ಒಪ್ಪುವ ಕುಪ್ಪಸ ತೊಡಬೇಕು !
Team Udayavani, Oct 11, 2019, 12:21 PM IST
ಪ್ರತಿಯೊಬ್ಬ ಮಹಿಳೆಯೂ ತಾನು ಸೌಂದರ್ಯವತಿಯಾಗಿ, ವಿಭಿನ್ನವಾಗಿ ಮತ್ತು ಪರಿಪೂರ್ಣವಾಗಿ ಕಾಣಬೇಕೆಂದು ಬಯಸುತ್ತಾಳೆ ! ಸೀರೆ ಉಟ್ಟರೆ ನಾರಿಯ ಅಂದ ದುಪ್ಪಟ್ಟಾಗುತ್ತದೆ ಎಂಬುದೇನೋ ನಿಜವೇ. ಸೀರೆ ಉಡುವ ಶೈಲಿ ಬ್ಲೌಸ್ ಸೆಲೆಕ್ಷನ್ ಎಲ್ಲವೂ ಸಮರ್ಪಕವಾಗಿದ್ದರೆ ಹೆಣ್ಣಿಗೆ ಪರ್ಫೆಕ್ಟ್ ಲುಕ್ ಕೂಡ ಬರುತ್ತದೆ. ತುಂಬಾ ಟ್ರೆಡೀಷನ್ ಆಗಿಯೂ ಕಾಣಿಸುತ್ತಾರೆ. ಭಾರತೀಯ ಸಂಸ್ಕೃತಿಯ ಜೊತೆಗೆ ಶೈಲಿಯನ್ನು ಚಿತ್ರಿಸುವ ಡಿಸೈನರ್ ಬ್ಲೌಸ್ ಮಹಿಳೆಯರನ್ನು ಸಾಕಷ್ಟು ಆಧುನಿಕವಾಗಿ ಕಾಣುವಂತೆ ಮಾಡುತ್ತದೆ.
ಸೀರೆಗೊಪ್ಪುವ ಬ್ಲೌಸ್ ತೊಟ್ಟು , ಸೀರೆ ಮಡಚಿ ನೆರಿಗೆ ಇಟ್ಟು ಅಚ್ಚುಕಟ್ಟಾಗಿ ಸೀರೆಯುಟ್ಟ ನಾರಿಯ ಚೆಲುವನ್ನು ನೋಡುವುದೇ ಚೆಂದ. ಈ ಸೀರೆಗೂ ನೀರೆಯ ಬ್ಲೌಸ್ ಡಿಸೈನ್‌ಗೂ ಏನು ಬಂಧವೋ, ಎಲ್ಲಿಲ್ಲದ ನಂಟೋ ಏನೋ. ಫ್ಯಾಷನ್ ಲೋಕದಲ್ಲಿ ಸಾರಿಗೆ ಇನ್ನಷ್ಟು ಅಂದ ಹೆಚ್ಚಿಸುವ ಬ್ಲೌಸ್ ಡಿಸೈನರ್ ಲೂಕ್‌ಗಳು ಹೆಣ್ಣಿನ ಅಂದಕ್ಕೆ ವಿಶಿಷ್ಟ ಮೆರಗು ಕೊಡುತ್ತವೆ.
ಸೀರೆ ಎಂದಮೇಲೆ ಬ್ಲೌಸ್ ಗ್ರ್ಯಾಂಡ್ ಆಗಿರಬೇಕು. ಹೊಸ ಸೀರೆಯೊಂದಿಗೆ ಮಾಡರ್ನ್ ಬ್ಲೌಸ್ ಹಾಕೋ ಮೂಲಕ ಮಿಂಚಬಹುದು. ಸೀರೆ ಖರೀದಿಸಿದ ತಕ್ಷಣ ನೆನಪಿಗೆ ಬರುವುದು ರವಿಕೆ ಡಿಸೈನ್‌ಗಳು. ಇತ್ತೀಚಿನ ವರ್ಷಗಳಲ್ಲಿ ರವಿಕೆಯ ವಿನ್ಯಾಸದಲ್ಲಿ ಹೊಸ ಕ್ರಾಂತಿಯೇ ಆಗಿದೆ. ಒನ್ ಶೋಲ್ಡರ್, ಆಫ್ ಶೋಲ್ಡರ್, ಸ್ಲಿವ್‌ಲೆಸ್, ಮೆಗಾ ಸ್ಲಿವ್, ಪಫ್ ಸ್ಲಿವ್, ಹಾಫ್ ಸ್ಲಿವ್, ಫುಲ…ಸ್ಲಿವ್, ಥ್ರಿಫೋರ್ತ್ ಸ್ಲಿವ್ ಬ್ರೌಸ್ ಇತ್ಯಾದಿ. ಇದರ ಜೊತೆಗೆ ನೆಕ್ ಲೈನಿನಲ್ಲೂ ರೌಂಡ್ , ಸ್ಕ್ವೇರ್ , ಓವಲ್ , ಪ್ಯಾಕ್‌ನೆಕ್ ಲೈನ್- ಇತ್ಯಾದಿ ಬಗೆಬಗೆಯ ಪಾಟರ್ನ್ಗಳಲ್ಲಿ ಮಾಡರ್ನ್ ಲುಕ್ ನೀಡುವ ಡಿಜೈನರ್ ರವಿಕೆಗಳನ್ನು ಮದುವೆ ಹಾಗೂ ಸಮಾರಂಭಗಳಲ್ಲಿ ಹೊಸ ಭರ್ಜರಿ ಸೀರೆಯ ಜೊತೆ ಆದ್ಯತೆ ನೀಡಿದರೆ ನಾರಿಯ ಲುಕ್ ಬದಲಾಗೋದರಲ್ಲಿ ಸಂಶಯವಿಲ್ಲ. ಸಾರಿಗಳಿಗೆ ಸರಿ ಹೊಂದುವಂತಹ ಮೆಟಿರೀಯಲ್ ಬ್ಲೌಸ್‌ಗೆ ಹೊಂದುವಂತೆ ಕೈಯಲ್ಲಿ ಬಿಡಿಸುವ ಎಂಬ್ರಾಯಿಡರಿ, ಕನ್ನಡಿ, ಹರಳು ಜೋಡಣೆ, ಕುಂದನ್ ಕುಸುರಿ, ಮುತ್ತುಗಳ ಜೋಡಣೆ ಇವುಗಳಿಂದ ಇಂದು ಬ್ಲೌಸ್ ಹೊಸತನ ನೀಡಿ ಆಕರ್ಷಕವಾಗಿಸುತ್ತದೆ.
ಸೀರೆ ರವಿಕೆಯ ಅಂದವನ್ನು ಹೆಚ್ಚಿಸಿದರೆ, ಡಿಸೈನರ್ ಬ್ಲೌಸ್‌ನಿಂದ ಸೀರೆಯ ಸೌಂದರ್ಯ ದ್ವಿಗುಣಗೊಳ್ಳುತ್ತದೆ. ಫ್ಯಾಷನ್ ಲೋಕದಲ್ಲಿ ಬ್ಲೌಸ್ ಡಿಸೈನ್ ಮತ್ತು ಕಲರ್ ಕಾಂಬಿನೇಷನ್‌ಗಳ ಬ್ಲೌಸ್‌ನ ಫ್ರಂಟ್ ಮತ್ತು ಬ್ಯಾಕ್ ಡಿಸೈನ್‌ಗಳಲ್ಲಿ ಹೈ ಕಾಲರ್‌ನಿಂದ ಹಿಡಿದು ನೆಕ್‌ಲೆಸ್, ಬ್ಯಾಕ್ಲೆಸ್ ಸೇರಿದಂತೆ ಹೊಸತನದ ಅಂದ ಇತರರನ್ನು ನಿಮ್ಮೆಡೆ ಗಮನ ಸೆಳೆಯುವುದು. ಫ್ಯಾಶನ್ ಜಗತ್ತಿನಲ್ಲಿ ಒಂದಕ್ಕಿಂತ ಒಂದು ಭಿನ್ನವೆನಿಸುವ ಬ್ಯಾಕ್ ಡಿಸೈನುಗಳು ಮಾದರಿಗೊಳ್ಳುತ್ತಿವೆ. ಗ್ರ್ಯಾಂಡ್ ಬ್ಲೌಸ್‌ಗಳಲ್ಲಿ ರಿಚ್ ಲುಕ್ ನೀಡುವ ಕಾಂಟ್ರಾಸ್ಟ್ ಬಣ್ಣದ ವರ್ಕ್ ಇರುವ ಬ್ಯಾಕ್‌ನೆಕ್ ಡಿಸೈನ್ ಈಗ ಟ್ರೆಂಡ್ ಎನಿಸಿಕೊಂಡಿದೆ. ಮಾರುಕಟ್ಟೆಯ ಟ್ರೆಂಡೆಗೆ ಸ್ಪರ್ಧೆಯನ್ನೊಡ್ಡುವ ಡಿಸೈನರ್ ಬ್ಲೌಸ್‌ಗಳು ಫ್ಯಾಷನ್‌ಪ್ರಿಯರ ಫೇವರಿಟ್ ಆಗಿದೆ. ಸ್ಟೋನ್ ಡಿಸೈನ್, ಕುಂದನ್ ವರ್ಕ್, ಲೇಸ್ ವರ್ಕ್ ಇರುವ ಡಿಸೈನರ್ ಬ್ಲೌಸ್‌ಗಳು ರಿಚ್ ಲುಕ್ ನೀಡುತ್ತವೆ. ಡಿಸೈನರ್ ಬ್ಲೌಸ್‌ಗಳ ಬಗ್ಗೆ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಎಂದರೆ ಸೀರೆಗಳಿಗಿಂತ ಹೆಚ್ಚಿನ ಹಣವನ್ನು ಡಿಸೈನರ್ ಬ್ಲೌಸ್ ಹೊಲಿಸಲು ಕೊಡಬೇಕಾಗುತ್ತದೆ.
ಬ್ಯಾಕ್ ಮತ್ತು ನೆಕ್‌ನೊಂದಿಗೆ ಜನಪ್ರಿಯ ಡಿಸೈನ್ ಗಳು, ಹೊಸ ಬ್ಲೌಸ್ ಪ್ಯಾಟರ್ನ್ಗಳು ಕ್ಲಾಸಿ ಮತ್ತು ಅತ್ಯಾಧುನಿಕ ನೋಟವನ್ನು ನಿಮಗೆ ಒದಗಿಸುತ್ತದೆ. ಇಂದಿನ ದಿನಗಳಲ್ಲಿ ಮಹಿಳೆಯರು ಸಾಮಾನ್ಯವಾಗಿ ಸ್ಟೈಲಿಶ್ ಮತ್ತು ಫ್ಯಾಶನ್ ಬ್ಲೌಸ್‌ಗಳಿಗಾಗಿ ಮತ್ತು ಹಿಂಭಾಗದಲ್ಲಿ ಭಾರೀ ಕಸೂತಿಗೆ ಸಂಬಂಧಿಸಿದಂತೆ ಆಕರ್ಷಿತರಾಗಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ಜನಪ್ರಿಯವಾಗಿರುವ ಸಾರಿ ಬ್ಲೌಸ್‌ಗಳು ಸೀರೆಗೆ ತಕ್ಕಂತೆ ಅಂದ ಹೆಚ್ಚಿಸುವ ಎಕ್ಸ್ ಟ್ರಾ ವರ್ಕ್‌ನ ಮೆರಗಿನೊಂದಿಗೆ ಹ್ಯಾವಿ ಗ್ರ್ಯಾಂಡ್ ಲುಕ್ ನೀಡುತ್ತಿವೆ. ಮಹಿಳೆಯರು ಸ್ಟೋನ್ ಡಿಸೈನರ್ ಬ್ಲೌಸ್ ಧರಿಸುವುದರಿಂದ ಸ್ಪೆಷಲ್ ಆಗಿ ಕಾಣುತ್ತಾರೆ. ಅತೀವವಾಗಿ ಅಲಂಕೃತವಾದ ಬ್ಲೌಸ್‌ಗಳ ಮೋಡಿ ಮತ್ತು ಭವ್ಯತೆಯು ಫ್ರೀ, ಕಂಫರ್ಟ್, ಆತ್ಮವಿಶ್ವಾಸದ ಜೊತೆಗೆ ಸ್ತ್ರೀತ್ವದ ಭಾವಗಳನ್ನು ವರ್ಧಿಸುತ್ತ ಕ್ಲಾಸಿ ಮತ್ತು ಅತ್ಯಾಧುನಿಕ ನೋಟವನ್ನು ಒದಗಿಸುತ್ತದೆ ಹಾಗೂ ಆಧುನಿಕ ಸಮಾಜದಲ್ಲಿ ಫ್ಯಾಷನೇಬಲ್ ಮಹಿಳಾ ನಿಲುವನ್ನು ಪ್ರತಿನಿಧಿಸುತ್ತವೆ.
ಆಭರಣಪ್ರಿಯರಾದ ಭಾರತೀಯ ಮಹಿಳೆಯರು ಸೀರೆ ಮತ್ತು ರವಿಕೆಗಳ ಮೇಲೂ ಆಭರಣಗಳ ವಿನ್ಯಾಸಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ರವಿಕೆಗಳ ಹಿಂಭಾಗವನ್ನು ವಿಶಿಷ್ಟ ನಮೂನೆಯ ವಿನ್ಯಾಸದಲ್ಲಿ ಹೋಲಿಸಿ ಅದರೊಂದಿಗೆ ಓಲಾಡುವ ಝುಮುಕಿ, ನೇತಾಡುವ ಲೋಲಕ ಸೇರಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ರವಿಕೆಗಳ ಮೇಲೆ, ಸೀರೆಯ ಸೆರಗು ಅಂಚುಗಳಲ್ಲಿ ಒಡವೆಗಳಿಂದ ಮಾಡಿದ ಅಲಂಕಾರ ಬೆರಗು ಮೂಡಿಸುವಂತಿರುತ್ತದೆ. ಇದು ಮಾನಿನಿಯರ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುತ್ತ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ. ರೇಷ್ಮೆ ಸೀರೆಗಳ ಮೆರುಗು ಹೆಚ್ಚಿಸುವ ಜುವೆಲ್ಲರಿಗಳನ್ನು ಬ್ಲೌಸ್ ಹಾಗೂ ಬ್ಲೌಸ್‌ನ ಹಿಂಭಾಗದ ಭಾಗಕ್ಕೆ ಸ್ಟಿಕ್ ಮಾಡಿ ಒಂದಕ್ಕಿಂತ ಒಂದು ಭಿನ್ನವಾದ ಡಿಸೈನ್ ಹೊಂದಿರುವ ಗ್ರ್ಯಾಂಡ್ ಲುಕ್ ನೀಡುವ ಬ್ಲೌಸ್‌ಗಳು ಇದೀಗ ಟ್ರೆಂಡಿಯಾಗಿವೆ. ಮುತ್ತು, ಕುಂದನ್, ಮಣಿ, ಜರ್ದೋಸಿ, ಜರಿ ಹಾಕಿಸಿ ಡಿಸೈನ್ ಮಾಡಿದ ಬ್ಲೌಸ್-ಸೀರೆಯ ಸೊಬಗೇ ಸೊಬಗು.
ಭಾರತದ ಅಗ್ರಗಣ್ಯ ಉತ್ಕೃಷ್ಟ ಸೀರೆಗಳು ಮತ್ತು ಹೊಸ ಬ್ಲೌಸ್ ಪ್ಯಾಟರ್ನ್ಗಳು ತಮ್ಮ ವೈವಿಧ್ಯವನ್ನು ಸುಂದರವಾಗಿಯೇ ಕಾಪಾಡಿಕೊಂಡು ಹೆಣ್ಣಿನ ಅಂದವನ್ನು ಹೆಚ್ಚಿಸುತ್ತ ಬಂದಿವೆ. ಸಂಪ್ರದಾಯ-ಸೌಂದರ್ಯದ ಪ್ರತಿನಿಧಿಯಾಗಿರುವ ಮನಮೋಹಕ ವಿನ್ಯಾಸಗಳ ವೈವಿಧ್ಯವನ್ನು ಹೊಂದಿರುವ ಸೀರೆಗಳು ಮತ್ತು ಡಿಸೈನರ್ ಬ್ಲೌಸ್‌ಗಳು ಟೀನೇಜ್ ಮೆರುಗನ್ನು ಮೆರೆಯಲು ಹೆಣ್ಣಿನ ಸೌಂದರ್ಯಕ್ಕೆ ಕೊಡುಗೆಯಾಗಿವೆ.
ಸೌಮ್ಯಾ ಪ್ರಕಾಶ ತದಡಿಕರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.