ಕೆಲಸದ ನಡುವೆ ಕಂದ ಬಂದಾಗ…


Team Udayavani, Nov 15, 2017, 6:15 AM IST

pregnant.jpg

ದುಡಿವ ಜಗತ್ತಿನಲ್ಲಿ ಹೆಣ್ಣು ಬಲು ಎತ್ತರದಲ್ಲಿ ನಿಲ್ಲುತ್ತಿದ್ದಾಳೆ. ಪುರುಷನಿಗೆ ಪ್ರತಿ ಹೆಜ್ಜೆಯಲ್ಲೂ ಅವಳು ಪೈಪೋಟಿ ಒಡ್ಡುತ್ತಿದ್ದಾಳೆ. ಹಲವು ಸಲ ಆತನನ್ನೇ ಮೀರಿಸುತ್ತಾಳೆ. ಅತ್ಯುನ್ನತ ಸ್ಥಾನಮಾನಗಳನ್ನು ಅಲಂಕರಿಸುತ್ತಿದ್ದಾಳೆ. ಆದರೆ, ಆಕೆಯ ಈ ವೇಗದ ಕೆರಿಯರ್‌ ಬದುಕು ಕೊಂಚ ಬ್ರೇಕ್‌ ಹಾಕಿ ನಿಲ್ಲೋದು, ತುಸು ನಿಧಾನವಾಗಿ ಸಾಗುವುದು ಪ್ರಗ್ನೆನ್ಸಿ ಅವಧಿಯಲ್ಲಿ. ಉದ್ಯೋಗಿ ಮಹಿಳೆ ಗರ್ಭ ಧರಿಸಿದಾಗ, ಕೆಲಸದೊತ್ತಡವನ್ನು ನಿಭಾಯಿಸುವುದೂ ಒಂದು ಕಲೆ.

ಮೊದಲಿನಷ್ಟು ವೇಗದಲ್ಲಿ, ಏಕಾಗ್ರತೆ ವಹಿಸಿ, ಕೆಲಸ ಮಾಡುವುದು ಆ ವೇಳೆ ಕೊಂಚ ಕಷ್ಟವಾಗಬಹುದು. ಶರೀರ ಮತ್ತು ಮನಸ್ಸು ಮೊದಲಿನಂತೆ ಸ್ಪಂದಿಸದೇ ಹೋಗಬಹುದು. ಇವೆಲ್ಲ ಸವಾಲುಗಳನ್ನು ಮೆಟ್ಟುತ್ತಲೇ, ಕಚೇರಿಯಲ್ಲೂ ಆಕೆ ಸೈ ಎನಿಸಿಕೊಳ್ಳಲು ಹತ್ತಾರು ದಾರಿಗಳಿವೆ. ಗರ್ಭದಲ್ಲಿನ ಕಂದನ ಆರೋಗ್ಯದ ಕಡೆಯೂ ಗಮನ ಕೊಡುತ್ತಾ, ಆಕೆ ಉಭಯಸಾಹಸ ಮೆರೆಯುವುದು ಬಲು ಸುಲಭ.

– ಆದಷ್ಟು ಪೌಷ್ಟಿಕ ಆಹಾರಗಳನ್ನೇ ಸೇವಿಸಿ. ಧಾನ್ಯ, ಸೊಪ್ಪುಗಳಲ್ಲದೇ ಮೀನು, ಮೊಟ್ಟೆ, ಹಾಲು- ತುಪ್ಪದಂಥ ಪ್ರೊಟೀನ್‌ಯುಕ್ತ ಆಹಾರಗಳನ್ನು ಸೇವಿಸಿದರೆ, ಕಚೇರಿ ಅವಧಿಯ ದಣಿವನ್ನು ದೂರ ಮಾಡಬಹುದು. ಅಲ್ಲದೇ, ಕಚೇರಿಗೆ ನಾಲ್ಕೈದು ಪುಟ್ಟ ಪುಟ್ಟ ಬಾಕ್ಸ್‌ಗಳನ್ನು, ಅದರಲ್ಲಿ ಬೇರೆ ಬೇರೆ ರೀತಿಯ ಆಹಾರಗಳನ್ನು ಕೊಂಡೊಯ್ಯಿರಿ. ಎರಡೆರಡು ಗಂಟೆ ಅವಧಿಯಲ್ಲಿ ಅದನ್ನು ಲಘುವಾಗಿ ಸೇವಿಸುತ್ತಿರಿ. ಆದಷ್ಟು ನೀರು ಕುಡಿಯುತ್ತಿರಿ. 

– ಮೊದಲಿನಂತೆ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೆ, ಆ ಬಗ್ಗೆ ಕೊರಗು ಬೇಡ. ಒಮ್ಮೆ ಬಾಸ್‌ ಅನ್ನು ಸಂಪರ್ಕಿಸಿ, ಈ ಬಗ್ಗೆ ಹೇಳಿಕೊಳ್ಳಿ. ಮಾನವೀಯತೆ ಅನ್ನೋ ಅಂಶ ಈ ವೇಳೆ ವಕೌìಟ್‌ ಆಗಿಯೇ ಆಗುತ್ತೆ. ಆಗ ತೀರಾ ಒತ್ತಡ ಎನಿಸುವ, ಕಠಿಣ ಎನಿಸುವ ಕೆಲಸಗಳಿಂದ ಕೊಂಚ ರಿಯಾಯಿತಿ ಸಿಗುತ್ತದೆ.

– ಡೆಸ್ಕ್ ಕೆಲಸ ಇದ್ದವರು ಸದಾ ಕುಳಿತೇ ಇದ್ದರೆ, ರಕ್ತ ಸಂಚಾರಕ್ಕೆ ಕಷ್ಟವಾಗುತ್ತದೆ. ಕಾಲು ಊದಿಕೊಳ್ಳುತ್ತದೆ. ಕೆಲವರಿಗೆ ಮುಖ ದಪ್ಪಗಾಗುತ್ತದೆ. ಹಾಗಾಗಿ, ಪ್ರತಿ ಅರ್ಧ ತಾಸಿಗೊಮ್ಮೆ ಪುಟ್ಟ ವಾಕಿಂಗ್‌ ಮಾಡಿ. 

– ಕಂಪ್ಯೂಟರಿನಲ್ಲಿಯೇ ಮುಳುಗಿ ಹೋಗೋದು ಬೇಡ. ಪ್ರತಿ ಹತ್ತು ನಿಮಿಷಕ್ಕೆ ಅತ್ತಿತ್ತ ನೋಡುತ್ತಾ, ಕಣ್ಣಿಗೆ ಆರಾಮದ ಅನುಭವ ನೀಡಿ. ಕಣ್ಣು ದಣಿದಷ್ಟು ಮೆದುಳು ಕೂಡ ಆಯಾಸಗೊಳ್ಳುತ್ತದೆಂಬ ಸಂಗತಿ ಗೊತ್ತಿರಲಿ.  

– ಕಚೇರಿ ಅಂದಮೇಲೆ ಗಾಸಿಪ್‌ ಇಲ್ಲದೇ ಇರುತ್ತದೆಯೇ? ಇಂಥ ಮಾತುಕತೆ ಏರ್ಪಟ್ಟಾಗಲೆಲ್ಲ, ಮೌನ ವಹಿಸಿ. ಅದನ್ನು ಕೇಳುತ್ತಾ ಸುಮ್ಮನೆ ಎಂಜಾಯ್‌ ಮಾಡಿ ಅಷ್ಟೇ. ಪ್ರತಿಕ್ರಿಯಿಸಲು ಹೋಗಬೇಡಿ. ಗಾಸಿಪ್‌ಗ್ಳು ನಿಮ್ಮ ಮನಸ್ಸಿನಲ್ಲಿ ಯಾವುದೇ ಕಂಪನ ಸೃಷ್ಟಿಸದಂತೆ ನೋಡಿಕೊಳ್ಳಿ.

– ಕಚೇರಿಯಲ್ಲಿ ಇದ್ದಷ್ಟು ಹೊತ್ತು ನಗುತ್ತಾ ಇರಿ. ಕೆಲಸದ ಒತ್ತಡದ ಅನುಭವ ಮುಖದಲ್ಲಿ, ನಿಮ್ಮ ವರ್ತನೆಗಳಲ್ಲಿ ಪ್ರಕಟಗೊಳ್ಳದಂತೆ ನೋಡಿಕೊಳ್ಳಿ.

– ಗರ್ಭಿಣಿ ಅಂದಾಕ್ಷಣ ಮನೆಯ ಸದಸ್ಯರೆಲ್ಲ ಪ್ರೀತಿಯಿಂದ ಕಾಣುತ್ತಾರೆ. ಅಂಥದ್ದೇ ವಾತಾವರಣ ಕಚೇರಿಯಲ್ಲೂ ಸಿಗುತ್ತದೆ. ಹಾಗಾಗಿ, ಯಾರ ಮೇಲೂ ಮುನಿದು, ಸಂಬಂಧ ಹಾಳು ಮಾಡಿಕೊಳ್ಳದಿರಿ.

– ಸರಳ ಯೋಗ, ಪ್ರಾಣಾಯಮಗಳನ್ನು ಅನುಸರಿಸುತ್ತಾ, ದೇಹಕ್ಕೆ- ಮನಸ್ಸಿಗೆ ರಿಲ್ಯಾಕ್ಸ್‌ ನೀಡಿ.

– ಆಫೀಸಿಗೆ ಹೋಗುವಾಗ ಬಿಗಿ ಉಡುಪುಗಳನ್ನು ಧರಿಸದೆ ಇರುವುದೇ ಉತ್ತಮ. ಬಿಗಿ ಉಡುಪು ಧರಿಸಿದಾಗ, ಉಸಿರಾಟಕ್ಕೆ ಕಷ್ಟವಾಗುತ್ತದೆ. ರಕ್ತಸಂಚಾರಕ್ಕೂ ಅಡೆತಡೆಯಾಗುತ್ತದೆ. 7-8 ತಾಸು ಹೀಗೆ ಶರೀರವನ್ನು ಹಿಂಸೆಗೆ ದೂಡುವುದು ಕಂದನ ಆರೋಗ್ಯಕ್ಕೂ ಒಳ್ಳೆಯದಲ್ಲ. ಈ ಕಾರಣ, ಸಡಿಲ ಉಡುಪುಗಳಿಗೆ ಹೆಚ್ಚು ಆದ್ಯತೆ ಕೊಡಿ.

– ಪ್ರಗ್ನೆನ್ಸಿ ಅಂದರೆ, ಅದು ಕೆರಿಯರ್‌ಗೆ “ಬ್ರೇಕ್‌’ ಅಲ್ಲ. ಸಹೋದ್ಯೋಗಿಗಳೊಂದಿಗೆ ಸ್ಪರ್ಧೆಯಿದೆ, ನಾನು ಹಿಂದುಳಿದಿದ್ದೇನೆ ಎಂಬುದನ್ನೇ ತಲೆಯಿಂದ ತೆಗೆದುಹಾಕಿ. ಅವರೆಷ್ಟೇ ಮುಂದಕ್ಕೆ ಹೋದರೂ, ಮುಂದೊಂದು ದಿನ ಒಂದಾದರೂ ಸಿಗ್ನಲ್‌ನಲ್ಲಿ ನಿಲ್ಲಲೇಬೇಕಲ್ಲವೇ? ಆಗ ನೀವು ವೇಗವಾಗಿ ಹೋದರೆ ಆಯಿತಷ್ಟೇ.

– ಶಾರ್ವರಿ

ಟಾಪ್ ನ್ಯೂಸ್

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.