ಹೇಳೇ ಗೆಳತಿ

ನಿಂಗೆ ಮದುವೆ ಯಾಕೆ ಬೇಡ?

Team Udayavani, Jul 24, 2019, 5:00 AM IST

x-1

ಹುಡುಕೋಣವೇನೇ?’- ಅಮ್ಮನ ಪ್ರಶ್ನೆ,
“ಹುಡುಗನಾ! ಯಾರಿಗೆ?’ ಮಗಳಿಂದ, ಹೌಹಾರಿದಂತೆ ಮರುಪ್ರಶ್ನೆ.
ಅಮ್ಮ ಆಶ್ಚರ್ಯದಿಂದ, “ಮತ್ತಿನ್ಯಾರಿಗೆ? ನಿಂಗೇನೆ, ಮದುವೆ ಆಗೋದಿಲ್ವಾ?’
“ಮದುವೆಗೆ ನಾನಿನ್ನೂ ರೆಡಿಯಾಗಿಲ್ಲ’
ಮತ್ತಷ್ಟು ಕುತೂಹಲದಿಂದ ಅಮ್ಮ, “ಯಾಕೆ? ಈಗ ಆಗದಿದ್ದರೆ ಮತ್ತಿನ್ಯಾವಾಗ?’
“ಅಯ್ಯೋ ಹೋಗಮ್ಮ, ಮದುವೆಯಾದರೆ ಕನಸುಗಳೆಲ್ಲಾ ನುಚ್ಚುನೂರಾದಂತೆ. ನನ್ನಿಷ್ಟದ ಪ್ರಕಾರ ನಾನು ಇರಲು ಮದುವೆ ಅಡ್ಡಿಯಾಗುತ್ತೆ’
ಮಗಳ ಮಾತಿಗೆ ಏನು ಹೇಳಬೇಕೆಂದು ತೋಚದೆ, ಅಮ್ಮ ಬೇಸತ್ತು ಸುಮ್ಮನಾಗುತ್ತಾಳೆ.

ಗೆಳತಿ, ಈ ತರಹದ ಸಂಭಾಷಣೆಗಳನ್ನು ನೀನು ಕೇಳಿರಬಹುದು ಅಥವಾ ನೀನೇ ಅಮ್ಮನಿಗೆ ಹೀಗೆ ಎದುರುತ್ತರ ನೀಡಿರಲೂಬಹುದು. ಓದು ಮುಗಿಯಿತು, ಕೆಲಸವೂ ಸಿಕ್ಕಿತು. ಇನ್ನೇನು ಮಗಳು ಸ್ವಾವಲಂಬಿಯಾದಳು, ಮದುವೆ ಮಾಡೋಣವೆಂದು ಹೆತ್ತವರು ತಯಾರಾದರೆ, ಆಗಲೇ ನಿನ್ನಿಂದ ಬೀಳುತ್ತೂಂದು ಸಿಡಿಮದ್ದು. ಉನ್ನತ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ತೆರಳಬೇಕು, ಕನಿಷ್ಠ ಕೆಲವು ವರ್ಷಗಳಾದರೂ ಕೆಲಸ ಮಾಡಿ ಉತ್ತಮ ಹು¨ªೆಗೇರಬೇಕು, ತಮ್ಮನಧ್ದೋ, ತಂಗಿಯಧ್ದೋ ಓದು ಮುಗಿಯಲಿ… ಹೀಗೆ ಮದುವೆಯಿಂದ ತಾತ್ಕಾಲಿಕವಾಗಿ ದೂರ ಉಳಿಯಲು ಹಲವು ಕಾರಣಗಳನ್ನು ಮುಂದಿಡುತ್ತೀಯ ನೀನು. ಹೌದಲ್ಲವಾ?

ನೀನು ಮಾತ್ರ ಅಲ್ಲ, ಬಹುತೇಕ ಎಲ್ಲ ಹೆಣ್ಣುಮಕ್ಕಳೂ ಹಾಗೇ. ಮೊದಲೆಲ್ಲ, ಹೆತ್ತವರು ಹೇಗೆ ಹೇಳುತ್ತಾರೋ, ಹಾಗೆ ಒಪ್ಪುತ್ತಿದ್ದವರು, ಈಗೀಗ ಸ್ವಂತ ಕಾಲ ಮೇಲೆ ನಿಂತಿರುವ ಕಾರಣದಿಂದ ಹೆತ್ತವರ ಮಾತನ್ನು ವಿರೋಧಿಸುವುದೇ ಜಾಸ್ತಿ. ಅಮ್ಮ, “ನಮ್ಮ ಕಾಲದಲ್ಲಿ ಹೀಗಿರಲಿಲ್ಲ’ ಅಂತ ಬಾಯಿ ಬಿಟ್ಟೊಡನೆ, “ನೀನು ಹಳೆ ಜಮಾನದವಳು’ ಎಂದು ಅಮ್ಮನ ಬಾಯಿ ಮುಚ್ಚಿಸುವುದು ಹೆಣ್ಮಕ್ಕಳಿಗೆ ಗೊತ್ತಿದೆ.

ಶಾಲೆ ಕಾಲೇಜಿನಲ್ಲಿ ಇರುವಾಗ, ಎಲ್ಲಾ ವಿಷಯಗಳನ್ನು ಅಮ್ಮನಿಗೆ ಹೇಳಬೇಕು, ಇಲ್ಲವಾದಲ್ಲಿ ಸಮಾಧಾನವಿಲ್ಲ ಅನ್ನುತ್ತಿದ್ದವಳು ನೀನೇ ಅಲ್ವಾ? ಆದರೀಗ ಕೆಲಸಕ್ಕೆ ಸೇರಿ, ಹಣ ಸಂಪಾದಿಸಲು ಶುರು ಮಾಡಿದೊಡನೆ ಮಾತನ್ನೇ ಕಡಿಮೆ ಮಾಡಿದ್ದೀಯ. ಅಪ್ಪನ ದುಡ್ಡೇನೂ ಬೇಕಾಗಿಲ್ಲ, ತನ್ನದೇ ಇದೆ. ಇನ್ನು ಯಾರ ಮುಂದೆಯೂ ಕೈಚಾಚಬೇಕಿಲ್ಲವೆಂಬ ಅಹಂ ಜೊತೆ, ಸಣ್ಣ ಮಕ್ಕಳ ತರಹ ಯಾಕೆ ಎಲ್ಲವನ್ನೂ ಅಮ್ಮ-ಅಪ್ಪನ ಮುಂದೆ ಒಪ್ಪಿಸಬೇಕೆಂಬ ವಾದ ನಿನ್ನದು.

ಗೆಳತಿ, ಇಲ್ಲಿ ಕೇಳು…
ಹಳೆಯ ದಿನಗಳನ್ನು ಸ್ವಲ್ಪ ನೆನಪಿಸಿಕೋ. ಹೆತ್ತವರು ನಿನಗಾಗಿ ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ. ಆಗ ಪರಿಸ್ಥಿತಿ ಹೇಗಿತ್ತು, ಈಗ ಹೇಗಿದೆ ಅನ್ನೋದನ್ನು ತಾಳೆ ಹಾಕು. ಈಗ ನೀನು ದುಡಿಯುತ್ತಿದ್ದೀಯ ಅಂದರೆ, ಅದಕ್ಕೆ ನಿನ್ನ ಹೆತ್ತವರು ಕೊಟ್ಟ ಪ್ರೋತ್ಸಾಹವೇ ಕಾರಣ ತಾನೇ? ಮದುವೆ, ಮಕ್ಕಳು ಇದೆಲ್ಲ ವೈಯಕ್ತಿಕ ವಿಷಯಗಳು; ಒಪ್ಪಿಕೊಳ್ಳೋಣ. ಹಾಗೆಂದು, ಅಪ್ಪ ಅಮ್ಮ ಕೂಡ ಕೇಳಬಾರದಂಥ ಖಾಸಗಿ ವಿಷಯವಾ ಅದು? ನನ್ನನ್ನು ನನ್ನ ಇಷ್ಟಕ್ಕೆ ಬಿಡಬೇಕು, ಏನೂ ಕೇಳಬಾರದೆಂಬ ನಿಲುವು ನಿನಗಿದ್ದರೆ, ನಿನ್ನ ಹೆತ್ತವರಿಗೂ, ಮುದ್ದಿನ ಮಗಳು ಸ್ವಲ್ಪವಾದರೂ ತಮ್ಮ ಮಾತು ಕೇಳಲಿ ಎಂಬ ಆಸೆ ಇರೋದಿಲ್ಲವೆ? ಹಾಗೆಂದು, ಮನೆಯವರು ತೋರಿಸಿದ ಯಾವುದೋ ಹುಡುಗನ್ನ ಕಟ್ಟಿಕೋ ಅಂತ ಅಲ್ಲ. ಸಮಯ ತೆಗೆದುಕೊಂಡು, ಯೋಚಿಸಿ, ನಿರ್ಧರಿಸು.

ಈ ಮಾತು ನಿನ್ನ ಹೆತ್ತವರಿಗೂ ಅನ್ವಯ. ಕೊರಳು ಒತ್ತಿ, “ತಿನ್ನು ತಿನ್ನು’ ಅಂದರೆ ಊಟ ರುಚಿಸುವುದಿಲ್ಲ. ಹಾಗೇ, ನಿನಗೆ ಹುಡುಗ ಇಷ್ಟವಾಗದಿದ್ದರೂ, “ನೀನು ಇವನನ್ನೇ ಮದುವೆಯಾಗಬೇಕು’, “ಈ ವರ್ಷವೇ ನಿನ್ನ ಮದುವೆಯಾಗಬೇಕು’ ಎಂದೆಲ್ಲಾ ಒತ್ತಾಯ ಮಾಡುವುದೂ ತಪ್ಪು. ನೀನು ಅದನ್ನು ಅವರಿಗೆ ಅರ್ಥ ಮಾಡಿಸಲು ಪ್ರಯತ್ನಿಸು.

ನಿನ್ನ ಬದುಕು ನಿನ್ನದು
ಮದುವೆ ಬಗ್ಗೆ ನೂರು ಜನ, ನೂರು ರೀತಿ ಮಾತನಾಡುತ್ತಾರೆ. ಅದೆಲ್ಲಾ ಅವರವರ ಅನುಭವಗಳು. ಕೆಲವರ ವೈವಾಹಿಕ ಜೀವನ ಸುಖಕರವಾಗಿದ್ದರೆ, ಇನ್ನೂ ಕೆಲವರಿಗೆ ಸುಖವಿಲ್ಲದೇ ಇರಬಹುದು. ಅದನ್ನೆಲ್ಲ ಕೇಳಿ, “ಮದುವೆಯಾದರೆ ಜೀವನವೇ ಸರ್ವನಾಶ’ ಅನ್ನುವ ತಪ್ಪು ಕಲ್ಪನೆ ಬೇಡ! ನಿನ್ನ ಆಸೆ, ಕನಸು, ಕೆರಿಯರ್‌ಗೆ ಬೆಂಬಲ ನೀಡುವ ಸಂಗಾತಿಯೇ ನಿನಗೆ ಜೊತೆಯಾಗಬಹುದು. ಅಂಥವರನ್ನೇ ಆರಿಸಿ, ಮದುವೆಯಾಗು.

ನಿಂಗೆ ಯಾರಾದ್ರೂ ಇಷ್ಟಾನ?
ಹೇ, ಕೇಳ್ಳೋಕೆ ಮರೆತಿದ್ದೆ; ನೀನು ಯಾರನ್ನಾದರೂ ಇಷ್ಟಪಟ್ಟಿದ್ದೀಯ? ಹೌದು ಅಂತಾದ್ರೆ, ಅದನ್ನು ಧೈರ್ಯವಾಗಿ ಮನೆಯವರಲ್ಲಿ ಹೇಳು. ನೀನೂ, ನಿನ್ನ ಹುಡುಗ ಇಬ್ಬರೂ ಸೇರಿ, ಮನೆಯವರನ್ನು ಒಪ್ಪಿಸಿ. ಕೊನೆಯವರೆಗೂ ಜೊತೆಯಾಗಿರ್ತೀವಿ ಅಂತ ಇಬ್ಬರ ಹೆತ್ತವರಲ್ಲಿ ಭರವಸೆ ಮೂಡಿಸಿ. ಅದನ್ನು ಬಿಟ್ಟು, ಮದುವೆ ಮುಂದೂಡಿ, ಅಪ್ಪ-ಅಮ್ಮನನ್ನು ಸತಾಯಿಸಬೇಡ ಕಣೇ!

ಸುಪ್ರೀತಾ ವೆಂಕಟ್‌

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.