ಓ ಅದಾ !
Team Udayavani, Feb 3, 2017, 3:45 AM IST
ಕಮಾಂಡೊ 2 ಚಿತ್ರದಲ್ಲಿ ವಿದ್ಯುತ್ ಜಮ್‌ವಾಲ್‌ಗೆ ನಾಯಕಿಯಾಗಿರುವ ಅದಾ ಶರ್ಮ ಪಾಲಿಗೆ ಇದು ಸೆಕೆಂಡ್ ಇನ್ನಿಂಗ್ಸ್ ಇದ್ದ ಹಾಗೆ. ಎರಡು ವರ್ಷದ ಬಳಿಕ ಇದೇ ಮೊದಲ ಬಾರಿ ಅದಾ ಹಿಂದಿಯಲ್ಲಿ ಬಣ್ಣ ಹಚ್ಚುತ್ತಿದ್ದಾಳೆ. ಅಂದರೆ ಇಷ್ಟು ವರ್ಷ ಅವಳು ಕೆಲಸವಿಲ್ಲದೆ ಸುಮ್ಮನೆ ಕುಳಿತಿದ್ದಳು ಅಂತ ಅರ್ಥವಲ್ಲ. ನಡುವಿನ ಎರಡು ವರ್ಷದಲ್ಲಿ ತೆಲುಗಿನಲ್ಲಿ ಭಾರೀ ಬ್ಯುಸಿಯಾಗಿದ್ದಳು. ನಡುನಡುವೆ ತಮಿಳರು ಮತ್ತು ಕನ್ನಡದವರು ಕರೆದು ಒಂದೊಂದು ಅವಕಾಶ ಕೊಟ್ಟರು.
ಹೀಗಾಗಿ, ಬಾಲಿವುಡ್‌ಗೆ ಬರಲು ಆಗಲಿಲ್ಲವಂತೆ. ಬಹಳಷ್ಟು ವೈಶಿಷ್ಟéಗಳನ್ನು ಹೊಂದಿರುವ ಹುಡುಗಿ ಅದಾ ಶರ್ಮ. ಅವಳದ್ದು ತಮಿಳು ಅಯ್ಯಂಗಾರಿ ಕುಟುಂಬವಾದರೂ ಹುಟ್ಟಿದ್ದು ಕೇರಳದ ಪಾಲಕ್ಕಾಡಿನಲ್ಲಿ ಮತ್ತು ಬೆಳೆದದ್ದು ಮುಂಬಯಿಯಲ್ಲಿ. ತಮಿಳು ತಾಯಿಭಾಷೆಯಾಗಿದ್ದರೂ ಮಿಂಚಿದ್ದು ತೆಲುಗಿನಲ್ಲಿ. ತಂದೆ ಹಡಗಿನ ಕ್ಯಾಪ್ಟನ್ ಮತ್ತು ತಾಯಿ ಭರತನಾಟ್ಯ ಕಲಾವಿದೆ. ಕಲೆ ತಾಯಿಯಿಂದ ಬಳುವಳಿಯಾಗಿ ಬಂದಿದೆ. ಆದರೆ, ಅದಾಳನ್ನು ನೃತ್ಯಕ್ಕಿಂತಲೂ ಹೆಚ್ಚು ಆಕರ್ಷಿಸಿದ್ದು ಕೇರಳದ ಕಳರಿಪಯಟ್ಟು ಎಂಬ ಯುದ್ಧ ಕಲೆ. ಇದನ್ನು ಕಲಿತಿರುವ ಅದಾಳಿಗೆ ಕಮಾಂಡೊ 2ರಲ್ಲಿ ಆ್ಯಕ್ಷನ್ ಮಾಡಲು ಬಹಳ ಉಪಯೋಗಕ್ಕೆ ಬಂದಿದೆಯಂತೆ. ವಿಕ್ರಮ್ ಭಟ್ ನಿರ್ದೇಶಿಸಿದ 1920 ಎಂಬ ಹಾರರ್ ಚಿತ್ರದಲ್ಲಿ ಪ್ರೇತಾತ್ಮ ಪೀಡಿತ ಯುವತಿಯಾಗಿ ಅಭಿನಯಿಸಿ ಗಮನ ಸೆಳೆದ ಅದಾ ಶರ್ಮ ಬಳಿಕ ಫಿರ್, ಹಮ್ ಹೈ ರಾಹಿ ಕಾರ್ ಕೆ ಎಂಬೆರಡು ಬಿ ಗ್ರೇಡ್ ಚಿತ್ರಗಳಲ್ಲಿ ನಟಿಸಿದಳು. ಅನಂತರ ಹಸಿ ತೋ ಫಸಿ ಚಿತ್ರದಲ್ಲೂ ಕಾಣಿಸಿಕೊಂಡಿದ್ದಳು. ಆದರೆ ಅವಳು ಪ್ರಸಿದ್ಧಿಗೆ ಬಂದದ್ದು ತೆಲುಗು ಚಿತ್ರರಂಗದಲ್ಲಿ.
ಸನ್ ಆಫ್ ಸತ್ಯಮೂರ್ತಿ, ಗರಮ್, ಕ್ಷಣಂ, ಹಾರ್ಟ್ ಅಟ್ಯಾಕ್ ಮುಂತಾದ ಚಿತ್ರಗಳಲ್ಲಿ ನಟಿಸಿ ಭಾರೀ ಡಿಮ್ಯಾಂಡಿನ ನಟಿಯಾದ ಅದಾ ರಣವಿಕ್ರಮ ಎಂಬ ಕನ್ನಡ ಚಿತ್ರಕ್ಕೂ ನಾಯಕಿಯಾಗಿದ್ದಳು. ತಮಿಳಿನ ಒಂದು ಚಿತ್ರದಲ್ಲೂ ಕಾಣಿಸಿಕೊಂಡಿದ್ದಾಳೆ. ಇದೀಗ ಕಮಾಂಡೊ 2 ಮೂಲಕ ಮತ್ತೂಮ್ಮೆ ಬಾಲಿವುಡ್‌ನಲ್ಲಿ ಮಿಂಚುವ ನಿರೀಕ್ಷೆ ಹೊಂದಿದ್ದಾಳೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.