ಗರ್ಭಿಣಿ ಏಕೆ ಹುಣಸೆ ಹಣ್ಣು ತಿನ್ನಬೇಕು?
ತಾಯಿ- ಮಗುವಿಗಿರುವ ಲಾಭಗಳೇನು ಗೊತ್ತಾ?
Team Udayavani, May 15, 2019, 6:00 AM IST
ಈಗಷ್ಟೇ ಮದುವೆಯಾದ ಹುಡುಗಿಯರೇನಾದರೂ, “ನಂಗೆ ಹುಳಿ ತಿನ್ಬೇಕು ಅನ್ನಿಸ್ತಿದೆ’ ಅಂದುಬಿಟ್ಟರೆ, ಎಲ್ಲರೂ ಕಣ್ಣರಳಿಸಿ ಕೇಳುವುದೊಂದೇ, “ಏನೇ, ಪ್ರಗ್ನೆಂಟಾ?’ ಅಂತ. ಗರ್ಭಿಣಿಯರಿಗೆ ಹುಣಸೆಹಣ್ಣು, ಮಾವಿನಕಾಯಿ, ಉಪ್ಪಿನಕಾಯಿಯಂಥ ಹುಳಿ ಪದಾರ್ಥಗಳನ್ನು ತಿನ್ನಬೇಕೂಂತ ಆಸೆ ಆಗೋದು ಸಹಜ. ಬಸುರಿ ಬಯಕೆಯನ್ನು ಒಂದೆರಡು ಬಾರಿ ಪೂರೈಸಿದರೂ, ಜಾಸ್ತಿ ಹುಳಿ ತಿನ್ನೋದು ಒಳ್ಳೇದಲ್ಲ ಅಂತಲೂ ಎಚ್ಚರಿಸುತ್ತಾರೆ ಹಿರಿಯರು. ಆದರೆ, ಗರ್ಭಿಣಿಯರು ಹುಣಸೆಹಣ್ಣು ತಿನ್ನುವುದರಿಂದ ನಷ್ಟಕ್ಕಿಂತ, ಲಾಭವೇ ಹೆಚ್ಚು ಅಂತಾರೆ ತಜ್ಞರು. ಹುಣಸೆಹಣ್ಣಿನ ಸೇವನೆಯಿಂದ ತಾಯಿ-ಮಗುವಿಗಿರುವ ಲಾಭಗಳೇನು ಗೊತ್ತಾ?
ಹುಣಸೆ ಹಣ್ಣಿನಲ್ಲಿ ಕಬ್ಬಿಣಾಂಶ ಅಧಿಕವಾಗಿದ್ದು, ಗರ್ಭಿಣಿಯರಲ್ಲಿ ರಕ್ತ ಪರಿಚಲನೆ ಪ್ರಮಾಣವನ್ನು
ಬ್ಯಾಲೆನ್ಸ್‌ನಲ್ಲಿ ಇಡುತ್ತದೆ. ಆ ಮೂಲಕ ಅವಧಿ ಪೂರ್ವ ಹೆರಿಗೆಯಾಗುವುದನ್ನು ತಡೆಯಬಹುದು.
ಕಬ್ಬಿಣಾಂಶ ಅಧಿಕವಾಗಿರುವುದರಿಂದ ಮಗುವಿನ ತೂಕಕ್ಕೂ ಒಳ್ಳೆಯದು.
ಹುಣಸೆಹಣ್ಣಿನಲ್ಲಿರುವ ಪೊಟಾಶಿಯಂ ಅಂಶವು, ಗರ್ಭಿಣಿಯರ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ.
ಗರ್ಭಧಾರಣೆಯ ಮೊದಲ ಮೂರು ತಿಂಗಳಿನಲ್ಲಿ ಹುಣಸೆಹಣ್ಣು ಸೇವಿಸಿದರೆ, ಸುಸ್ತು, ವಾಂತಿಯಂಥ ಸಮಸ್ಯೆಗಳು ಕಾಡುವುದಿಲ್ಲ.
ವಿಟಮಿನ್ ಬಿ3, 4ಗಳನ್ನು ಒಳಗೊಂಡಿರುವ ಹುಣಸೆಹಣ್ಣು, ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಹುಣಸೆಹಣ್ಣು ಸೇವನೆ ಒಳ್ಳೆಯದು. ಆದರೆ, ಅದನ್ನು ಅತಿಯಾಗಿ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂಬುದನ್ನು ನೆನಪಿಡಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.