ಬಿಸ್ಕತ್‌ ವೈವಿಧ್ಯ


Team Udayavani, Dec 28, 2018, 6:20 AM IST

dsc00135-2.jpg

ಚಿಣ್ಣರಿಂದ ಹಿಡಿದು ಎಲ್ಲಾ ವಯೋಮಾನದವರೂ ಸಾಮಾನ್ಯವಾಗಿ ಬಿಸ್ಕತ್‌ನ್ನು ಇಷ್ಟಪಟ್ಟು ಸವಿಯುತ್ತಾರೆ. ಬಿಸ್ಕತ್‌ನ್ನು ಉಪಯೋಗಿಸಿ ನೀವು ಬಹಳ ಸುಲಭವಾಗಿ ಸವಿರುಚಿಗಳನ್ನು ತಯಾರಿಸಿ ಚಿಣ್ಣರ ಮನ ತಣಿಸಬಹುದು.

ಬಿಸ್ಕತ್‌ ಉಂಡೆ
ಬೇಕಾಗುವ ಸಾಮಗ್ರಿ:
ಮಾರಿ ಬಿಸ್ಕತ್‌- ಒಂದು ಪ್ಯಾಕೆಟ್‌, ಬೆಣ್ಣೆ – ಎರಡು ಚಮಚ, ಕೊಕೋ ಪೌಡರ್‌ ಅಥವಾ ಬ್ರೂ ಕಾಫಿ- ಎರಡು ಚಮಚ, ಸಕ್ಕರೆ- ಆರು ಚಮಚ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಬಾದಾಮಿ ತರಿಗಳು-ಆರು ಚಮಚ.

ತಯಾರಿಸುವ ವಿಧಾನ: ಬಿಸ್ಕತ್‌ಗೆ ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ಪುಡಿಮಾಡಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಬೆಣ್ಣೆ ಮತ್ತು ಬ್ರೂ ಕಾಫಿ ಪೌಡರ್‌ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಉಂಡೆಗೆ ಬರುವಷ್ಟು ಹಾಲು ಚಿಮುಕಿಸಿ ಚೆನ್ನಾಗಿ ಮಿಶ್ರಮಾಡಿ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿ, ಡ್ರೆ„ ಫ‌ೂÅಟ್ಸ್‌ ಸೇರಿಸಿ ಉಂಡೆ ಕಟ್ಟಿ ಫ್ರೀಜರ್‌ನಲ್ಲಿಟ್ಟು ಎರಡು ಗಂಟೆ ನಂತರ ಸರ್ವ್‌ ಮಾಡಬಹುದು.

ಗರಿಗರಿ ಬಿಸ್ಕತ್‌ 
ಬೇಕಾಗುವ ಸಾಮಗ್ರಿ:
ಗೋಧಿಹುಡಿ- ಒಂದು ಕಪ್‌, ಮೈದಾಹುಡಿ- ಒಂದು ಕಪ್‌, ತೆಂಗಿನತುರಿ- ಅರ್ಧ ಕಪ್‌, ಸಕ್ಕರೆ- ಅರ್ಧ ಕಪ್‌, ಬೆಣ್ಣೆ- ಕಾಲು ಕಪ್‌.
ತಯಾರಿಸುವ ವಿಧಾನ: ತೆಂಗಿನತುರಿಗೆ ಸಕ್ಕರೆ ಸೇರಿಸಿ ನೀರು ಹಾಕದೆ ನುಣ್ಣಗೆ ರುಬ್ಬಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ನಂತರ, ಇದಕ್ಕೆ ಗೋಧಿಹುಡಿ, ಮೈದಾ ಮತ್ತು ಬೆಣ್ಣೆ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿ. ನಂತರ ಅರ್ಧಗಂಟೆ ಬಿಟ್ಟು ಚಿಕ್ಕಚಿಕ್ಕ ಉಂಡೆ ಮಾಡಿ ಬಿಸ್ಕತ್‌ನ ಹದಕ್ಕೆ ತಟ್ಟಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಿರಿ. ಸಕ್ಕರೆ ಜಾಸ್ತಿ ಆದರೆ ಉಂಡೆ ಕರಿಯುವಾಗ ಎಣ್ಣೆಯಲ್ಲಿ ಕರಗುತ್ತದೆ. ಆದ್ದರಿಂದ ಒಂದನ್ನು ಕರಿದು ನೋಡಿಕೊಂಡು ಉಳಿದವುಗಳನ್ನು ಕರಿಯಿರಿ.

ಬಿಸ್ಕತ್‌ ಕಸ್ಟರ್ಡ್‌
ಬೇಕಾಗುವ ಸಾಮಗ್ರಿ:
ಹಾಲು- ಒಂದು ಕಪ್‌, ವೆನಿಲ್ಲಾ ಕಸ್ಟರ್ಡ್‌ ಪುಡಿ- ಎರಡು ಚಮಚ, ಸಕ್ಕರೆ- ನಾಲ್ಕು ಚಮಚ, ಸೇಬು, ಬನಾನ, ಖರ್ಜೂರ, ದ್ರಾಕ್ಷಿ ಇತ್ಯಾದಿ ಹಣ್ಣುಗಳ ಮಿಶ್ರಣ- ಅರ್ಧ ಕಪ್‌, ಮಾರಿಬಿಸ್ಕತ್‌- ಆರು. 
ತಯಾರಿಸುವ ವಿಧಾನ: ಹಾಲಿಗೆ ಕಸ್ಟರ್ಡ್‌ ಪುಡಿ ಸೇರಿಸಿ, ಚೆನ್ನಾಗಿ ಮಿಶ್ರಮಾಡಿ ಒಲೆಯಲ್ಲಿ ಇಡಿ. ಸಕ್ಕರೆ ಸೇರಿಸಿ ತಳ ಹಿಡಿಯದಂತೆ ಸಣ್ಣ ಉರಿಯಲ್ಲಿ ಕುದಿಸಿ ಒಲೆಯಿಂದ ಇಳಿಸಿ, ಆರಲು ಬಿಡಿ. ನಂತರ, ಇದನ್ನು ಫ್ರಿಜ್‌ನಲ್ಲಿ ಎರಡು ಗಂಟೆ ಇಡಿ. ಹಣ್ಣುಗಳ ಮಿಶ್ರಣಕ್ಕೆ ಎರಡು ಚಮಚ ಜೇನುತುಪ್ಪ ಸೇರಿಸಿ, ಮಿಶ್ರಮಾಡಿ ಫ್ರಿಜ್‌ನಲ್ಲಿಡಿ. ಸರ್ವಿಂಗ್‌ ಕಪ್‌ಗೆ ನಾಲ್ಕು ಚಮಚ ಕಸ್ಟರ್ಡ್‌ ಹಾಕಿ ಮೇಲಿನಿಂದ ಎರಡು ಚಮಚ ಹಣ್ಣುಗಳ ಮಿಶ್ರಣ ಹರಡಿ, ಬಿಸ್ಕತ್‌ ಸೇರಿಸಿ ಮೇಲಿನಿಂದ ಚೆರಿಯಿಂದ ಅಲಂಕರಿಸಿ ಸರ್ವ್‌ ಮಾಡಬಹುದು.

ಸಿಂಪಲ್‌ ಬಿಸ್ಕತ್‌ ಕೇಕ್‌ 
ಬೇಕಾಗುವ ಸಾಮಗ್ರಿ
: ಪಾರ್ಲೆ ಜಿ ಬಿಸ್ಕತ್‌- ಮೂವತ್ತು, ಕ್ರೀಮ್‌ ತುಂಬಿದ ಚಾಕೋಲೆಟ್‌ ಬಿಸ್ಕತ್‌- ಹತ್ತು, ನ್ಯಾಚುರಲ್‌ ಫ್ಲೇವರ್‌ನ ಯುನೋ- ಅರ್ಧ ಪ್ಯಾಕೆಟ್‌, ಸಕ್ಕರೆ- ಎರಡು ಚಮಚ, ದಪ್ಪಹಾಲು- ಒಂದು ಕಪ್‌, ಗೋಡಂಬಿ, ದ್ರಾಕ್ಷಿ ಮತ್ತು ಟೂಟಿಫ‌ೂÅಟೀ- ಆರು ಚಮಚ.
ತಯಾರಿಸುವ ವಿಧಾನ: ಮೇಲಿನ ಬಿಸ್ಕತ್‌ಗಳಿಗೆ ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ನಂತರ, ಇದಕ್ಕೆ ಯುನೋ ಸೇರಿಸಿ ಮಿಶ್ರಮಾಡಿ. ನಂತರ, ಇದಕ್ಕೆ ಹದ ನೋಡಿಕೊಂಡು ಹಾಲು ಸೇರಿಸಿ ಬೀಟರ್‌ ನಿಂದ ಚೆನ್ನಾಗಿ ಬೀಟ್‌ ಮಾಡಿ, ಬೆಣ್ಣೆ ಸವರಿದ ಕೇಕ್‌ನ ಬೌಲ್‌ಗೆ ಹಾಕಿ ಮೇಲಿನಿಂದ ಡ್ರೆ„ಫ‌ೂÅಟ್ಸ್‌ ಹರಡಿ ಓವೆನ್‌ನಲ್ಲಿ ಸುಮಾರು ಏಳು ನಿಮಿಷ ಬೇಯಿಸಿ. 

– ಗೀತಸದಾ

ಟಾಪ್ ನ್ಯೂಸ್

CM-Sidda-BGV

Belagavi: ಖಾನಾಪುರ ಪೊಲೀಸ್‌ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ

u1

Udupi: ಮನೆಯೊಳಗೆ ಧರ್ಮಗ್ರಂಥ, ಹೊರಗೆ ಸಂವಿಧಾನ ಮುನ್ನೆಡೆಸಬೇಕು: ನ್ಯಾ| ಶ್ರೀಶಾನಂದ

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

ICC ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

POlice

Sullia: ಬೆಳ್ಳಾರೆ ಸೊಸೈಟಿ ಚುನಾವಣೆ; ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ

CM-Sidda-BGV

Belagavi: ಖಾನಾಪುರ ಪೊಲೀಸ್‌ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ

u1

Udupi: ಮನೆಯೊಳಗೆ ಧರ್ಮಗ್ರಂಥ, ಹೊರಗೆ ಸಂವಿಧಾನ ಮುನ್ನೆಡೆಸಬೇಕು: ನ್ಯಾ| ಶ್ರೀಶಾನಂದ

3

Udupi: ಕೂಲಿ ಕಾರ್ಮಿಕನ ಮೇಲೆ ಹಲ್ಲೆ; ಗಾಯ

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.