ನಿಮ್ಮ ಮಗುವೇ 8ನೇ ಅದ್ಭುತ


Team Udayavani, Dec 5, 2018, 6:00 AM IST

d-7.jpg

ಅಂದು ಪುಟಾಣಿ ಸಂಜನಾ, ತನಗೆ ಶಾಲೆಯಲ್ಲಿ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದ ಬಗ್ಗೆ ಚೈತ್ರಾ ಆಂಟಿಯ ಬಳಿ ಹೇಳಿ ಸಂಭ್ರಮಿಸುತ್ತಿದ್ದಳು. “ಹೌದಾ ಚಿನ್ನಿ? ಎಲ್ಲಿ, ಒಂದ್ಸಲ ಆ ಹಾಡನ್ನು ನಂಗಾಗಿ ಹಾಡ್ತೀಯಾ?’ ಅಂತ ಹುರಿದುಂಬಿಸಿದಳು. ಮರಿ ಕೋಗಿಲೆಯಂತೆ ಹಾಡತೊಡಗಿದ ಆ ಪುಟಾಣಿಯ ಹಾಡು ಕೇಳಲು ಸುಮಾರು ಜನ ನೆರೆದಿದ್ದರು. ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಸಂಜನಾಳನ್ನು ಚೈತ್ರಾ, “ನೀನು ಸಂಗೀತ ಕ್ಲಾಸ್‌ಗೆ ಹೋಗ್ತಿದ್ದೀಯ?’ ಅಂತ ಕೇಳಿದಾಗ, ಹುಡುಗಿಯ ಮುಖ ಸಪ್ಪಗಾಯಿತು. ಯಾಕೆ ಅಂತ ವಿಚಾರಿಸಿದಾಗ, ಸಂಜನಾ ಕೊಟ್ಟ ಉತ್ತರ ಕೇಳಿ ಚೈತ್ರಾಳಿಗೆ ಬೇಸರವಾಯ್ತು.

“ಅಮ್ಮ ಬೆಳಗ್ಗೆ ಎದ್ದು, ನನ್ನನ್ನು ಎಬ್ಬಿಸಿ ಶಾಲೆಗೆ ರೆಡಿ ಮಾಡಿ, ಅಪ್ಪನ ಡಬ್ಬಿಗೂ ತಿಂಡಿ ತುಂಬಿ, ಅಪ್ಪನನ್ನು ಕಚೇರಿಗೆ, ನನ್ನನ್ನು ಶಾಲೆಗೆ ಕಳಿಸ್ತಾಳೆ. ಆಮೇಲೆ, ಅವಳೂ ಆಫೀಸಿಗೆ ಹೊರಡ್ತಾಳೆ. ಅಪ್ಪ-ಅಮ್ಮ ಬರೋದೇ ರಾತ್ರಿ 8 ಗಂಟೆಗೆ. ಶಾಲೆ ಮುಗಿಸಿ, ನಾನು ಅಜ್ಜ-ಅಜ್ಜಿ ಮನೆಗೆ ಹೋಗ್ತಿನಿ. ಅಲ್ಲಿಂದ ಸಂಗೀತ ಕ್ಲಾಸ್‌ಗೆ ತುಂಬಾ ದೂರ ಆಗುತ್ತೆ. ಅಜ್ಜ-ಅಜ್ಜಿಗೆ ನನ್ನ ಜೊತೆ ಅಲ್ಲಿಯ ತನಕ ನಡೆಯೋಕೆ ಆಗಲ್ಲ. ನಾನು ಒಬ್ಬಳೇ ಹೋಗೋದು ಬೇಡ ಅಂತಾಳೆ ಅಮ್ಮ. ಅಜ್ಜಿ ಮನೆ ಪಕ್ಕದಲ್ಲೇ ಇದೆ ಅಂತ ಕರಾಟೆ ಕ್ಲಾಸ್‌ಗೆ ಸೇರಿಸಿದ್ದಾರೆ ನನ್ನ’ ಎಂದಳು ಸಪ್ಪೆಯಾಗಿ.

ಇಂದು ತಾಯಂದಿರಿಗೆ ನೌಕರಿಗೆ ಹೋಗುವುದೂ ಅನಿವಾರ್ಯ ಆಗಿದೆ. ದಿನನಿತ್ಯ ಮನೆ, ಕಚೇರಿ ಕೆಲಸ, ಮಕ್ಕಳನ್ನು ಶಾಲೆಗೆ ಕಳುಹಿಸುವ ಸಿದ್ಧತೆಯಲ್ಲಿ ಬ್ಯುಸಿಯಾಗಿರುವ ಅವರಿಗೆ, ಮಕ್ಕಳ ಜೊತೆಗೆ ಸಮಯ ಕಳೆಯಲು ಸಮಯವೇ ಸಿಗುವುದಿಲ್ಲ. ಅಡುಗೆ ಮಾಡಿ, ಮಕ್ಕಳಿಗೆ ತಿನ್ನಿಸಿ, ಅವರನ್ನು ಶಾಲೆಗೆ ಕಳುಹಿಸಿ, ಹೋಂ ವರ್ಕ್‌ ಮಾಡಿಸಿದರೆ ದೊಡ್ಡ ಜವಾಬ್ದಾರಿ ಕಳೆದಂತೆ ಎಂದು ಭಾವಿಸುವ ತಾಯಂದಿರಿಗೆ, ತಮ್ಮ ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪೋಷಿಸಲು ಸಾಧ್ಯವಾಗದೇ ಇರಬಹುದು.

ಸಾಮಾನ್ಯವಾಗಿ ಎಲ್ಲಾ ಮಕ್ಕಳಲ್ಲೂ ಸುಪ್ತ ಪ್ರತಿಭೆಯೊಂದು ಅಡಗಿರುತ್ತದೆ. ಅದನ್ನು ಮೊದಲು ಗುರುತಿಸಬೇಕಾದವರು ಹೆತ್ತವರು. ಆಗ ಮಾತ್ರ ಮಕ್ಕಳು ಓರ್ವ ಮಹಾನ್‌ ಸಂಗೀತಕಾರ, ನಿರ್ದೇಶಕ, ಕ್ರೀಡಾಪಟು ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ತಮ್ಮ ಪತ್ರಿಭೆಯನ್ನು ತೋರಿಸಲು ಸಾಧ್ಯ. ಕೆಲಸದ ಒತ್ತಡದಲ್ಲಿರುವ ಪೋಷಕರು, ಮಕ್ಕಳನ್ನು ಸರಿಯಾಗಿ ಅರಿತುಕೊಳ್ಳದಿದ್ದರೆ ಪ್ರತಿಭೆ ಹೊರಬರಲು ಸಾಧ್ಯವಿಲ್ಲ. ಹಾಗಂತ ಮಕ್ಕಳ ಮೇಲೆ ಸಲ್ಲದ ಒತ್ತಡ ಹೇರುವುದೂ ಸರಿಯಲ್ಲ. ಯಾವ ಕ್ಷೇತ್ರದಲ್ಲಿ ಮಕ್ಕಳು ಆಸಕ್ತಿ ತೋರಿಸುತ್ತಾರೋ, ಅದರಲ್ಲಿಯೇ ಮುಂದುವರಿಯುವಂತೆ ಪ್ರೇರೇಪಿಸಿದರೆ ಒಳ್ಳೆಯದು.

 ಜ್ಯೋತಿ ಸಿ.

ಟಾಪ್ ನ್ಯೂಸ್

MNG-Zakir

Tabla maestro: ಮಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್

1-zakir

Ustad; ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ವಿಧಿವಶ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

Aditya

Kaup: ಯುವ ಕ್ರಿಕೆಟಿಗ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

1-maha

Maharashtra: ಫಡ್ನವೀಸ್ ಸಂಪುಟಕ್ಕೆ 39 ಮಂದಿ ಸಚಿವರ ಸೇರ್ಪಡೆ

DVG-Duggamma

Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

MNG-Zakir

Tabla maestro: ಮಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್

missing

Udupi: ಗಾಜಿನ ಉದ್ಯಮಿ ನಾಪತ್ತೆ; ದೂರು ದಾಖಲು

de

Puttur: ಮರದ ವ್ಯಾಪಾರಿ ಆತ್ಮಹ*ತ್ಯೆ; ಪ್ರಕರಣ ದಾಖಲು

1-zakir

Ustad; ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ವಿಧಿವಶ

accident

Mulki: ಬಪ್ಪನಾಡು; ಕಾರು-ರಿಕ್ಷಾ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.