ನಿನ್ನ ಉಡುಪು ನನ್ನದು


Team Udayavani, May 16, 2018, 12:28 PM IST

ninna-udupu.jpg

ವಿಭಿನ್ನವಾಗಿ, ವಿಲಕ್ಷಣವಾಗಿ ಕಾಣಬೇಕು ಅನ್ನೋದು ಈ ಕಾಲದ ಹೊಸ ಫ್ಯಾಶನ್‌. ಅದಕ್ಕೆ ಸಾಕ್ಷಿ ಆಗುವಂತೆ, ಹುಡುಗಿಯರಿಗೆ ಮೀಸಲಾಗಿದ್ದ ಸರ, ಬಳಿ, ಕಿವಿಯೋಲೆಗಳನ್ನು ಹುಡುಗರು ಧರಿಸುತ್ತಿದ್ದಾರೆ. ಪ್ಯಾಂಟು ಧರಿಸಿ ಮಿಂಚುತಿದ್ದ ಹುಡುಗಿ, ಪಂಚೆ ಧರಿಸಲೂ ಸೈ ಎನ್ನುವುದನ್ನು ತೋರಿಸಿಕೊಡುತ್ತಿದ್ದಾಳೆ. ನಾಲ್ಕು ಜನ ನಮ್ಮನ್ನು ನೋಡಲಿ ಎಂಬ ಪ್ರದರ್ಶನಾ ಮನೋಭಾವ ಈ ಹೊಸ ಬದಲಾವಣೆಗೆ ಕಾರಣ… 

“ಅಮ್ಮಾ, ಅಲ್ಲಿ ನೋಡು… ಆ ಅಂಕಲ್‌ ಹೇರ್‌ಬ್ಯಾಂಡ್‌ ಹಾಕಿದ್ದಾರೆ’, ಬಾಯಿಗೆ ಕೈ ಅಡ್ಡ ಹಿಡಿದು ನಗುತ್ತಾ ನನ್ನ ಪುಟ್ಟ ಮಗಳು ಹೇಳಿದಳು. ಅಷ್ಟರಲ್ಲಿ, ಅವಳಿಗಿಂತ ಸಣ್ಣವನಾದ ಮಗ ಹೇಳಿದ: “ಅಲ್ಲೊಬ್ಬ ಅಂಕಲ್‌ ನಿನ್ನ ಹಾಗೆ ಜುಟ್ಟು ಕೂಡ ಹಾಕಿದ್ದಾರೆ’. ನಾನು ಅತ್ತ ನೋಡಿದೆ. ಆತನಿಗೆ ಆ ಕೂದಲ ಮೇಲೆ ಏನು ಮೋಹವೋ? ಜುಟ್ಟು ಬಿಚ್ಚಿ ಕೂದಲು ಕೆದರಿ, ಕೊಡವಿ, ಕೈ ಬೆರಳುಗಳಿಂದ ಬಾಚಿದಂತೆ ಮಾಡಿ ಪುನಃ ಜುಟ್ಟು ಹಾಕಿಕೊಂಡ.

ನನ್ನ ಮನಸ್ಸಲ್ಲೊಂದು ಫ್ಲಾಶ್‌ಬ್ಯಾಕ್‌ ಮೂಡಿತು. ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದಾಗ ಹುಡುಗರಂತೆ ಕೂದಲು ಕತ್ತರಿಸಿದ ಹುಡುಗಿಯನ್ನು ತೋರಿಸಿ ಅಮ್ಮನಲ್ಲಿ ನಾನು ಕೇಳಿದ್ದೆ: “ಅಮ್ಮಾ, ಅದು ಯಾಕೆ ಅವಳ ಕೂದಲು ಹುಡುಗರ ಹಾಗೆ?’. “ಅದು ಬಾಯ್ಕಟ್’, ಅಲ್ಲೇ ಇದ್ದ ಆ ಹುಡುಗಿಯ ಅಮ್ಮ ಉತ್ತರಕೊಟ್ಟರು. ಆಗ ಹುಡುಗಿಯರು ಹುಡುಗರನ್ನು ಅನುಕರಿಸಿ ಹೇರ್‌ಸ್ಟೈಲ್‌ ಮಾಡಿಕೊಳ್ಳುತ್ತಿದ್ದರು.

ಹುಡುಗರಂತೆ ಜೀನ್ಸ್‌, ಶರ್ಟ್‌ ಧರಿಸಲು ಇಷ್ಟಪಡುತ್ತಿದ್ದರು. ಆದರೆ, ಹುಡುಗರು ಹುಡುಗಿಯರನ್ನು ಅನುಕರಿಸುತ್ತಿರಲಿಲ್ಲ. ಇಂದೇಕೋ ಕಾಲ ಬದಲಾಗಿದೆ. ಹುಡುಗಿಯರಿಗೆ ಹುಡುಗರ ಸ್ಟೈಲ್‌ ಮೇಲೆ ಆಸೆ ಹುಟ್ಟಿದೆ. ಹುಡುಗರಿಗೆ ಹುಡುಗಿಯರ ಫ್ಯಾಶನ್‌ ಅನುಕರಣೆ ಪ್ರಿಯವೆನಿಸುತ್ತಿದೆ. ಗಾಳಿಯಲ್ಲಿ ತೇಲುವ ಕೂದಲಿನ ಹುಡುಗಿಯೊಬ್ಬಳು ಜೀನ್ಸ್ ಟಾಪ್‌ ಹಾಕಿ ರೊಂಯ್ಯನೆ ಬೈಕಲ್ಲಿ ಬರುವಾಗ ಪಡ್ಡೆ ಹುಡುಗರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿರುವುದು,

ಆಕೆ ಹೆಲ್ಮೆಟ್‌ ತೆಗೆದಾಗ ಅದು ಹುಡುಗಿಯಲ್ಲ, ಹುಡುಗ ಎಂದು ತಿಳಿದು ಇಂಗು ತಿಂದ ಮಂಗನಂತಾಗುವುದು ಒಂದು ಜೋಕ್‌ ಸೀನ್‌. ಆದರೆ ಇದರಲ್ಲಿ ವಾಸ್ತವವಿದೆ. ಈಗ ಬಾಹ್ಯ ರೂಪ ನೋಡಿ, ಒಂದು ವ್ಯಕ್ತಿ ಹುಡುಗನೋ ಹುಡುಗಿಯೋ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇತ್ತೀಚೆಗೆ ಭಾರೀ ಜನಪ್ರಿಯತೆ ಪಡೆದ ಮಲೆಯಾಳಂ ಸಿನಿಮಾದ ಹಾಡು “ಜಿಮಿಕ್ಕಿ ಕಮ್ಮಲ್‌…’ನ ಪ್ರಭಾವದಿಂದ ಹುಡುಗಿಯರೂ ಪಂಚೆ ಉಡಲು ಶುರುಮಾಡಿದ್ದಾರೆ.

ಪಂಚೆ ಉಟ್ಟ ಹುಡುಗಿಯರ ಫೋಟೋದ ಅಡಿಯಲ್ಲಿ, “ಇದೊಂದು ನಮಗೆ ಅಂತ ಉಳಿದಿತ್ತು, ಈಗ ಅದೂ ಹುಡುಗಿಯರ ಪಾಲಾಯ್ತು’ ಎನ್ನುವ ಹುಡುಗರ ಗೋಳಿನ ವಾಟ್ಸಾéಪ್‌ ಮೆಸೇಜ್‌ ಕೂಡ ಹುಟ್ಟಿಕೊಂಡಿತು. ಹುಡುಗರ ಲೇಟೆಸ್ಟ್‌ ಫ್ಯಾಶನ್‌ ಆಗಿ ಈಗ ಸ್ಕರ್ಟ್‌ಗಳು ಬಂದಿವೆ. ಹೆಣ್ಣು-ಗಂಡು ಎಂಬ ಬೇಧವಿಲ್ಲದೇ ಎಲ್ಲರೂ ಪ್ಯಾಂಟ್, ಶರ್ಟ್‌ ಧರಿಸುತ್ತಿದ್ದಾರೆ. ಹಾಗೆಯೇ ಶಾರ್ಟ್ಸ್ ಎಂಬುದು ಲಿಂಗಬೇಧವಿಲ್ಲದ ಉಡುಗೆಯಾಗಿ ಮಾರ್ಪಟ್ಟಿದೆ.

ಲಿಂಗ ತಾರತಮ್ಯ ನಿವಾರಣೆಯ ಸದುದ್ದೇಶವೋ, ಅತಿಯಾದ ಫ್ಯಾಶನ್‌ ಪ್ರಜ್ಞೆಯೋ ಅಂತೂ ಈ ಅದಲು ಬದಲು ವೇಷಭೂಷಣ ಈಗ ಹೊಸ ಟ್ರೆಂಡ್‌ ಎನಿಸಿದೆ. ಹುಡುಗಿಯರು ಸರ, ಬಳೆ, ಕಾಲ್ಗೆಜ್ಜೆ,  ಕಿವಿಯೋಲೆ ಇತ್ಯಾದಿಗಳನ್ನು ಧರಿಸದೇ ಬೋಳಾಗಿ ನಡೆಯಲು ಶುರು ಹಚ್ಚಿದರೆ, ಹುಡುಗರು ಕಿವಿಯೋಲೆ, ಬಳೆ, ಸರಗಳನ್ನು ಧರಿಸಲು ಪ್ರಾರಂಭಿಸಿದ್ದಾರೆ. ಸ್ತ್ರೀ ಅಥವಾ ಪುರುಷ ಎಂಬ ತಮ್ಮ ಅವಸ್ಥೆಗೆ ತಕ್ಕ ವೇಷಭೂಷಣದ ಮೇಲೆ ಆಧುನಿಕ ಯುವಕ- ಯುವತಿಯರಿಗೆ ಒಲವಿಲ್ಲ.

ವಿಭಿನ್ನವಾಗಿ ಕಾಣುವುದರಲ್ಲಿ ಅವರ ಖುಷಿ ಅಡಗಿದೆ. ಹೊಸದನ್ನು, ವಿಲಕ್ಷಣವಾದುದನ್ನು ಅನುಕರಿಸಿ ಜನರ ಗಮನ ಸೆಳೆಯುವುದು ಹೊಸ ಫ್ಯಾಶನ್‌ ಆಗಿದೆ. ಅನ್ಯ ಲಿಂಗದ ಕುರಿತ ಸಹಜ ಕುತೂಹಲವೋ, ಕಳಕಳಿಯೋ, ಅಥವಾ ವ್ಯಕ್ತಿಯ ಸ್ವಭಾವದಲ್ಲಿ ಅಲ್ಪ ಪ್ರಮಾಣದಲ್ಲಿ ಅಡಕವಾಗಿರುವ ಅನ್ಯಲಿಂಗದ ಗುಣವೋ ಅಂತೂ ಫ್ಯಾಶನ್‌ ತನ್ನ ಲಿಂಗವನ್ನು ಕಳೆದುಕೊಂಡಿದೆ. ಪುರುಷರಿಗೆಂದೇ ಮೀಸಲಾಗಿದ್ದ ಹಲವು ಕ್ಷೇತ್ರಗಳಲ್ಲಿ ಇಂದು ಮಹಿಳೆ ಕಾಲಿರಿಸಿದ್ದಾಳೆ.

ಮಹಿಳೆ ಅಬಲೆಯಲ್ಲ ಸಬಲೆ, ಯಾವುದೇ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಲು ಶಕ್ತಳು ಎಂಬುದನ್ನು ಸಮರ್ಥಿಸಲು ಮಹಿಳೆಯರು ಈ ಕಾರ್ಯ ಮಾಡುತ್ತಿದ್ದಾರೆ. “ಪುರುಷ ಲಕ್ಷಣಂ’ ಎಂದೇ ಹೆಸರಿಸಲಾಗಿದ್ದ ಉದ್ಯೋಗ ಈಗಾಗಲೇ ಮಹಿಳೆಯರ ಪಾಲೂ ಆಗಿದೆ. ಬಹುಶಃ ಬದಲಾದ ವ್ಯವಸ್ಥೆಯಲ್ಲಿ ಇದು ಅನಿವಾರ್ಯವೂ ಹೌದು. ಮಹಿಳೆಯ ಉಡುಗೆ-ತೊಡುಗೆಗಳು ಕೂಡಾ ಈ ಕಾರಣಕ್ಕೇ ಬದಲಾಗಿರಬಹುದು. ಆದರೆ, ಪುರುಷರು ಹಾಗೂ ಮಹಿಳೆಯರ ಕೆಲವು ಅದಲು ಬದಲಿನ ಫ್ಯಾಶನ್‌ಗಳಿಗೆ ಯಾವ ಕಾರಣವೂ ಇಲ್ಲ.

ಇತರರಿಗಿಂತ ಭಿನ್ನವಾಗಿ ಕಾಣಬೇಕು, ನಾಲ್ಕು ಜನ ನನ್ನನ್ನು ನೋಡಬೇಕು ಎಂಬ “ಪ್ರದರ್ಶನ ಮನೋಭಾವ’ವಷ್ಟೇ ಅದರ ಹಿಂದಿದೆ ಎನ್ನಬಹುದು. ಗರ್ಭಧಾರಣೆ ಹಾಗೂ ಹೆರಿಗೆ ಹೆಂಗಸರಿಗಷ್ಟೇ ಸಾಧ್ಯ ಎಂಬುದು ಎಲ್ಲರ ಬಲವಾದ ನಂಬಿಕೆಯಾಗಿತ್ತು. ಆದರೆ, ಇತ್ತೀಚೆಗೆ ವಿದೇಶದಲ್ಲಿ ಒಬ್ಬ ಭೂಪ ವೈದ್ಯಕೀಯ ನೆರವಿನಿಂದ ಭ್ರೂಣವನ್ನು ತನ್ನ ಹೊಟ್ಟೆಯಲ್ಲಿ ಬೆಳೆಯುವಂತೆ ಮಾಡಿಕೊಂಡು ಸಹಜ ಹೆರಿಗೆಯ ಮೂಲಕ ಮಗುವನ್ನು ಹಡೆದನಂತೆ. ಅಂದರೆ, ಅವನು ಲಿಂಗ ಪರಿವರ್ತನೆ ಮಾಡಿಕೊಂಡಿಲ್ಲ. ಗಂಡಾಗಿದ್ದುಕೊಂಡೇ ಮಗುವಿಗೆ ಜನ್ಮಕೊಟ್ಟ. ಅದಲು ಬದಲಿನ ಈ ಲೋಕದಲ್ಲಿ ಇನ್ನೇನೆಲ್ಲ ಕಾಣಬೇಕಿದೆಯೋ?

* ಜೆಸ್ಸಿ ಪಿ.ವಿ.

ಟಾಪ್ ನ್ಯೂಸ್

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

19-bng

Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ

5

Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ

18-metro

Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ

Balaganur: Body of newborn baby found in canal

Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.