ಜೋರಾಗಿದೆ ಅನುಷ್ಕಾ ಶರ್ಮಾ ಪ್ರಭಾವಳಿ!
Team Udayavani, Oct 4, 2019, 4:51 AM IST
ಸುಮಾರು ಒಂದೂವರೆ ವರ್ಷಗಳಿಂದ ಅನುಷ್ಕಾ ಶರ್ಮಾ ಅಭಿನಯದ ಯಾವ ಹೊಸ ಚಿತ್ರಗಳೂ ಅನೌನ್ಸ್ ಆಗಿಲ್ಲ. ಝೀರೋ ಚಿತ್ರದ ಬಳಿಕ ಅನುಷ್ಕಾ ಹೀರೋಯಿನ್ ಆಗಿ ಅಭಿನಯಿಸಿರುವ ಯಾವ ಚಿತ್ರಗಳೂ ತೆರೆಗೆ ಬಂದಿಲ್ಲ. ಇದರ ನಡುವೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಮದುವೆಯಾದ ಬಳಿಕ ಅನುಷ್ಕಾ ಅವರನ್ನು ಬಾಲಿವುಡ್ ಅಂಗಳದಲ್ಲೂ ನೋಡುವುದು ಕೂಡ ಅಪರೂಪ ಎನ್ನುತ್ತಿದ್ದಾರೆ ಸಿನಿ ಪ್ರಿಯರು. ಆದರೆ, ಇಷ್ಟೆಲ್ಲ ಇದ್ದರೂ, ಅನುಷ್ಕಾ ಶರ್ಮಾಗೆ ಇರುವ ಜನಪ್ರಿಯತೆ, ಬೇಡಿಕೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ ಎನ್ನುತ್ತಿವೆ ಬಾಲಿವುಡ್ ಮೂಲಗಳು.
ಹೌದು, ಮದುವೆಯ ಬಳಿಕ ಅನುಷ್ಕಾ ಶರ್ಮಾ ಯಾವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದರೂ, ಅವರ ಜನಪ್ರಿಯತೆ ಮತ್ತು ಅವರಿಗಿರುವ ಬೇಡಿಕೆ ಹೆಚ್ಚುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ, ಇತ್ತೀಚೆಗೆ ಫಾರ್ಚೂನ್ ಇಂಡಿಯಾ ಸಂಸ್ಥೆ ಪಟ್ಟಿಮಾಡಿರುವ 2019ರ ಮೋಸ್ಟ್ ಪವರ್‌ಫುಲ್ ವುಮೆನ್ ಲೀಸ್ಟ್‌ನಲ್ಲಿಯೂ ಅನುಷ್ಕಾ ಶರ್ಮಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇನ್ನು 2019ರ ಫಾರ್ಚುನ್ ಇಂಡಿಯಾದ ಮೋಸ್ಟ್ ಪವರ್‌ಫುಲ್ ವುಮೆನ್ ಲೀಸ್ಟ್‌ನಲ್ಲಿ ಅನುಷ್ಕಾ 39ನೇ ಸ್ಥಾನ ಪಡೆದುಕೊಂಡಿದ್ದು, ಈ ಲೀಸ್ಟ್‌ನಲ್ಲಿರುವ ಬಾಲಿವುಡ್‌ನ ಏಕೈಕ ಪವರ್‌ಫುಲ್ ವುಮೆನ್ ಎನ್ನುವ ಖ್ಯಾತಿಯೂ ಅನುಷ್ಕಾ ಶರ್ಮಾ ಮುಡಿಗೇರಿದೆ. ಅನುಷ್ಕಾ ಶರ್ಮಾ ಕೇವಲ ನಟಿಯಾಗಿ ಉಳಿಯದೆ, ರೂಪದರ್ಶಿಯಾಗಿ ಪ್ರತಿಷ್ಠಿತ ಕಂಪೆನಿಗಳ ಪ್ರಚಾರ ರಾಯಭಾರಿಯಾಗಿ ಗುರುತಿಸಿಕೊಂಡಿದ್ದು, ನಿರ್ಮಾಪಕಿಯಾಗಿ ಕಡಿಮೆ ಬಜೆಟ್‌ನಲ್ಲಿ ಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆಯೂ ಅವರಿಗೆ ಇದೆ. ಅಲ್ಲದೆ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿಯೂ ಅನುಷ್ಕಾ ಶರ್ಮಾ ನಿರ್ಮಾಣದ ಚಿತ್ರಗಳು ಉತ್ತಮ ಗಳಿಕೆ ಕಂಡಿರುವುದರಿಂದ, ಈ ಎಲ್ಲಾ ಮಾನದಂಡಗಳ ಅಡಿಯಲ್ಲಿ ಅನುಷ್ಕಾ ಶರ್ಮಾ 2019ರ ಫಾರ್ಚೂನ್ ಇಂಡಿಯಾದ ಮೋಸ್ಟ್ ಪವರ್‌ಫುಲ್ ವುಮೆನ್ ಲಿಸ್ಟ್ ನಲ್ಲಿ ಸ್ಥಾನ ಗಿಟ್ಟಿಸಿ ಕೊಂಡಿದ್ದಾರೆ ಎನ್ನಲಾಗುತ್ತಿದೆ.
ಅದೇನೆ ಇರಲಿ, ಸಾಮಾನ್ಯವಾಗಿ ಬಾಲಿವುಡ್‌ನಲ್ಲಿ ನಾಯಕ ನಟಿಯರು ಮದುವೆಯಾಗುತ್ತಿದ್ದಂತೆ ಜನಪ್ರಿಯತೆ ಕಳೆದುಕೊಂಡು ಬಣ್ಣದ ಲೋಕದಿಂದ ಸಾಂಸಾರಿಕ ಬದುಕಿನತ್ತ ಮುಖ ಮಾಡುತ್ತಿರುವಾಗ, ಅನುಷ್ಕಾ ಶರ್ಮಾ ಮಾತ್ರ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳದಿದ್ದರೂ, ಅದೇ ಜನಪ್ರಿಯತೆಯನ್ನು ಉಳಿಸಿಕೊಂಡು ಮೋಸ್ಟ್ ಪವರ್‌ಫುಲ್ ವುಮೆನ್ ಆಗಿ ಗುರುತಿಸಿ ಕೊಳ್ಳುತ್ತಿರುವುದು ಸೊಜಿಗದ ಸಂಗತಿಯೇ ಸರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.