ದೊಡ್ಡವರಿಗೂ ಬೇಬಿ ಪೌಡರ್!
Team Udayavani, Apr 6, 2018, 7:00 AM IST
ಮಕ್ಕಳ ಕೋಮಲ ತ್ವಚೆಯ ಕ್ರೆಡಿಟ್ಟೆಲ್ಲ ಹೋಗೋದು ಬೇಬಿ ಪೌಡರ್‌ಗೆ. ಮುಟ್ಟಿದರೆ ಹಿತವೆನಿಸುವ, “ದೇವರೇ ಇಂಥ ತ್ವಚೆಯನ್ನೂ ನನಗೂ ಕೊಡು’ ಎಂದು ಬೇಡಿಕೊಳ್ಳುವಂತೆ ಮಾಡುವ ಮಾಂತ್ರಿಕ ಮೈಮಾಟ ಮಕ್ಕಳದ್ದು. ಪುಟಾಣಿಗಳ ಅಂದದಲ್ಲಿ ಇಷ್ಟೆಲ್ಲ ಮ್ಯಾಜಿಕ್ ಮಾಡುವ ಬೇಬಿಪೌಡರ್‌ನ ಬಹೂಪಯೋಗಿ ಗುಣ ನಿಮ್ಗೆ ಗೊತ್ತೇ? ಆ ಪೌಡರ್ ನಿಮ್ಮ ದೇಹಸಿರಿಯಲ್ಲೂ ಪವಾಡ ಸೃಷ್ಟಿಸಬಲ್ಲದು. ಅದು ಹೇಗೆ?
ಮೇಕಪ್ ಮಾಡುವಾಗ
ಮೇಕಪ್ ಕ್ರೀಮ್‌ಗಳಿಗೆ ದುಡ್ಡು ಚೆಲ್ಲಿ ಸಾಕಾಗಿದ್ದರೆ, ಬೇಬಿ ಪೌಡರ್ ಅನ್ನು ತಂದಿಟ್ಟುಕೊಳ್ಳಿ. ಮಾಮೂಲಿ ಪೌಡರ್ ಲೇಪಿಸಿಕೊಂಡು ಮೇಕಪ್ ಮಾಡಿಕೊಳ್ಳುವಾಗ ಅದಕ್ಕೆ ಸ್ವಲ್ಪ ಬೇಬಿ ಪೌಡರ್ ಬಳಸಿದರೆ ಮುಖ ಫಳಫಳನೆ ಹೊಳೆಯುತ್ತದೆ. ಅಲ್ಲದೇ ಪೌಡರ್ ಹೆಚ್ಚು ಹೊತ್ತು ಮುಖದ ಮೇಲಿರುತ್ತದೆ.
ರೆಪ್ಪೆ ದಪ್ಪವೋ ದಪ್ಪ
ಬೇಬಿ ಪೌಡರ್ ಬಿಳಿ ಬಣ್ಣದ್ದೇ ಆದರೂ ಕಡುಗಪ್ಪಿನ ಕಣೆಪ್ಪೆಯನ್ನೂ ಅಂದಗಾಣಿಸಬಲ್ಲುದು. ಕಣೆಪ್ಪೆಗಳಿಗೆ ಕಾಜಲ್ ಹಚ್ಚುವ ಮೊದಲು, ಬೇಬಿ ಪೌಡರ್‌ಲೇಪಿತ ಬ್ರಶ್ ಅನ್ನು ರೆಪ್ಪೆಗಳ ಮೇಲೆ ಸ್ಪರ್ಶಿಸಬೇಕು. ನಂತರ ಕಾಜಲ್ ಹಚ್ಚಿಕೊಳ್ಳಬೇಕು. ಆಗ ಕಂದುಗಪ್ಪು ಬಣ್ಣಕ್ಕೆ ತಿರುಗುವ ರೆಪ್ಪೆಯ ಮೇಲೆ ಎಲ್ಲರ ಕಂಗಳೂ ಬೀಳುತ್ತವೆ. ರೆಪ್ಪೆ ದಪ್ಪವಾಗಿಯೂ ಕಾಣಿಸುತ್ತದೆ.
ಡ್ರೈ ಶ್ಯಾಂಪೂ ಆಗಿ
ಡ್ರೈ ಶ್ಯಾಂಪೂವಿನಿಂದ ಏನೂ ಫಲ ಸಿಗದೇ ಇದ್ದಾಗಲೂ ಬೇಬಿ ಪೌಡರ್, ತಲೆಕೂದಲಿನ ಅಂದ ಹೆಚ್ಚಿಸುತ್ತದೆ. ಕೊಕೊ ಪೌಡರ್ ಜತೆಗೆ ಪೌಡರ್ ಅನ್ನು ಅತ್ಯಲ್ಪ ಪ್ರಮಾಣದಲ್ಲಿ ಬೆರೆಸಿ, ಕೂದಲಿಗೆ ಹಚ್ಚಿ ಕೊಂಡರೆ ಕೇಶಕಾಂತಿಯ ಗತ್ತೇ ಬೇರೆ. ಕೆಂಚು ಕೂದಲು ಇದ್ದವರು, ದಾಲಿನ್ನಿ ಪೌಡರ್ ಜತೆ ಬೇಬಿ ಪೌಡರ್ ಬೆರೆಸಿ, ಲೇಪಿಸಿಕೊಂಡರೆ, ಡಸ್ಟಿ ಲುಕ್ಕನ್ನು ಮಾಯವಾಗಿಸಬಹುದು.
ಸಾಕ್ಸ್ ಒಳಗೆ ಪೌಡರ್
ಧರಿಸಿದ ಶೂ ಇಲ್ಲವೇ ಸಾಕ್ಸ್ ನಲ್ಲಿ ಗಾಳಿಯಾಡದೆ ಇದ್ದಾಗ ಅವು ದುರ್ಗಂಧ ಬೀರುವುದು ಸಹಜ. ಇದನ್ನು ತಪ್ಪಿಸಲು ಬೇಬಿ ಪೌಡರ್ ಒಂದೇ ದಾರಿ. ಸಾಕ್ಸ್ ಧರಿಸುವ ಮುನ್ನ ಪಾದಗಳಿಗೆ ಇಲ್ಲವೇ ಸಾಕ್ಸಿನ ಒಳಭಾಗಕ್ಕೆ ಬೇಬಿ ಪೌಡರ್ ಉದುರಿಸಿ. ಎಷ್ಟೇ ತಾಪ ಅಧಿಕವಿದ್ದರೂ ಕಾಲು ಬೆವರುವುದಿಲ್ಲ. ಪಾದಗಳು ತಣ್ಣಗಿರುತ್ತವೆ.
ವ್ಯಾಕ್ಸಿಂಗ್ ಮಿತ್ರ
ಮನೆಯಲ್ಲಿ ವ್ಯಾಕ್ಸಿಂಗ್ ಮಾಡಿಕೊಳ್ಳುವವರಿಗೆ ಬೇಬಿ ಪೌಡರ್ ಸಖತ್ ಕೂಲ್ ಅನುಭವ ನೀಡುತ್ತೆ. ವ್ಯಾಕ್ಸಿಂಗ್‌ಗೂ ಮೊದಲು ಕಾಲಿನ ಅಥವಾ ದೇಹದ ಮೇಲೆ ಬೇಬಿ ಪೌಡರ್ ಉದುರಿಸಿಕೊಂಡರೆ, ಚರ್ಮಕ್ಕೆ ತಂಪು ಅನುಭವ ಸಿಗುತ್ತದೆ. ಚರ್ಮದ ಹೊಳಪೂ ಹೆಚ್ಚುತ್ತದೆ.
ಡಿಯೋಡ್ರಂಟ್ ಆಗುತ್ತೆ!
ಬೇರೆಲ್ಲ ಡಿಯೋಡ್ರಂಟ್‌ಗಳಿಗಿಂತ ಬೇಬಿ ಪೌಡರ್ ದಿನದ ಕೊನೆಯ ತನಕ ದೇಹಕ್ಕೆ ಪರಿಮಳವನ್ನು ಒದಗಿಸುತ್ತದೆ. ಕಂಕುಳಿನ ಭಾಗಕ್ಕೆ ಇಲ್ಲವೇ ಜಾಸ್ತಿ ಬೆವರುವ ಭಾಗಕ್ಕೆ ಬೇಬಿ ಪೌಡರ್ ಹಚಿ c ಕೊಂಡರೆ, ಆ ಭಾಗದಲ್ಲಿ ಕೀಟಾಣುಗಳ ಆಟ ನಡೆಯೋದಿಲ್ಲ.
ಬೀಚ್‌ನಲ್ಲಿ ಸ್ನಾನ ಮಾಡುವಾಗ
ಸಮುದ್ರದ ಬೀಚ್‌ನಲ್ಲಿ ಸ್ನಾನ ಮಾಡಿ ವಾಪಸಾಗುವಾಗ ಮೈತುಂಬಾ ಮರಳು ಅಂಟಿಕೊಂಡಿರುತ್ತದೆ. ಮನೆಗೆ ಬಂದಾದ ಮೇಲೂ ಮೈಮೇಲಿನ ಮರಳು ಕಿರಿಕಿರಿ ಮಾಡುತ್ತಲೇ ಇರುತ್ತೆ. ಆದರೆ, ಬೇಬಿಪೌಡರ್ ಅನ್ನು ಮೈಗೆ ಹಚ್ಚಿಕೊಂಡು, ಸಮುದ್ರ ಸ್ನಾನಕ್ಕೆ ಇಳಿದರೆ ಮರಳು ಜಾಸ್ತಿ ಅಂಟಿಕೊಳ್ಳುವುದಿಲ್ಲ. ಕಡಿಮೆ ಸಮಯದಲ್ಲಿ ಸುಲಭವಾಗಿ ಉದುರಿಹೋಗುತ್ತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.