ಮತ್ತೆ ದಕ್ಷಿಣದತ್ತ ಐಶ್ವರ್ಯಾ ಚಿತ್ತ


Team Udayavani, Jan 10, 2020, 4:23 AM IST

8

ಮಾಜಿ ಭುವನ ಸುಂದರಿ ಬಾಲಿವುಡ್‌ನ‌ಷ್ಟೇ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಜನಪ್ರಿಯ ನಟಿ. ಐಶ್ವರ್ಯಾ ರೈ ಇಂದಿಗೂ ದಕ್ಷಿಣ ಭಾರತದಲ್ಲಿ ತಮ್ಮದೇ ಆದ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ಎಂದಿರನ್‌ ಚಿತ್ರದ ಬಳಿಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಎಲ್ಲೂ ಅಷ್ಟಾಗಿ ಕಾಣಿಸಿಕೊಂಡಿರದ ಐಶ್ವರ್ಯಾ ರೈ, ಈಗ ಮತ್ತೆ ದಕ್ಷಿಣ ಭಾರತದ ಚಿತ್ರರಂಗದತ್ತ ಮರಳಿ ಬರುವ ಸೂಚನೆ ನೀಡಿದ್ದಾರೆ.

ಹೌದು, ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಈ ವರ್ಷದ ಬಹು ನಿರೀಕ್ಷಿತ ಚಿತ್ರ ಪೊನ್ನಿಯಿನ್‌ ಸೆಲ್ವನ್‌ ಚಿತ್ರದಲ್ಲಿ ಐಶ್ವರ್ಯಾ ರೈ ಅಭಿನಯಿಸುತ್ತಿದ್ದಾರಂತೆ. ಅಂದ ಹಾಗೆ, ಈ ಚಿತ್ರದಲ್ಲಿ ಐಶ್ವರ್ಯಾ ರೈ ದ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ನಂದಿನಿ ಹಾಗೂ ಆಕೆಯ ತಾಯಿ ರಾಣಿ ಮಂದಾಕಿನಿ ಎಂಬ ಎರಡು ಪಾತ್ರದಲ್ಲಿ ಐಶ್ವರ್ಯಾ ರೈ ಬಣ್ಣ ಹಚ್ಚುತ್ತಿದ್ದಾರೆ. ಉಳಿದಂತೆ, ಭಾರತೀಯ ಸಿನಿಮಾರಂಗದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಪೊನ್ನಿಯನ್‌ ಸೆಲ್ವನ್‌ಶಿರ್ಷಿಕೆ ಪೋಸ್ಟರ್‌ ಬಿಡುಗಡೆಯಾಗಿದ್ದು, ಇದೇ ತಿಂಗಳಿನಿಂದಲೇ ಚಿತ್ರೀಕರಣ ಆರಂಭವಾಗುತ್ತಿದೆ. ಇದೀಗ, ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ನಟಿಸುವುದು ಪಕ್ಕಾ ಆಗಿದೆ. ಚಿತ್ರತಂಡದ ಮೂಲಗಳ ಪ್ರಕಾರ ಐಶ್ವರ್ಯಾ ರೈ ಕೂಡ ಇದೇ ತಿಂಗಳ ಅಂತ್ಯಕ್ಕೆ ಚಿತ್ರತಂಡ ಸೇರಲಿದ್ದಾರೆ. ಇನ್ನು ದಕ್ಷಿಣ ಭಾರತದ ಚಿತ್ರರಂಗಕ್ಕೆ ಮತ್ತೆ ಮರಳಿದ ಐಶ್ವರ್ಯಾ ರೈ ಈ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದು, “ಮಣಿರತ್ನಂ ಅವರ ಜೊತೆಯಲ್ಲಿ ಕೆಲಸ ಮಾಡುವುದು ನನಗೆ ಖುಷಿ. ಅವರು ನನ್ನ ಗುರುಗಳು. ಪೊನ್ನಿಯಿನ್‌ ಸೆಲ್ವನ್‌ ಸಿನಿಮಾದಲ್ಲಿ ನಟಿಸುವುದಕ್ಕೆ ಕಾಯುತ್ತಿದ್ದೇನೆ. ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ’ ಎಂದಿದ್ದಾರೆ.

ಚಿತ್ರತಂಡದ ಮೂಲಗಳ ಪ್ರಕಾರ, ಮಣಿರತ್ನಂ ನಿರ್ದೇಶನದ ಈ ಚಿತ್ರದಲ್ಲಿ ಬರೋಬ್ಬರಿ ಎಂಟು ಜನ ಸೂಪರ್‌ ಸ್ಟಾರ್ ಚಿತ್ರದ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರಂತೆ. ತಮಿಳು ನಟ ವಿಕ್ರಮ…, ಕಾರ್ತಿ, ತ್ರಿಷಾ, ಕೀರ್ತಿ ಸುರೇಶ್‌, ಜಯಂ ರವಿ, ಐಶ್ವರ್ಯಾ ರಾಜೇಶ್‌ ಸೇರಿದಂತೆ ಹಲವು ಸ್ಟಾರ್‌ ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ.
ಪೊನ್ನಿಯನ್‌ ಸೆಲ್ವನ್‌ ಚಿತ್ರದ ಹಾಡುಗಳಿಗೆ ಎ.ಆರ್‌. ರೆಹಮಾನ್‌ ಸಂಗೀತ ಸಂಯೋಜನೆಯಿದ್ದು, ರವಿ ವರ್ಮನ್‌ ಛಾಯಾಗ್ರಹಣ ಚಿತ್ರದಲ್ಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ವರ್ಷಾಂತ್ಯಕ್ಕೆ ಐಶ್ವರ್ಯಾ ರೈ ಅವರನ್ನು ಈ ಚಿತ್ರದಲ್ಲಿ ತೆರೆಮೇಲೆ ನೋಡಬಹುದು.

ಟಾಪ್ ನ್ಯೂಸ್

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

1-horoscope

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

arrest-woman

Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ

1-horoscope

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.