆಲೆಯಲ್ಲಿ ಕಾಣುವಂತಿರಬೇಕು. ಈ ಪುಸ್ತಕದ ಕಪಾಟನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ವಿಭಿನ್ನವಾದ ಆಕಾರದಲ್ಲಿ ನಿರ್ಮಿಸಬಹುದು.
-ಅಲಂಕಾರಿಕ ವಸ್ತುಗಳನ್ನು ಇರಿಸಿ
ಬಿಳಿ ಬಣ್ಣದ ಗೋಡೆಯ ಹಿನ್ನೆಲೆಯಲ್ಲಿ ಎದ್ದು ಕಾಣುವಂತಿರುವ ಕಲಾತ್ಮಕ ಮತ್ತು ಆಲಂಕಾರಿಕ ವಸ್ತುಗಳನ್ನು ಸ್ಥಾಪಿಸಿ ಮನೆಯ ಸೌಂದರ್ಯವನ್ನು ಹೆಚ್ಚಿಸಿ. ಒಂದು ವೇಳೆ ನಿಮ್ಮ ಮನೆಯ ಸೋಫಾಸೆಟ್ ಬಿಳಿ ಬಣ್ಣದಲ್ಲಿದ್ದರೆ ಅದರಲ್ಲಿರುವ ದಿಂಬುಗಳು ಗಾಢವರ್ಣದಲ್ಲಿರಲಿ. ಇದರ ಮೇಲೆ ಸಾಕಷ್ಟು ಬೆಳಕು ಬೀಳುವಂತಿರಲಿ.
-ಸುಲಭಾ ಆರ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.