ಆ್ಯಪಲ್ ಸಿಡರ್ ವಿನೆಗರ್ ಉಪಯೋಗ
ಸಿಂಪಲ್ ಟಿಪ್ಸ್
Team Udayavani, Sep 18, 2019, 5:00 AM IST
ಎಸಿವಿ ಎಂದು ಜನಪ್ರಿಯವಾಗಿರುವ ಆ್ಯಪಲ್ ಸಿಡರ್ ವಿನೆಗರ್ ಬಗ್ಗೆ ಯಾರಿಗೆ ಗೊತ್ತಿಲ್ಲ? ಫಿಟ್‌ನೆಸ್ ಕಾಳಜಿ ಇರುವ ಎಲ್ಲರಿಗೂ ಇದು ಚಿರಪರಿಚಿತ. ಪ್ರತಿದಿನವೂ ಖಾಲಿ ಹೊಟ್ಟೆಯಲ್ಲಿ, ಬೆಚ್ಚಗಿನ ನೀರಿಗೆ ವಿನೆಗರ್ ಹಾಕಿ ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ಎಂದು ಎಲ್ಲರೂ ಬಲ್ಲರು. ಹಾಗೆಯೇ, ಸೌಂದರ್ಯವರ್ಧನೆಯಲ್ಲೂ ಎಸಿವಿ ಮಹತ್ತರವಾದ ಪಾತ್ರ ವಹಿಸುತ್ತದೆ ಎಂಬುದು ನಿಮಗೆ ಗೊತ್ತೇ?
-ಆಪಲ್ ಸಿಡರ್ ವಿನೆಗರ್ ತ್ವಚೆಯಲ್ಲಿನ ಪಿಎಚ್ ಬ್ಯಾಲೆನ್ಸ್ ಅನ್ನು ಸಮತೋಲನದಲ್ಲಿಡಲು ಉಪಯುಕ್ತ. ಹಾಗಾಗಿ ಇದನ್ನು ಟೋನರ್‌ನಂತೆ ಬಳಸಬಹುದು.
-ಒಂದು ಚಮಚ ಎಸಿವಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಹತ್ತಿಯಿಂದ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಳ್ಳಿ. ಇದು ಉತ್ತಮ ಟೋನರ್ ಆಗಿದ್ದು ತ್ವಚೆಯ ಹೊರಪದರವನ್ನು ಧೂಳು, ಕಲ್ಮಷಗಳಿಂದ ರಕ್ಷಿಸುತ್ತದೆ.
– ಸನ್‌ಬರ್ನ್, ಸನ್‌ಟ್ಯಾನ್ ನಿವಾರಣೆಯಲ್ಲಿಯೂ ಆಪಲ್ ಸಿಡರ್ ವಿನೆಗರ್ ಸಹಕಾರಿ. ದಿನವೂ ಸ್ನಾನದ ನೀರಿಗೆ 2 ಚಮಚ ಆಪಲ್ ಸಿಡರ್ ವಿನೆಗರ್ ಸೇರಿಸಿದರೆ ಸನ್ ಬರ್ನ್ ದೂರವಾಗುತ್ತದೆ.
-ಮೊಡವೆ ಕಲೆ, ಪಿಗ್‌ಮೆಂಟೇಷನ್‌ಗಳನ್ನು ಕೂಡ ಇದು ನಿವಾರಿಸುತ್ತದೆ. ಮುಲ್ತಾನಿ ಮಿಟ್ಟಿಯೊಂದಿಗೆ 2 ಚಮಚ ಎಸಿವಿ ಸೇರಿಸಿ ಫೇಸ್‌ಪ್ಯಾಕ್ ಹಾಕಿಕೊಳ್ಳಿ. ವಾರಕ್ಕೊಮ್ಮೆ ಹೀಗೆ ಮಾಡಿದರೆ ಕಲೆಗಳು ಮಾಯವಾಗುತ್ತವೆ.
– ಸೌತೆಕಾಯಿಯ ರಸಕ್ಕೆ 1 ಚಮಚ ಆಪಲ್ ಸಿಡರ್ ವಿನೆಗರ್ ಸೇರಿಸಿ ಮುಖಕ್ಕೆ ಹಚ್ಚಿ, ಕಾಲು ಗಂಟೆಯ ನಂತರ ತೊಳೆದರೆ ಚರ್ಮದ ಸುಕ್ಕು, ನೆರಿಗೆಗಳು ಹೋಗುತ್ತವೆ.
– ತಲೆಗೆ ಸ್ನಾನ ಮಾಡಿದ ನಂತರ ಒಂದು ಬೌಲ್ ನೀರಿಗೆ, 3 ಚಮಚ ಎಸಿವಿ ಸೇರಿಸಿ ಕೂದಲನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ತಲೆಹೊಟ್ಟು, ಕೂದಲು ಉದುರುವ ಸಮಸ್ಯೆ, ಕೂದಲು ತುಂಡಾಗುವುದು ನಿವಾರಣೆಯಾಗುತ್ತದೆ.
– ಶ್ರುತಿ ಕೆ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Service Variation: ಸರಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ
Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ
Kundapura: ಸರಕಾರಿ ಕಾಲೇಜಿನ ಎನ್‌ವಿಆರ್ ಕೆಮರಾ ಕಳವು
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
Belthangady: ಕಾರು-ದ್ವಿಚಕ್ರ ವಾಹನ ಅಪಘಾತ: ಗಾಯಾಳಾಗಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.