ಎಲ್ಲ ಯುವಕರು ಮುಂದೊಂದು ದಿನ ಮುದುಕರಾಗಲಿದ್ದಾರೆ !


Team Udayavani, Feb 1, 2019, 12:30 AM IST

x-13.jpg

ಈಚೆಗೆ ನನ್ನ ಎಂಬತ್ತೆರಡು ವರ್ಷದ ಅತ್ತೆಗೆ ಸಣ್ಣ ಹೃದಯಾಘಾತವಾಗಿತ್ತು. ಮೈದುನ ಕರೆ ಮಾಡಿ ತಿಳಿಸಿದ್ದ. ಗಂಡ ಎಲ್ಲಿಗೋ ಅಗತ್ಯ ಕೆಲಸಕ್ಕೆಂದು ಹೊರಟವರು ಅದನ್ನು ಕೈಬಿಟ್ಟು ಅತ್ತೆಯನ್ನು ನೋಡಲು ಧಾವಿಸಿದ್ದರು. ಅವರು ಚೇತರಿಸುತ್ತಿದ್ದಾರೆ ಎಂದು ಗೊತ್ತಾಗಿ ಮರುದಿನ ಅವರನ್ನು ಆಸ್ಪತ್ರೆಯಲ್ಲಿದ್ದು ನೋಡಿಕೊಳ್ಳಲು ನಾನು ಹೋದೆ. ಅಲ್ಲಿಯವರೆಗೆ ನನ್ನ ಒಬ್ಬ ನಾದಿನಿ, ಮೈದುನ ಅತ್ತೆಯನ್ನು ನೋಡಿಕೊಂಡಿದ್ದರು. ಆಸ್ಪತ್ರೆಯಲ್ಲಿ ನಾನು ಒಂದು ದಿನ ಕಳೆಯುವಷ್ಟರಲ್ಲಿ ನನ್ನ ಇನ್ನೊಬ್ಬಳು ನಾದಿನಿ ಕರೆಮಾಡಿ, “ಅಮ್ಮನನ್ನು ನಾನು ನೋಡಿಕೊಳ್ಳುತ್ತೇನೆ. ನೀನು ಮನೆಗೆ ಹೋಗಬಹುದು’ ಎಂದಳು. ಒಟ್ಟಿನಲ್ಲಿ ಅತ್ತೆಯನ್ನು ಆಸ್ಪತ್ರೆಯಲ್ಲಿ ಅವರ ನಾಲ್ಕು ಜನ ಹೆಣ್ಣುಮಕ್ಕಳು, ಇಬ್ಬರು ಮಗಂದಿರು ಎಲ್ಲರೂ ಹೂವಿನಂತೆ ನೋಡಿಕೊಂಡರು. ನನ್ನ ಅತ್ತೆ ಪುಣ್ಯವಂತೆ. ಆದರೆ ಎಷ್ಟು ಜನರಿಗಿದೆ ಈ ಭಾಗ್ಯ? ನಾನು ಅಲ್ಲಿ ಇದ್ದಾಗ ನನ್ನ ಅತ್ತೆಯ ರೂಮಿನ ಎದುರು ಭಾಗದಲ್ಲಿ ಮುದಿ ವಯಸ್ಸಿನ ಮಹಿಳೆಯೊಬ್ಬರು ಪಕ್ಷವಾತ ನಿಮಿತ್ತ ದಾಖಲು ಆಗಿದ್ದರು. ಅವರಿಗೆ ಮಗಂದಿರು, ಮಗಳಂದಿರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಎಲ್ಲ ಇದ್ದರೂ ಯಾರೂ ಅವರ ಜೊತೆ ಇರಲಿಲ್ಲ. ಹೇಗಿದ್ದಾರೆ ಎಂದು ನೋಡಲೂ ಬಂದಿರಲಿಲ್ಲ. ಅವರೆಲ್ಲ ಅವರವರ ಕೆಲಸದಲ್ಲಿ ಬ್ಯುಸಿ ಆಗಿದ್ದರು. ಆಸ್ಪತ್ರೆಗೆ ತಂದು ಸೇರಿಸಲೂ ಅವರಿಗೆ ಬಿಡುವು ಇರಲಿಲ್ಲ. ಬದಲಾಗಿ ಕೆಲಸದವಳೊಬ್ಬಳು ಅವರನ್ನು ನೋಡಿಕೊಳ್ಳುತ್ತಿದ್ದಳು. ಅವಳೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಳು. ಆದರೆ, ಆ ವೃದ್ಧೆಗೆ ಕೆಲಸದವಳಾದರೂ ಇದ್ದಳು. ಹೆತ್ತವರನ್ನು ನೋಡಿ ಕೊಳ್ಳಲಾಗುವುದಿಲ್ಲವೆಂದು ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳೂ ಎಷ್ಟಿಲ್ಲ?!

    ನನ್ನ ಗೆಳತಿಯ ಬಂಧುವೊಬ್ಬರ ವಯಸ್ಸಾದ ಅತ್ತೆಗೆ ಭೇದಿ ಶುರುವಾಗಿತ್ತು. “ತಿಂದರೆ ತಾನೆ ಭೇದಿ?’ ಎಂದು ಅವರ ಸೊಸೆ ಅವರಿಗೆ ಏನನ್ನೂ ತಿನ್ನಲು ಕೊಡದೆ ಉಪವಾಸ ಕೆಡಹಿದಳು. ಮೊದಲೇ ಅಶಕ್ತಗೊಂಡ ದೇಹ. ತಿನ್ನಲು ಸಿಗದೆ ಮತ್ತೂ ನಿಶ್ಶಕ್ತರಾಗಿ ಅವರು ಇಹಲೋಕ ತ್ಯಜಿಸಿದರು.

    ನನ್ನ ಪಕ್ಕದ ಊರಿನ ಶಾಲೆಯ ಅಧ್ಯಾಪಿಕೆಯೊಬ್ಬರ ಮಾವನಿಗೆ ವೃದ್ಧಾಪ್ಯ ಮತ್ತು ಮಧುಮೇಹದ ಕಾರಣದಿಂದ ಎರಡೂ ಕಣ್ಣು ಸಂಪೂರ್ಣ ಹೊರಟು ಹೋಗಿತ್ತು. ಅವರ ಗಂಡನಿಗೆ ಬ್ಯಾಂಕ್‌ನಲ್ಲಿ ಕೆಲಸ. ಅವರು ಬೆಳಿಗ್ಗೆ ಅನ್ನ, ಸಾರು, ಮೊಸರು ಎಲ್ಲವನ್ನೂ ಒಂದು ಪಾತ್ರೆಯಲ್ಲಿ ಒಟ್ಟು ಹಾಕಿ ಕಲಸಿ ಆ ವೃದ್ಧರು ಮಲಗುವ ಮಂಚದ ಒಂದು ಬದಿಯಲ್ಲಿ ಇಟ್ಟು, ಕೈ ತೊಳೆಯಲು ನೀರನ್ನೂ ಇಟ್ಟು ನಂತರ ಹೊರಗಿನಿಂದ ಬೀಗ ಹಾಕಿ ಶಾಲೆಗೆ ಹೋಗುತ್ತಿದ್ದರು. ಒಂದು ದಿನ ಮುಚ್ಚಿದ ಬಾಗಿಲಿನ ಒಳಗಡೆಯೇ ಅವರು ಕಣ್ಣು ಮುಚ್ಚಿದರು. ಆ ಸಮಯದಲ್ಲಿ ಅವರ ಜೊತೆ ಯಾರೂ ಇರಲಿಲ್ಲ. ಅವರು ಬದುಕಿರುವಾಗ ಒಂದು ಆದಿತ್ಯವಾರ ಅವರ ಮನೆಗೆ ಹೋಗಿದ್ದೆ. “ಹೋಗಿ ಬರುತ್ತೇನೆ ಮಾವ’ ಎಂದು ಅವರ ಕಾಲು ಹಿಡಿದು ನಾನು ಹೊರಟಾಗ ತಮ್ಮ ಅಸಹಾಯಕ ಸ್ಥಿತಿಗೋ ಎಂಬಂತೆ ಅವರ ಅರ್ಧ ಮುಚ್ಚಿದ ಕಣ್ಣುಗಳಿಂದ ಬಳಬಳನೆ ನೀರು ಉಕ್ಕಿ ಹರಿದದ್ದನ್ನು ಮರೆಯಲಾರೆ. ಆಗ ನನಗೆ ಅನಿಸಿತ್ತು- ಅವರನ್ನು ಗಂಡಹೆಂಡತಿ ಮನೆಯೊಳಗೆ ಕೂರಿಸಿ ಬೀಗ ಹಾಕಿ ಹೋಗುವ ಬದಲು ಒಬ್ಬ ಕೆಲಸದವಳನ್ನು ಇಟ್ಟುಕೊಳ್ಳಬಹುದಿತ್ತಲ್ಲ? ಇಬ್ಬರೂ ಉದ್ಯೋಗದಲ್ಲಿರುವುದರಿಂದ ಕೆಲಸದವಳಿಗೆ ಸಂಬಳ ಕೊಡುವುದು ಅವರಿಗೆ ಹೊರೆ ಆಗಲಾರದು ಎಂದು.

ಮುಪ್ಪನ್ನು ಯಾರೂ ಸ್ವಾಗತಿಸದಿದ್ದರೂ ಅದರಿಂದ ತಪ್ಪಿಸಿಕೊಳ್ಳಲಂತೂ ಸಾಧ್ಯವಿಲ್ಲ. ಯೌವ್ವನದಲ್ಲಿ ಹುಲಿ, ಸಿಂಹ ಆಗಿದ್ದವರೂ ಮುಪ್ಪು$ ಆವರಿಸಿದೊಡನೆ ಮಗು ಆಗಿಬಿಡುತ್ತಾರೆ. ಎಂಥ ಪೌರುಷವಂತನಾದರೂ ಹಿಂದಿನ ಅಹಂಕಾರದ ಮಾತುಗಳೆಲ್ಲ ಹೋಗಿ ದಯನೀಯ ಸ್ಥಿತಿಗೆ ತಲುಪಿ ಬಿಡುತ್ತಾರೆ. ಕ್ಷೀಣಗೊಳ್ಳುವ ನೆನಪಿನ ಶಕ್ತಿ, ಅಂಗಾಂಗಗಳಿಗೆ ರಕ್ತ ಸಂಚಾರದ ಕೊರತೆ, ದೃಷ್ಟಿ ಹಾಗೂ ಕಿವಿ ಮಂದವಾಗುವುದು, ನಿತ್ರಾಣ, ಸುಸ್ತು ಇತ್ಯಾದಿ ತೊಂದರೆಗಳು ವೃದ್ಧಾಪ್ಯದಲ್ಲಿ ಬಾಧಿಸುವುದರಿಂದ ಪರಾವಲಂಬಿ ಜೀವನ ಮಾಡಬೇಕಾಗುತ್ತದೆ.

ಯಾರಿಗೇ ಆಗಲಿ ವೃದ್ಧರಾದಾಗ ಪಂಚಭಕ್ಷ್ಯ ಪರಮಾನ್ನ ಬೇಕಾಗುವುದಿಲ್ಲ. ಅವರಿಗೆ ಆ ಸಮಯದಲ್ಲಿ ಬೇಕಾಗಿರುವುದು ಪ್ರೀತಿಯಿಂದ ಕೊಡುವ ಒಂದು ಮುಷ್ಠಿ ಅನ್ನ, “ನಾವಿದ್ದೇವೆ ನಿಮ್ಮ ಜೊತೆ’ ಎಂದು ಸಾಂತ್ವನ ಹೇಳುವ ಮಾತು ಅಷ್ಟೆ. “ಹಿರಿಯರನ್ನು ತಾತ್ಸಾರದಿಂದ ಕಾಣಬೇಡಿ. ಆ ಸರದಿಯಲ್ಲಿ ನಾವೂ ಇದ್ದೇವೆ ಎಂಬುದನ್ನು ಮರೆಯದಿರಿ’ ಇದು ಮಡಿಕೇರಿ ಆಕಾಶವಾಣಿಯಲ್ಲಿ ಆಗಾಗ ಕೇಳಿ ಬರುವ ಬಾನುಲಿ ಕಿರು ಸಂದೇಶ. “ನಾವೂ ಮುಂದೊಂದು ದಿನ ಮುದುಕರಾಗಲಿದ್ದೇವೆ. ನಾವು ನಮ್ಮ ವೃದ್ಧ ತಂದೆ-ತಾಯಂದಿರನ್ನು ನೋಡಿಕೊಳ್ಳದಿದ್ದರೆ ನಮ್ಮನ್ನೂ ನಮ್ಮ ಮಕ್ಕಳು ಮುಂದೆ ನೋಡಿಕೊಳ್ಳಲಿಕ್ಕಿಲ್ಲ’ವೆಂಬ ಭಾವದಲ್ಲಿ ನಾವು ಹಿರಿಯರನ್ನು ನೋಡಿಕೊಳ್ಳುವುದು ಎಷ್ಟು ಸರಿ? ಬದುಕು ಎಂಬುದು “ಈಗ ನಿಮ್ಮನ್ನು (ಮಕ್ಕಳು) ನಾವು (ತಂದೆ-ತಾಯಿ) ನೋಡುತ್ತೇವೆ. ಮುಂದೆ ನೀವು ನಮ್ಮನ್ನು ನೋಡಬೇಕು’ ಎಂಬ ಕರಾರಿನಲ್ಲಿ ನಡೆಯುವಂಥ‌ದ್ದು ಅಲ್ಲ ಅಲ್ಲವೇ? ನಮ್ಮ ಮಕ್ಕಳು ನಮ್ಮನ್ನು ನೋಡಲಿ, ಬಿಡಲಿ ಬಾಳಸಂಜೆಯಲ್ಲಿ ನಿಂತವರನ್ನು ಸಲಹುವುದು ನಮ್ಮ ಕರ್ತವ್ಯ ಹಾಗೂ ಮಾನವೀಯತೆ. ಫ‌ಲಾಪೇಕ್ಷೆ ಇಲ್ಲದೆ ಹಿರಿಯರ ಸೇವೆ ಮಾಡಬೇಕು. ನಮಗಾಗಿ ಜೀವ ತೇಯ್ದವರಿಗೆ ನಾವು ಅಷ್ಟೂ ಮಾಡದಿದ್ದರೆ ಹೇಗೆ? ಹಿರಿಯರು ಹೊರೆ ಅಲ್ಲ. “ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂಬ ಕವಿವಾಣಿ ಅಕ್ಷರಶ: ನಿಜ. 

(ಮುಂದಿನ ಸಂಚಿಕೆಯಲ್ಲಿ “ಭೂಮಿಗೀತ’ ಅಂಕಣದ ಕೊನೆಯ ಬರಹ)

ಸಹನಾ ಕಾಂತಬೈಲು

ಟಾಪ್ ನ್ಯೂಸ್

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

6

Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ

5

Drunk & Drive Case: ಅತಿ ವೇಗದ ಚಾಲನೆ: 522 ಕೇಸ್‌, 1.29 ಲಕ್ಷ ದಂಡ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.