ಎಲೆಗಳಿಂದ ಸೌಂದರ್ಯ
Team Udayavani, Jan 19, 2018, 6:00 AM IST
ಸಾಮಾನ್ಯವಾಗಿ ನಾವು ಆರೋಗ್ಯ ಮತ್ತು ಸೌಂದರ್ಯವನ್ನು ರಕ್ಷಿಸಿಕೊಳ್ಳಲು, ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತವಾದ ಕ್ರೀಮ್‌ಗಳಿಗೆ ಮೊರೆಹೋಗುತ್ತೇವೆ. ಆದರೆ ನಮ್ಮ ಮನೆಯಲ್ಲಿಯೇ ದೊರೆಯುವ, ನಿಸರ್ಗದತ್ತವಾದ ಎಲೆಗಳನ್ನು ಬಳಸಿ, ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.
ಅವುಗಳಲ್ಲಿ ತುಳಸಿಎಲೆ, ಬೇವು, ಪುದೀನಾ, ವೀಳ್ಯದೆಲೆ, ಬಿಲ್ವಪತ್ರೆ, ಗೋರಂಟಿ, ಮೆಂತ್ಯದ ಎಲೆಗಳು ಆರೋಗ್ಯವನ್ನು ಮತ್ತು ಸೌಂದರ್ಯದ ರಕ್ಷಣೆಯನ್ನು ಮಾಡುತ್ತವೆ.
ತುಳಸಿ ಎಲೆ: ಮುಖದ ಮೇಲೆ ಮೊಡವೆಗಳ ಕಾಟದಿಂದ ಒದ್ದಾಡುವವರು ತುಳಸಿ ಎಲೆಗಳನ್ನು ಜಜ್ಜಿ, ರಸಹಿಂಡಿ, ಪ್ರತಿದಿನ ಮುಖಕ್ಕೆ ಸವರಿಕೊಳ್ಳುತ್ತಿದ್ದರೆ ಎರಡು ತಿಂಗಳೊಳಗಾಗಿಯೇ ಮೊಡವೆಗಳ ಕಾಟ ನಿವಾರಣೆಯಾಗುತ್ತದೆ.
ಬೇವು, ತುಳಸಿ, ಪುದೀನಾ ಎಲೆಗಳು: ಈ ಎಲೆಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು, ಈ ಪುಡಿಗಳ ಮಿಶ್ರಣಕ್ಕೆ ಜೇನು, ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುತ್ತಿದರೆ, ಜಿಡ್ಡು ನಿವಾರಣೆಯಾಗಿ ಮುಖ ಕಾಂತಿಯುತವಾಗುತ್ತದೆ.
ವೀಳ್ಯದೆಲೆ : ತುಟಿಗಳು ಸದಾ ಕೆಂಪಗಿದ್ದು ಹೊಳೆಯುತ್ತಿರಬೇಕೆಂದರೆ, ವೀಳ್ಯದೆಲೆಗಳು ಉಪಯುಕ್ತ. ಇವು ತುಟಿಗಳನ್ನು ಒಡೆಯಗೊಡುವುದಿಲ್ಲ. ಜೊತೆಗೆ ತುಟಿಗಳ ಕಪ್ಪನ್ನು ನಿವಾರಿಸುತ್ತದೆ.
ಬೇವಿನೆಲೆಗಳು: ದಿನಾಲೂ ಎಳೇ ಬೇವಿನೆಲೆಗಳನ್ನು ಮೆಲ್ಲುವುದರಿಂದ ದಂತಗಳು ಆರೋಗ್ಯವಾಗಿ, ದೃಢವಾಗಿರುವುದರೊಂದಿಗೆ, ಬೆಳ್ಳಗೆ ಹೊಳೆಯತೊಡಗುತ್ತವೆ. ಹುಳುಕು ಹಲ್ಲುಗಳು ನಿವಾರಣೆಯಾಗುತ್ತವೆ. ಬೇವಿನೆಲೆಗಳ ಕಷಾಯ ಮುಖದ ಮೇಲಿನ ಮೊಡವೆಗಳನ್ನು ತಡೆಗಟ್ಟುತ್ತದೆ. ಮುಖದ ಮೇಲಿನ ಕಪ್ಪು$ಮಚ್ಚೆಗಳು, ಗುಳ್ಳೆಗಳಂಥವು ನಿವಾರಣೆಯಾಗಬೇಕೆಂದರೆ, ಬೇವಿನೆಲೆಗಳನ್ನು ಒಣಗಿಸಿ ಪುಡಿಮಾಡಿ ರೋಜ್‌ವಾಟರ್, ನಿಂಬೆರಸ ಬೆರೆಸಿ ಬಳಸಬೇಕು.
ಬಿಲ್ವಪತ್ರೆ: ಈ ಎಲೆಗಳನ್ನು ಮೆತ್ತಗೆ ರುಬ್ಬಿ ರಸ ಹಿಂಡಬೇಕು. ಸ್ನಾನ ಮಾಡುವಾಗ ರಸವನ್ನು ಮೈಗೆ ಹಚ್ಚಿಕೊಳ್ಳುವುದರಿಂದ, ಚರ್ಮದ ದುರ್ಗಂಧ ನಿವಾರಣೆಯಾಗುವುದಲ್ಲದೆ, ಚರ್ಮದ ಕಾಂತಿ ಹೆಚ್ಚುತ್ತದೆ.
ಗೋರಂಟಿ ಎಲೆಗಳು: ಕೈಗಳಿಗೆ ಗೋರಂಟಿ ಎಲೆಗಳನ್ನು ಹಚ್ಚಿಕೊಳ್ಳುವುದರಿಂದ, ಅಂಗೈಗಳು ಅಂದವಾಗಿ ಮೃದುವಾಗುತ್ತವೆ. ಕೈ ಉಗುರುಗಳು ಬಿರುಕು ಬಿಡುವುದಿಲ್ಲ . ಅವುಗಳ ಬಿರುಸು ಕಡಿಮೆಯಾಗುತ್ತದೆ.
ಮೆಂತ್ಯದ ಎಲೆಗಳು: ಇವುಗಳನ್ನು ಚೆನ್ನಾಗಿ ರುಬ್ಬಿ , ಸ್ವಲ್ಪ$ ನೀರಿನೊಂದಿಗೆ ಬೆರೆಸಿ, ಆ ಮಿಶ್ರಣದಿಂದ ಕೂದಲುಗಳಿಗೆ ಚೆನ್ನಾಗಿ ಮಸಾಜ್ ಮಾಡುವುದರಿಂದ ಕೂದಲುಗಳ ಬಿರುಸುತನ ಕಡಿಮೆಯಾಗುವುದರೊಂದಿಗೆ, ಮೃದುವಾಗಿ ಆಕರ್ಷಣೀಯವಾಗುತ್ತದೆ.
– ಸುಮಾ ಹನುಮಂತ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.