ಗುಡ್‌ ನ್ಯೂಸ್‌ ಏನೂ ಇಲ್ವಾ ?

ಕೂಸು ಹುಟ್ಟುವ ಮೊದಲೇ ಕುಲಾವಿ ರೆಡಿ ಇರುತ್ತೆ!

Team Udayavani, Feb 3, 2021, 1:06 PM IST

3-10

ಯಾವುದೇ ಒಂದು ಹೊಸ ಜೋಡಿ ದಾಂಪತ್ಯ ಜೀವನ ಆರಂಭಿಸಿದೊಡನೆ ಅವರ ಪೋಷಕರ ನಿರೀಕ್ಷೆ ಅಗಾಧವಾಗಿರುತ್ತದೆ. ಹೊಸ ಅತಿಥಿಯ
ಆಗಮನದ ಸಿಹಿ ಸುದ್ದಿಯನ್ನು ಕೇಳಲು ಹಿರಿಯರು ಕಾತುರರಾಗಿರುತ್ತಾರೆ. ಮನೆಯ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಬ್ಯುಸಿಯಾಗಿ ಅದೇ ಕಾರಣಕ್ಕೆ ತಮ್ಮ ಮಕ್ಕಳ ಬಾಲ ಲೀಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಆಸ್ವಾದಿಸುವುದರಿಂದ ವಂಚಿತರಾದ ಈ ಹಿರಿಯರು, ಆ ಕೊರತೆಯನ್ನು ಮೊಮ್ಮಕ್ಕಳಿಂದ ನೀಗಿಸಿಕೊಳ್ಳುವ ಮಹದಾಸೆ ಹೊಂದಿರುತ್ತಾರೆ. ಆದರೆ ಈಗಿನ ದಿನಮಾನದ ಜೋಡಿಯ ಲೆಕ್ಕಾಚಾರವೇ ಬೇರೆ ಇರುತ್ತದೆ.

ಅವರಿಗೆ ವೃತ್ತಿ ಬದುಕಿನಲ್ಲಿ ಬೇಗ ಮೇಲೇರುವ, ಜಾಸ್ತಿ ದುಡ್ಡು ಮಾಡುವ, ಆ ಮೂಲಕ ಲೈಫ್ನಲ್ಲಿ ಸೆಟ್ಲ… ಆಗುವ ಅವಸರ ಇರುತ್ತದೆ. ಅವರು ಸದಾ ತಮ್ಮ ಕೆರಿಯರ್‌ ಬಗ್ಗೆ ಯೋಚಿಸುತ್ತಾ, ತಾವಿನ್ನೂ ಸೆಟ್ಲ… ಆಗಿಲ್ಲ ಎಂಬ ನೆಪ ಒಡ್ಡುತ್ತಾ ಅಥವಾ ತಾವು ಲೈಫ್ ನ ಎಂಜಾಯ್‌ ಮಾಡಬೇಕೆಂಬ ಆಸೆಯಿಂದ “ಮಕ್ಕಳು ಬೇಕು’ ಎನ್ನುವ ಸಂಗತಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿರುವುದಿಲ್ಲ. ಇಂಥ ಸಂದರ್ಭಗಳಲ್ಲಿ ಹಿರಿಯರು, ತಮ್ಮ ಆಸೆಯ ಕುರಿತು ಮಕ್ಕಳ ಮುಂದೆ ಬಾಯಿ ಬಿಟ್ಟು ಹೇಳುವ ಧೈರ್ಯವಿಲ್ಲದೇ, ಮೌನವಾಗಿ ಆ ಸಿಹಿ ಸುದ್ದಿಗಾಗಿ ಕಾಯುತ್ತಿರುತ್ತಾರೆ.
ಸಂತೋಷದ ಜೊತೆಗೇ ಆತಂಕ ಸೊಸೆ ಅಥವಾ ಮಗಳ ಗರ್ಭದಲ್ಲಿ ಕುಡಿ ಅಂಕುರಿಸಿತು ಎಂಬ ಸುದ್ದಿ ಕೇಳಿದೊಡನೆ ಒಂದು ಕಡೆ ಸಂತೋಷ ಮೇರೆ ಮೀರಿದರೆ, ಇನ್ನೊಂದು ಕಡೆ ಮನದ ಮೂಲೆಯಲ್ಲಿ ಏನೋ ಒಂದು ರೀತಿಯ ಆತಂಕ. ಯಾವುದೇ ತೊಂದರೆಯಿಲ್ಲದೆ ಮೂರು ತಿಂಗಳು ಕಳೆದರೆ ಸಾಕು ಎಂದು ಮನದಲ್ಲೇ ಕಾಣದ ದೇವರಿಗೆ ಕೈ ಮುಗಿದು ಹರಕೆಗಳ ಮಹಾಪೂರವನ್ನೇ ಹರಿಸಿಬಿಡುತ್ತಾರೆ. ಮಾತಿಗೊಮ್ಮೆ ಗರ್ಭಿಣಿಗೆ ಎಚ್ಚರಿಕೆ ಕೊಡುವುದನ್ನು ಮರೆಯುವುದಿಲ್ಲ. ತಿನ್ನಬೇಕಾದ, ತಿನ್ನಬಾರದ ಆಹಾರಗಳ ಪಟ್ಟಿ ಒಂದೆಡೆಯಾದರೆ, ಏನು ಮಾಡಬೇಕು ಏನು ಮಾಡಬಾರದು ಎಂಬ ಮುಂಜಾಗ್ರತೆಯ ಪಟ್ಟಿ ಇನ್ನೊಂದೆಡೆ. ಮೊದಲ ಮೂರು ತಿಂಗಳು, ವಾಂತಿ, ತಲೆಸುತ್ತು ಮುಂತಾದ ಬಯಕೆ ಸಂಕಟಗಳ ಬವಣೆ.

ಮೂರು ತಿಂಗಳು ತುಂಬಿ ನಾಲ್ಕಕ್ಕೆ ಕಾಲಿಟ್ಟಿತು ಎಂದರೆ, ಹೆಣ್ಣಿಗೂ ಸ್ವಲ್ಪ ಬಯಕೆ ಸಂಕಟಗಳಿಂದ ಮುಕ್ತಿ, ಹೆತ್ತವರಿಗೂ ಮೊಮ್ಮಗುವಿನ ಆಗಮನದ ಸುದ್ದಿ ಧೃಡವಾದ ನಿರಾತಂಕ. ಬಸಿರಿ ಹೆಣ್ಣಿನ ಬಯಕೆಗಳನ್ನು ಪೂರೈಸಲು ಅತ್ತೆ, ತಾಯಿ ಇಬ್ಬರೂ ಟೊಂಕ ಕಟ್ಟಿ ನಿಲ್ಲುತ್ತಾರೆ. ಪೈಪೋಟಿಯಲ್ಲಿ ಮಗಳು/ ಸೊಸೆ ಬಯಸುವ ತಿಂಡಿ ಮಾಡಿಕೊಡಲು ಸನ್ನದ್ಧರಾಗುತ್ತಾರೆ.
ಸೀಮಂತದ ಸಂಭ್ರಮ ಐದು- ಆರು ತಿಂಗಳು ತುಂಬಿತು ಎಂದರೆ ಸೀಮಂತದ (ಕುಬುಸ, ಗರ್ಭಿಣಿ ಸೀರೆ, ಬಯಕೆ ಊಟ) ತಯಾರಿ ಶುರು.
ಆಯಾಯ ಪ್ರಾಂತ್ಯಕ್ಕನುಗುಣವಾಗಿ ಸೀಮಂತ ನಡೆಸುವ ಸಂಭ್ರಮ. ಕೆಲವು ಕಡೆ ಮೂರು ತಿಂಗಳು ತುಂಬುತ್ತಲೇ ಕಳ್ಳ ಕುಬುಸ
ಮಾಡುವ ಸಂಪ್ರದಾಯವಿದೆ. ಕೆಲವು ಕಡೆ ಏಳನೇ ತಿಂಗಳಿನಲ್ಲಿ ಸಾಂಪ್ರದಾಯಿಕವಾಗಿ ಸೀಮಂತ ಮಾಡುವ ಕ್ರಮವಿದ್ದರೆ, ಇನ್ನೂ ಕೆಲವು ಕಡೆ ಸಂಪ್ರದಾಯಕ್ಕನುಸಾರವಾಗಿ ಈ ಕಾರ್ಯಕ್ರಮ ನಡೆಯುತ್ತದೆ. ಮೊಗ್ಗಿನ ಜಡೆ, ಹೂವಿನ ಜಲ್ಲಿ ಮೂಡಿಸುವ ಕ್ರಮವೂ ಆಯಾಯ ಪ್ರಾಂತ್ಯಕ್ಕನುಗುಣವಾಗಿ ಆಚರಣೆಯಲ್ಲಿದೆ.

ಕೂಸು ಹುಟ್ಟುವ ಮೊದಲೇ ಕುಲಾವಿ! ಸೀಮಂತದ ಸಂಭ್ರಮದ ಗುಂಗಿನಿಂದ ಆ ಹೆಣ್ಣುಮಗಳು ಇನ್ನೂ ಹೊರ ಬಂದಿರುವುದಿಲ್ಲ; ಅಷ್ಟರಲ್ಲಿಯೇ ಹಿರಿಯರಿಗೆ ಬಾಣಂತನವನ್ನು ಹೇಗೆ ಮಾಡಬೇಕು, ಆಗ ಎದುರಾಗುವ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬ ಯೋಚನೆ ಜೊತೆಯಾಗಿರುತ್ತದೆ. ಅವರು ತಡ ಮಾಡುವುದಿಲ್ಲ. ಬಾಣಂತಿ ಮತ್ತು ಮಗುವಿಗೆ ಕೊಡುವ ಮದ್ದು, ಲೇಹ್ಯಗಳನ್ನು ಮಾಡುವ ವಿಧಾನ, ಅದಕ್ಕೆ ಬೇಕಾದ ಸಾಮಗ್ರಿಗಳು ಎಲ್ಲಿ ಸಿಗುತ್ತವೆ ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಮಗುವಿಗೆ ಸುತ್ತಲು, ಹಾಸಲು, ಹೊದೆಯಲು ಬೇಕಾದಂತಹ ಹಳೆಯ ಮೃದುವಾದ ಹತ್ತಿ ಬಟ್ಟೆಗಳನ್ನು ಸಂಗ್ರಹಿಸಿಡುತ್ತಾರೆ, ಹೊಲಿಗೆ ಬಲ್ಲವರು ತಮ್ಮ ಕುಶಲತೆಯ ಚಾಕಚಕ್ಯತೆಯಿಂದ ವೈವಿಧ್ಯಮಯ ವರ್ಣದ ಬಟ್ಟೆಯ ತುಂಡುಗಳಿಂದ ಮಗುವಿಗೆ ಬೇಕಾದಂತಹ ದುಪ್ಪಟ್ಟಿ (ಕೌದಿ) ಹೊಲಿದಿಡುತ್ತಾರೆ. ಬಟ್ಟೆ ತುಂಡುಗಳ ಮೇಲೆ ಸಣ್ಣ ಸಣ್ಣ ಗೊಂಬೆಗಳ ಕಸೂತಿ ಮಾಡಿ, ಸುಂದರವಾದ ದುಪ್ಪಟ್ಟಿ ಮಾಡುವವರೂ ಇದ್ದಾರೆ. ಈಗ ಇಂತಹ ದುಪ್ಪಟ್ಟಿಗಳನ್ನು ತಯಾರಿಸಿ ಮಾರುವವರು ಇರುವ ಕಾರಣ, ತಾವೇ ತಯಾರಿಸುವ ಧಾವಂತ ಇಲ್ಲ. ಹಣ ಒಂದಿದ್ದರೆ ಸಕಲವೂ ಲಭ್ಯ. ರಾಜ-ರಾಣಿ ಬಂದಂತೆ…
ಹಿರಿಯರು ಇಂಥ ಕೆಲಸಗಳಲ್ಲಿ ಮುಳುಗಿರುವಾಗ, ಇತ್ತ ಆ ತಾಯ ಹೃದಯಕ್ಕೆ ಏನೋ ಚಿಂತೆ, ಆತಂಕ. ಹಗಲಿರುಳು ಮಗಳಿಗೋ/
ಸೊಸೆಗೋ ಯಾವುದೇ ತೊಂದರೆಯಿಲ್ಲದೆ ಹೆರಿಗೆಯಾಗಿ ಮೈ ಕಳೆದರೆ ಸಾಕು, ತಾಯಿ ಮಗು ಆರೋಗ್ಯವಾಗಿದ್ದರೆ ಸಾಕು ಎಂಬ ಹಾರೈಕೆ. ಎಲ್ಲಾ ಅಡ್ಡಿ ಆತಂಕಗಳು ನಿವಾರಣೆಯಾಗಿ, ಚಂದದ ಮೊಮ್ಮಗನೋ, ಮೊಮ್ಮಗಳ್ಳೋ ತಮ್ಮ ಮಡಿಲೇರಿದರು ಎಂದರೆ ಮತ್ತೆ ಆ ಅಜ್ಜ-
ಅಜ್ಜಿಯರನ್ನು ಹಿಡಿಯುವವರೇ ಇಲ್ಲ, ಅವರ ಖುಷಿ, ಸಂತೋಷ, ಸಂಭ್ರಮ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ. ಅಸಲಿಗಿಂತ ಬಡ್ಡಿ ಮೇಲೆ ಆಸೆ ಜಾಸ್ತಿ ಎಂಬಂತೆ, ತಮ್ಮ ಮಕ್ಕಳನ್ನು ಲಾಲಿಸಿ, ಮುದ್ದಿಸಿದಕ್ಕಿಂತಲೂ ದ್ವಿಗುಣ, ತ್ರಿಗುಣ ಪಟ್ಟು ಮೊಮ್ಮಗುವಿನ ಮೇಲೆ ಪ್ರೀತಿಯ ಮಹಾಪೂರವನ್ನೇ ಹರಿಸುತ್ತಾರೆ.

*ಅನಿತಾ ಪೈ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.