ಮತ್ಸ್ಯ ಕನ್ಯೆ ಐಶ್
Team Udayavani, May 31, 2019, 6:00 AM IST
ಪ್ರತಿ ಬಾರಿ ನಡೆಯುವ ಕ್ಯಾನೆ ಫಿಲಂ ಫೆಸ್ಟಿವಲ್‌ನಲ್ಲಿ ಜಗತ್ತಿನ ವಿವಿಧ ಚಿತ್ರರಂಗಗಳ ತಾರೆಯರು ಭಾಗವಹಿಸುವುದು, ಜಗತ್ತಿನ ಚಿತ್ರರಂಗದ ದಿಗ್ಗಜರ ಮುಂದೆ ತಮ್ಮ ಚಿತ್ರಗಳನ್ನ, ವ್ಯಕ್ತಿತ್ವವನ್ನು ಪ್ರದರ್ಶಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಈ ಬಾರಿ ಪ್ಯಾರೀಸ್‌ನಲ್ಲಿ ನಡೆದ 72ನೇ “ಕೇನ್ಸ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್’ನಲ್ಲಿ ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯಾ ಜೊತೆ ಮತ್ಸ್ಯ ಕನ್ಯೆ ಗೆಟಪ್‌ನಲ್ಲಿ ಅದ್ದೂರಿಯಾಗಿ ಎಂಟ್ರಿ ಕೊಟ್ಟು ನೆರೆದಿದ್ದವರ ಗಮನ ಸೆಳೆದಿದ್ದಾರೆ.
ಪ್ರಸಿದ್ಧ ಕಾಸ್ಟೂಮ್ ಡಿಸೈನರ್ ಜೀನ್ ಲ್ಯೂಯಿಸ್ ಸಬಾಜಿ ವಿನ್ಯಾಸಗೊಳಿಸಿದ್ದ, ಒಂದು ಕಡೆಯ ಅರ್ಧ ತೋಳು ಇರುವ ಮತ್ಸಕನ್ಯೆ ಉಡುಪು ಧರಿಸಿ, ನ್ಯೂಡ್ ಲಿಪ್‌ಸ್ಟಿಕ್ ಹಾಕಿ ಯಾವುದೇ ಆಭರಣ ಇಲ್ಲದೆ ಐಶ್ವರ್ಯಾ ರೈ ಆಗಮಿಸಿದ್ದರು. ಇನ್ನೊಂದು ವಿಶೇಷವೆಂದರೆ, ಈ ಬಾರಿಯ “ಕೇನ್ಸ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್’ ಕಾರ್ಯಕ್ರಮಕ್ಕೆ ಐಶ್ವರ್ಯಾ ರೈ ಐಶ್ವರ್ಯಾ ತಮ್ಮ ಮಗಳು ಆರಾಧ್ಯಾಳನ್ನು ಕರೆದುಕೊಂಡು ಬಂದಿದ್ದರು. ಆರಾಧ್ಯಾ ತನ್ನ ತಾಯಿಯ ಉಡುಪಿನ ಜೊತೆ ಮ್ಯಾಚ್ ಆಗಲು ಹಳದಿ ಬಣ್ಣದ ಫ್ರಾಕ್ ಧರಿಸಿದ್ದರು. ಐಶ್ವರ್ಯ ಎಂಟ್ರಿ ಕೊಡುವ ವೇಳೆ ತಮ್ಮ ಮಗಳ ಕೈ ಹಿಡಿದುಕೊಂಡು ಆಕೆಯನ್ನು ಸುತ್ತಿಸಿದ್ದಾರೆ.
ಇನ್ನು ಐಶ್ವರ್ಯಾ ರೈ ತಮ್ಮ ಮಗಳೊಂದಿಗೆ ಇಂಥಾದ್ದೊಂದು ಅಪರೂಪದ ಎಂಟ್ರಿ ಕೊಟ್ಟಿರುವುದಕ್ಕೆ “ಕೇನ್ಸ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್’ನಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಐಶ್ವರ್ಯಾ ರೈ ಒಬ್ಬರು ಒಬ್ಬ ವೃತ್ತಿಪರ ನಟಿಯಾಗಿದ್ದರೂ, ತಾಯಿಯಾಗಿ ತಮ್ಮ ಮೇಲಿನ ವಿಶ್ವಾಸಾರ್ಹ ಜವಾಬ್ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ನಟಿಯಾಗಿ ಮತ್ತು ತಾಯಿಯಾಗಿ ಅವರ ದಿಟ್ಟ ನಡೆ-ನಿಲುವು ಸ್ಪಷ್ಟವಾಗಿದೆ ಎಂದು ಅನೇಕರು ಪ್ರಶಂಸಿಸಿದ್ದಾರೆ.
ಐಶ್ವರ್ಯಾ ರೈ ಕೂಡ “ಕೇನ್ಸ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್’ನ ಇಂಥ ಅಪರೂಪದ ಕ್ಷಣಗಳನ್ನು ತಮ್ಮ ಇನ್ಸಾ$rಗ್ರಾಂನಲ್ಲಿ ಹಂಚಿಕೊಂಡಿದ್ದು, ಮಗಳ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡಿ, “ನಿಮ್ಮ ಪ್ರೀತಿಗೆ ಧನ್ಯವಾದಗಳು. ಕೇನ್ಸ್ 2019′ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಬಾರಿಯ “ಕೇನ್ಸ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್’ನಲ್ಲಿ ಐಶ್ವರ್ಯಾ ರೈ ಅವರೊಂದಿಗೆ, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಹಿನಾ ಖಾನ್, ಕಂಗನಾ ರಣಾವುತ್, ಮಲ್ಲಿಕಾ ಶೆರಾವತ್, ಹುಮಾ ಖುರೇಶಿ, ಡಯಾನಾ ಪೆಂಟಿ ಮೊದಲಾದ ಸ್ಟಾರ್ ಕಲಾವಿದರು ಭಾಗವಹಿಸಿದ್ದಾರೆ.
ಒಟ್ಟಾರೆ ತಾಯಿಯಾದ ಬಳಿಕವೂ ಐಶ್ವರ್ಯಾ ರೈ ತನ್ನನ್ನು ತಾನು ಜವಾಬ್ದಾರಿ ಮತ್ತು ವೃತ್ತಿಪರತೆಯನ್ನು ನಿರೂಪಿಸಲು “ಕೇನ್ಸ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್’ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.