ಪಿಗ್ಗಿಯ ಕುಗ್ಗದ ಬೇಡಿಕೆ


Team Udayavani, Feb 15, 2019, 12:30 AM IST

19.jpg

ಬಾಲಿವುಡ್‌ನ‌ಲ್ಲಿ ಮದುವೆಯಾದ ಬಳಿಕವೂ ಬೇಡಿಕೆಯನ್ನು ಉಳಿಸಿಕೊಂಡ ನಟಿಯರ ಸಂಖ್ಯೆ ತೀರಾ ವಿರಳ. ಈಗ ಈ ವಿರಳ ನಟಿಯರ ಸಾಲಿಗೆ ಇತ್ತೀಚೆಗೆ ಹಸೆಮಣೆ ಏರಿರುವ ನಟಿ ಪ್ರಿಯಾಂಕಾ ಚೋಪ್ರಾ ಹೆಸರೂ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನುತ್ತಿದ್ದಾರೆ ಬಾಲಿವುಡ್‌ ಮಂದಿ. ಹೌದು, ಮದುವೆಯ ಬಳಿಕ ನಿಕ್‌ ಜೋನ್ಸ್‌ ಜೊತೆ  ರೊಮ್ಯಾಂಟಿಕ್‌ ಸಮಯವನ್ನು ಕಳೆಯುತ್ತಿರುವ ಪ್ರಿಯಾಂಕಾ ಮತ್ತೆ ತಮ್ಮ ಸಿನೆಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸುಳಿವನ್ನು ನೀಡಿದ್ದಾರೆ. ಇತ್ತೀಚೆಗೆ ತಮ್ಮ ಮುಂಬರುವ ಈಸ್‌ ನಾಟ್‌ ಇಟ್‌ ರೊಮ್ಯಾಂಟಿಕ್‌ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಮತ್ತು ನಿಕ್‌ ಒಟ್ಟಿಗೇ ಭಾಗಿಯಾಗಲಿದ್ದಾರೆ. ಇದೇ ವರ್ಷದ ಮಧ್ಯಭಾಗದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಜೊತೆಗೆ ಪ್ರಿಯಾಂಕಾ ಅವರನ್ನು ಮುಖ್ಯ ಭೂಮಿಕೆಯಲ್ಲಿರಿಸಿಕೊಂಡು ಮೇರಿಕೋಮ್‌ನಂತಹ ಕೆಲವು ಮಹಿಳಾ ಪ್ರಧಾನ ಚಿತ್ರಗಳನ್ನು ತೆರೆಗೆ ತರಲು ಹಲವು ನಿರ್ಮಾಪಕರು, ನಿರ್ದೇಶಕರು ಆಸಕ್ತರಾಗಿದ್ದು, ಈ ಬಗ್ಗೆ ಪ್ರಿಯಾಂಕಾ ಬಳಿ ಕೆಲವರು ಮಾತುಕತೆಯನ್ನೂ ನಡೆಸಿದ್ದಾರೆ. 

ಈ ಬಗ್ಗೆ ಮಾತನಾಡುವ ಪ್ರಿಯಾಂಕಾ, “”ನನಗೂ ಮಹಿಳಾ ಪ್ರಧಾನ ಮತ್ತು ಬಯೋಪಿಕ್‌ ಚಿತ್ರಗಳಲ್ಲಿ ನಟಿಸಲು ಸಾಕಷ್ಟು ಆಸಕ್ತಿ ಇದೆ. ಆದರೆ ಅಂತಹ ಚಿತ್ರಗಳು, ಪಾತ್ರಗಳು ಸಾಕಷ್ಟು ಸಮಯ ಮತ್ತು ತಯಾರಿಯನ್ನು ಬಯಸುತ್ತವೆ. ಹಾಗಾಗಿ ಅಂತಹ ಚಿತ್ರಗಳಿಗೆ ಸಾಕಷ್ಟು ಸಮಯ ತೆಗೆದಿರಿಸಬೇಕಾಗುತ್ತದೆ. ಸದ್ಯಕ್ಕೆ ನನಗೆ ಇಷ್ಟವಾಗುವಂತಹ ಕೆಲವು ಚಿತ್ರಗಳ ಆಫ‌ರ್ ಇದ್ದರೂ, ಈಗಲೇ ಅದರ ಬಗ್ಗೆ ಏನೂ ನಿರ್ಧರಿಸಿಲ್ಲ. ಕೆಲವು ಸಬ್ಜೆಕ್ಟ್ ಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ನನ್ನ ಮುಂದಿನ ಚಿತ್ರ ಯಾವುದಾಗಬಹುದು ಎನ್ನುವ ಬಗ್ಗೆ ನನಗೂ ಕುತೂಹಲವಿದೆ” ಎನ್ನುತ್ತಾರೆ. 

ಇವೆಲ್ಲದರ ನಡುವೆ ಜಗದ್ವಿಖ್ಯಾತ ನ್ಯೂಯಾರ್ಕ್‌ನ ಪ್ರತಿಷ್ಠಿತ ಮೇಡಮ್‌ ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಮೇಣದ ಪ್ರತಿಮೆ ಅನಾವರಣಗೊಂಡಿದೆ. 2016ರಲ್ಲಿ ಎಮಿ ಅವಾರ್ಡ್ಸ್‌ನಲ್ಲಿ ಕೆಂಪು ಕಲರ್‌ ಗೌನ್‌ನಲ್ಲಿ ನೋಡುಗರನ್ನು ಸೆಳೆದಿದ್ದ ಪ್ರಿಯಾಂಕಾ ಅವರ ಮೇಣದ ಪ್ರತಿಕೃತಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದು, ತಮ್ಮ ಮೇಣದ ಪ್ರತಿಮೆ ನೋಡಿದಾಕ್ಷಣ ಪ್ರಿಯಾಂಕಾ ಚೋಪ್ರಾ ಕೂಡ ಅಚ್ಚರಿಗೊಂಡು, ಮೇಣದ ಪ್ರತಿಮೆ ಬಳಿ ಥೇಟ್‌ ಅದೇ ರೀತಿ ಪೋಸ್‌ ಕೊಟ್ಟು ಪಿಗ್ಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಮೂಲಕ ಟುಸಾಡ್ಸ್‌ನಲ್ಲಿರುವ ಜಗತ್ತಿನ ಜನಪ್ರಿಯ ವ್ಯಕ್ತಿಗಳ ಮೇಣದ ಪ್ರತಿಮೆಯ ಸಾಲಿಗೆ ಇದೀಗ ಪ್ರಿಯಾಂಕಾ ಪ್ರತಿಮೆಯೂ ಸೇರ್ಪಡೆ ಗೊಂಡಂತಾಗಿದೆ. 

ಟಾಪ್ ನ್ಯೂಸ್

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Naxaliam-End

Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.