ಆಲಿವ್ ಎಣ್ಣೆ
Team Udayavani, Dec 27, 2019, 4:00 AM IST
ಆಲಿವ್ ಎಣ್ಣೆಯನ್ನು ಇತ್ತೀಚೆಗೆ ಸೌಂದರ್ಯ ಸಾಧನವಾಗಿ ಬಳಸುವುದು ವಾಡಿಕೆಯಾಗಿದೆ. ಆಲಿವ್‌ಗಳಿಂದ ತಯಾರಿಸುವ ಈ ಎಣ್ಣೆಯನ್ನು ಹೆಚ್ಚಾಗಿ ಮುಖದ ಸೌಂದರ್ಯ ವರ್ಧನೆಗಾಗಿ ಬಳಸುತ್ತಾರೆ. ವಯಸ್ಸಿನ ದ್ಯೋತಕವಾಗಿ ಮೂಡುವ ನೆರಿಗೆಗಳನ್ನು ಮಾಯ ಮಾಡುವುದು ಯಾರಿಗೆ ಇಷ್ಟವಿಲ್ಲ ! ಆಲಿವ್ ಎಣ್ಣೆಯು ಆ್ಯಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿದೆ. ಅಂದರೆ, ವಯಸ್ಸಾಗವಿಕೆಯ ಲಕ್ಷಣಗಳನ್ನು ಕಡಿಮೆ ಮಾಡಬಲ್ಲದು. ಸುಂದರ ಮುಖವನ್ನು, ಜೀವನೋತ್ಸಾಹವನ್ನು ಉಳಿಸಿಕೊಳ್ಳಬೇಕು ಎಂಬ ಆಸೆ ಇರುವವರು ಆಲಿವ್ ಎಣ್ಣೆ ಬಳಸಬಹುದು ಎಂದು ಸಂಶೋಧಕರು ಹೇಳುತ್ತಾರೆ. ಅಷ್ಟೇ ಅಲ್ಲ, ಕ್ಯಾನ್ಸರ್ ಕೋಶಗಳನ್ನೂ ಅದು ಕೊಲ್ಲಬಲ್ಲುದು. ಆರೋಗ್ಯವನ್ನು ಕಾಪಾಡಿಕೊಳ್ಳಲೂ ಆಲಿವ್ ಎಣ್ಣೆಯ ಬಳಕೆ ಉತ್ತಮ ಎಂದ ಹಾಗಾಯಿತು.
ತ್ವಚೆ ಸಂರಕ್ಷಣೆಗಾಗಿ
ಮಧ್ಯಾಹ್ನದ ಬಿಸಿಲಿನಲ್ಲಿ ಹೊರಹೋಗಬೇಕಾದರೆ ಆಲಿವ್ ಎಣ್ಣೆ ಹಚ್ಚಿದರೆ ಅಲ್ಟ್ರಾ ವಯೋಲೇಟ್ ಕಿರಣಗಳಿಂದ ಸಂರಕ್ಷಿಸಿಕೊಳ್ಳಬಹುದು.
ವಿಟಮಿನ್ ಎ, ಡಿ, ಇ ಮತ್ತು ಕೆ
ಆಲಿವ್ ಎಣ್ಣೆಯನ್ನು ಬಳಸಿ ಅಡುಗೆ ಮಾಡುವುದರಿಂದ ಚರ್ಮಕ್ಕೆ ಬೇಕಾದ ವಿಟಮಿನ್‌ಗಳಾದ ಎ, ಡಿ ಮತ್ತು ಕೆ ಲಭ್ಯವಾಗುತ್ತದೆ. ಆದ್ದರಿಂದ ಚರ್ಮದ ಕಾಂತಿ ಉಳಿಸಿಕೊಳ್ಳಬಹುದು.
ಚರ್ಮದ ಮೇಲಿನ ಕಜ್ಜಿಗಳಿಗೆ
ಆಲಿವ್ ಎಣ್ಣೆ ಹಚ್ಚಿದರೆ ಚರ್ಮದ ಮೇಲಿನ ಕಜ್ಜಿಗಳು ಬೇಗನೆ ಗುಣವಾಗುತ್ತವೆ. ಕಾಲಿನಲ್ಲಿ ಹುಣ್ಣುಗಳಾದಾಗಲೂ ಈ ಎಣ್ಣೆ ಹಚ್ಚುವುದರಿಂದ ಒಳಿತಾಗುತ್ತದೆ.
ಮುಖ ಮತ್ತು ಕೂದಲಿಗೆ
ಮುಖಕ್ಕೆ ಆಲಿವ್ ಎಣ್ಣೆಯನ್ನು ಮಸಾಜ್ ಮಾಡುವುದರಿಂದ ಕಾಂತಿಯುತವಾಗುತ್ತದೆ. ಆಲಿವ್ ಎಣ್ಣೆಯ ಮಾಯಿಶ್ಚರೈಸರನ್ನೂ ಬಳಸಬಹುದು. ಅಥವಾ ನೇರವಾಗಿ ಮುಖಕ್ಕೆ ಹಚ್ಚಿಕೊಂಡು, ತುಸು ಹೊತ್ತಿನ ಬಳಿಕ ಸ್ನಾನ ಮಾಡಬಹುದು.
ಕಣ್ಣಿನ ಮೇಕಪ್ ತೆಗೆಯಲು
ಕಣ್ಣಿಗೆ ಹಚ್ಚಿದ ಮೇಕಪ್‌ನ್ನು ಸುಲಭವಾಗಿ ತೆಗೆಯಲು ಆಲಿವ್ ಎಣ್ಣೆ ಸಹಕರಿಸುತ್ತದೆ. ಹತ್ತಿಯ ಮೇಲೆ ಎರಡು ಹನಿ ಎಣ್ಣೆ ಹಾಕಿ, ಕಣ್ಣರೆಪ್ಪೆಯನ್ನು ಒರೆಸಿದರೆ ಮೇಕಪ್ ಬೇಗನೇ ಹೋಗುತ್ತದೆ. ಕಣ್ಣು ಸ್ವತ್ಛವಾಗುತ್ತದೆ.
ಫೇಸ್ ಮಾಸ್ಕ್
ಆಲಿವ್ ಎಣ್ಣೆಯ ಜೊತೆ ಮೊಟ್ಟೆಯ ಬಿಳಿ ಭಾಗ ಅಥವಾ ಜೇನುತುಪ್ಪವನ್ನು ಬೆರೆಸಿ ಹಚ್ಚಿಕೊಂಡರೆ ಅದು ಉತ್ತಮ ಫೇಸ್ ಮಾಸ್ಕ್. ಇದರಿಂದ ಚರ್ಮವು ಮೃದುವಾಗುತ್ತದೆ. ಚರ್ಮವು ಸುಕ್ಕುಗಟ್ಟಿದ್ದರೆ ಈ ರೀತಿಯ ಫೇಸ್‌ಮಾಸ್ಕ್ಮಾಡಿಕೊಳ್ಳುವುದು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.