ಆರೋಗ್ಯಕ್ಕೂ-ಅಂದಕ್ಕೂ ಬೀಟ್‌ರೂಟ್
Team Udayavani, Jul 6, 2018, 6:00 AM IST
ಬೀಟ್‌ರೂಟ್‌ನಲ್ಲಿ ಹೇರಳವಾಗಿರುವ ಕಬ್ಬಿಣದಂಶವು ರಕ್ತಹೀನತೆ ಬಾರದಂತೆ ತಡೆಯುತ್ತದೆ. ಇದನ್ನು ಪ್ರತಿದಿನ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ರಕ್ತಪ್ರಸಾರ ಸುಗಮವಾಗುತ್ತದೆ. ಬೀಟ್‌ರೂಟ್ ರಕ್ತವನ್ನು ಶುದ್ಧಿಗೊಳಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಒತ್ತಡವನ್ನು ನಿಯಂತ್ರಣದಲ್ಲಿಟ್ಟು ಜೀರ್ಣಕ್ರಿಯೆಯ ವೇಗ ಹೆಚ್ಚಿಸುತ್ತದೆ.
.ಒಂದು ಟೇಬಲ್ ಸ್ಪೂನ್ ನೆನೆಸಿಟ್ಟ ಅಕ್ಕಿ, ನಾಲ್ಕೈದು ಬೀಟ್‌ರೂಟ್ ಚೂರುಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಅದರಲ್ಲಿ ಒಂದು ಚಮಚ ಜೇನುತುಪ್ಪ , ಹಾಲು ಬೆರೆಸಿ ಅದನ್ನು ಮುಖಕ್ಕೆ ಲೇಪಿಸಿಕೊಳ್ಳಿ. ಹಾಗೆ ಐದು ನಿಮಿಷ ಬಿಟ್ಟು ಹಾಲಿನಿಂದ ಮುಖವನ್ನು ನಿಧಾನವಾಗಿ ಮರ್ದನ ಮಾಡಿರಿ. ಈ ರೀತಿ ಹತ್ತು ನಿಮಿಷಗಳ ಕಾಲ ಮಾಡಿ ಉರುಗು ಬೆಚ್ಚಗಿರುವ ನೀರಿನಿಂತ ತೊಳೆದರೆ ಮುಖದ ಚರ್ಮವು ಹೊಳಪನ್ನು ಪಡೆಯುತ್ತದೆ. ಬೀಟ್‌ರೂಟ್‌ನಲ್ಲಿರುವ ಸಿಲಿಕಾನ್ ಖನಿಜ ಚರ್ಮ ತಾಜಾವಾಗಿರುವಂತೆ ಮಾಡುತ್ತದೆ. ಕೂದಲು, ಉಗುರು ಬೆಳವಣಿಗೆಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ.
.ಬೀಟ್‌ರೂಟ್ ರಸವನ್ನು ತಲೆಗೆ ಹಚ್ಚಿ ಒಂದೆರಡು ಗಂಟೆಗಳ ಕಾಲ ಹಾಗೇ ಬಿಟ್ಟರೆ ಸಹಜ ಸಿದ್ಧವಾದ ಡೈ ಹಾಕಿಕೊಂಡಂತೆ ಇರುತ್ತದೆ. ಅದೇ ರೀತಿ ಹೆನ್ನಾ ಕಲಸುವಾಗ ಮೆಹಂದಿ ಪುಡಿಯನ್ನು ಬೀಟ್‌ರೂಟ್ ರಸದಲ್ಲಿ ಕಲಸಿ ಕೇಶಕ್ಕೆ ಲೇಪಿಸಿದರೆ ಉತ್ತಮ ಬಣ್ಣವನ್ನು ಪಡೆಯಬಹುದು.
.ಬೀಟ್‌ರೂಟ್ ರಸಕ್ಕೆ ಒಂದು ಚಮಚ ಬಾದಾಮಿ ಎಣ್ಣೆ , ಒಂದು ಹನಿ ಜೇನು ಸೇರಿಸಿ ತುಟಿಗಳಿಗೆ ಲೇಪಿಸಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ ಕಪ್ಪಗಿರುವ ತುಟಿಯು ಗುಲಾಬಿ ಬಣ್ಣವನ್ನು ಪಡೆಯುತ್ತದೆ. ಮೃತಜೀವಕೋಶಗಳು ದೂರವಾಗಬೇಕೆಂದರೆ ರುಬ್ಬಿದ ಬೀಟ್‌ರೂಟ್‌ಗೆ ಚಿಟಿಕೆ ಸಕ್ಕರೆ ಸೇರಿಸಿ ಆ ಮಿಶ್ರಣವನ್ನು ತುಟಿಗಳ ಮೇಲೆ ಉಜ್ಜಬೇಕು. ಈ ರೀತಿ ಮಾಡುವುದರಿಂದ ಅಧರಗಳು ಮೃದು ಹಾಗೂ ತಾಜಾತನ ಹೊಂದುತ್ತವೆ.
.ಸದಾ ದಣಿವೆಂದು ಅನ್ನಿಸುತ್ತಿದ್ದರೆ ಬೀಟ್‌ರೂಟ್ ರಸವನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಎರಡು ಅಥವಾ ಮೂರು ದಿನಗಳಿಗೊಮ್ಮೆ ಒಂದು ಲೋಟ ಬೀಟ್‌ರೂಟ್ ಜ್ಯೂಸ್ ಕುಡಿದರೆ ಸಾಕು ಕೆಲವು ದಿನಗಳಲ್ಲಿ ಸಮಸ್ಯೆಯಿಂದ ಹೊರಬರಬಹುದು. ಇದರ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಸಕ್ಕರೆ ದೊರೆತು ದಣಿವು ಹತ್ತಿರ ಸುಳಿಯದು. “ಬಿ’, “ಸಿ’ ವಿಟಮಿನ್ ಹೇರಳವಾಗಿ ಸಿಗುತ್ತದೆ. ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
ಸುಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.