ನ್ಯೂ ಇಯರ್ ನ್ಯೂ ಮಿ
ನನ್ನ ಸ್ಟೈಲು ಬೇರೇನೆ, ನನ್ನ ಲುಕ್ಕು ಬೇರೇನೆ...
Team Udayavani, Jan 1, 2020, 5:09 AM IST
ಹೊಸ ವರ್ಷದ ಮೊದಲ ದಿನ ಡಿಫರೆಂಟ್ ಅಂಡ್ ಸ್ಟೈಲಿಶ್ ಲುಕ್‌ನಲ್ಲಿ ಆಫೀಸ್‌ಗೆ/ ಕಾಲೇಜಿಗೆ ಹೋಗಬೇಕು ಎಂಬುದು ಎಲ್ಲರ ಆಸೆ. ಹಳೆಯ ವರ್ಷಗಳಲ್ಲಿ ಟ್ರೈ ಮಾಡಿರದ, ಹೊಸತೊಂದು ಹೇರ್‌ಸ್ಟೈಲ್/ ಉಡುಪನ್ನು ಈ ಬಾರಿ ನಿಮ್ಮದಾಗಿಸಿಕೊಳ್ಳಿ. ತೊಟ್ಟ ಉಡುಗೆ ಸಿಂಪಲ್ ಆಗಿದ್ದರೆ, ಮೇಕಪ್ ಗ್ರ್ಯಾಂಡ್ ಆಗಿರಲಿ. ಒಂದು ವೇಳೆ, ಉಡುಗೆಯೇ ಗ್ರ್ಯಾಂಡ್ ಆಗಿದ್ದರೆ ಮೇಕಪ್ ಕಡಿಮೆ ಇರಲಿ…
ಹೊಸ ವರ್ಷದ ಹುರುಪೇ ಒಂದು ಥರ! ಜನವರಿ ಒಂದು ಎಂದರೆ, ಪದಗಳಲ್ಲಿ ಬಣ್ಣಿಸಲಾಗದ ಖುಷಿ, ಉತ್ಸಾಹ ಮತ್ತು ಸಡಗರ ಬಹುತೇಕ ಎಲ್ಲರಲ್ಲೂ ಮೂಡುತ್ತದೆ. ಉರುಳಿ ಹೋದ ವರ್ಷ, ನಡೆದು ಹೋದ ಘಟನೆ, ಹಳೆಯ ವಿಚಾರಗಳೆಲ್ಲವನ್ನೂ ಹಿಂದಕ್ಕೆ ಬಿಟ್ಟು, ಮುಂದಕ್ಕೆ ಸಾಗುವ ಸಮಯವಿದು. ಈ ಹೊಸ ಹಾದಿಯಲ್ಲಿ ಎಲ್ಲವೂ ಹೊಸತಾಗಿರಬೇಕು ಎಂಬುದು ಹಲವರ ಬಯಕೆ. ಹಾಗಾಗಿ, ಕೆಲವರು ಹೊಸ ಹೇರ್‌ಸ್ಟೈಲ್ ಪ್ರಯೋಗ ಮಾಡಿದರೆ, ಇನ್ನು ಕೆಲವರು ಹೊಸ ಉಡುಪು ಖರೀದಿಸುತ್ತಾರೆ. ಒಟ್ಟಿನಲ್ಲಿ ಮೇಕ್ ಓವರ್ ಮಾಡಿಕೊಂಡು ಹೊಸ ವ್ಯಕ್ತಿಯಂತೆ ಕಾಣಲು, ಹೊಸ ವ್ಯಕ್ತಿತ್ವ ಪಡೆಯಲು ಎಲ್ಲರೂ ಮುಂದಾಗುತ್ತಾರೆ. ನೀವೂ ಕೂಡಾ 2020ಕ್ಕೆ ಹೊಸ ಲುಕ್ ಪಡೆಯಬೇಕು ಅಂತಿದ್ದರೆ, ಇಲ್ಲಿವೆ ಕೆಲವು ಉಪಯುಕ್ತ ಟಿಪ್ಸ್
ಕೇಶ “ಪ್ರಯೋಗ’
ವ್ಯಕ್ತಿಯೊಬ್ಬನ “ಲುಕ್’ ಅನ್ನೇ ಬದಲಿಸುವ ಶಕ್ತಿ ಕೇಶ ವಿನ್ಯಾಸಕ್ಕಿದೆ. ಬಹಳ ವರ್ಷಗಳಿಂದ ಉದ್ದ ಜಡೆ – ಜುಟ್ಟು ಕಟ್ಟಿಕೊಳ್ಳುತ್ತಿದವರು ಹೇರ್ ಕಟ್ ಮಾಡಿಸಿ ಪಿಕ್ಸಿ, ಆಪಲ…, ಚೈನೀಸ್, ಬಾಬ…, ಶೋಲ್ಡರ್ ಲೆಂಥ್ ಅಥವಾ ಇನ್ನಿತರ ಬಗೆಯ ಶಾರ್ಟ್ ಹೇರ್ ಸ್ಟೈಲ್ ಟ್ರೈ ಮಾಡಬಹುದು. ವರ್ಷಗಳ ಕಾಲ ಗಿಡ್ಡ ಹೇರ್ ಸ್ಟೈಲ್ ಇದ್ದವರು, ಹೇರ್ ಕಟ್ ಮಾಡಿಸದೇ ತಲೆ ಕೂದಲನ್ನು ಉದ್ದ ಬಿಟ್ಟು ನೋಡಿ. ಕಪ್ಪು ಕೂದಲು ಬೋರ್ ಆಯ್ತು ಅನ್ನುವವರು, ಹೊಸ ಬಗೆಯ ಡೈ ಅಥವಾ ಕಲರ್ ಹಚ್ಚಿ, ಹೊಸ ಬಗೆಯ ಕೂದಲು ಪಡೆಯಿರಿ. ಇದರಲ್ಲಿ, ರೂಟ್ಸ್ ಅಂಡ್ ಎಂಡ್ಸ್, ಸ್ಟ್ರೀಕ್ಸ್, ಹೈಲೈಟ್ಸ್, ರೇನ್‌ಬೋ, ಟಚ್ ಅಪ್, ಮುಂತಾದ ಆಯ್ಕೆಗಳಿವೆ. ಪಾರ್ಲರ್‌ಗೆ ಹೋಗಿ ಬೇಕಾದಂತೆ ಬಣ್ಣ ಹಚ್ಚಿಸಿಕೊಳ್ಳಬಹುದು.
ಸ್ಟೆಪ್, ಲೇಯರ್, ಬ್ಯಾಂಗ್ಸ್, ಫ್ರಿಂಜ…, ಚಾಪಿ, ಆಕ್ಟೋಪಸ್, ಫಂಕಿ, ಬಾಯಿಶ್, ಮುಂತಾದ ಹೇರ್ ಕಟ್ ಮಾಡಿಸಿದರೆ, ಸ್ಟೈಲಿಶ್ ಲುಕ್ ನಿಮ್ಮದಾಗುತ್ತದೆ. ಸ್ಟ್ರೇಟ್ ತಲೆ ಕೂದಲು ಇರುವವರು ಪರ್ಮ್, ಕರ್ಲಿ, ವೇವಿ, ಮೆಸ್ಸಿ, ಇತ್ಯಾದಿ ಹೇರ್ ಸ್ಟೈಲ್ ಪ್ರಯೋಗಿಸಬಹುದು. ಗುಂಗುರು ಕೂದಲಿನವರು ಸಿಲ್ಕ… ಪ್ರಸ್ ಅಥವಾ ಕೂದಲು ಸ್ಟ್ರೇಟನ್ ಮಾಡಿಸಿಕೊಳ್ಳಬಹುದು. ಇಷ್ಟು ವರ್ಷವೂ ಕೇವಲ ಜುಟ್ಟು ಹಾಕಿಕೊಳ್ಳುತ್ತಿದ್ದರೆ, ಜಡೆ ಅಥವಾ ಬನ್ (ತುರುಬು) ಟ್ರೈ ಮಾಡಿ ಅಥವಾ ಜುಟ್ಟಿನಲ್ಲೇ ಹೈ ಪೋನಿ, ಲೂಸ್ ಪೋನಿ ಟೇಲ… ಹಾಕಿ, ಹೇಗೆ ಕಾಣಿಸುತ್ತೀರೆಂದು ಚೆಕ್ ಮಾಡಿ.
ಜಡೆಯಲ್ಲೂ ಬಗೆ ಬಗೆಯ ಪ್ರಕಾರಗಳಾದ ಫಿಶ್ ಟೇಲ್, ಪಿಗ್ ಟೇಲ್, ಫ್ರೆಂಚ್ ಬ್ರೇಡ್ ಇವೆ. ಅಷ್ಟೇ ಯಾಕೆ, ತುರುಬು ಕೂಡಾ ಈಗ ಬೋರಿಂಗ್ ಅಲ್ಲ. ಬಗೆಬಗೆಯಲ್ಲಿ ತುರುಬು ಹಾಕಿ, ಹೊಸ ಲುಕ್ ಪಡೆಯಬಹುದು. ಯಾವ ಆಕಾರದ ಮುಖಕ್ಕೆ, ಯಾವ ಬಗೆಯ ಹೇರ್‌ಸ್ಟೈಲ್ ಒಪ್ಪುತ್ತದೆ ಅಂತ ತಿಳಿಸಿಕೊಡುವ ವಿಡಿಯೊಗಳು ಯೂಟ್ಯೂಬ್‌ನಲ್ಲಿ ಸಿಗುತ್ತವೆ.
ಕೊನೆಯದಾಗಿ ಒಂದು ಮಾತು: ಕೂದಲಿನ ಸ್ಟೈಲ್ ಬಗ್ಗೆ ಮಾತ್ರ ಅಲ್ಲ, ಆರೋಗ್ಯದ ಬಗ್ಗೆಯೂ ಈ ವರ್ಷ ಕಾಳಜಿ ಮಾಡಿ. ಪೌಷ್ಟಿಕ ಆಹಾರ ಸೇವಿಸಿ, ಕೂದಲು ಸೊಂಪಾಗಿ ಬೆಳೆಯುವಂತೆ ಮಾಡಿಕೊಳ್ಳಿ.
ಮೇಕಪ್
ಸಿಂಪಲ್ ಮೇಕ್‌ಅಪ್ ಮಾಡಿಕೊಳ್ಳುತ್ತಿದ್ದವರು ಬೋಲ್ಡ್ ಮೇಕ್‌ಅಪ್ ಟ್ರೈ ಮಾಡಬಹುದು. ಪ್ರತಿನಿತ್ಯ ಮೇಕ್ ಅಪ್ ಬಳಸುತ್ತಿದ್ದವರು, ನೋ ಮೇಕ್ ಅಪ್ ಅಥವಾ ಮಿನಿಮಲ್ ಮೇಕ್‌ಅಪ್‌ನಲ್ಲಿ ಹೇಗೆ ಕಾಣುತ್ತೇವೆ ಅಂತ ಟ್ರೈ ಮಾಡಬಹುದು. ಮರೆಯಬಾರದ ವಿಷಯವೆಂದರೆ, ತೊಟ್ಟ ಉಡುಗೆ ಸಿಂಪಲ್ ಆಗಿದ್ದರೆ ಮೇಕ್‌ಅಪ್ ಬೋಲ್ಡ… ಆಗಿರಲಿ ಹಾಗೂ ಆಕ್ಸೆಸರೀಸ್ ಹೈಲೈಟ್ ಆಗಲಿ. ಉಡುಗೆ ಗ್ರ್ಯಾಂಡ್ ಆಗಿದ್ದರೆ ಮೇಕ್‌ಅಪ್ ಮಿನಿಮಲ್ ಆಗಿರಲಿ, ಆಕ್ಸೆಸರೀಸ್ ಕೂಡಾ. ನೈಲ್ ಪಾಲಿಶ್ ಕೂಡ ಮೇಕ್ ಅಪ್‌ನ ಅಂಗವಾಗಿರುವ ಕಾರಣ, ಇದು ಉಗುರಿನ ಬಣ್ಣಕ್ಕೂ ಅನ್ವಯಿಸುತ್ತದೆ.
ಆರಾಮವೇ ಪ್ರಧಾನ
ಸಂದರ್ಭಕ್ಕೆ ಸರಿಯಾಗಿ ಉಡುಗೆ ತೊಡುವುದು ಬಹಳ ಮುಖ್ಯ. ಮೇಕ್ ಓವರ್‌ನ ಅಬ್ಬರದಲ್ಲಿ ಏನೇನೋ ಪ್ರಯೋಗ ಮಾಡಲು ಸಾಧ್ಯವಿಲ್ಲ. ಸಂದರ್ಶನಕ್ಕೆ ಹೋಗುವಾಗ, ಬಹಳಷ್ಟು ಅದ್ಧೂರಿಯಾಗಿರುವ ಉಡುಗೆ ಧರಿಸಬಾರದು. ಅಂಥ ಬಟ್ಟೆಗಳೇನಿದ್ದರೂ ಹಬ್ಬ, ಮದುವೆ, ಮುಂತಾದ ಸಮಾರಂಭಗಳಿಗೇ ಸೀಮಿತ! ಹಾಗೆಂದು ತೀರಾ ಕ್ಯಾಶುವಲ್, ಪಾರ್ಟಿ ವೇರ್, ಬೀಚ್ ವೇರ್, ರಿಪ್ಡ್ ಜೀನ್ಸ್ ಅಥವಾ ನೈಟ್ ಸೂಟ್‌ಗಳನ್ನೂ ಹಾಕಿಕೊಳ್ಳುವಂತಿಲ್ಲ. ಫಾರ್ಮಲ್ಸ… ತೊಡುವುದಾದರೆ ವೆಸ್ಟರ್ನ್ನಲ್ಲಿ ಫಿಟ್ ಇರುವ ಅಂಗಿ ಜೊತೆ ಸ್ಕರ್ಟ್ ಅಥವಾ ಪ್ಯಾಂಟ್ ಹಾಗೂ ಬ್ಲೇಝರ್ ತೊಡಬಹುದು. ಸಾಂಪ್ರದಾಯಿಕ ಶೈಲಿಯ ಸೀರೆ, ಚೂಡಿದಾರ, ಸಲ್ವಾರ್ ಕಮೀಜ್ ಅಥವಾ ಕಾಲರ್ ಇರುವ ಕುರ್ತಿ ಮತ್ತು ಲೆಗಿಂಗ್ಸ್ ತೊಡಬಹುದು. ಸ್ಟೈಲ್‌ಗೆ ಒಪ್ಪುವಂಥ ಪಾದರಕ್ಷೆ ಆಯ್ಕೆ ಮಾಡುವಾಗ, ಅವೆಷ್ಟು ಆರಾಮದಾಯಕ ಎನ್ನುವುದನ್ನೂ ಪರೀಕ್ಷಿಸಿ ನಂತರ ಖರೀದಿಸಿ! ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುವಂಥ ಫರ್ಫ್ಯೂಮ್ ಕೊಂಡುಕೊಂಡರೆ ಜನರು ನಿಮ್ಮನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಉಪಯುಕ್ತವಾಗುತ್ತದೆ.
ಸಂಪೂರ್ಣ ಮೇಕ್ ಓವರ್‌ಗಾಗಿ
-ಹೊಸ ಕೇಶ ವಿನ್ಯಾಸ
-ಹೊಸ ಮೇಕ್‌ಅಪ್ ಸ್ಟೈಲ್
-ಹೊಸ ಆಕ್ಸೆಸರೀಸ್
-ಹೊಸ ನೈಲ್ ಆರ್ಟ್
-ಹೊಸ ಡ್ರೆಸ್ಸಿಂಗ್ ಸ್ಟೈಲ್
-ಹೊಸ ಫರ್ಫ್ಯೂಮ್
-ಅದಿತಿಮಾನಸ ಟಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.