ಕಲೆಯ ಕಿರಿಕಿರಿಯಿಂದ ಪಾರಾಗಲು
Team Udayavani, Oct 30, 2019, 3:52 AM IST
ಕಲೆ ಒಳ್ಳೆಯದು ಅಂತ ಜಾಹೀರಾತಿನಲ್ಲಿ ಹೇಳಿದರೂ, ಯಾರೂ ಅದನ್ನು ಇಷ್ಟಪಡುವುದಿಲ್ಲ. ತಿಕ್ಕಿ ತಿಕ್ಕಿ ತೊಳೆದು, ಕೈ ಸೋತರೂ ಕೆಲವೊಮ್ಮೆ ಕಲೆ ಮಾಯವಾಗುವುದಿಲ್ಲ. ಅದರಲ್ಲೂ, ಲಿಪ್‌ಸ್ಟಿಕ್ ಕಲೆ ಇದೆಯಲ್ಲ; ಅದು ಮಹಾನ್ ಹಠಮಾರಿ. ಟವೆಲ್, ಕರ್ಚಿಫ್, ಟಾಪ್ ಮೇಲೆ ಅಚ್ಚೊತ್ತಿದಂತೆ ಉಳಿದುಬಿಡುವ ಕಲೆಯನ್ನು ಹೋಗಲಾಡಿಸುವುದು ಬಲು ಕಷ್ಟ. ಆಗ ಏನು ಮಾಡ್ಬೇಕು ಗೊತ್ತಾ?
-ನೀರಿಗೆ ಎರಡು ಚಮಚ ಲಿಕ್ವಿಡ್ ಡಿಟರ್ಜೆಂಟ್ ಹಾಕಿ, ಅದರಲ್ಲಿ ಬಟ್ಟೆಯನ್ನು ನೆನೆಸಿ. ಇಪ್ಪತ್ತು ನಿಮಿಷದ ನಂತರ, ಉಗುರು ಬೆಚ್ಚಗಿನ ನೀರಿನಲ್ಲಿ ಬಟ್ಟೆ ತೊಳೆಯಿರಿ.
– ಒಂದು ಶುದ್ಧ ಬಟ್ಟೆಯ ತುಣುಕನ್ನು ಆಲ್ಕೋಹಾಲ್‌ನಲ್ಲಿ ಅದ್ದಿ, ಕಲೆ ಇರುವ ಜಾಗದ ಮೇಲೆ ಹರಡಿ, ಮೃದುವಾಗಿ ಒತ್ತಿ. ಕಲೆ ಮಾಯವಾದ ನಂತರ, ಬಟ್ಟೆಯನ್ನು ತಣ್ಣೀರಿನಲ್ಲಿ ತೊಳೆೆಯಿರಿ.
– ಬಟ್ಟೆಯ ಮೇಲೆ ಕಲೆ ಇರುವ ಜಾಗಕ್ಕೆ ಹೇರ್‌ಸ್ಪ್ರೆ ಮಾಡಿ, 10 ನಿಮಿಷದ ನಂತರ ಒದ್ದೆ ಬಟ್ಟೆಯಿಂದ ಆ ಜಾಗವನ್ನು ಒರೆಸಿ, ತಣ್ಣೀರಿನಲ್ಲಿ ತೊಳೆಯಿರಿ.
– ಕಲೆ ಇರುವ ಜಾಗಕ್ಕೆ ಟೂತ್‌ಪೇಸ್ಟ್ ಅನ್ನು ಹಚ್ಚಿ ಮೃದುವಾಗಿ ಉಜ್ಜಿ. ಕಲೆ ತೊಲಗಿದ ನಂತರ, ಬಟ್ಟೆಯನ್ನು ತಣ್ಣೀರಿನಲ್ಲಿ ತೊಳೆದು, ಡ್ರೈಯರ್‌ನಿಂದ ಒಣಗಿಸಿ.
– ಜಿಡ್ಡು ಜಿಡ್ಡಾಗಿರುವ ಲಿಪ್‌ಸ್ಟಿಕ್‌ನಿಂದ ಬಟ್ಟೆ ಮೇಲೆ ಕಲೆಯಾದರೆ, ಗ್ರೀಸ್ ರಿಮೂವ್ ಮಾಡುವ ವಸ್ತುಗಳನ್ನು ಬಳಸಿಯೂ ಕಲೆ ತೆಗೆಯಬಹುದು. ಪೆಟ್ರೋಲಿಯಂ ಜೆಲ್ಲಿ, ಶೇವಿಂಗ್ ಕ್ರೀಂ, ಅಮೋನಿಯವನ್ನು ಕೂಡಾ ಬಳಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Udupi: “ವಕ್ಫ್ ‘ ಸಮಸ್ಯೆ ಶೀರ್ಘ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.