ಮರುಜನ್ಮವಿತ್ತ ಯಕ್ಷಮಾತೆ
Team Udayavani, Mar 8, 2019, 12:30 AM IST
ಯಕ್ಷಗಾನದ ಕುಟುಂಬದಲ್ಲೇ ಹುಟ್ಟಿ ಬೆಳೆದವಳಾದರೂ ಯಕ್ಷಗಾನದ ಹಾದಿ ನನಗೆ ಸುಲಭವೇನೂ ಆಗಿರಲಿಲ್ಲ. ಚಿಕ್ಕಂದಿನಿಂದ ತಂದೆಯೊಡನೆ ನಾನೂ ಹೊರಟುಬಿಡುತ್ತಿದ್ದೆ. ಸಣ್ಣಪುಟ್ಟ ಪಾತ್ರಗಳನ್ನೂ ನಿರ್ವಹಿಸುತ್ತಿದ್ದೆ. ಆಗಲೇ ಬಿಡಿಸಲಾರದ ನಂಟು ಬೆಸೆದರೂ ಈ ಗಂಡುಕಲೆಯೇ ನನ್ನೊಲವಾಗುತ್ತದೆ ಮುಂದೆ ಎಂದು ಭಾವಿಸಿರಲಿಲ್ಲ !
ನನ್ನಮ್ಮನೇ ನನಗೆ ಮರುಜನ್ಮವಿತ್ತಿದ್ದಾಳೆ, ಯಕ್ಷಮಾತೆಯ ರೂಪದಲ್ಲಿ. ಅವಳು ಮಾನಸಿಕವಾಗಿ, ಬೌದ್ಧಿಕವಾಗಿ ನನ್ನನ್ನು ದೃಢವಾಗಿಸಿದಳು. ಎಷ್ಟೇ ವಿರೋಧ ಬಂದರೂ ನನ್ನ ಆತ್ಮಸಾಕ್ಷಿಯನ್ನು ಮಾತ್ರ ಅನುಸರಿಸಿದೆ. ಕೇವಲ ಹೆಣ್ಣು ಎನ್ನುವ ಕಾರಣಕ್ಕಾಗಿಯೇ ನನ್ನಲ್ಲಿರುವ ಪ್ರತಿಭೆಯನ್ನು, ಅಗಾಧ ಪ್ರೀತಿಯನ್ನು ಕೊಂದು ಬದುಕುವ ಮನಸ್ಥಿತಿ ನನ್ನದಾಗಿರಲಿಲ್ಲ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ವಿದೇಶದಲ್ಲಿ ಉದ್ಯೋಗ ದೊರಕಿದರೂ ಯಕ್ಷಗಾನದ ಸೆಳೆತದಿಂದ ವಿದೇಶಕ್ಕೆ ಹೋಗಲೇ ಇಲ್ಲ! ನಂತರ ಯಕ್ಷಗಾನದಿಂದಾಗಿಯೇ ಹಲವು ಬಾರಿ ವಿದೇಶ ಪ್ರಯಾಣ ಮಾಡಿದೆ ! ಯಕ್ಷಗಾನದ ಪ್ರಾರಂಭದ ದಿನಗಳಲ್ಲಿ, ನನ್ನ ತಂದೆ ಖ್ಯಾತ ಕಲಾವಿದರಾದ ಕಾರಣ ಹಲವರು ಅವರಂತೆಯೇ ನನ್ನನ್ನು ಅಳೆಯಲು ಪ್ರಾರಂಭಿಸು ತ್ತಿದ್ದರು. ಅದು ನಿಜವಾಗಿಯೂ ಪರೀಕ್ಷೆ ಅನಿಸುತ್ತಿತ್ತು. ಆ ವರ್ಗ ಒಂದಾದರೆ, ಇನ್ನೊಂದು ವರ್ಗ ಅಷ್ಟೆಲ್ಲ ಓದಿ ಯಕ್ಷಗಾನ ಮಾಡುವುದಾ ಎನ್ನುತ್ತಿತ್ತು ! ಮತ್ತೂಂದು ವರ್ಗ ಏನು ಮಾಡಿದರೂ ತಪ್ಪು ಎನ್ನುತ್ತಿತ್ತು. ಅದರ ನಡುವೆಯೂ ಅತ್ಯಂತ ಪ್ರೀತಿಯಿಂದ ಪ್ರೋತ್ಸಾಹ ಕೊಟ್ಟ ಜನರೂ ಇದ್ದರು. ಏನೇ ಆದರೂ ಯಕ್ಷಗಾನ ನನ್ನ ಅಮ್ಮನೇ ಆಗಿ ಹೋಗಿತ್ತು. ಅಮ್ಮನನ್ನು ಹೇಗೆ ಬಿಡಲಿ! ಹೀಗೆ ಹಲವು ಹೇಳಲಾರದ ಸವಾಲುಗಳನ್ನು ಸ್ವೀಕರಿಸುತ್ತ ಶ್ರದ್ಧೆಯಿಂದ ಧೈರ್ಯದಿಂದ ಮುಂದುವರಿದೆ.
ಯಕ್ಷಗಾನಕ್ಕೆ ಹೆಣ್ಣಿನ ಕೊಡುಗೆ ಏನಿದೆಯೋ ಗೊತ್ತಿಲ್ಲ. ಆದರೆ ಇದ್ದದ್ದನ್ನು ಹಾಳು ಮಾಡಲಿಲ್ಲ ಎನ್ನುವ ಭರವಸೆ ! ಒಟ್ಟಿನಲ್ಲಿ ನನ್ನನ್ನು ಸ್ವಾಭಿಮಾನಿ-ಸ್ವಾವಲಂಬಿಯಾಗಿಸಿ, ಸರ್ವತೋಮುಖ ಅಭಿವೃದ್ಧಿಗೊಳಿಸಿ ನನ್ನ ಬದುಕನ್ನು ಬಂಗಾರವಾಗಿಸಿದ ಯಕ್ಷಮಾತೆಯ ಋಣ ತೀರಿಸಲು ಈ ಜನುಮ ಸಾಲದು. ಹೆಣ್ಣುಮಕ್ಕಳು ಒಂದೊಮ್ಮೆ ನಮ್ಮ ಪರಂಪರೆಯ ಪ್ರತೀಕವಾದ, ಸಮಾಜದ ಸ್ವಾಸ್ಥ್ಯ ಉಳಿಸುವ ಯಕ್ಷಗಾನ ಕಲೆಯತ್ತ ಒಲವು ತೋರಿದರೆ ಅದು ಹೆಮ್ಮೆಯೇ ಹೊರತು ನಾಚಿಗೆಗೇಡಲ್ಲ. ಪ್ರಾಮಾಣಿಕವಾಗಿದ್ದರೆ ಯಶ ಖಂಡಿತ.
ಅಶ್ವಿನಿ ಕೊಂಡದಕುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.