ಏನು, ಸೆಕೆಂಡ್‌ ಪ್ಲ್ರಾನಿಂಗಾ?


Team Udayavani, Feb 27, 2019, 12:30 AM IST

c-1.jpg

“ಒಬ್ಬ ಮಗನನ್ನ ಯಾಕ ಹಡೆದೆ ನನ್ನವ್ವ’ ಎನ್ನುವ ಜನಪದ, “ಮಕ್ಕಳಿರಲವ್ವ ಮನೆ ತುಂಬ’ ಎಂದೂ ಹಾಡುತ್ತದೆ. ಕೀರ್ತಿಗೊಬ್ಬ ಮಗ, ಆರತಿಗೊಬ್ಬಳು ಮಗಳು ಎಂಬಂತೆ, ನಾವಿಬ್ಬರು ನಮಗಿಬ್ಬರು ಎಂದು ಸರಕಾರ ಕರೆ ನೀಡುತ್ತದೆ. “ಹೆಣ್ಣಾಗಲಿ, ಗಂಡಾಗಲಿ…ನಮಗೊಂದೇ ಸಾಕು’ ಎಂಬುದು ಇಂದಿನವರ ಹಾಡು…

“ಏನ್ರೀ ವಿಶೇಷ ಇದ್ಯಾ? ಬೇಗ ಪ್ಲಾನ್‌ ಮಾಡ್ತಾ ಇದ್ದೀರಾ?’ ಎಂದು ನೆರೆಮನೆಯಾಕೆ ನನ್ನನ್ನು ಕೇಳಿದಳು. ನನ್ನ ಮಗರಾಯನಿಗೆ ಆಗ ಇನ್ನೂ ಒಂದೂವರೆ ವರ್ಷ. ಊರಿಗೆ ಹೋದಾಗಲೆಲ್ಲ ಎಲ್ಲರೂ, “ಸಣ್ಣಕ್ಕಾಗಿದಿಯಲ್ಲೇ ಯಾಕೆ?’ ಎಂದು ಕೇಳುತ್ತಿದ್ದರು. ಇವರಿಗೆ ನನ್ನ ಹೊಟ್ಟೆ ದೊಡ್ಡದಾಗಿ ಕಾಣಿಸಿತೇ ಎಂದು ಯೋಚಿಸತೊಡಗಿದೆ. ಸ್ವಲ್ಪ ಲೂಸು ಬಟ್ಟೆ ಹಾಕಿದ್ದ ನನ್ನ ಚೂಡಿದಾರ ಗಾಳಿಗೆ ಹಾರಿ ಹೊಟ್ಟೆಯ ಬಳಿ ಸ್ವಲ್ಪ ದೊಡ್ಡದಾಗಿ ಕಂಡಿತ್ತು. ಹಾಗೇನೂ ಇಲ್ಲ ಎಂದು ಹೇಳಿ ಬಂದೆ.

  ಈಗ ಮಗುವಿಗೆ ಮೂರು ವರ್ಷ. ಎಲ್ಲ ಗೆಳತಿಯರು, ಸಂಬಂಧಿಗಳು ಕೇಳುವ ಪ್ರಶ್ನೆ: “ಸೆಕೆಂಡ್‌ ಯಾವಾಗ ಪ್ಲಾನ್‌? ಬೇಗ ಆಗಲಿ, ವಯಸ್ಸಾದರೆ ಆಮೇಲೆ ಮ್ಯಾನೇಜ್‌ ಮಾಡೋದು ಕಷ್ಟ’ ಎಂದು. ಅದೇ ಪ್ರಶ್ನೆಯನ್ನು ಅವರಿಗೇ ತಿರುಗಿಸಿ ಕೇಳಿದರೆ, “ನಾವೂ ಯೋಚನೆ ಮಾಡುತ್ತಿದ್ದೇವೆ. ಬೇಕೇ, ಬೇಡವೇ’ ಎಂಬ ಉತ್ತರ!

  ಮದುವೆಯಾಗಿ ಇನ್ನೂ ಒಂದೆರಡು ವರ್ಷ ಕಳೆದಿರುವುದಿಲ್ಲ. ಎಲ್ಲರೂ -“ನೀವಿಬ್ಬರೇನಾ? ಮಗು?! ಬೇಗ ಆಗಲಿ’ ಎಂದು ಆಶೀರ್ವಾದವೋ? ಹೀಯಾಳಿಕೆಯೋ ಎಂಬಂತೆ ಹೇಳಿ ಬಿಡುತ್ತಾರೆ. ಅಂತೂ ಇಂತೂ ಹೊಸ ಮಗು ಆಗಮನವಾಗುತ್ತದೆ ಎಂದು ತಿಳಿದಂತೆ ಎಷ್ಟು ಕಾಳಜಿ? ಎಷ್ಟು ಬದಲಾವಣೆ? ಎಷ್ಟು ತ್ಯಾಗ? ಒಂದು ಮಗುವನ್ನು ಕಂಡವರು, ಎರಡನೆಯದು ಯಾವಾಗ ಎಂಬ ಪ್ರಶ್ನೆಯನ್ನೂ ಎದುರಿಗೆ ಇಡುತ್ತಾರೆ.

   ಮೊದಲನೆ ಮಗುವಿಗಾಗಿ ಕಚೇರಿಯಲ್ಲಿ  ಕೆಲವರು ಪ್ರಮೋಷನ್ನನ್ನು ಬಿಟ್ಟರೆ, ಕೆಲವರು ಕೆಲಸವನ್ನೇ ಬಿಟ್ಟಿರುತ್ತಾರೆ. ಡೇಕೇರ್‌ನಲ್ಲಿ ಬಿಟ್ಟು ಒದ್ದಾಡುವವರು, ಆಯಾಳ ಮೊರೆ ಹೋಗುವವರು ಕೆಲವರು. ಇನ್ನೂ ಕೆಲವು ಪುಣ್ಯವಂತರು ಮಾತ್ರ ವರ್ಕ್‌ ಫ್ರಮ್‌ ಹೋಂನ ಭಾಗ್ಯವನ್ನು ಪಡೆದಿರುತ್ತಾರೆ. ಬೆಂಗಳೂರಿನ ಚಿಕ್ಕ ಕುಟುಂಬಗಳಲ್ಲಂತೂ ಒಂದನ್ನೇ ನಿಭಾಯಿಸಲು ಕಷ್ಟ, ಇನ್ನೊಂದನ್ನು ಹೇಗೆ ನೋಡಿಕೊಳ್ಳುವುದು ಎಂಬ ಪ್ರಶ್ನೆ. ಕೆಲವು ಮಹಿಳೆಯರಂತೂ ಕೆಲಸಕ್ಕೆ ರಾಜೀನಾಮೆ ನೀಡಿ ಎರಡು ವರ್ಷಗಳಾದವು. ಜಾಸ್ತಿ ಬ್ರೇಕ್‌ ತೆಗೆದುಕೊಂಡರೆ ಕೆಲಸ ಸಿಗುವುದು ಕಷ್ಟವೇನೋ ಎಂಬ ಅಳಲು ತೋಡಿಕೊಳ್ಳುತ್ತಾರೆ. 

   ಈಗಿನ ಮಕ್ಕಳಂತೂ ತುಂಬಾ ಚೂಟಿ, ತುಂಬಾ ತೀಟೆ ಕೂಡ. ಅವರನ್ನು ಸಾಕಿ ಸಲಹುವುದೇ ತಂದೆ ತಾಯಿಯರಿಗೆ ಸಾಕೋ ಸಾಕು ಅನಿಸುತ್ತಿದೆ. ನೋಡಿದ್ದೆಲ್ಲ ಬೇಕು, ಇನ್ನೊಬ್ಬರೊಂದಿಗೆ ಏನನ್ನೂ ಶೇರ್‌ ಮಾಡಲಾರೆವು ಎಂಬುದು ಅವರ ಅಳಲು. ಹಠಮಾರಿಗಳೂ ಕೂಡ. ನನ್ನ ಮಗನಂತೂ ಅವನ ಬಳಿ ಸೈಕಲ್‌ ಇದ್ದರೂ ಬೇರೆಯವರ ಸೈಕಲ್‌ ಚೆಂದವೆಂದು ಅದರ ಹಿಂದೆ ಓಡುತ್ತಾನೆ. ಅವನ ಹಿಂದೆ ಓಡಿ ನನಗೆ ಕಾಲು ನೋವು. ಗೆಳತಿಯರ ಮಕ್ಕಳದೂ ಅದೇ ಗೋಳು. ಟಿ.ವಿ. ರಿಮೋಟ್‌, ಮೊಬೈಲ್‌ ಅವರ ಕೈಯಲ್ಲಿ, ನಮಗದು ಸಿಗುವುದು ಅವರು ಮಲಗಿದ ಮೇಲೆ. ತಂಟೆಗೇ ಸೋತು, ಸುಸ್ತಾದ ತಾಯಂದಿರಿಗೆ, ಎರಡನೆಯದು ಬೇಕಾ ಎಂಬ ಪ್ರಶ್ನೆ ಈಟಿಯಂತೆ ಎದುರಾಗುತ್ತದೆ.

  ಈಗಿನ ಶಿಕ್ಷಣವೂ ಬಲು ದುಬಾರಿ. ಮಗುವಿನ ಅಪ್ಪ-ಅಮ್ಮ, ತಮ್ಮ ಇಡೀ ಶಿಕ್ಷಣಕ್ಕೆ ಮಾಡಿದಷ್ಟು ಹಣ, ಈಗ ಮಗನ ನರ್ಸರಿ ಅಡ್ಮಿಶನ್‌ಗೆ ಖರ್ಚಾಗುತ್ತದೆ. ಅವರ ತಿಂಗಳ ಫೀಸು, ಬೇಕೆಂದು ಹಠ ಮಾಡಿದಾಗೆಲ್ಲಾ ಕೊಡಿಸಿದ ಆಟಿಕೆ, ನಾವು ಇಷ್ಟ ಪಟ್ಟು ಕೊಂಡ ಆಟಿಕೆ, ಚಾಕೊಲೇಟ್‌, ಅವರ ಬರ್ತ್‌ಡೇ ಪಾರ್ಟಿ ಹೀಗೆ ಖರ್ಚಿನ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕೆಲವು ಗೆಳತಿಯರಂತೂ ಆ ಖರ್ಚನ್ನು ಕಂಡೇ ಎರಡನೆಯದು ಖಂಡಿತಾ ಬೇಡವೆಂದು ಖಚಿತವಾಗಿ ಹೇಳುತ್ತಾರೆ.
  
ಮೊದಲ ಸಲ ಬಸುರಿಯೆಂದು ತಿಳಿದ ಸ್ವಲ್ಪ ದಿನದಲ್ಲೇ ಶುರುವಾದ ವಾಂತಿ, ಹಸಿವು, ಬಾಯಾರಿಕೆ, ಬೆನ್ನುನೋವು… ಇವುಗಳನ್ನೆಲ್ಲ ಮರೆಯಲು ಸಾಧ್ಯವೇ? ಸಿಸೇರಿಯನ್‌ ಆದ ನಂತರದ ಬೆನ್ನುನೋವನ್ನು ಕೆಲವರು ನೆನಪಿಸಿಕೊಂಡರೆ, ಮಗುವಿನೊಂದಿಗೆ ಕಳೆದ ನಿದ್ರೆಯಿಲ್ಲದ ರಾತ್ರಿಗಳನ್ನೂ, ಚಂಡಿ ಹಿಡಿದು ಅಳುವ ಅದರ ಅಳುವನ್ನೂ ನೆನೆಸಿಕೊಳ್ಳುವವರು ಕೆಲವರು.
  
ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರಾದರೂ ಇದ್ದರೆ, ಎರಡನೇ ಮಗುವಾದರೆ ಸಂಭಾಳಿಸಬಹುದು ಎಂಬುದು ಕೆಲವರ ಅನಿಸಿಕೆ. ಮಗು ಒಂದನೇ ತರಗತಿಗೆ ಹೋದಾಗ ಎರಡನೇ ಮಗುವನ್ನು ನೋಡಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ ಎನ್ನುವುದು ಗೆಳತಿ ನೀರಜಾಳ ಅನಿಸಿಕೆ. ಕಸಿನ್ಸ್ಗಳು ಸಿಬ್ಲಿಂಗ್ಸ್‌ (ಒಡಹುಟ್ಟಿದವರು) ಆಗಲು ಸಾಧ್ಯವಿಲ್ಲ. ಮಗುವಿನ ಅಂತರ ಮೂರರಿಂದ ಹನ್ನೆರಡು ವರ್ಷಗಳವರೆಗಾದರೂ, ಎರಡನೇ ಮಗುವಿರಲಿ ಎಂಬುದು ಹೆಲ್ತ್‌ಕೇರ್‌ನಲ್ಲಿ ಕೆಲಸ ಮಾಡುವ ಗೆಳತಿ ಸವಿತಾಳ ಸಲಹೆ. ನನಗೆ ತಂಗಿ ಹುಟ್ಟಿದರೆ ತಂಗಿಯನ್ನು ನಾನು ಊಟ ಮಾಡಿಸುತ್ತೀನಿ, ಮಲಗಿಸುತ್ತೀನಿ ಎಂದು ಧೈರ್ಯ ಹೇಳುವ ಮಗರಾಯ.

   “ಒಬ್ಬ ಮಗನ ಯಾಕ ಹಡೆದೆ ನನ್ನವ್ವ’ ಎನ್ನುವ ಜನಪದ, “ಮಕ್ಕಳಿರಲ್ಲವ್ವ ಮನೆ ತುಂಬ’ ಎಂದೂ ಹಾಡುತ್ತದೆ. “ಆರತಿಗೊಬ್ಬಳು, ಕೀರ್ತಿಗೊಬ್ಬ’ ಎಂಬಂತೆ, ನಾವಿಬ್ಬರು ನಮಗಿಬ್ಬರು ಸಾಕು ಎಂದು ಸರಕಾರ ಕರೆ ನೀಡುತ್ತದೆ. “ಹೆಣ್ಣಾಗಲಿ, ಗಂಡಾಗಲಿ… ನಮಗೊಬ್ಬರಿದ್ದರೆ ಸಾಕು’ ಎಂಬಂತಾಗಿದೆ ಇಂದಿನ ಕೆಲವರ ಪರಿಸ್ಥಿತಿ. 

ಯಾರೇನೇ ಹೇಳಲಿ, ನಿರ್ಧಾರ ನಿಮ್ಮದು…
ಉಳಿದವರು ಏನೇ ಹೇಳಲಿ, ನಿಮ್ಮ ಬದುಕಿನ ಬಗ್ಗೆ ನೀವೇ ಆಲೋಚಿಸಿ ಒಂದು ನಿರ್ಧಾರಕ್ಕೆ ಬನ್ನಿ. ಒಂದನ್ನು ನಿಭಾಯಿಸುವ ನೀವು ಎರಡನ್ನು ನಿಭಾಯಿಸುವ ಸೂಪರ್‌ ಪೇರೆಂಟ್‌ ಆಗಬಹುದು. ಮೊದಲನೇ ಮಗುವೇ ಎರಡನೆಯದನ್ನು ನೋಡಿ ಮು¨ªಾಡಿ, ಅದರ ತುಂಟಾಟವನ್ನು ಕಡಿಮೆ ಮಾಡಬಹುದು. ಮೊದಲ ಮಗುವಿನ ದುಬಾರಿ ಆಟಿಕೆಗಳೇ ಎರಡನೇ ಮಗುವಿಗೂ ಬಳಕೆ ಆಗಬಹುದು. ಆದರೂ, ಎರಡನೇ ಮಗು ಬೇಕೇ ಬೇಡವೇ ಎಂದು ನಿರ್ಧರಿಸಬೇಕಾದವರು ನೀವೇ. 

ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.