ನಗುವಿನೊಳಗೊಂದು ಪುಟ್ಟ ನಗು


Team Udayavani, Mar 15, 2019, 12:30 AM IST

x-53.jpg

ಗರ್ಭಿಣಿಯರು ಸದಾ ಸಕಾರಾತ್ಮಕ ಚಿಂತನೆಗಳು, ಉತ್ತಮ ಅಭಿರುಚಿಗಳು, ಹವ್ಯಾಸ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮ ಆರೋಗ್ಯ ಹೊಂದಿದ ಮಗುವನ್ನು ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ…

ನನ್ನೊಳಗೆ ಚಿಗುರೊಡೆದು ಮೃದುವಾಗಿ ಅರಳುತ್ತಿರುವ ಪುಟ್ಟಜೀವದ ಬಗ್ಗೆ ನೆನೆಸಿಕೊಂಡಾಗ ಕಣ್ತುಂಬಿ ಬರುತ್ತದೆ. ನನಗಿಷ್ಟವಾದ ಪಾನಿಪೂರಿ, ಮಸಾಲಾ ಪೂರಿ, ಬಜ್ಜಿ ಇತ್ಯಾದಿಗಳ ಸ್ಥಾನವನ್ನು ದಾಳಿಂಬೆ, ಸೇಬು, ಕಿತ್ತಳೆ ತುಂಬುತ್ತಿವೆ. ಹಾಗಂತ ನನಗೆ ಬೇಜಾರಿಲ್ಲ. ಖುಷಿಯಿದೆ. ನನ್ನ ಮುದ್ದು ಕಂದಮ್ಮನಿಗೋಸ್ಕರ ನಾಲಗೆ ಚಪಲಾನ ಒಂದಷ್ಟು ದಿನ ತ್ಯಾಗ ಮಾಡೋಕಾಗಲ್ವಾ ಅಂತ ಅನ್ನಿಸುತ್ತದೆ. ನಮ್ಮವರ ಜೊತೆಗೆ ವಾಕಿಂಗ್‌ ಹೋಗುವಾಗ ಸಿಗುವ ಮಕ್ಕಳ ಬಟ್ಟೆ ಅಂಗಡಿ ಯಾವಾಗಲೂ ನನ್ನನ್ನು ಆಕರ್ಷಿಸುತ್ತದೆ. ಪುಟ್ಟ ಪುಟ್ಟ ಅಂಗಿ, ಪ್ಯಾಂಟು, ಫ್ರಾಕು, ಟೋಪಿ ನೋಡಿದಾಗ, ಯಾವಾಗ ನನ್ನ ಮುದ್ದು ಕಂದನಿಗೆ ಇದನ್ನೆಲ್ಲ ಹಾಕೋದು ಅನಿಸುತ್ತೆ.

ಇವೆಲ್ಲ ಬರೀ ಗರ್ಭಿಣಿಯಾದ ಒಂದು ಹೆಣ್ಣುಮಗಳ ಮನಸ್ಥಿತಿಯಲ್ಲ. ತಾಯಂದಿರಾಗುವ ಎಲ್ಲರ ಮನಸ್ಥಿತಿ. ಗರ್ಭಿಣಿಯಾದಾಕೆ ಒಂದೆಡೆ ಹೀಗೆಲ್ಲಾ ಕನಸು ಕಾಣುತ್ತಿರುವ ಸಂದರ್ಭದಲ್ಲಿ ಆಕೆಯ ಯಜಮಾನರು ಮತ್ತು ತಾಯ್ತಂದೆಯರು, ಗರ್ಭಿಣಿಯ ಮಾನಸಿಕ ಆರೋಗ್ಯದ ಕುರಿತೂ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ಒಳ್ಳೆಯ ಆಹಾರ ಪದ್ಧತಿಯೊಂದಿಗೆ, ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಬೇಕಾದ ಉತ್ತಮ ಜೀವನಶೈಲಿಯನ್ನು ಗರ್ಭಿಣಿಗೆ ಅಭ್ಯಾಸ ಮಾಡಿಸಬೇಕು.

ದೈಹಿಕ ಆರೋಗ್ಯಕ್ಕೆ
.ವಾಕಿಂಗ್‌, ಸರಳ ವ್ಯಾಯಾಮ ಧ್ಯಾನ ಮಾಡಬೇಕು.
.ತಾಜಾ ಆಹಾರ (ಹಣ್ಣು, ತರಕಾರಿ, ಡ್ರೈಫ್ರೂಟ್ಸ್ , ಸಿರಿಧಾನ್ಯಗಳು) ಸೇವಿಸಬೇಕು.

ಮಾನಸಿಕ ಆರೋಗ್ಯಕ್ಕೆ
ಒಳ್ಳೆಯ ಅಭಿರುಚಿಗಳನ್ನು ರೂಢಿಸಿಕೊಳ್ಳುವುದು. ಉದಾಹರಣೆಗೆ: ಸಂಗೀತ, ಪೇಟಿಂಗ್‌, ಒಳ್ಳೆ ಪುಸ್ತಕಗಳನ್ನು ಓದುವುದು, ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯುವುದು ಉತ್ತಮ.

ಮನೆಯವರಿಗೆ ಕಿವಿಮಾತು
ಗರ್ಭಿಣಿಯ ಮಾನಸಿಕ ಆರೋಗ್ಯಕ್ಕೂ , ಮಗುವಿನ ದೈಹಿಕ ಬೆಳವಣಿಗೆಗೂ ನೇರ ನಂಟಿದೆ. ತಾಯಂದಿರ ನಕಾರಾತ್ಮಕ ಭಾವನೆಗಳು, ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕುಂದುಂಟು ಮಾಡುತ್ತವೆ. ಹಾಗಾಗಿ, ಜಗಳ, ಹಿಂಸಾತ್ಮಕ ದೃಶ್ಯಗಳು, ತೀವ್ರ ನೋವುಂಟು ಮಾಡುವ ಸಂಭಾಷಣೆಗಳು, ಅನವಶ್ಯಕ ಗದ್ದಲದಿಂದ ಗರ್ಭಿಣಿ ದೂರವಿರುವಂತೆ ನೋಡಿಕೊಳ್ಳ ಬೇಕು. ಆಕೆ ಸದಾ ಹಿತನುಡಿಗಳನ್ನು ಕೇಳುತ್ತ, ನಗು ನಗುತ್ತ ಇರುವಂಥ ವಾತಾವರಣ ರೂಪಿಸಬೇಕು. ಪ್ರತಿಕ್ಷಣವೂ ಆಕೆಯ ಕುರಿತು ಕಾಳಜಿ ತೋರುವುದು, ಧೈರ್ಯ ಹೇಳುವುದು ಪೋಷಕರ ಕರ್ತವ್ಯವಾಗಬೇಕು. ಮಮತೆ, ಕಾಳಜಿಯನ್ನು ವ್ಯಕ್ತಪಡಿಸುವುದು ಅತ್ಯವಶ್ಯಕ.

ಚಿಕಿತ್ಸೆ ಅಗತ್ಯ
ಗರ್ಭಾವಸ್ಥೆಯ ಸಮಯದಲ್ಲಿ ಮಾನಸಿಕ ಅಸ್ವಸ್ಥತೆಗೆ ಸೂಕ್ತ ಚಿಕಿತ್ಸೆ ಸಿಗದಿದ್ದಲ್ಲಿ, ತಾಯಿ ಹಾಗೂ ಮಗುವಿನ ಮಾನಸಿಕ ವಿಕಾಸಕ್ಕೆ ದುಷ್ಪರಿಣಾಮ ಉಂಟಾಗುವುದು ಖಂಡಿತ.

ಸಮಸ್ಯೆಯ ಲಕ್ಷಣಗಳು
ಗರ್ಭಿಣಿಯರಲ್ಲಿ ಈ ಬದಲಾವಣೆ ಕಾಣಿಸಿದರೆ, ಸೂಕ್ತ ಚಿಕಿತ್ಸೆ ಕೊಡಿಸುವುದು ಒಳಿತು.
.ಆಹಾರ ಸೇವನೆಯಲ್ಲಿ ತೀವ್ರ ಏರುಪೇರು
.ತೀವ್ರ ದುಃಖ, ಸಾಂದ್ರತೆಯ ಸಮಸ್ಯೆ.
.ಅತೀ ಹೆಚ್ಚು ಅಥವಾ ಅತೀ
 ಕಡಿಮೆ ನಿದ್ರೆ.
.ನಿರಾಸಕ್ತಿ, ವಿನಾಕಾರಣ ಆತಂಕ.

ಡಾ. ಸುಹಾಸಿನಿ ರಾಮ್‌

ಟಾಪ್ ನ್ಯೂಸ್

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6

Manipal: ಅಪಾಯಕಾರಿ ರೀತಿಯಲ್ಲಿ ಬೈಕ್‌ ಚಾಲನೆ; ಪ್ರಕರಣ ದಾಖಲು

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

de

Kundapura: ಗುಲ್ವಾಡಿ; ಗಾಯಾಳು ಸಾವು

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.