ಸುನ್ ಸನಾ
Team Udayavani, May 25, 2018, 6:00 AM IST
ಸನಾ ಕಪೂರ್, ಇವಳು ಬಾಲಿವುಡ್‌ನ ಕಪೂರ್ ಪರಿವಾರದ ಇನ್ನೋರ್ವ ಕುಡಿ. ಕಪೂರ್ ಪರಿವಾರವೆಂದರೆ ಅನಿಲ್ ಕಪೂರ್ ಪರಿವಾರ ಎಂದು ತಪ್ಪು ತಿಳಿದುಕೊಳ್ಳಬೇಡಿ. ಈಕೆ ಹಿರಿಯ ನಟ ಪಂಕಜ್ ಕಪೂರ್ ಪುತ್ರಿ. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಶಹೀದ್ ಕಪೂರ್‌ನ ಮುದ್ದಿನ ತಂಗಿ.
ಪಂಕಜ್ ಕಪೂರ್-ಸುಪ್ರಿಯಾ ಪಾಠಕ್ ಪುತ್ರಿಯಾಗಿರುವ ಸನಾ ಕಪೂರ್ ಈಗಾಗಲೇ ಚಿತ್ರರಂಗಕ್ಕೆ ಆರಂಗೇಟ್ರಂ ಮಾಡಿಯಾಗಿದೆ. ಎರಡು ವರ್ಷದ ಹಿಂದೆಯೇ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಳು. ಕೆಲ ಸಮಯದ ಹಿಂದೆ ಶಾನ್‌ದಾರ್ ಎಂಬ ಚಿತ್ರದಲ್ಲೂ ನಟಿಸಿದ್ದಾಳೆ. ಇದರಲ್ಲಿ ಈಕೆ ನಿಭಾಯಿಸಿದ್ದು ನಾಯಕಿ ಅಲಿಯಾ ಭಟ್‌ಳ ತಂಗಿಯ ಪಾತ್ರವನ್ನು. ಈ ಚಿತ್ರದಲ್ಲಿ ಗಮನ ಸೆಳೆದ ಬಳಿಕ ಈಗ ಕಜೂರ್ ಪೇ ಅಟೆ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಇದರ ಬೆನ್ನಿಗೆ ಅಭಿ ನಹಿ ತೋ ಕಭಿ ನಹೀ ಚಿತ್ರಕ್ಕೆ ಕಾಲ್‌ಶೀಟ್ ನೀಡಿದ್ದಾಳೆ. ಇದಲ್ಲದೆ ಹಲವು ನಿರ್ಮಾಪಕರು ಸನಾಳಿಗೆ ಅವಕಾಶ ಕೊಡಲು ಮುಂದೆ ಬಂದಿದ್ದಾರಂತೆ. ಹೀಗೆ ಅಲ್ಪಾವಧಿಯಲ್ಲಿ ಸನಾ ಎಲ್ಲರ ಗಮನ ಸೆಳೆಯಲು ಕಾರಣವಿದೆ. ಇನ್ನೂ ಮಗುವಿನ ಮುಗ§ತೆಯಿರುವ ಮುಖವೇ ಅವಳ ದೊಡ್ಡ ಆಸ್ತಿ. ಸ್ನಾತಕೋತ್ತರ ಪದವೀಧರೆಯಾಗಿದ್ದರೂ ಎಲ್ಲರೂ ಸನಾಳನ್ನು ಹೈಸ್ಕೂಲು ಹುಡುಗಿಯೆಂದೇ ಭಾವಿಸುತ್ತಿದ್ದಾರಂತೆ. ತಾರಾ ಕುಟುಂಬದಲ್ಲಿಯೇ ಜನಿಸಿರುವುದರಿಂದ ಅಭಿನಯ ಸನಾಳಿಗೆ ಲೀಲಾಜಾಲ. ಹಲವು ರೀತಿಯಲ್ಲಿ ಶಹೀದ್ ಕಪೂರ್ ಮತ್ತು ಸನಾ ಕಪೂರ್ ವೃತ್ತಿಜೀವನದಲ್ಲಿ ಸಾಮ್ಯತೆಗಳಿವೆ.
ಶಹೀದ್ ಕೂಡ ಆರಂಭದಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ನಿಭಾಯಿಸುತ್ತ ಮೇಲೆ ಬಂದವ.ಚಾಕೊಲೇಟ್ ಹೀರೊ ಇಮೇಜ್ ಬದಲಾಗಲು ಅವನು ಉಡ್ತಾ ಪಂಜಾಬ್ ಕಾಯಬೇಕಾಯಿತು. ಸನಾ ಕೂಡಾ ಅಣ್ಣನ ಹಾದಿಯಲ್ಲೇ ಹೆಜ್ಜೆಯಿಟ್ಟಿದ್ದಾಳೆ. ಪಾತ್ರ ಚಿಕ್ಕದಾದರೂ ಪರವಾಗಿಲ್ಲ ಗಮನ ಸೆಳೆಯಬೇಕು ಎನ್ನುವುದು ಅವಳ ನಿಲುವು. ಅಂದ ಹಾಗೆ ಸನಾಳಿಗೆ ಬೆಳ್ಳಿತೆರೆಗಿಂತಲೂ ರಂಗಭೂಮಿಯೇ ಹೆಚ್ಚು ಇಷ್ಟವಂತೆ. ತಂದೆಯ ರಂಗಭೂಮಿ ಹಿನ್ನೆಲೆಯ ಬಗ್ಗೆ ಅವಳಿಗೆ ಬಹಳ ಹೆಮ್ಮೆಯಿದೆ. ತಂದೆಯಂತೆ ರಂಗಭೂಮಿಯಲ್ಲಿ ಅಭಿನಯ ಕಲಿತು ಚಿತ್ರರಂಗಕ್ಕೆ ಬರಬೇಕೆಂದುಕೊಂಡಿದ್ದಳು. ಆದರೆ ವಿಧಿ ಅವಳನ್ನು ನೇರವಾಗಿ ಬೆಳ್ಳಿತೆರೆಗೆ ಕರೆ ತಂದಿದೆ. ಇನ್ನು ಇಲ್ಲಿಯೇ ಏನಾದರೂ ಸಾಧಿಸಿ ತೋರಿಸಬೇಕು ಎಂದು ನಿರ್ಧರಿಸಿದ್ದಾಳೆ ಸನಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.