ಗುರುವಿನ ಗುಲಾಮನೇಕೆ ಆಗಬೇಕು?
Team Udayavani, Apr 22, 2020, 1:23 PM IST
ಸಾಂದರ್ಭಿಕ ಚಿತ್ರ
ನಾರದರು ಭಕ್ತ ಶಿರೋಮಣಿಗಳು, ಭಕ್ತಿಶಾಸ್ತ್ರಕ್ಕೆ ಆಚಾರ್ಯರು ಕೂಡ. ಅವರ ಪೂರ್ವಜನ್ಮದ ಆಖ್ಯಾನವು ಶ್ರೀಮದ್ಭಾಗವತದಲ್ಲಿ ಕಂಡುಬರುತ್ತದೆ. ನಾರದರು, ಋಷಿಗಳ
ಕುಟೀರದಲ್ಲಿ ಕೆಲಸ ಮಾಡುವಾಕೆಯ ಮಗನಾಗಿ ಹುಟ್ಟಿದ್ದರು. 5 ವರ್ಷದ ಬಾಲಕನಾಗಿದ್ದಾಗಲೂ, ಆಟಗಳಲ್ಲಿ ಮನಸ್ಸಿಲ್ಲದೆ, ವೇದ- ವೇದಾಂತ ಹಾಗೂ ಭಗವದ್ಭಕ್ತಿಯಲ್ಲಿ ಮನಸ್ಸುಳ್ಳವರಾದರು.
ಒಮ್ಮೆ ಚಾತುರ್ಮಾಸ್ಯದ ಸಮಯದಲ್ಲಿ, ಅವರು ಇರುವಲ್ಲಿಯೇ ಕೆಲವು ಸಾಧುಗಳು ವಾಸವಾಗಿದ್ದರು. ನಾರದರನ್ನು, ಅವರ ಸಹಾಯಕ್ಕೆ ನೇಮಿಸಲಾಗಿತ್ತು. ನಾರದರು ತೋರುತ್ತಿದ್ದ ಆಸಕ್ತಿ, ಭಗವದ್ರಸದಿಂದಾಗಿ ಅವರಲ್ಲಿ ವಿಶೇಷ ಪ್ರೀತಿ ಉಂಟಾಯಿತು. ತ್ರಿಕಾಲದಲ್ಲೂ ಅವರು ಮಾಡುತ್ತಿದ್ದ ಭಜನೆ, ಕೀರ್ತನೆಗಳಿಂದ, ನಾರದರ ಮನಸ್ಸು ಇನ್ನೂ ಭಗವನ್ಮಯವಾಗಿ, ಸತತವಾಗಿ
ಸಾಧುಗಳು ತೋರಿದ ದಾರಿಯಲ್ಲಿ ನಡೆಯತೊಡಗಿದರು. ಸಾಧುಗಳ ಶುಶ್ರೂಷೆಯಿಂದ, ತಮ್ಮ ಪೂರ್ವ ಕರ್ಮಫಲಗಳನ್ನು ಕಳೆದುಕೊಂಡರು.
ಚಾತುರ್ಮಾಸ್ಯದ ನಾಲ್ಕು ತಿಂಗಳು ಕಳೆಯುತ್ತಿದ್ದಂತೆಯೇ, ಸಂತರು ಅಲ್ಲಿಂದ ಹೊರಟರು. ಆದರೆ ನಾರದರು, ಗುರುವಾಕ್ಯ ಪರಿಪಾಲನೆಯನ್ನು ಹಾಗೆಯೇ ಮುಂದುವರಿಸಿ ದರು. ವಿಧಿವಶಾತ್, ಹಾವಿನ ಕಡಿತದ ಪರಿಣಾಮ ವಾಗಿ ತಾಯಿಯನ್ನು ಕಳೆದುಕೊಂಡರು. ಆದರೆ ಅವರು ಧೃತಿಗೆಡಲಿಲ್ಲ. ವಿಧಿಯ ಆಟವನ್ನ ಸಹಜವಾಗಿ ಸ್ವೀಕರಿಸಿದರು. ಸಂಸಾರದ ಎಲ್ಲ ಬಂಧಗಳೂ ಕಳೆದವೆಂದುಕೊಂಡರು. ವೈರಾಗ್ಯದಿಂದ ಲೋಕಾಟನೆ ಮಾಡುತ್ತಾ, ಗುರುಗಳು ತೋರಿದ ಪಥದಲ್ಲಿ ಮುಂದುವರಿದರು. ದಟ್ಟವಾದ ಅಡವಿಯನ್ನು ಪ್ರವೇಶಿಸಿ, ನಿಶ್ಚಲವಾಗಿ ತಪಸ್ಸನ್ನು ಆಚರಿಸಿದರು. ದೀರ್ಘಕಾಲದ ತಪಸ್ಸಿನ ನಂತರ, ಶ್ರೀಹರಿಯನ್ನು ಸಾಕ್ಷಾತ್ಕಾರ ಮಾಡಿಕೊಂಡು ಧನ್ಯರಾದರು.
ಗುರುವಿನಲ್ಲಿ ನಿಶ್ಚಲ ಭಕ್ತಿ-ನಂಬಿಕೆಗಳು ಸಾಧಕನಿಗೆ ಅತ್ಯವಶ್ಯಕ. ಗುರುವೆಂಬ ಮಾರ್ಗದರ್ಶಕ ಎಲ್ಲರಿಗೂ ಬೇಕೇಬೇಕು. ಗುರು ಭಕ್ತಿಯು ಎಷ್ಟು ಶುದ್ಧವಾಗಿರುತ್ತದೆಯೋ ಅಷ್ಟು ಬೇಗ ಅದು ಫಲಿಸುತ್ತದೆ. ಅಲ್ಪಕಾಲದ ಸಂಗಡವಾದರೂ, ಗುರುವಾಕ್ಯವನ್ನು ನಾರದರು ತನ್ಮಯತೆಯಿಂದ ಜೀವನಾದ್ಯಂತ ಪಾಲಿಸಿದರು. ಭೌತಿಕ ಏಳು ಬೀಳುಗಳನ್ನು ಲೆಕ್ಕಿಸದೆ, ಸತತವಾಗಿ ಸಾಧನೆ ಮುಂದುವರಿಸಿದರು. “ಗುರುವಿನ ಗುಲಾಮ ನಾಗುವ ತನಕ, ದೊರೆಯದಣ್ಣ ಮುಕುತಿ’ ಎಂಬ ದಾಸರ ವಾಕ್ಯವು ಈ ಮನಃಸ್ಥಿತಿಯನ್ನು ತಿಳಿಸುತ್ತದೆ. ಇಲ್ಲಿ ಗುಲಾಮಗಿರಿ ಶೋಷಣೆಯಲ್ಲ.
ಇಂದ್ರಿಯಗಳ ಸ್ವೇಚ್ಛೆಯನ್ನು ತೊರೆದು, ಸಂಯಮದ ನಡತೆಯನ್ನು ಹೇಳುತ್ತದೆ. ಅಂತಹ ಮಧುರವಾದ ಸತ್ಪಥದ ಗುಲಾಮಗಿರಿ ಎಲ್ಲರಿಗೂ ದೊರೆಯುವಂತಾಗಲೆಂದು ಹಾರೈಸೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.