ಈ ಹೊತ್ತು ಹೀಗಿದೆ; ನಾಳೆ ಗೊತ್ತಿಲ್ಲ..!


Team Udayavani, Apr 4, 2018, 3:32 PM IST

gotilla.jpg

ಮದುವೆ, ಸಂಸಾರ ಇತ್ಯಾದಿ ವಿಷಯಗಳಲ್ಲಿ ಅನಾಸಕ್ತಳಾಗಿದ್ದ ನನಗೆ ಲೋಕಾಸಕ್ತಿ ಮೂಡಿಸಿದ್ದು ರಾಮ. ಆ ರಾಮನ ಪ್ರಥಮದರ್ಶನ ನನ್ನನ್ನು ಬದಲಿಸಿಬಿಟ್ಟಿತ್ತು! ಲೋಕಮೋಹಕ ಸುಂದರಾಂಗ, ಸಕಲಗುಣಸಂಪನ್ನ, ಲೋಕೋತ್ತರ ಪರಾಕ್ರಮಶಾಲಿ, ಲೋಕಪ್ರಿಯಕರ, ನೀಲಮೇಘಶ್ಯಾಮ ನನ್ನ ಹೃದಯಸಾಮ್ರಾಜ್ಯಕ್ಕೆ ಅಧಿಪತಿಯಾಗುತ್ತಾನೆಂದು ಅಂದುಕೊಂಡಿರಲೇ ಇಲ್ಲ. ಇದರಲ್ಲಿ ಗುರು ವಿಶ್ವಾಮಿತ್ರರ ಪಾತ್ರವನ್ನೂ ಮರೆಯುವಂತಿಲ್ಲ.

ರಾಮನಲ್ಲಿ ಸದಾ ಒಂದು ಅಪೂರ್ವ ತೇಜಸ್ಸು ಮಿನುಗುತ್ತಿತ್ತು. ಅದು ಅಪೂರ್ವ, ಅನಿರ್ವಚನೀಯ. ಅದೇ ಜನಾಕರ್ಷಣೆಯ ಕೇಂದ್ರಬಿಂದು. ನನ್ನ ಮಿತ ತಿಳಿವಳಿಕೆಯ ಅಡಿಯಲ್ಲಿ ಹೇಳುವುದಾದರೆ, ಅದನ್ನು ಮಾತೃಹೃದಯ ಗುರುತಿಸಿತ್ತು. ಗುರು ವಶಿಷ್ಠರು ಕಂಡಿದ್ದರು. ವಿಶ್ವಾಮಿತ್ರರು ಗುರುತಿಸಿದ್ದರು. ನನ್ನವರ ಹಾಗೂ ನನ್ನ ಬಂಟ ಹನುಮ, ಅಜ್ಜಿ ಶಬರಿ, ಅತ್ತ ವಿಭೀಷಣ, ದುಷ್ಟ ರಾವಣನ ಶಿಷ್ಟ ಮಡದಿ ಮಂಡೋದರಿ ತಿಳಿದಿದ್ದರು. ಲೋಕದ ಜನರು ಆ ಶಕ್ತಿಯನ್ನೇ ದುಷ್ಟ ಸಂಹಾರ, ಶಿಷ್ಟ ರಕ್ಷಣೆ, ಧರ್ಮ ಸಂಸ್ಥಾಪನೆಗಾಗಿ ದಿವಿಯಿಂದ ಭುವಿಗಿಳಿದ ಶಕ್ತಿಯೆಂದು ಆರಾಧಿಸುತ್ತಿದ್ದರು.

  ಆ ನಿತ್ಯಾನಂದಕರ ತೇಜಸ್ಸಿಗೆ ಗುರು ವಸಿಷ್ಠರು ರಾಮ ಎಂದು ಹೆಸರಿಡಿಸಿದರಂತೆ. ಅದೇ ಜಗತ್ತಿನ ಪ್ರಥಮ ಮಂಗಲನಾಮವಾಯಿತು. ಅದೇ ನಾಮ ಮುಂದೆ ಯುಗಯುಗಗಳವರೆಗೂ ಜಗತ್ತನ್ನು ಮಂಗಳಮಯವಾಗಿರಿಸುತ್ತದೆಂದು ತಾತ ವಾಲ್ಮೀಕಿಗಳು ಮುಂದಾಗಿಯೇ ಕಂಡಿದ್ದರು. ಅಷ್ಟೇ ಅಲ್ಲ, ತಾವು ಕಂಡ ಬೆಳಕನ್ನು ಅಕ್ಷರ ರೂಪದಲ್ಲಿ ಜಗತ್ತಿಗೆ ನೀಡಿದರು. ಸಾಹಿತ್ಯಲೋಕಕ್ಕೆ ಹೊಸಮುನ್ನುಡಿ ಬರೆದರು. ಜಗದ್ವಂದ್ಯರಾದರು. ತಾತ ಆದಿಕವಿ ಎಂಬ ಬಿರುದಿಗೆ ಪಾತ್ರರಾದರು. ಅದಕ್ಕೆ ನನ್ನ ರಾಮನ ನಡೆಯೇ ವಸ್ತುವಾಯಿತು. ಅದಕ್ಕಾಗಿಯೇ ತಾತ ಅದಕ್ಕೆ “ರಾಮಾಯಣ’ (ಶ್ರೀಮದ್ರಾಯಣಮ್‌) ಎಂಬ ಸಾರ್ಥಕ ಹೆಸರು ಕೊಟ್ಟಿದ್ದು. ಕವಿತೆಯೆಂಬ ಕೊಂಬೆ ಏರಿ ರಾಮ ರಾಮ ಎಂಬ ಮಧುರಾಕ್ಷರಗಳನ್ನು ಮಧುರವಾಗಿ ಪ್ರಥಮವಾಗಿ ಹಾಡಿದ “ಧನ್ಯಕವಿ’ ಅವರು. ರಾಮನಿಂದ ತಾತ ಜಗದ್ವಂದ್ಯರಾದರೋ ತಾತನಿಂದ ರಾಮ ಜಗದ್ವಂದ್ಯನಾದನೋ ಹೇಳುವುದು ಕಷ್ಟ.

   ನಾನೇಕೆ ವಾಲ್ಮೀಕಿಗಳನ್ನು ತಾತ ಎಂದು ಕರೆಯುತ್ತಿದ್ದೇನೆಂದು ನಿಮಗೆ ಆಶ್ಚರ್ಯವಾಗಿರಬಹುದು. ಮಾತೃಹೃದಯದ ಅವರು ನನ್ನ ಅತ್ಯಂತ ಕಷ್ಟಕಾಲದಲ್ಲಿ ಎರಡನೇ ತವರಾಗಿ ಒದಗಿ ಬಂದವರು. ನನ್ನ ಜೋಡಿಮಕ್ಕಳಿಗೆ ಅವರು ಅಪ್ಪ, ಅಮ್ಮ, ಗುರುವಾಗಿ ಕಾಪಾಡಿದವರು. ನೆನಪಿನ ಎಳೆಗಳು ಎಲ್ಲಿಂದ ಎಲ್ಲಿಗೋ ಹೋಗುತ್ತವೆ. ಅವಕಾಶವಾದರೆ ಮುಂದೆ ಅವರ ಆಶ್ರಮದಿಂದಲೇ ಮಾತನಾಡುವೆ. ಸದ್ಯ ನನ್ನ ಗಂಡನ ಮನೆಯಿಂದ ಮಾತನಾಡುತ್ತಿದ್ದೇನೆ.

  ಚಿನ್ನದರಮನೆ, ಚಿನ್ನದಂಥ ಗಂಡ, ಚಿನ್ನದಂಥ ಅತ್ತೆಯರು, ಚಿನ್ನದಂಥ ಮಾವ, ಮೈದುನರು, ಓರಗಿತ್ತಿಯರು (ಅಕ್ಕತಂಗಿಯರು) ಮುಂದೆ ಸುಮಾರು ಹನ್ನೆರಡು ವರ್ಷಗಳ ಕಾಲ ಎಲ್ಲೆಲ್ಲೂ ಚಿನ್ನ. ಎಲ್ಲವೂ ಚನ್ನ ಚನ್ನ. ನಾನು ಕನಸು ಕಟ್ಟಿದವಳಲ್ಲ. ಕನಸುಗಳೇ ನನ್ನನ್ನು ಹುಡುಕಿಕೊಂಡು ಬಂದವು. ಸುಖಸಂಪತ್ತುಗಳು ಭ್ರಮೆಯೆಂದುಕೊಂಡಿದ್ದ ನನಗೆ ಅವುಗಳೇ ವಾಸ್ತವವಾಗಿ ಕಾಣತೊಡಗಿವೆ. ಅವು ನನಗೆ ಕಾಣುತ್ತಿವೆಯೋ, ಕಾಡುತ್ತಿವೆಯೋ ಗೊತ್ತಾಗುತ್ತಿಲ್ಲ. ಎಲ್ಲವೂ ಹೂವಿನ ಹಾದಿ. ಈ ಹೊತ್ತು ಹೀಗಿದೆ. ನಾಳೆ ಗೊತ್ತಿಲ್ಲ. 

   ನಮ್ಮ ದಾಂಪತ್ಯ ಎಷ್ಟು ಅನ್ಯೊನ್ಯದ್ದು ಗೊತ್ತೇ? ಮುಂದಿನ ಯುಗಯುಗಾಂತರವೂ ಈ ಸೀತಾರಾಮರನ್ನು ಆದರ್ಶದಾಂಪತ್ಯಕ್ಕೆ ಮಾದರಿಯಾಗಿಟ್ಟುಕೊಳ್ಳುತ್ತದೆಂದು ಅಯೋಧ್ಯೆಯ ಸಾಮಾನ್ಯಪ್ರಜೆಯೂ ಭಾವಿಸುವಷ್ಟು! ನನ್ನತ್ತೆ ಕೌಸಲ್ಯಾದೇವಿಯರಂತೂ ನನ್ನನ್ನು ತುಂಬಾ ಹಚ್ಚಿಕೊಂಡುಬಿಟ್ಟಿದ್ದರು. ನನ್ನವರು ನನ್ನನ್ನು ಅದೆಷ್ಟು ಪ್ರೀತಿಸುತ್ತಿದ್ದರೆಂದರೆ ವರ್ಣಿಸಲು ಶಬ್ದಗಳು ಸೋಲುತ್ತವೆ. ನನ್ನ ಮನಸ್ಸೇ ಅವರ ಮನಸ್ಸು, ಅವರ ಮನಸ್ಸೇ ನನ್ನ ಮನಸ್ಸು. ನನ್ನ ಮನದ ಪಿಸುಮಾತೂ ಅವರಿಗೆ ಕೇಳಿಸುತ್ತಿತ್ತು. ಅವರ ಅಂತರಂಗದ ಮೆಲುದನಿಗೆ ನಾನು ಕಿವಿಯಾಗಿದ್ದೆ.

   ಒಮ್ಮೆ ನನ್ನವರು, ನಗರದ ಏಕತಾನತೆ ಸಾಕಾಗಿದೆ; ದೂರದ ಕಾಡುಮೇಡುಗಳಲ್ಲಿ ಅಲೆದಾಡಿ, ಋಷಿಮುನಿಗಳ ಸಂದರ್ಶನ ಮಾಡಿ ಬರೋಣವೆಂದು ಮನಸ್ಸಿನಲ್ಲಿ ಅಂದುಕೊಂಡರು. ಅದೇ ದಿನ ನಾನು ಅವರಿಗೆ ಹೇಳಿದೆ; “ನಾನೂ ನಿಮ್ಮೊಂದಿಗೆ ಕಾಡಿಗೆ ಬರುತ್ತೇನೆ, ಕರೆದುಕೊಂಡು ಹೋಗಲೇಬೇಕು’ ಅಂದೆ. “ಅರೆ ನಾನೆಲ್ಲಿ ಕಾಡಿಗೆ ಹೋಗುತ್ತೇನೆಂದು ನಿನ್ನಲ್ಲಿ ಹೇಳಿದೆ?’ ಎಂದು ಕೇಳಿದರು. “ನನಗೆಲ್ಲ ಕೇಳಿಸಿಬಿಟ್ಟಿದೆ’ ಅಂದೆ. ಇಬ್ಬರೂ ಜೋರಾಗಿ ನಕ್ಕೆವು.

   ಇಂತಹ ಇನ್ನೆಷ್ಟೋ ಉದಾಹರಣೆಗಳಿವೆ. ಆದರೆ, ಈ ಉದಾಹರಣೆಯನ್ನು ಹೇಳಲು ಕಾರಣವಿದೆ. ಇದೊಂದು ಭವಿಷ್ಯದ ಸೂಚಕವೋ ಎಂಬಂತೆ ನನ್ನ ಮದುವೆಯಾಗಿ ಹನ್ನೆರಡು ವರ್ಷಗಳ ನಂತರ ಪ್ರಾರಂಭವಾಯಿತು ಕಷ್ಟದ ದಿನಗಳು. ಹಾಗೆಂದು ನಾನಾಗಲೀ ನನ್ನವರಾಗಲೀ ಅದನ್ನು ಕಷ್ಟವೆಂದುಕೊಂಡಿರಲಿಲ್ಲ. ಲೋಕದ ಕಣ್ಣಿಗೆ ಹಾಗೆ ಕಾಣುತ್ತಿತ್ತು. ಕಷ್ಟಗಳನ್ನೇ ಸುಖಗಳಾಗಿ ಮಾರ್ಪಡಿಸಿಕೊಳ್ಳುವ ಜೀವನ ಕಲೆ ನಮ್ಮಿಬ್ಬರಿಗೂ ಗೊತ್ತಿತ್ತು. ಹಾಗೆಂದು “ನೀವು ಕಣ್ಣೀರು ಹಾಕಲೇ ಇಲ್ವ?’ ಎಂದು ಕೇಳಬೇಡಿ.
(ಮುಂದುವರಿಯುತ್ತದೆ…)

– ಸಿ.ಎ. ಭಾಸ್ಕರ ಭಟ್ಟ

ಟಾಪ್ ನ್ಯೂಸ್

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.