ತಿರಂಗಾ ತಿಂಡಿಗಳು: ಅಡುಗೆ ಮನೆಯಲ್ಲಿ ಸ್ವಾತಂತ್ರ್ಯ
Team Udayavani, Aug 15, 2018, 6:00 AM IST
ಇವತ್ತು ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಡಗರ. ಎಲ್ಲೆಲ್ಲೂ ತ್ರಿವರ್ಣದ ಪಟಪಟ. ಹೊರಗೆ ಕಾಣುವಂಥ ಸಂಭ್ರಮವನ್ನೇ ಅಡುಗೆ ಮನೆಯಲ್ಲೂ ಕಾಣುವಂತಾದರೆ ಎಷ್ಟೊಂದು ಚೆಂದ ಅಲ್ಲವೆ? ನಮ್ಮ ತಿಂಡಿ-ಉಪಾಹಾರದಲ್ಲಿ ತ್ರಿವರ್ಣ ಮೂಡಿದರೆ… ಇಲ್ಲಿವೆ ನೋಡಿ ಒಂದಿಷ್ಟು ಸ್ಯಾಂಪಲ್‌ಗಳು…
1.ಚಪಾತಿ ರೋಲ್
ಬೇಕಾಗುವ ಪದಾರ್ಥ: ಎಣ್ಣೆ-ಉಪ್ಪು ಹಾಕಿ ಕಲಸಿದ ಚಪಾತಿ ಹಿಟ್ಟು, ದಪ್ಪನಾಗಿ ತುರಿದ ಕ್ಯಾರೆಟ್-1 ಕಪ್, ಉದ್ದುದ್ದ ತುಂಡು ಮಾಡಿದ ಬೀ®Õ…-1 ಕಪ್, ಎಲೆಕೋಸು-1 ಕಪ್, ಉದ್ದ ಹೆಚ್ಚಿದ ದೊಣ್ಣೆ ಮೆಣಸಿನಕಾಯಿ-1 ಕಪ್, ಮೆಣಸಿನ ಪುಡಿ-1/2 ಚಮಚ, ಉಪ್ಪು, ಗರಂ ಮಸಾಲ- 1/4 ಚಮಚ.
ಮಾಡುವ ವಿಧಾನ: ಬಾಣಲೆಯಲ್ಲಿ ಸ್ವಲ್ಪಎಣ್ಣೆ ಹಾಕಿ ಎಲ್ಲ ತರಕಾರಿಗಳನ್ನು ಗರಿಗರಿಯಾಗಿ ಹುರಿಯಿರಿ. ಅದಕ್ಕೆ ಗರಂ ಮಸಾಲ ಸೇರಿಸಿ. ನಂತರ ಚಪಾತಿ ತಯಾರಿಸಿ. ಅದರೊಳಗೆ ತರಕಾರಿ ಮಿಶ್ರಣವನ್ನಿಟ್ಟು ರೋಲ್ ಮಾಡಿ, ಮಧ್ಯೆ ಕಟ್ ಮಾಡಿದರೆ ತಿರಂಗ ರೋಲ್ ರೆಡಿ.
ತ್ರಿವರ್ಣ ಪಾನೀಯ
ಬೇಕಾಗುವ ಪದಾರ್ಥ: ಕೆಂಪು ಕಲ್ಲು ಸಕ್ಕರೆ-ಲಿಂಬೆ ಹಣ್ಣಿನ ಗಾತ್ರ, ಕಾಳುಮೆಣಸಿನ ಪುಡಿ-1/4ಚಮಚ, ಲಿಂಬೆ ಹಣ್ಣು-1, ಪುದೀನ ಸೊಪ್ಪು, ಸಕ್ಕರೆ-3 ಚಮಚ, ಹುರಿದ ಎಳ್ಳು-1ಚಮಚ, ಬೆಲ್ಲ-2ಚಮಚ, ಏಲಕ್ಕಿ ಪುಡಿ ಸ್ವಲ್ಪ.
ಮಾಡುವ ವಿಧಾನ: ಒಂದು ಲೋಟ ನೀರಿನಲ್ಲಿ ಕೆಂಪು ಕಲ್ಲುಸಕ್ಕರೆ ಕರಗಿಸಿ, ಅದಕ್ಕೆ ಕಾಳುಮೆಣಸಿನ ಪುಡಿ, ಲಿಂಬೆ ರಸ ಸೇರಿಸಿ. ಒಂದು ಲೋಟ ನೀರು, ಪುದೀನಾ ಸೊಪ್ಪು, ಸಕ್ಕರೆ, ಲಿಂಬೆ ರಸ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ ಹಸಿರು ಬಣ್ಣದ ಶರಬತ್ತು ತಯಾರಿಸಿ. ಹುರಿದ ಎಳ್ಳು, ಬೆಲ್ಲ, ಏಲಕ್ಕಿ ಪುಡಿ ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಒಂದು ಲೋಟ ನೀರು ಸೇರಿಸಿದರೆ ತ್ರಿವರ್ಣದ ಪಾನೀಯ ಸಿದ್ಧ.
6.ಕಲರ್‌ಫುಲ್ ಸ್ಯಾಂಡ್ ವಿಚ್
ಬೇಕಾಗುವ ಪದಾರ್ಥ: ಬ್ರೆಡ್ ಪೀಸ್- 4, ಕ್ಯಾರೆಟ್- 2, ಒಣಮೆಣಸಿನಕಾಯಿ- 3, ಉಪ್ಪು, ಪುದೀನ ಸೊಪ್ಪು ಒಂದು ಹಿಡಿ, ಹಸಿ ಮೆಣಸಿನಕಾಯಿ- 2, ಕಾಯಿ ತುರಿ- 2 ಚಮಚ, ಲಿಂಬೆ ರಸ- 1ಚಮಚ, ತುರಿದ ಪನ್ನೀರು-2 ದೊಡ್ಡ ಚಮಚ.
ಮಾಡುವ ವಿಧಾನ: ಕ್ಯಾರೆಟ್ ಹಾಗೂ ಒಣಮೆಣಸಿನಕಾಯಿಯನ್ನು ಸ್ವಲ್ಪ ಹುರಿದು, ಕಾಯಿ ತುರಿ, ಉಪ್ಪು, ಲಿಂಬೆ ರಸ ಸೇರಿಸಿ ಗಟ್ಟಿಯಾಗಿ ರುಬ್ಬಿ. ಹಾಗೆಯೇ ಪುದೀನ, ಕಾಯಿತುರಿ, ಉಪ್ಪು, ಹಸಿ ಮೆಣಸಿನಕಾಯಿ, ಲಿಂಬೆ ರಸ ಬೆರೆಸಿ ಗಟ್ಟಿ ರುಬ್ಬಿ. ಬ್ರೆಡ್ ಪೀಸ್‌ನ ಕಂದು ಬಣ್ಣ ತೆಗೆಯಿರಿ. ನಂತರ ಒಂದು ತುಂಡಿನ ಮೇಲೆ ಹಸಿರು ಚಟ್ನಿ ದಪ್ಪನಾಗಿ ಸವರಿ, ಮತ್ತೂಂದು ತುಂಡು ಬ್ರೆಡ್ ಪೀಸ್ ಮೇಲೆ ತುರಿದ ಪನೀರ್ ಹರಡಿ, ಅದರ ಮೇಲೆ ಇನ್ನೊಂದು ಬ್ರೆಡ್ ಪೀಸ್ ಇಟ್ಟು ಕೇಸರಿ ಬಣ್ಣದ ಕ್ಯಾರೆಟ್ ಚಟ್ನಿ ದಪ್ಪನಾಗಿ ಸವರಿ, ಅದರ ಮೇಲೊಂದು ಬ್ರೆಡ್ ಪೀಸ್ ಇಟ್ಟು ಹಗುರವಾಗಿ ಒತ್ತಿ. ಚಾಕುವಿನಿಂದ ಕಟ್ ಮಾಡಿ, ಮಗ್ಗಲು ಬದಲಿಸಿ, ಬಣ್ಣ ಬಣ್ಣದ ಸ್ಯಾಂಡ್‌ವಿಚ್ ರೆಡಿ.
ಶಾರದಾ ಮೂರ್ತಿ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.