ಥೈರಾಯ್ಡ ತರಲೆ
Team Udayavani, Feb 8, 2019, 12:30 AM IST
ಹದಿನಾರು ವರ್ಷದ ಶುಭಾ, ಹತ್ತನೇ ತರಗತಿಯವರೆಗೂ ಓದಿನಲ್ಲಿ ಕ್ಲಾಸ್‌ಗೆà ಟಾಪರ್. ದ್ವಿತೀಯ ಪಿಯುಸಿಗೆ ಬಂದ ಮೇಲೆ, ಓದಿನಲ್ಲಿ ಹಿಂದೆ ಬೀಳಲು ಆರಂಭಿಸಿದಳು. ಬರೀ ಓದಿನಲ್ಲಿ ಮಾತ್ರವಲ್ಲ, ಆಕೆಯ ಆರೋಗ್ಯದಲ್ಲೂ ಏರುಪೇರಾಗಲು ಶುರುವಾಯಿತು. ಕ್ಲಾಸ್‌ನಲ್ಲಿ ಕುಳಿತು ಬೋರ್ಡ್ ನೋಡಿದರೆ, ಕಣ್ಣೆಲ್ಲ ಮಂಜುಮಂಜು… ಅಕ್ಷರಗಳು ತೇಲುತ್ತಿರುವಂತೆ, ಸ್ವಲ್ಪ ನಡೆದಾಡಿದರೂ ಸುಸ್ತು. ಜತೆಗೆ ಋತುಚಕ್ರದ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದಳು. ವೈದ್ಯರಲ್ಲಿ ಹೋದಾಗ ಗೊತ್ತಾಗಿದ್ದು ಆಕೆಗೆ ಹೈಪೋಥೈರಾಯಿಡಿಸಂ ಇದೆ ಎಂದು!
ಕುತ್ತಿಗೆಯ ಕೆಳಗಿರುವ ಥೈರಾಯ್ಡ ಗ್ರಂಥಿ, ಚಿಟ್ಟೆಯ ಆಕಾರದಲ್ಲಿ ಚಿಕ್ಕದಾಗಿದ್ದರೂ, ಅತ್ಯಂತ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತದೆ. ಇದು ಜೀವಕೋಶಗಳಿಗೆ ರಕ್ತನಾಳಗಳ ಮೂಲಕ ಹಾರ್ಮೋನನ್ನು ಪೂರೈಸುತ್ತದೆ. ಪ್ರತಿಕೋಶಗಳು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮಾಡುತ್ತದೆ. ಜೊತೆಗೆ, ಹೃದಯದ ಬಡಿತವನ್ನು ಸರಿಯಾಗುವಂತೆ ಮಾಡಿ ದೇಹದ ಉಷ್ಣತೆಯನ್ನೂ ಕಾಪಾಡುತ್ತದೆ. ಈ ಥೈರಾಯ್ಡನ ಸಮಸ್ಯೆಯಲ್ಲಿ ಎರಡು ವಿಧಗಳಿವೆ.
ಹೈಪೋಥೈರಾಯಿಡಿಸಂ: ಸಾಮಾನ್ಯವಾಗಿ ತೂಕ ಹೆಚ್ಚಳ, ಸುಸ್ತು, ಜಡತ್ವ, ಅನಿಯಮಿತ ಋತುಚಕ್ರ ಹಾಗೂ ಅಧಿಕ ರಕ್ತಸ್ರಾವ, ಖನ್ನತೆ, ಹೆಚ್ಚಿದ ಹೃದಯಬಡಿತ, ತಲೆ ಸುತ್ತುವುದು, ಕೂದಲು ಉದುರುವಿಕೆ, ಉಗುರುಗಳಲ್ಲಿ ಬಿರುಕು ಕಂಡುಬರುವುದು.
ಹೈಪರ್ ಥೈರಾಯಿಡಿಸಂ: ತೂಕ ಇಳಿಕೆ ಅಥವಾ ತೆಳ್ಳಗಿನ ಶರೀರ, ಮೈನಡುಕ, ಕಡಿಮೆ ರಕ್ತಸ್ರಾವ ಅಥವಾ ಅನಿರೀಕ್ಷಿತ ಋತುಚಕ್ರ, ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಥೈರಾಯ್ಡ ಸಮಸ್ಯೆ ಯಾವುದೇ ವಯಸ್ಸಿನಲ್ಲಿ ಬೇಕಾದರೂ ಕಂಡುಬರಬಹುದು. ಹಾರ್ಮೋನುಗಳಲ್ಲಿ ಆಗುವ ಏರುಪೇರುಗಳಿಂದ, ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳು ದೇಹಕ್ಕೆ ದೊರೆಯದಿದ್ದರೆ, ಹೆಚ್ಚಿದ ಒತ್ತಡದಿಂದಾಗಿ ಅಥವಾ ಅನುವಂಶೀಯವಾಗಿಯೂ ಈ ಸಮಸ್ಯೆ ಬರಬಹುದು. ಮುಟ್ಟು ನಿಲ್ಲುವ ಸಮಯದಲ್ಲೂ ಅಥವಾ ಗರ್ಭಿಣಿ ಆದ ಸಂದರ್ಭದಲ್ಲೂ ಈ ಸಮಸ್ಯೆಗಳು ಎದುರಾಗಬಹುದು.
ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲೇ ಥೈರಾಯ್ಡ ಸಮಸ್ಯೆ ಅಧಿಕವಾಗಿ ಕಂಡುಬರುತ್ತಿದೆ. ಈ ಸಮಸ್ಯೆಗೆ ನಿಗದಿತ ಚಿಕಿತ್ಸೆ ಇಲ್ಲ ಹಾಗೂ ವೈದ್ಯಶಾಸ್ತ್ರದಲ್ಲಿ ಇದಕ್ಕೆ ಇನ್ನೂ ಶಾಶ್ವತ ಪರಿಹಾರ ದೊರೆತಿಲ್ಲ. ಕಾಲಕಾಲಕ್ಕೆ ಪರೀಕ್ಷಿಸಿಕೊಂಡು, ನಿಯಮಿತ ಔಷಧಗಳ ಸೇವನೆಯಿಂದ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು. ಅಲ್ಲದೆ, ಥೈರಾಯ್ಡ ಸಮಸ್ಯೆಗೆ ನೈಸರ್ಗಿಕ ಪರಿಹಾರೋಪಾಯಗಳು ಇರುವುದರಿಂದ ಹೆಚ್ಚಿನ ಭಯಪಡುವ ಅಗತ್ಯವಿಲ್ಲ.
ಪರಿಹಾರ ಸಿಂಪಲ್
.ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳುವುದು.
.ಒತ್ತಡ ನಿವಾರಣೆಗಾಗಿ ಹಾಗೂ ಹಾರ್ಮೋನುಗಳ ಸ್ಥಿರತೆಗೆ, ಧ್ಯಾನ, ಪ್ರಾಣಾಯಾಮ, ಯೋಗಾಭ್ಯಾಸ ಮಾಡುವುದು.
.ಯೋಗದಲ್ಲಿ ಪ್ರಮುಖವಾಗಿ ಸರ್ವಾಂಗಾಸನ, ಹಲಾಸನ, ಉಷಾjಸನ, ಭುಜಂಗಾಸನ, ಮತ್ಸಾéಸನ ಹಾಗೂ ಭಾÅಮರಿ ಪ್ರಾಣಾಯಾಮವೂ ಗ್ರಂಥಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
.ತಣ್ಣೀರಿನ ಕಟಿಸ್ನಾನ ಮಾಡುವುದರಿಂದ ಥೈರಾಯ್ಡ ನಿಂದ ಉಂಟಾಗುವ ಋತುಚಕ್ರದ ತೊಂದರೆ ಹಾಗೂ ತೂಕವನ್ನು ನಿಯಂತ್ರಣದಲ್ಲಿಡಬಹುದು.
.ಪ್ರತಿನಿತ್ಯ ಗಂಟಲಿನ ಮೇಲೆ ತಣ್ಣೀರಿನ ಪಟ್ಟಿಯನ್ನು 20 ನಿಮಿಷ ಇಡುವುದರಿಂದಲೂ ಥೈರಾಯ್ಡ ಸಮಸ್ಯೆಗೆ ಪರಿಹಾರ ದೊರೆಯುವುದು.
.ಕಾಫಿ. ಟೀ, ಎಣ್ಣೆ ಪದಾರ್ಥ, ಚಾಕೋಲೇಟ್, ಸೋಯಾಬಿನ್, ಕೋಸು, ಹೂಕೋಸುಗಳನ್ನು ದೂರವಿಡಬೇಕು.
.ಕಬ್ಬಿಣಾಂಶಯುಕ್ತ ಆಹಾರಗಳನ್ನು ಜಾಸ್ತಿ ಸೇವಿಸಬಾರದು.
.ಒಮೆಗಾ 3 ಕೊಬ್ಬಿನ ಅಂಶವಿರುವ ಆಹಾರಗಳನ್ನು ತಿನ್ನಬೇಕು.
ಡಾ. ಶ್ರೀಲತಾ ಪದ್ಯಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.