ತುಳಸೀ ದಳ ಪೂಜನೀಯ, ಔಷಧೀಯ
Team Udayavani, Dec 18, 2019, 4:31 AM IST
ಹಿಂದೂಗಳ ಪಾಲಿಗೆ ತುಳಸಿ, ಪವಿತ್ರ ಸಸ್ಯ. ಪ್ರತಿ ಮನೆಯಂಗಳದಲ್ಲೂ ಇರುವ, ಪ್ರತಿ ದಿನವೂ ಪೂಜಿಸಲ್ಪಡುವ ಈ ಗಿಡ ಅನೇಕ ಔಷಧೀಯ ಗುಣಗಳನ್ನೂ ಹೊಂದಿದೆ.
– ತೆಂಗಿನೆಣ್ಣೆಗೆ ನಾಲ್ಕಾರು ತುಳಸಿ ಎಲೆಗಳನ್ನು ಹಾಕಿ ಕುದಿಸಿ, ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಿದರೆ ಹೊಟ್ಟು ನಿವಾರಣೆಯಾಗುತ್ತದೆ.
-ತುಳಸಿ ಎಲೆಗಳಿಂದ ಪೇಸ್ಟ್ ತಯಾರಿಸಿ, ತಲೆಗೆ ಹಚ್ಚಿ 2-3 ಗಂಟೆ ನಂತರ ಸ್ನಾನ ಮಾಡಿದರೆ, ಬಿಳಿಗೂದಲನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು.
-ತುಳಸಿ ಎಲೆಗಳನ್ನು ಅರೆದು, ತಲೆಗೆ ಹಚ್ಚುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
-ತುಳಸಿ ಎಲೆಯ ಪೇಸ್ಟ್ ಜೊತೆ ಕಡಲೆ ಹಿಟ್ಟು ಅಥವಾ ಹೆಸರು ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿ, ಶ್ಯಾಂಪೂವಿನಂತೆ ಬಳಸಿದರೆ ಕೂದಲಿನ ಹೊಳಪು ಹೆಚ್ಚುತ್ತದೆ.
-ತುಳಸಿ ಪೇಸ್ಟ್‌ನ ಜೊತೆ ಜೇನು ಮತ್ತು ಮೊಸರನ್ನು ಕಲಸಿ ಹಚ್ಚಿದರೆ ಮೊಡವೆಗಳು ಮಾಯವಾಗುತ್ತವೆ.
-ತುಳಸಿ ಪೇಸ್ಟ್‌ನ ಜೊತೆ ರೋಸ್ ವಾಟರ್ ಅನ್ನು ಸೇರಿಸಿ, ಫೇಸ್‌ಪ್ಯಾಕ್ ಮಾಡಿಕೊಂಡರೆ ಮುಖದ ಕಾಂತಿ ಹೆಚ್ಚುತ್ತದೆ.
-ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರ್ಡಮೂರು ತುಳಸಿ ಎಲೆಗಳನ್ನು ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
-ಬಾಯಿ ಹುಣ್ಣಾದಾಗ ತುಳಸಿ ಎಲೆ ಜಗಿದರೆ ನೋವು ಶಮನವಾಗುವುದು.
– ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ, ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ಗಂಧ ಕಡಿಮೆಯಾಗುತ್ತದೆ.
-ತುಳಸಿ ರಸ ಹಾಗೂ ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ, ಸೇವಿಸಿದರೆ ಜೀರ್ಣಶಕ್ತಿ ಸರಾಗವಾಗುತ್ತದೆ.
– ಪುಷ್ಪ ಎನ್.ಕೆ. ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.