ವೆಜ್ಜೀ ಅನುಷ್ಕಾಳ ಡಯೆಟ್ ಡೈರಿ: ದೇವಸೇನಾ ಏಕೆ ದಂತದ ಗೊಂಬೆ?
Team Udayavani, Aug 2, 2017, 9:27 AM IST
ಕನ್ನಡತಿ, ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ, ಕ್ಲಾಸಿಕ್ ಗೊಂಬೆಯಂತೆ ಕಚಗುಳಿ ಇಡುವ ತಾರೆ. ಅವರ ನಗುವಿನಿಂದ ಹಿಡಿದು, ಮುಖಸಿರಿ, ಕೇಶ ಸೌಂದರ್ಯ, ಫಿಟ್ನೆಸ್… ಅನ್ನು ಹೊಂದುವುದು ಅನೇಕ ಹುಡುಗಿಯರ ಕನಸೂ ಹೌದು. ಅಷ್ಟಕ್ಕೂ, ಅನುಷ್ಕಾ ಶೆಟ್ಟಿಯವರ ಅಪ್ಸರೆಸಿರಿಯ ಹಿಂದಿನ ಗುಟ್ಟೇನು?
1. ಮಂಗ್ಳೂರು ಹುಡುಗಿ ಅಂತ ಈ ನಟಿಯೆದುರು, ಫಿಶ್ ಫ್ರೈ ಇಟ್ಟರೆ, ಅನುಷ್ಕಾ ಶೆಟ್ಟಿ ಅದನ್ನು ಬೆರಳಲ್ಲೂ ಮುಟ್ಟೋದಿಲ್ಲ. ಏಕೆಂದರೆ, ಅನುಷ್ಕಾ ಸಂಪೂರ್ಣ ಸಸ್ಯಾಹಾರಿ. ಹಸಿರು ತರಕಾರಿ, ಧಾನ್ಯಗಳೇ ಅವರ ಡಯೆಟ್‌ನ ಗುಟ್ಟು.
2. ದಿನಾ ರಾತ್ರಿ 8 ಗಂಟೆಯೊಳಗೆ ಅನುಷ್ಕಾ ಊಟ ಮುಗಿಸುತ್ತಾರೆ. ಮಲಗುವುದಕ್ಕೂ 2-3 ಗಂಟೆ ಮುಂಚೆ ಏನೂ ತಿನ್ನಬಾರದು ಎನ್ನುವುದು ಈ ಚೆಂದುಳ್ಳಿ ಚೆಲುವೆಯ ಪಾಲಿಸಿ.
3. ಅನುಷ್ಕಾ ಚರ್ಮ ಏಕೆ ಅಷ್ಟೊಂದು ಫಳಫಳ ಅಂತಿರುತ್ತೆ ಅಂದ್ರೆ, ಅದಕ್ಕೆ ಅವರು ಕೊಡುವ ಉತ್ತರ “ಯೋಗ’. ದಿನಾ ಬೆಳಗ್ಗೆ ಅವರು ಯೋಗಾಸನ ಮಾಡ್ತಾರೆ. ಅಲ್ಲದೆ, 30 ನಿಮಿಷ ಜಿಮ್‌ನಲ್ಲೂ ಅವರು ಅಭ್ಯಾಸ ನಡೆಸುತ್ತಾರೆ.
4. ಅನುಷ್ಕಾ ಅವರ ತಲೆಕೂದಲು ಬಹಳ ಕಪ್ಪು. ಈ ಕೇಶ ಸೌಂದರ್ಯದ ಹಿಂದೆ ಸಾಕಷ್ಟು ತೈಲಗಳ ಕೃಪೆಯೂ ಇದೆ. ಆಲೀವ್, ಹರಳೆಣ್ಣೆ, ಸಾಸಿವೆ ಎಣ್ಣೆ, ತೆಂಗಿನ ಎಣ್ಣೆ… ಹೀಗೆ ದಿನಕ್ಕೊಂದು ತೈಲದಿಂದ ಹೇರ್ ಮಸಾಜ್ ಮಾಡಿಕೊಳ್ಳುತ್ತಾರೆ. ಕೂದಲ ಬುಡ ಗಟ್ಟಿಯಾಗಲು, ಕೂದಲು ದಟ್ಟ, ಕಪ್ಪು ಕಾಂತಿಯನ್ನು ಹೊಂದಲು ಈ ತೈಲಗಳು ನೆರವಾಗುತ್ತವೆ.
5. ನೀರು, ನೀರು, ನೀರು! ಇದು ಅನುಷ್ಕಾ ಅವರ ಫಿಟ್ನೆಸ್‌ನ ಇನ್ನೊಂದು ಗುಟ್ಟು. ನಿತ್ಯ ಅವರು 6 ಲೀಟರ್ ನೀರು ಕುಡಿಯುತ್ತಾರೆ.
6. ನಿತ್ಯ ಬೆಳಗ್ಗೆ ಬ್ರೆಡ್ ಜತೆ ಜೇನು ತುಪ್ಪ ಸೇರಿಸಿಕೊಂಡು ತಿನ್ನುವುದು ಇವರಿಗೆ ಬಹಳ ಇಷ್ಟ. ಯಾವುದೇ ಕಾಸ್ಮೆಟಿಕ್ ಸರ್ಜರಿಯಿಲ್ಲದೆ ಚರ್ಮ ಕಾಂತಿಯುಕ್ತವಾಗಿ ಕಾಣಬೇಕಾದರೆ, ಜೇನುತುಪ್ಪಕ್ಕಿಂತ ಒಳ್ಳೆಯ ಆಹಾರ ಮತ್ತೂಂದಿಲ್ಲ ಎಂದು ಅವರೇ ಹೇಳುತ್ತಾರೆ.
7. ಹಿಮ್ಮಡಿ ಮೇಲೆ ಎಲ್ಲಾದರೂ ಕಪ್ಪು ಕಲೆಗಳಾದರೆ, ಅನುಷ್ಕಾ ಅವರು ಕ್ರೀಮ್‌ಗಳ ಮೊರೆ ಹೋಗುವುದಿಲ್ಲ. ಬದಲಾಗಿ, ಕಡಲೆಹಿಟ್ಟಿಗೆ ತುಸು ಲಿಂಬೆರಸ ಬೆರೆಸಿ, ಅದರ ಪೇಸ್ಟ್ ಅನ್ನು ಕಪ್ಪು ಕಲೆಗಳ ಮೇಲೆ ಲೇಪಿಸಿಕೊಳ್ಳುತ್ತಾರೆ. ಮೂರೇ ದಿನದಲ್ಲಿ ಆ ಕಲೆಗಳು ಮಾಯವಾಗಿ, ಒಳ್ಳೆಯ ರಿಸಲ್ಟ್ ಸಿಗುತ್ತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.