ಶ್ರೀದೇವಿ ಕಥಾಮೃತ
ಗರ್ಲ್-ವುಮೆನ್-ಸೂಪರ್‌ಸ್ಟಾರ್
Team Udayavani, Aug 23, 2019, 5:35 AM IST
ಬಾಲಿವುಡ್‌ನಲ್ಲಿ ನಿಧನದ ಬಳಿಕವೂ ಆಗಾಗ್ಗೆ ಸುದ್ದಿಯಾಗಿ ಸಿನಿಪ್ರಿಯರನ್ನು, ಬಾಲಿವುಡ್ ಮಂದಿಯನ್ನು ಕಾಡುತ್ತಿರುವ ನಟಿ ಶ್ರೀದೇವಿ. ಶ್ರೀದೇವಿಯ ವೈಯಕ್ತಿಕ ಬದುಕು, ಸಿನಿಮಾ ಜನಪ್ರಿಯತೆ, ಆಕೆಯ ನಿಗೂಢ ಸಾವಿನ ಬಗ್ಗೆ ಹಲವು ಅಂತೆ-ಕಂತೆಗಳು ಇಂದಿಗೂ ಹರಿದಾಡು ತ್ತಿರುವಂತೆಯೇ ಶ್ರೀದೇವಿಯ ಕುರಿತಾಗಿ ಪುಸ್ತಕವೊಂದು ಹೊರಬರಲು ಸಿದ್ಧವಾಗುತ್ತಿದೆ. ಹೌದು, ಖ್ಯಾತ ಲೇಖಕ ಮತ್ತು ಚಿತ್ರಕಥೆ ಬರಹಗಾರ ಸತ್ಯಾರ್ಥ್ ನಾಯಕ್ ಈಗ ಶ್ರೀದೇವಿಯ ಕುರಿತಾದ ಕೃತಿಯೊಂದನ್ನು ಹೊರತರುತ್ತಿದ್ದಾರೆ. ಸದ್ಯ ಈ ಕೃತಿಯ ಕೆಲಸಗಳು ಅಂತಿಮ ಹಂತದಲ್ಲಿದ್ದು, ಇತ್ತೀಚೆಗೆ ಈ ಕೃತಿಯ ಕವರ್‌ಪೇಜ್ (ಮುಖಪುಟ) ಬಿಡುಗಡೆಯಾಗಿದೆ.
ಶ್ರೀದೇವಿ ಅವರ 56ನೇ ಜನ್ಮದಿನದ ಸಂದರ್ಭದಲ್ಲಿ ಈ “ಶ್ರೀದೇವಿ’ ಕೃತಿಯ ಮುಖಪುಟವನ್ನು ಬಾಲಿವುಡ್‌ನ ಖ್ಯಾತ ನಟಿ ವಿದ್ಯಾ ಬಾಲನ್ ಬಿಡುಗಡೆಗೊಳಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ವಿದ್ಯಾಬಾಲನ್, “ಶ್ರೀದೇವಿ ಐಕಾನಿಕ್ ನಟಿ. ಅವರ ಜನ್ಮದಿನದಂದು ಅವರ ಬದುಕಿನ ಕುರಿತಾದ ಕೃತಿಯ ಮುಖಪುಟವನ್ನು ಲಾಂಚ್ ಮಾಡುವ ಅವಕಾಶ ನನಗೆ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಐದು ದಶಕಗಳಲ್ಲಿ ಶ್ರೀದೇವಿಯವರ ಅದ್ಭುತ ಸಿನಿ ಜೀವನ, ಕೌಟುಂಬಿಕ ಜೀವನ ಇತ್ಯಾದಿಗಳ ಕುರಿತು ಈ ಕೃತಿಯಲ್ಲಿ ಮಾಹಿತಿ ಇರಲಿದೆ’ ಎಂದಿದ್ದಾರೆ. ಇನ್ನು “ಶ್ರೀದೇವಿ’ ಕೃತಿಗೆ “ಗರ್ಲ್-ವುಮೆನ್-ಸೂಪರ್‌ಸ್ಟಾರ್’ ಎಂಬ ಅಡಿ ಬರಹವಿದ್ದು, ಶ್ರೀದೇವಿಯ ಬಾಲ್ಯ, ಯೌವನ ಮತ್ತು ಚಿತ್ರ ಜೀವನದ ಮಹತ್ವದ ಘಟನೆಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಈ ಕೃತಿಯು ಶ್ರೀದೇವಿಯ ಬದುಕು ಮತ್ತು ಅವರ ಸಿನಿ ಪಯಣದ ಕುರಿತು ಬೆಳಕು ಚೆಲ್ಲಲಿದೆ ಎಂದಿದ್ದಾರೆ ಲೇಖಕ ಸತ್ಯಾರ್ಥ್ ನಾಯಕ್.
ಪೆಂಗ್ವಿನ್ ರ್‍ಯಾಂಡಮ್ ಹೌಸ್ ಇಂಡಿಯಾ ಪಬ್ಲಿಕೇಶನ್ ಈ ಕೃತಿಯನ್ನು ಮುದ್ರಿಸಿ ಹೊರತರುತ್ತಿದೆ. ಇನ್ನು ಶ್ರೀದೇವಿ ಅವರ ಕೃತಿ ಹೊರಬರುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಪ್ರತಿಕ್ರಿಯಿಸುತ್ತಿರುವ ಅಭಿಮಾನಿಗಳು, ಕೃತಿಯನ್ನು ಓದಲು ಉತ್ಸುಕರಾಗಿದ್ದು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಕೋರುತ್ತಿದ್ದಾರೆ.
ಆದರೆ, ಶ್ರೀದೇವಿ ಅವರ ಬಗ್ಗೆ ಬರುತ್ತಿರುವ ಈ ಕೃತಿಯ ಬಗ್ಗೆ ಶ್ರೀದೇವಿ ಪತಿ ಬೋನಿ ಕಪೂರ್ ಮಾತ್ರ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿರುವುದು, ಅನೇಕರಿಗೆ ಅಚ್ಚರಿ ಮೂಡಿಸಿದೆ. ಅಂದ ಹಾಗೆ ಈ ಕೃತಿ ಇದೇ ಅಕ್ಟೋಬರ್ ಅಂತ್ಯಕ್ಕೆ ಬಿಡುಗಡೆಯಾಗುತ್ತಿದ್ದು, ಕೃತಿಯಲ್ಲಿ ಶ್ರೀದೇವಿ ಕುರಿತಾದ ಯಾವೆಲ್ಲ ಸಂಗತಿಗಳು ಅಡಗಿವೆ ಎಂಬ ಪ್ರಶ್ನೆಗೆ ಕೃತಿ ಹೊರಬಂದ ಮೇಲಷ್ಟೇ ಉತ್ತರ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.