ಪಾಪ, ಗಂಡ್ಸು!
Team Udayavani, Jul 25, 2018, 6:00 AM IST
ಹೆಣ್ಣಿನ ಬದುಕಿನಲ್ಲಿ ಹೇಗೆ ಕಷ್ಟವಿದೆಯೋ ಗಂಡು ಕೂಡ ಈ ಕಷ್ಟಗಳಿಗೆ ಹೊರತಾಗಿಲ್ಲ. ಅವನ ಜಗತ್ತಿನಲ್ಲಿ ಅವನದೇ ಆದ ಕಷ್ಟಗಳಿವೆ, ನೋವುಗಳಿವೆ. ತನ್ನ ಸುತ್ತ ಮೌನದ ಕೋಟೆ ಕಟ್ಟಿಕೊಂಡೇ ಅವನು ಎಲ್ಲವನ್ನು, ಎಲ್ಲರನ್ನೂ ನಿಭಾಯಿಸುತ್ತಾನೆ. ಗಂಡಾಗಿ ಹುಟ್ಟಿ ಬದುಕುವುದು ಸುಲಭವೇನಲ್ಲ!
ಪುರುಷ ಇದು ಸ್ತ್ರೀಯ ವಿರುದ್ಧಾರ್ಥಕ ಪದವೇ ಇದ್ದಿರಬಹುದು. ಆದರೆ, ಅವನ ಭಾವನೆಗಳು/ ಕಷ್ಟಗಳು ಹೆಣ್ಣಿಗಿಂತ ತೀರಾ ಭಿನ್ನವಾಗೇನೂ ಇಲ್ಲ. ಭಾವನೆ ಹೆಣ್ಣೊಬ್ಬಳ ಸ್ವತ್ತೂ ಅಲ್ಲ. ಗಂಡು ಕೂಡ ಅಳಬಲ್ಲ, ತ್ಯಾಗ ಮಾಡಬಲ್ಲ, ಮೌನದ ಮೊರೆ ಹೋಗಬಲ್ಲ, ತುಟಿಕಚ್ಚಿ ನೋವು ನುಂಗಬಲ್ಲ. ಆಂತರ್ಯದಲ್ಲಿ ಅವನೂ ನೋವು ಅನುಭವಿಸುತ್ತಾನೆ. ಆದರೆ, ಅದ್ಯಾವುದೂ ಈ ಜಗತ್ತಿಗೆ ಕಾಣದೇ ಹೋಗಬಹುದು! ಯಾಕೆಂದರೆ, ಹುಡುಗರಿಗೆ ಬಾಲ್ಯದಿಂದಲೇ “ನೀನು ಗಂಡು, ಅಳಬಾರದು, ನಿನ್ನ ಭಾವನೆಗಳೇನೇ ಇದ್ದರೂ ಅದನ್ನು ವ್ಯಕ್ತಪಡಿಸಬಾರದು’ ಎಂಬ ಧೋರಣೆಯನ್ನೇ ಅವನ ಮನಕ್ಕೆ ತುಂಬಿರುತ್ತಾರೆ. ಹೆಣ್ಣಿಗೆ ಅಳುವುದಕ್ಕಾದರೂ ಸ್ವಾತಂತ್ರ್ಯವಿದೆ. ಆದರೆ, ಗಂಡು? ಅಪ್ಪಿ- ತಪ್ಪಿ ಅವನೆಲ್ಲಿಯಾದರೂ ಅತ್ತರೆ, ಕೇಳುವ ಮೊದಲ ಪ್ರಶ್ನೆ: “ನೀನೇನು ಹೆಣ್ಣಾ ಮಾರಾಯ?’ ಎಂದು. ಹುಡುಗನೊಬ್ಬ ಅತ್ತರೇ ಅದು ಅವನ ಅಸಹಾಯಕತೆ ಎಂದು ಹೇಳಲಾಗುತ್ತದೆ. ಹಾಗಾಗಿ, ಗಂಭೀರವಾದ ಮುಖವಾಡವನ್ನು ಅವನು ಯಾವಾಗಲೂ ತೊಟ್ಟುಕೊಂಡೇ ಇರಬೇಕಾಗುತ್ತದೆ.
ಇನ್ನು ಮಧ್ಯಮ ವರ್ಗದ ಮನೆಯಲ್ಲಿ ಹಿರಿಯ ಮಗನಾಗಿ ಜನಿಸಿದರಂತೂ ಅವನ ವ್ಯಥೆ ಕೇಳುವುದೇ ಬೇಡ. ಅವನ ಬಟ್ಟೆ, ಆಟಿಕೆಯಿಂದ ಹಿಡಿದು ಶಿಕ್ಷಣವನ್ನೂ ತನ್ನ ಒಡಹುಟ್ಟಿದವರಿಗಾಗಿ ತ್ಯಾಗ ಮಾಡಬೇಕಾಗುತ್ತದೆ. ಕುಟುಂಬದ ಜವಾಬ್ದಾರಿಯ ಹೊರೆ ಬೀಳುವುದೂ ಹಿರಿ ಮಗನ ತಲೆ ಮೇಲೆಯೇ. ವಯಸ್ಸಾದ ಅಪ್ಪ- ಅಮ್ಮ, ಮದುವೆಗೆ ತಯಾರಾಗಿ ನಿಂತ ಸಹೋದರಿಯರು, ಕಿರಿಯ ತಮ್ಮನ ಶಿಕ್ಷಣ… ಹೀಗೆ ನೂರೆಂಟು ಜವಾಬ್ದಾರಿ ಅವನನ್ನು ಕಣ್ಣುಮುಚ್ಚಿ ಮಲಗುವುದಕ್ಕೂ ಬಿಡುವುದಿಲ್ಲ. ಮೌನದಲ್ಲಿಯೇ ಅವನು ಸುರಿಸುವ ಕಣ್ಣಿರೂ ಯಾರ ಅರಿವಿಗೂ ಬರುವುದಿಲ್ಲ. ಒಂದು ವೇಳೆ ಕಷ್ಟವೆಂದು ಹೇಳಿದರೆ, ನೆರವಾಗುವವರಿಗಿಂತ ಹೀಯಾಳಿಸುವವರೇ ಹೆಚ್ಚು.
ಕೆಲಸದ ವಿಷಯಕ್ಕೆ ಬಂದರೆ, ಅಲ್ಲೂ ಪುರುಷ ಸುಖೀ ಅಲ್ಲ. ಪ್ರಾಯಕ್ಕೆ ಬಂದಾಗ ತಂದೆ- ತಾಯಿ, ಒಡಹುಟ್ಟಿದವರ ಜವಾಬ್ದಾರಿಗಾಗಿ ಹೆಗಲೊಡ್ಡಿದ ಜೀವ ನಂತರ ತನ್ನ ಸಂಸಾರಕ್ಕಾಗಿ ದುಡಿತ ಶುರುವಿಟ್ಟುಕೊಳ್ಳುತ್ತಾನೆ. ಹೆಂಡತಿಯ ಆಕಾಂಕ್ಷೆಗಾಗಿ, ಮಕ್ಕಳ ಪೋಷಣೆಗಾಗಿ ಅವನಿಗೆ ದುಡಿಮೆ ಅಗತ್ಯ. ಇದೆಲ್ಲ ಸಾಕಪ್ಪಾ ಎಂದು ಒಂದು ನಾಲ್ಕು ದಿನ ಮನೆಯಲ್ಲಿ ಕುಳಿತರೇ ಎಲ್ಲರ ತಾತ್ಸಾರದ ಕಣ್ಣು, ಮೂದಲಿಕೆಯ ಮಾತು ಅವನನ್ನು ತಟ್ಟುತ್ತದೆ. ಹಾಗಾಗಿ, ಯಾವುದೇ ಕೆಲಸಕ್ಕಾದರೂ ಗಂಡು ಅಂಜದೇ ತನ್ನನ್ನೊಡ್ಡಿ ಕೊಳ್ಳಬೇಕಾಗುತ್ತದೆ. ನೆಪ ಹೇಳುವುದಕ್ಕೆ ಅಲ್ಲೂ ಅವನಿಗೆ ಅವಕಾಶವಿಲ್ಲ. ಇಷ್ಟವಿಲ್ಲದ ಕೆಲಸವಾದರೂ ಕಷ್ಟಪಟ್ಟು ಮಾಡಲೇಬೇಕು. ರಾತ್ರಿ ಪಾಳಿಯ ಕೆಲಸವಿದ್ದರೂ, ನಿ¨ªೆ, ಊಟ ಸರಿಯಾಗದೇ ಇದ್ದರೂ ಯಾವುದರ ಬಗ್ಗೆಯೂ ಸೊಲ್ಲೆತ್ತದೇ ದುಡಿಯುವುದಕ್ಕೆ ಸಿದ್ಧನಿರಬೇಕಾದ ಜೀವವದು. ತನ್ನದೇ ವಯಸ್ಸಿನ ಶ್ರೀಮಂತ ವರ್ಗದ ಹುಡುಗರು ಮೋಜು- ಮಸ್ತಿಯಲ್ಲಿ ಇರುವುದನ್ನು ನೋಡಿ ಹೊಟ್ಟೆಯೊಳಗೆ ತುಸು ಸಂಕಟವಾದರೂ ಅವುಡುಗಚ್ಚಿ ವಾಸ್ತವದ ಬದುಕಿನತ್ತ ಮುಖವೊಡ್ಡುತ್ತಾನೆ.
ಇನ್ನು ಮದುವೆ ವಿಷಯದಲ್ಲೂ ಪುರುಷ ಮತ್ತೆ ಅಸಹಾಯಕ. ವಯಸ್ಸಿನ ಸಹಜತೆಯಿಂದ ಅಂಕುರಿಸಿದ ಮೊದಲ ಪ್ರೀತಿಯನ್ನೂ ದಕ್ಕಿಸಿಕೊಳ್ಳುವುದಕ್ಕೆ ಆಗದ ಸ್ಥಿತಿ ಅವನದ್ದು. ಮನೆಯಲ್ಲಿ ಮದುವೆಯ ವಯಸ್ಸಿಗೆ ಬಂದ ಅಕ್ಕ- ತಂಗಿಯಂದಿರೂ ಇದ್ದಾರೆ ಎಂಬ ಯೋಚನೆಯೊಂದು ಅವನ ತಲೆಯಲ್ಲಿ ಓಡಾಡುತ್ತಲೇ ಇರುತ್ತದೆ. ತನಗೆ ಮದುವೆಯ ವಯಸ್ಸು ದಾಟುತ್ತಿದ್ದರೂ, ಒಡಹುಟ್ಟಿದ ಸಹೋದರಿಯ ಮದುವೆಯ ನಂತರವೇ ತಾನು ಹೊಸ ಬಾಳಿಗೆ ಕಾಲಿಡಬೇಕು ಎಂಬ ಸಂಪ್ರದಾಯದ ಕಟ್ಟಳೆಗೆ ಒಗ್ಗಿಕೊಂಡಿರುತ್ತಾನೆ ಗಂಡು. ಮತ್ತೆ ಅಲ್ಲಿ ತನ್ನ ಆಸೆ, ಕನಸುಗಳನ್ನು ತ್ಯಾಗಮಾಡುತ್ತಾನೆ.
ತನ್ನೆಲ್ಲಾ ಸ್ನೇಹಿತರು ಮದುವೆಯಾಗಿ ಅವರವರ ಸಂಸಾರದ ಜತೆ ನೆಮ್ಮದಿಯಾಗಿರುವುದನ್ನು ನೋಡಿ ನೋವಾದರೂ ತನ್ನ ಮುಖದ ಮೇಲೊಂದು ಗಂಭೀರತೆಯ ಸೋಗು ಹಾಕಿಕೊಂಡೇ ಜೀವಿಸುತ್ತಾನೆ.
ಹೆಣ್ಣಿಗೆ ತನ್ನ ಭಾವನೆಯನ್ನು ವ್ಯಕ್ತಪಡಿಸುವುದಕ್ಕೆ ಹಲವು ವಿಧಗಳಿವೆ. ಆದರೆ, ಗಂಡು ತನ್ನ ಭಾವನೆಗಳನ್ನು ಹಿಡಿದಿಡುವುದರಿಂದ ಒತ್ತಡದಿಂದಲೇ ಜೀವನ ಸಾಗಿಸಬೇಕಾಗುತ್ತದೆ. ಸಂಶೋಧನೆಯ ಪ್ರಕಾರ, ಹೆಣ್ಣಿಗಿಂತ ಗಂಡೇ ಹೆಚ್ಚಾಗಿ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಾರಂತೆ. ಏಕೆಂದರೆ, ಅವನಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶವೇ ಇರುವುದಿಲ್ಲ!
ಇನ್ನು ತನ್ನ ಸಂಸಾರ, ತಂದೆ- ತಾಯಿಯನ್ನೆಲ್ಲ ಬಿಟ್ಟು ಪರವೂರಿನಲ್ಲಿ ಕೆಲಸ ಮಾಡುತ್ತಿದ್ದರಂತೂ ಅವನ ಗೋಳು ದೇವರಿಗೆ ಪ್ರೀತಿ. ಹೊತ್ತು ಹೊತ್ತಿಗೆ ಸರಿಯಾದ ಊಟವಿಲ್ಲದೆ, ನಿದ್ದೆಯೂ ಸರಿಯಿಲ್ಲದೇ, ಅವನು ಅನುಭವಿಸುವ ನೋವು ಅವನಿಗಷ್ಟೇ ಗೊತ್ತಿರುತ್ತದೆ. ತಮ್ಮ ನೋವನ್ನು ಮನೆಯವರೊಂದಿಗೆ ಹೇಳಿಕೊಂಡರೇ ಅವರೆಲ್ಲಿ ಬೇಸರಗೊಳ್ಳುತ್ತಾರೋ ಎಂದು ಸಹಿಸಿಕೊಳ್ಳುವಿಕೆಗೆ ಮತ್ತೆ ಮತ್ತೆ ತನ್ನನ್ನು ಒಗ್ಗಿಸಿಕೊಳ್ಳುತ್ತಾನೆ ಗಂಡು.
ಮನಸ್ಸಿಲ್ಲದಿದ್ರೂ ಕಷ್ಟಪಟ್ಟು ಶಾಪಿಂಗ್ ಮಾಡ್ತಾನೆ..!
ಕೆಲವೊಂದು ಸಮಯದಲ್ಲಿ ಗಂಡು ಕೂಡ ಕೆಲವೊಮ್ಮೆ ಒಂಟಿಯಾಗಿರಲು ಬಯಸುತ್ತಾನೆ. ಆದರೆ, ಸಂಸಾರದ ಬಂಧನದಲ್ಲಿರುವಾಗ ಇದೆÇÉಾ ಆಗುಹೋಗುವ ಮಾತೇ? ತನ್ನ ಕುಟುಂಬವನ್ನು ಸಂತೋಷದಲ್ಲಿಡುವುದಕ್ಕಾಗಿ ಕೆಲವೊಮ್ಮೆ ಮನಸ್ಸಿಲ್ಲದಿದ್ದರೂ ಹೆಂಡತಿಯ ಜತೆ ಶಾಪಿಂಗ್ ಹೋಗಲೇಬೇಕು. ಹಾಗೇ, ಮಕ್ಕಳ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸುವುದೂ ಅವನ ಕರ್ತವ್ಯವಾಗಿರುತ್ತದೆ. ಇನ್ನು ತನ್ನ ಭಾವನೆಗಳಿಗೆ ಬೆಲೆಕೊಡದೇ ತನ್ನ ಹಕ್ಕನ್ನು ಮಾತ್ರ ಚಲಾಯಿಸುವ ಹೆಂಡತಿಯಿದ್ದರೇ, ಆ ಗಂಡಿನ ಪಾಡು ಮತ್ತಷ್ಟು ಹೀನಾಯವಾಗಿರುತ್ತದೆ. ಹೊರಗಡೆ ಕಷ್ಟಪಟ್ಟು ದುಡಿದು ಮನೆಗೆ ಬಂದರೆ, ಸಂತೈಸಿ, ಪ್ರೀತಿಸಬೇಕಾದ ಮಡದಿ, ನಿಮ್ಮನ್ನು ಕಟ್ಟಿಕೊಂಡು ನಾನೇನು ಸುಖಪಟ್ಟೇ? ನನ್ನ ಜೀವನ ಹಾಳಾಗಿ ಹೋಯಿತು ಎಂತಿದ್ದರೇ, ಆ ಗಂಡು ತನ್ನ ಜೀವನದಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾನೆ.
ಸತೀಶ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.