ತುಳಸಿ ಬಳಸಿ: ಮನೆಯ ಮುಂದಿನ ಡಾಕ್ಟರ್
Team Udayavani, Aug 23, 2017, 9:29 AM IST
ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯವಾಗಿರುವ ತುಳಸಿ ಸಾಕಷ್ಟು ಔಷಧೀಯ ಗುಣಗಳನ್ನೂ ಹೊಂದಿದೆ. ಮನೆಯಂಗಳದಲ್ಲಿ ಬೆಳೆಸಬಹುದಾದ ತುಳಸಿಯನ್ನು ಸೌಂದರ್ಯವರ್ಧಕವಾಗಿ, ಆರೋಗ್ಯರಕ್ಷಕವಾಗಿಯೂ ಬಳಸಬಹುದು…
– ತುಳಸಿ ಎಲೆಯ ರಸಕ್ಕೆ ನಿಂಬೆರಸ ಸೇರಿಸಿ ಹದವಾಗಿ ಕಲಸಿ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ನಂತರ ಸ್ವತ್ಛ ನೀರಿನಿಂದ ತೊಳೆದುಕೊಳ್ಳಿ. ಮುಖದ ಮೇಲಿನ ಕಪ್ಪು ಕಲೆಗಳು, ಮೊಡವೆಗಳು ಮಾಯವಾಗುತ್ತವೆ.
– ಒಣ ತುಳಸಿ ಎಲೆಗಳನ್ನು ಪುಡಿಮಾಡಿ ಸ್ವತ್ಛ ನೀರಿನಲ್ಲಿ ಬೆರಸಿ ಹದವಾಗಿ ರುಬ್ಬಿ ಮುಖಕ್ಕೆ ಲೇಪಿಸಿಕೊಂಡರೆ ತ್ವಚೆಗೆ ಹೊಳಪು ಬರುತ್ತದೆ.
– ತಲೆಗೆ ತುಳಸಿ ರಸ ಲೇಪಿಸಿಕೊಳ್ಳುವುದರಿಂದ ತಲೆ ಹೊಟ್ಟಿನ ಸಮಸ್ಯೆ, ಕೂದಲು ಉದುರುವ ಸಮಸ್ಯೆ ನಿಲ್ಲುತ್ತದೆ.
– ಸ್ನಾನದ ಅರ್ಧಗಂಟೆ ಮೊದಲು ಮುಖಕ್ಕೆ ತುಳಸಿ ರಸ ಹಚ್ಚಿಕೊಳ್ಳುವದರಿಂದ ಮುಖ ಮೃದುವಾಗಿ, ಕಾಂತಿಯುತವಾಗುತ್ತದೆ.
– ಮೈಗೆ ತುಳಸಿ ರಸ ಲೇಪಿಸಿಕೊಳ್ಳುವ ಮೂಲಕ ಸೊಳ್ಳೆಗಳ ಕಡಿತದಿಂದ ಪಾರಾಗಬಹುದು.
– ಋತುಮಾನ ಬದಲಾವಣೆಯಿಂದ ಜ್ವರ, ನೆಗಡಿ ಬಂದರೆ ತುಳಸಿದಳ, ಕರಿಮೆಣಸಿನ ಪುಡಿ, ಬೆಲ್ಲ, ನೀರು ಬೆರೆಸಿ ಕುದಿಸಿ ಕಷಾಯ ಮಾಡಿ ಸೇವಿಸಿ.
– ತುಳಸಿ ಹಾಗೂ ಹಸಿ ಶುಂಠಿ ರಸವನ್ನು ಜೇನು ತುಪ್ಪದಲ್ಲಿ ಬೆರೆಸಿ ಸೇವಿಸುವುದರಿಂದ ಹಸಿವು ಹೆಚ್ಚಾಗುತ್ತದೆ. ನೆಗಡಿ, ಜ್ವರ ಶಮನವಾಗುತ್ತದೆ.
– ನೆಗಡಿ ಹಾಗೂ ಜ್ವರ ಬಂದಾಗ ತುಳಸಿ ಎಲೆ, ಹಾಲು ಮತ್ತು ಸಕ್ಕರೆ ಕುದಿಸಿ ತಯಾರಿಸಿದ ಕಷಾಯ ಸೇವಿಸಬಹುದು.
– ತುಳಸಿ ಎಲೆ, ಅರಿಶಿನ ಪುಡಿ ಹಾಗೂ ಕರಿಮೆಣಸಿನ ಪುಡಿಗಳನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯ ಕೂಡ ನೆಗಡಿ ಮತ್ತು ಜ್ವರವನ್ನು ನಿಯಂತ್ರಿಸಬಲ್ಲದು.
– ತುಳಸಿ ರಸವನ್ನು ಸೀಮೆಎಣ್ಣೆಯೊಂದಿಗೆ ಸೇರಿಸಿ ಸಿಂಪಡಿಸಿದರೆ, ಸೊಳ್ಳೆಗಳು ಸುಳಿಯುವುದಿಲ್ಲ.
– ನಿತ್ಯ ತುಳಸಿಯ ರಸ ಸೇವಿಸುವುದರಿಂದ ಕೆಂಪು ರಕ್ತ ಕಣಗಳು ಸಮೃದ್ಧವಾಗುವವು.
– ಕೀಲುಗಳಲ್ಲಿ ನೋವಿದ್ದರೆ 10 ಗ್ರಾಂ ತುಳಸಿ ರಸಕ್ಕೆ 10 ಗ್ರಾಂ ಶುಂಠಿರಸ ಸೇರಿಸಿ ಕುಡಿದರೆ ನೋವು ಕಡಿಮೆಯಾಗುತ್ತದೆ.
ಮಕ್ಕಳಿಗೂ ಸಂಜೀವಿನಿ
1. ಮಗುವಿಗೆ ನಿತ್ಯವೂ ತುಳಸಿ ರಸ ಕೊಡುತ್ತಿದ್ದರೆ ರೋಗಬಾಧೆ ದೂರವಾಗುತ್ತದೆ.
2. ಹತ್ತು ಹನಿ ತುಳಸಿ ರಸವನ್ನು ನೀರಿಗೆ ಬೆರೆಸಿ, ನಿತ್ಯ ಕುಡಿಸುವುದರಿಂದ ಮಗುವಿನ ಸ್ನಾಯು, ಎಲುಬುಗಳು ಬಲಿಷ್ಠವಾಗುತ್ತವೆ.
3. ಮಗುವಿಗೆ ಹಲ್ಲು ಬರುವ ಪೂರ್ವದಲ್ಲಿ ತುಳಸಿ ರಸವನ್ನು ವಸಡಿಗೆ ಲೇಪಿಸುತ್ತಿದ್ದರೆ ಹಲ್ಲು ಬರುವಾಗಿನ ನೋವನ್ನು ತಪ್ಪಿಸಬಹುದು.
4. ಒಣಕೆಮ್ಮಿದ್ದರೆ ತುಳಸಿಯ ಚಿಗುರೆಲೆಗಳನ್ನು ಶುಂಠಿಯೊಂದಿಗೆ ಜಜ್ಜಿ ಜೇನುತುಪ್ಪದೊಂದಿಗೆ ಹದವಾಗಿ ಬೆರೆಸಿ ನೆಕ್ಕಿಸಿ.
5. ಎದೆಹಾಲು ಕುಡಿಯುವ ಮಗು ವಾಂತಿ ಅಥವಾ ವಾಕರಿಕೆ ಮಾಡಿಕೊಳ್ಳುತ್ತಿದ್ದರೆ ತುಳಸಿ ರಸವನ್ನು ಜೇನುತುಪ್ಪದಲ್ಲಿ ಬೆರೆಸಿ ನೆಕ್ಕಿಸಿ.
ಶರಣಾಂಬಾ ಬ ಹುಡೇದಗಡ್ಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.