ಒದ್ದೆ ಕೂದಲ ಆರೈಕೆ
Team Udayavani, Feb 12, 2020, 4:34 AM IST
ಕೂದಲಿಗೆ ಎಣ್ಣೆ ಹಚ್ಚಿ, ಒಳ್ಳೆ ಶ್ಯಾಂಪೂ, ಕಂಡಿಷನರ್ ಬಳಸಿ ಸ್ನಾನ ಮಾಡುವುದು ಎಷ್ಟು ಮುಖ್ಯವೋ, ಒದ್ದೆ ಕೂದಲಿನ ಆರೈಕೆ ಮಾಡುವುದು ಕೂಡಾ ಅಷ್ಟೇ ಮುಖ್ಯ. ಕೂದಲು ಉದುರುವುದು, ಕವಲೊಡೆಯುವುದು, ತುಂಡಾಗುವುದು, ಮುಂತಾದ ಸಮಸ್ಯೆಗಳ ಮೂಲ ಇರುವುದು ಒದ್ದೆ ಕೂದಲಿನಲ್ಲಿ.
ಕೂದಲು ಹಸಿಯಾಗಿರುವಾಗ ಹೀಗೆಲ್ಲಾ ಮಾಡಬೇಡಿ…
-ಕಠಿಣವಾಗಿ ಬಾಚಬೇಡಿ
ಕೂದಲು ಹಸಿ ಇರುವಾಗ, ಬಾಚಣಿಗೆ ಉಪಯೋಗಿಸಲೇಬಾರದು. ಜೋರಾಗಿ ಒತ್ತಿ ಬಾಚಿದರೆ ಕೂದಲು ಉದುರಲು, ಕವಲೊಡೆಯಲು ಶುರುವಾಗುತ್ತದೆ. ಅಗತ್ಯವಿದ್ದಲ್ಲಿ, ಉದ್ದ ಹಲ್ಲಿನ ಬಾಚಣಿಗೆಯ ಬದಲು, ಅಗಲ ಹಲ್ಲಿನ ಬಾಚಣಿಗೆಯನ್ನು ಮಾತ್ರ ಬಳಸಿ.
-ಬಿಸಿಗಾಳಿಯಲ್ಲಿ ಒಣಗಿಸಬೇಡಿ
ಕಾಲೇಜು-ಆಫೀಸ್‌ಗೆ ಹೋಗುವವರು, ಗಡಿಬಿಡಿಯಲ್ಲಿ ಕೂದಲನ್ನು ಬಿಸಿಗಾಳಿ (ಹೇರ್ ಡ್ರೈಯರ್) ಮೂಲಕ ಒಣಗಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಬಿಸಿಗಾಳಿ ನೇರವಾಗಿ ತಲೆಗೆ ತಾಗುವುದರಿಂದ, ಕೂದಲಿನ ಬುಡ ಶುಷ್ಕವಾಗಿ ತಲೆಹೊಟ್ಟು ಪ್ರಾರಂಭವಾಗುತ್ತದೆ.
-ತಕ್ಷಣ ಹೊರಗೆ ಹೋಗಬೇಡಿ
ಬಿಸಿಲಿನಿಂದಾಗಿ ಒದ್ದೆ ಕೂದಲು ಬೇಗ ರಫ್ ಆಗಿ ಬಿಡುತ್ತದೆ. ಕೂದಲಿನ ತೇವವನ್ನು ಶಾಖ ಹೀರಿಕೊಂಡಾಗ ತಲೆನೋವು ಬರುವ, ಕೂದಲು ಉದುರುವ ಸಾಧ್ಯತೆ ಹೆಚ್ಚು.
-ಬೆರಳುಗಳಿಂದ ನೇರಗೊಳಿಸಿ
ಒಣಗಿದ ಕೂದಲಿಗಿಂತ ಒದ್ದೆ ಕೂದಲು 3 ಪಟ್ಟು ಹೆಚ್ಚು ಬಲಹೀನವಾಗಿರುತ್ತದೆ. ಹೀಗಾಗಿ ಬೆರಳುಗಳಿಂದ ಕೂದಲ ಸಿಕ್ಕನ್ನು ಬಿಡಿಸುವುದರಿಂದ ಕೂದಲು ಉದುರುವುದು ತಪ್ಪುತ್ತದೆ.
-ಹೇರ್‌ಬ್ಯಾಂಡ್‌ನಿಂದ ಬಿಗಿಯಬಾರದು
ಒದ್ದೆ ಕೂದಲು ತುಂಬಾ ಸೂಕ್ಷ್ಮವಾಗಿರುತ್ತದೆ. ಅದನ್ನು, ಹೇರ್‌ಬ್ಯಾಂಡ್‌ನಿಂದ ಬಿಗಿಯಾಗಿ ಕಟ್ಟಿದರೆ, ಕೂದಲು ಉದುರುವುದು ಹೆಚ್ಚುತ್ತದೆ.
– ಟವೆಲ್ ಕಟ್ಟಬೇಡಿ
ಒದ್ದೆ ಕೂದಲಿಗೆ ತುಂಬಾ ಹೊತ್ತು ಟಾವೆಲ್ ಕಟ್ಟುವುದರಿಂದಲು ಕೂದಲು ಸಹಜವಾಗಿ ಒಣಗುವುದಕ್ಕೆ, ತಡೆಯಾಗುತ್ತದೆ. ಇದರಿಂದ ಕೂದಲು, ತೇವಾಂಶವನ್ನು ಹೀರಿಕೊಂಡು ಒರಟಾಗುತ್ತದೆ.
-ಸುಲಭಾ ಆರ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.