ವ್ಹಾರೆವ್ಹಾ  ವರ್ಲಿ!


Team Udayavani, Oct 3, 2018, 12:41 PM IST

3-s-f.jpg

 ಸೆಲ್‌ಫೋನ್‌ಗಳು, ಇಮೋಜಿಗಳಿಗೂ ಮೊದಲು ಅಸ್ತಿತ್ವದಲ್ಲಿದ್ದ ಸಾಂಪ್ರದಾಯಿಕ ಕಲಾ ಪ್ರಕಾರವೊಂದು ಈಗ ಫ್ಯಾಷನ್‌ ಟ್ರೆಂಡ್‌ ಆಗಿ ಮಾರ್ಪಾಡಾಗಿದೆ. ಆ ಕಲಾಪ್ರಕಾರವೇ ವರ್ಲಿ… 

ಫ್ಯಾಷನ್‌ ಎಂಬುದು ಕಲೆಯನ್ನು ಬೆಳಕಿಗೆ ತರುವುದಷ್ಟೇ ಅಲ್ಲ, ಅವುಗಳನ್ನು ಜೀವಂತವಾಗಿರಿಸುವ ಕೆಲಸವನ್ನೂ ಮಾಡುತ್ತದೆ. ಸೆಲ್‌ಫೋನ್‌ಗಳು, ಇಮೋಜಿಗಳಿಗೂ ಮೊದಲು ಅಸ್ತಿತ್ವದಲ್ಲಿದ್ದ ಸಾಂಪ್ರದಾಯಿಕ ಕಲಾ ಪ್ರಕಾರವೊಂದು ಈಗ ಫ್ಯಾಷನ್‌ ಟ್ರೆಂಡ್‌ ಆಗಿ ಮಾರ್ಪಾಡಾಗಿದೆ. ಆ ಕಲಾಪ್ರಕಾರವೇ ವರ್ಲಿ. ಈಗ, ಈ ವರ್ಲಿ ಕಲೆಯು ಹೆಂಗಳೆಯರ ಉಡುಗೆಗಳಲ್ಲಿ ಮಿಂಚತೊಡಗಿವೆ. 

ವರ್ಲಿ ಪ್ರಿಂಟೆಡ್‌ ಸೀರೆ
ವರ್ಲಿ ಕಲಾತ್ಮಕತೆಯೇ ಮೈದಳೆದಿರುವಂತೆ ಕಾಣುವ ಸೀರೆ. ಸೀರೆಯುದ್ದಕ್ಕೂ ವರ್ಲಿ ಕಲೆಯನ್ನು ಪ್ರಿಂಟ್‌ ಮಾಡಿರಲಾಗುತ್ತದೆ ಅಥವಾ ಪ್ಲೆ„ನ್‌ ಸೀರೆಯ ಅಂಚುಗಳಲ್ಲಿ ಮಾತ್ರ ವರ್ಲಿ ಚಿತ್ರಕಲೆ ಕಾಣುವಂತೆ ಮುದ್ರಿಸಲಾಗಿರುತ್ತದೆ. ವರ್ಲಿ ಪ್ರಿಂಟೆಡ್‌ ಸೀರೆಗಳಲ್ಲಿ ಕಾಟನ್‌ ಮತ್ತು ಸಿಲ್ಕ್ ಎರಡೂ ಆಯ್ಕೆಗಳು ಇರುತ್ತವೆ. ಪ್ಲೇನ್‌ ಸೀರೆ ಇಷ್ಟಪಡುವವರು ಅಂಚುಗಳಲ್ಲಿ ವರ್ಲಿ ಪೇಂಟಿಂಗ್‌ ಇರುವಂಥದ್ದನ್ನು ಆಯ್ದುಕೊಳ್ಳಬಹುದು.

ಕುರ್ತಿಗಳು
ಅತ್ಯಂತ ಸರಳವಾಗಿ ಹಾಗೂ ಸರಾಗವಾಗಿ ಚಿತ್ರ ಬಿಡಿಸಿದಂತೆ ಕಾಣುವ ವರ್ಲಿ ಪ್ರಿಂಟೆಡ್‌ ಕುರ್ತಿಗಳಿಗೆ ಮಾರುಕಟ್ಟೆಗಳಲ್ಲಿ ಬರವಿಲ್ಲ. ವಿವಿಧ ಬಣ್ಣಗಳು, ವಿನ್ಯಾಸಗಳಲ್ಲಿ ಹಾಫ್ ಸ್ಲಿàವ್ಸ್‌, ಫ‌ುಲ್‌ ಸ್ಲಿàವ್ಸ್‌ ಹಾಗೂ ಸ್ವೀಲ್‌ ಲೆಸ್‌ ಕುರ್ತಿಗಳು ಸಿಗುತ್ತವೆ. ಕುರ್ತಿಗಳಲ್ಲೇ ಮದುವೆ ಮೆರವಣಿಗೆ, ಗ್ರಾಮ್ಯ ಬದುಕು ಮತ್ತಿತರ ಚಿತ್ರಣಗಳು ಮೈದಳೆಯುವ ಮೂಲಕ ಧರಿಸಿದವರಿಗೆ ಫ್ಯಾಷನೆಬಲ್‌ ಲುಕ್‌ ನೀಡುತ್ತದೆ.

ದುಪಟ್ಟಾ
ಕಲಂಕಾರಿ ಮಾದರಿಯಲ್ಲೇ ಹೆಣ್ಣುಮಕ್ಕಳನ್ನು ಸೆಳೆದಿರುವ ಮತ್ತೂಂದು ಫ್ಯಾಷನ್‌ ಎಂದರೆ ವರ್ಲಿ ದುಪಟ್ಟಾ. ಮನೆ, ಪ್ರಾಣಿ, ಪಕ್ಷಿಗಳು, ಸ್ನೇಹಿತರ ಗುಂಪು ಹೀಗೆ ಪುಟ್ಟ ಪುಟ್ಟದಾಗಿ ಚಿತ್ರಿಸಲ್ಪಟ್ಟಿರುವ ದುಪಟ್ಟಾಗಳಿಗೆ ಈಗ ಭಾರೀ ಬೇಡಿಕೆಯಿದೆ. ಯಾವ ಉಡುಪು ಧರಿಸಿದರೂ, ಕುತ್ತಿಗೆಗೆ ದುಪಟ್ಟಾವೊಂದನ್ನು ಸುತ್ತಿಕೊಂಡು ಅಡ್ಡಾಡುತ್ತಿದ್ದರೆ ಆ ಸ್ಟೈಲ್‌ನ ಗಮ್ಮತ್ತೇ ಬೇರೆ.

ಜಾಕೆಟ್‌
ಕುರ್ತಿಗಳು, ಚೂಡಿದಾರ್‌ ಅಥವಾ ಟಿ-ಶರ್ಟ್‌ಗಳ ಮೇಲೆ ಧರಿಸುವ ಶಾರ್ಟ್‌ ಅಥವಾ ಲಾಂಗ್‌ ಜಾಕೆಟ್‌ಗೂ ಈಗ ವರ್ಲಿ ಆರ್ಟ್‌ ಲಗ್ಗೆಯಿಟ್ಟಿದೆ. ವರ್ಲಿ ಕಲೆಯೇ ತುಂಬಿ ತುಳುಕುತ್ತಿರುವ ಜಾಕೆಟ್‌ಗಳು ಪ್ಲೇನ್‌ ಉಡುಗೆಗೆ ಚೆನ್ನಾಗಿ ಒಪ್ಪುತ್ತದೆ.

ವರ್ಲಿ ಸ್ಕರ್ಟ್‌
ಫ್ಯಾಷನ್‌ ಲೋಕಕ್ಕೆ ಮತ್ತೆ ಮರಳಿರುವ ಲಾಂಗ್‌ ಸ್ಕರ್ಟ್‌ ಟ್ರೆಂಡ್‌ನ‌ಲ್ಲಿ ವರ್ಲಿ ಆರ್ಟ್‌ನ ಪ್ರಭಾವವೂ ಇಲ್ಲದಿಲ್ಲ. ಬುಡಕಟ್ಟು ಜನಾಂಗದ ಬದುಕಿಗೆ ಬೆಳಕು ಚೆಲ್ಲುವ, ಆ ಜನಾಂಗದ ಕಥೆಗಳನ್ನು ಹೇಳುವ ವರ್ಲಿ ಕಲೆಗಳ ಮುದ್ರಣವಿರುವ ಉದ್ದನೆಯ ಲಂಗಗಳಿಗೂ ಭಾರೀ ಡಿಮ್ಯಾಂಡ್‌ ಇದೆ.

ವರ್ಲಿಯ ಮೂಲ ಎಲ್ಲಿ?
ಗುಜರಾತ್‌ ಮತ್ತು ಮಹಾರಾಷ್ಟ್ರದಲ್ಲಿ ಕಂಡುಬರುವ ಬುಡಕಟ್ಟು ಜನಾಂಗವೊಂದರ ಹೆಸರೇ ವರ್ಲಿ. ಅವರ ಕಲಾ ಪ್ರಕಾರವನ್ನೇ ವರ್ಲಿ ಆರ್ಟ್‌ ಎನ್ನುತ್ತೇವೆ. ಗೆರೆಗಳು, ಚುಕ್ಕಿಗಳು, ವೃತ್ತಗಳು, ತ್ರಿಕೋನಗಳಲ್ಲೇ ರೂಪುಗೊಳ್ಳುವ ಕಲೆಯಿದು. ಈ ಬುಡಕಟ್ಟು ಜನಾಂಗವು ಮದುವೆಯ ಮೆರವಣಿಗೆ, ಗ್ರಾಮೀಣ ಕ್ರೀಡೆ, ತರ್ಪಾ ನೃತ್ಯ, ಗ್ರಾಮ್ಯ ಜೀವನ, ಬೇಟೆಯ ದೃಶ್ಯಾವಳಿ ಮತ್ತು ಇತರೆ ದಿನನಿತ್ಯದ ಚಟುವಟಿಕೆಗಳಿಗೇ ಕಲೆಯ ರೂಪ ಕೊಟ್ಟು, ಅವುಗಳನ್ನು ಗೋಡೆಗಳಲ್ಲಿ ಬಿಡಿಸುತ್ತಿತ್ತು¤. ಈಗ ಈ ಕಲಾ ಪ್ರಕಾರವು ಫ್ಯಾಷನ್‌ ಡಿಸೈನರ್‌ಗಳು ಹಾಗೂ ಗೃಹಾಲಂಕಾರದ ಬ್ರಾಂಡ್‌ಗಳಲ್ಲಿ ಜನಪ್ರಿಯಗೊಳ್ಳುತ್ತಿದೆ. 

ಹಲೀಮತ್‌ ಸ ಅದಿಯಾ

ಟಾಪ್ ನ್ಯೂಸ್

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.